ನಾಸಾ ವೀರರು! 


Team Udayavani, Aug 27, 2017, 7:00 AM IST

nasa.jpg

ನಮಸ್ಕಾರ ಸಾಹಿತಿಗಳಿಗೆ”
ಬಾಗಿಲಾಚೆ ನಿಂತಿದ್ದ ಐವರು ಯುವಕರು ಕೈಮುಗಿದು, ದೇಶಾವರಿ ನಗು ಚೆಲ್ಲುತ್ತಾ ನಿಂತಿದ್ದರು.
“”ನಮಸ್ಕಾರ. ನಾನು ಸಾಹಿತಿ ಅಂತ ನಿಮಗೆ ಹ್ಯಾಗೆ ಗೊತ್ತಾಯಿತು? ನೀವು ನನ್ನ ಸಾಹಿತ್ಯ ಓದಿದ್ದೀರಾ…?” ಗಂಭೀರ ವದನದಿಂದ ಆ ಪಡ್ಡೆಗಳನ್ನು ಕೇಳಿದೆ.
“”ಇಲ್ಲ ಸಾರ್‌… ಆದ್ರೆ…”

ಐವರಲ್ಲಿ ಮೂವರು ತೊದಲುತ್ತ ಮಾತಿಗೆ ತಡವರಿಸಿದರು!
“”ವಾಟ್ಸಾÕಪ್ಪಿನಲ್ಲಿ ನಿಮ್ಮ ಹೆಸರು ಓದಿ¨ªೆ ಸಾರ್‌” ಮತ್ತೂಬ್ಬ ಏನೋ ಮಿಂಚಿದಂತಾಗಿ ಖುಷಿಯಿಂದ ಹೇಳಿದ.
“”ಇರಲಿ… ಬನ್ನಿ”
“”ರಾಜ್ಯೋತ್ಸವ ಇನ್ನೂ ದೂರ ಇದೆಯಲ್ಲ…?” ಅವರೆಲ್ಲ ಕೂತ ನಂತರ ಕೇಳಿದೆ.
“”ಈಗ ಬಂದಿರೋದು ಅದಕ್ಕಲ್ಲ… ಕÇÉೇಶಿ ನಿಮ್ಮ ಶಿಷ್ಯ ಅಲ್ವೆ ಸಾರ್‌?”
“”ಯಾವ ಕÇÉೇಶಿ?”

“”ಹೋದ ವರ್ಷ ನಿಮ್ಮ ಕಾಲೇಜಾ°ಗೇ ಎಂಬಿಎ ಮಾಡಿದನಂತಲ್ಲ ಆ ಕÇÉೇಶಿ”
“”ಕÇÉೇಶೀಂತಾ ಒಬ್ಬ ಹುಡುಗ ಇದ್ದ. ಅವನು ಎಂಬಿಎಗೇಂತ ಬರ್ತಿದ್ದ. ಪಾಸು ಮಾಡಿದೊ°à ಇಲ್ಲವೋ ಗೊತ್ತಿಲ್ಲ. ಈಗೇನು ಅವನ ವಿಷಯ?”

“”ಅಯ್ಯೋ ನಿಮಗೆ ಗೊತ್ತಿಲ್ವಾ ಸಾರ್‌ ಅವನ ವಿಷಯ?”
“”ಇಲ್ಲ”
“”ಮತ್ತೆ ಅವನ ಜೊತೆ ಮÇÉೇಶಿ, ಚನ್ನೇಶ, ಧೀರೇಶಿ ಇರ್ತಿದ್ರಲ್ಲ, ಅವರೂ ನಿಮ್ಮ ಸ್ಟೂಡೆಂಟ್ಸ್‌ ಅಲ್ಲವೇ ಸಾರ್‌?”
“”ಅವರೆÇÉಾ ಒಂದೇ ಗ್ಯಾಂಗು. ಕಾಲೇಜು ಮುಂದೆ ರೀಲಿಂಗ್‌, ವೀಲಿಂಗು, ಟೈಮ್‌ ಕಿಲ್ಲಿಂಗು, ಹುಡಿಗೀರ್ನ ನೋಡಿ ಜೊಲ್ಲಿಂಗೂ ಮಾಡ್ತಿದ್ರು, ಕಾಲೇಜಿಗೆ ಚಕ್ಕರ್‌ ಹಾಕ್ತಿದ್ದರು. ಓದೋದು ಒಂದು ಬಿಟ್ಟು ಇನ್ನೆÇÉಾ ಮಾಡ್ತಿದ್ರು! ಅದ್ಸರಿ ಅವರ ವಿಷಯ?”

ಅವರ ಹೆಸರು ಹಿಡಿದು ಇವರು ಬಂದಿರಬೇಕಾದರೆ ಏನು ವಿಷಯ ಇರಬಹುದು? ಅವರೇನು ಒಳ್ಳೆ ಸುದ್ದಿ ಮಾಡುವಂತಹ ವಿದ್ಯಾರ್ಥಿಗಳಲ್ಲ. ಬಹುಶಃ ಕೆಟ್ಟ ಸುದ್ದಿ ಮಾಡಿದ್ರೂ ಮಾಡಿರಬಹುದು. ಹುಡುಗೀರ್ನ ಚುಡಾಯಿಸಿರಬಹುದು, ಇÇÉಾ ಆ್ಯಕ್ಸಿಡೆಂಟ್‌ ಮಾಡ್ಕೊಂಡಿರಬೇಕು! ಇÇÉಾ ಎÇÉಾದ್ರೂ ರೌಡಿಸಂ ಮಾಡಿರಬಹುದು. ಅದಕ್ಕೆ ನನ್ನನ್ನ ಇವರು ಯಾಕೆ ಹುಡುಕಿಕೊಂಡು ಬಂದಿ¨ªಾರೆ? ಇವರಿಗೆ ಪಾಠ ಮಾಡಿದ್ದೇ ತಪ್ಪೇ? ಅವರು ಇಂಥಾವೆÇÉಾ ಮಾಡೋಕೆ ನೀವೇ ಕಾರಣಾಂತ ಬಂದಿರಬಹುದೆ? ಯೋಚನೆಯಾಯಿತು, ಕೊಂಚ ಗಾಬರಿಯೂ ಆಯಿತು.

“”ನಿಮಗೆ ಗೊತ್ತಿಲ್ವಾ ಸಾರ್‌. ಈ ಐದು ಜನ ನಾಸಾದವರು ಮಂಗಳ ಗ್ರಹಕ್ಕೆ ಕಳಿಸ್ತಿರೋ ಸ್ಪೇಸ್‌ ಷಟಲ್‌ ಹೀರೋಗಳು ಸಾರ್‌!”

“”ಏನು? ಇನ್ನೊಂದ್ಸಲ ಹೇಳಿ” ನನ್ನ ಕಿವಿಯನ್ನು ನಂಬದೆ ಕೇಳಿದೆ.
“”ನಿಮ್ಮ ಈ ಐದು ಜನ ಶಿಷ್ಯರು ಇಡೀ ಪ್ರಪಂಚದÇÉೇ ಫೇಮಸ್‌ ಆಗಿಬಿಟ್ಟಿದಾರೆ ಸಾರ್‌! ಸ್ಪೇಸ್‌ ಷಟಲ್‌ ಹೀರೋಗಳಾಗಿಬಿಟ್ಟಿದಾರೆ ಸಾರ್‌!”
“”ನೀವು ಟಿವಿ ನೋಡೊಲ್ವೆ ಸಾರ್‌?”

“”ಇಲ್ಲ. ಮನೆಯವರೆಲ್ಲ ಸೀರಿಯಲ್‌ ನೋಡ್ತಾರೆ. ನ್ಯೂಸ್‌ ಗೀಸ್‌ ನೋಡೋಕೆ ನನಗೆ ಛಾನ್ಸ್‌ ಕೊಡೋದಿಲ್ಲ”
“”ಮಂಗಳ ಗ್ರಹಕ್ಕೆ ನಾಸಾದವರು ರಾಕೆಟ್‌ ಕಳಿಸ್ತಿ¨ªಾರೆ”
“”ಕಳಿಸಲಿ, ಅದಕ್ಕೂ ಈ ಪುಂಡುಪೋಕರಿಗಳಿಗೂ ಏನು ಸಂಬಂಧ?”
ಕÇÉೇಶಿ ಗ್ಯಾಂಗ್‌ ಬಗೆಗಿನ‌ ಕಹಿಯನ್ನು ಮಾತಿನಲ್ಲಿ ಹೊರಹಾಕಿದೆ.

“”ಇನ್ಮೆàಲೆ ಅವರನ್ನ ಪುಂಡು-ಪೋಕರಿಗಳು ಅನ್ಬೇಡಿ ಸಾರ್‌! ನಿಮಗೇ ಯಾರಾದ್ರೂ ಕಲ್ಲು ಹೊಡೀಬಹುದು”
“”ಏನ್ರೀ… ಕಾಲೇಜಿಗೇಂತ ಅಪ್ಪನ ಹತ್ರ ದುಡ್ಡು ತಗೊಂಡು ಬಂದು, ಇಲ್ಲಿ ವೀಲಿಂಗು, ರೀಲಿಂಗು, ಫ್ಲರ್ಟಿಂಗು ಮಾಡೋ ಇವರನ್ನ ಪುಂಡ್ರು ಪೋಕರಿಗಳು ಅನ್ನದೆ ಮಹಾತ್ಮರು ಅನ್ನಬೇಕೆ?”

“”ಅಯ್ಯೋ ಸಾರ್‌, ಮೆಲ್ಲಗೆ ಮಾತಾಡಿ. ಈ ನಿಮ್ಮ ಶಿಷ್ಯರಿಗೆ ನಾಳೆ ದೊಡ್ಡದೊಂದು ಸನ್ಮಾನ ಏರ್ಪಾಡು ಮಾಡಿದೀವಿ. ಈ ಸಮಾರಂಭದಲ್ಲಿ ಇವರ ಬಗ್ಗೆ ಮಾತಾಡೋಕೆ ಅವರ ಗುರುಗಳಾಗಿ ತಾವು ಬರಬೇಕು ಸಾರ್‌. ತಮ್ಮ ಬಗ್ಗೆ ಅವರು ಬಹಳ ಅಭಿಮಾನ ಇಟ್ಕೊಂಡಿ¨ªಾರೆ ಸಾರ್‌”

“”ಏಳಿÅà… ಮೇಲೆ… ಇಂಥವರಿಗೆ ಸನ್ಮಾನ ಬೇರೆ! ಈ ಪೋಕರಿಗಳ ಬಗ್ಗೆ ನಾನು ಮಾತಾಡಬೇಕೆ? ಇವತ್ತಿನವರೆಗೂ ಸಮಾಜದಲ್ಲಿ ಗೌರವ ಉಳಿಸ್ಕೊಂಡು ಬಂದಿದ್ದೀನಿ. ಇವರ ಬಗ್ಗೆ ಮಾತಾಡಿ ನನ್ನ ಗೌರವ ಕಳ್ಕೊಳ್ಳೋಕೆ ನಾನು ಸಿದ್ಧನಿಲ್ಲ” ನಖಶಿಖಾಂತ ಉರಿದು ನುಡಿದೆ. 

“”ಅಯ್ಯೋ… ನಿಮಗೆ ವಿಷಯಾನೇ ಗೊತ್ತಿಲೆª ಏನೇನೋ ಮಾತಾಡ್ತಿದ್ದೀರಾ? ಕಾಲೇಜು ಮೇಷ್ಟ್ರರಾದ್ರೆ ಇನ್ನೊಬ್ಬರು ಮಾತಾಡೋದು ಕೇಳಬಾರದು ಅಂತೇನು ಇಲ್ವÇÉಾ? ನಾವು ಹೇಳ್ಳೋದು ಮೊದುÉ ಕೇಳಿ. ಆಮೇಲೆ ಮಾತಾಡಿ”
ಒಬ್ಬ ತೀರಾ ಸಮಚಿತ್ತದಿಂದ ಹೇಳಿದ.

“”ನಿಮಗೇ ಗೊತ್ತÇÉಾ ಸಾರ್‌. ನಾವು ಭೂಮೀನ ಹಾಳಾ¾ಡಿಬಿಟ್ಟಿದ್ದೀವಿ. ಅದಕ್ಕೆ ವಿಜ್ಞಾನಿಗಳು ಬೇರೆ ಗ್ರಹ ಹುಡುಕ್ತಿ¨ªಾರೆ ವಾಸಕ್ಕೆ. ಮಂಗಳ ಗ್ರಹದಲ್ಲಿ ಭೂಮಿ ಥರಾನೆ ವಾತಾವರಣ ಇದೆಯಂತೆ. ಅಲ್ಲಿಗೆ ಗುಳೆ ಹೋಗೋ ಪ್ಲ್ರಾನು ನಾಸಾ ವಿಜ್ಞಾನಿಗಳದ್ದು. ಅದಕ್ಕೆ ಮೊದುÉ ಅಲ್ಲಿ ನೆಲ ಪರೀಕ್ಷೆ ಮಾಡ್ಬೇಕಲ್ವಾ? ಅಲ್ಲಿ ನೆಲದ ಮೇಲ್ಮೆ„ ಇದೆಯÇÉಾ ಸಾರ್‌, ಅದು ಭಾರೀ ಆಡ್ಡಾದಿಡ್ಡಾ ಇದೆಯಂತೆ. ಅಲ್ಲಿನ್ನೂ ಯಾರೂ ರೋಡೂಗೀಡು ಮಾಡಿಲ್ಲ”

“”ನಮ್ಮಲ್ಲಿ ರೋಡುಗಳಿದಾವೆ. ಅವುಗಳ ಮೇಲ್ಮೆ„ನೂ ಚೆನ್ನಾಗಿಲ್ಲ”
“”ಅದಕ್ಕೇ ಸಾರ್‌, ಅಲ್ಲಿ ಅಂದ್ರೆ ಮಂಗಳ ಗ್ರಹದ ನೆಲದ ಮೇಲೆ ಓಡಾಡಿ ಪರೀಕ್ಷೆ ಮಾಡೋಕೆ ವಾಹನಗಳನ್ನು ರೆಡಿ ಮಾಡಿದ್ದಾರಂತೆ. ಆ ವಾಹನ ಓಡಿಸೋಕೆ ಡ್ರೈವರುಗಳನ್ನ ಸೆಲೆಕ್ಟ್ ಮಾಡೋಕೆ ಒಂದು ಟೆಸ್ಟ್‌ ಅರೇಂಜ್‌ ಮಾಡಿದ್ರು ಸಾರ್‌. ನಮ್ಮ ದೇಶದ ರಸ್ತೆಗಳÇÉೆÇÉಾ ಟಾರು ಮಾಯವಾಗಿದೆ. ಗುಂಡಿಗಳು ಲೆಕ್ಕವಿಲ್ಲದಂತೆ ಇವೆ”
“”ರಸ್ತೆಯೊಳಗೆ ಗುಂಡಿಯೋ? ಗುಂಡಿಗಳೊಳಗೆ ರಸ್ತೆಯೋ ಅನ್ನುವಂತೆ” ಸ್ಫೂರ್ತಿಯಿಂದ ನುಡಿದೆ.
“”ಎಷ್ಟು ಚೆನ್ನಾಗಿ ಪ್ರಾಸ ಕಟ್ಟಿದ್ರಿ ಸಾರ್‌! ಅದಕ್ಕೇ ನೀವು ಸಾಹಿತಿಗಳು”
“”ಈ ಗುಂಡಿಗಳು ತುಂಬಿದ, ಟಾರಿಲ್ಲದ ಅಧ್ವಾನದ ರಸ್ತೆಗಳಲ್ಲಿ ಅಪಾಯ ಮಾಡ್ಕೊಳ್ಳದೆ ಓಡಿಸೋವರನ್ನ 
ಅಳಲೂ ಆಗದ, ನಗಲೂ ಆಗದ ಸ್ಥಿತಿಯಲ್ಲಿ ಮನೆಯ ಛಾವಣಿ ನೋಡಿದೆ ! 

ಸೆಲೆಕ್ಟ್ ಮಾಡೋಕೇಂತ ಪ್ರಪಂಚದ ಎÇÉಾ ದೇಶಗಳನ್ನೂ ಸರ್ವೆ ಮಾಡಿ ಕೊನೆಗೆ ಭಾರತದÇÉೇ ಅಂಥ ರಸ್ತೆಗಳೀರೋದೂಂತ ತೀರ್ಮಾನ ಮಾಡಿದರಂತೆ ನಾಸಾದವರು. ನಮ್ಮ ದೇಶದ ಎÇÉಾ ರಾಜ್ಯಗಳಲ್ಲೂ ಟೆಸ್ಟ್‌ ಮಾಡಿದ್ರು ಸಾರ್‌. ಪಾಪ ನಿಮಗೆ ಆ ವಿಷ್ಯ ಗೊತ್ತೇ ಇಲ್ಲ. ಅತೀ ಹೆಚ್ಚು ಗುಂಡಿಗಳಿದ್ದು, ನೆಪ ಮಾತ್ರಕ್ಕೆ ಅಲ್ಲಲ್ಲಿ ಉಳಿದಿದ್ದ ಅಂಗೈಯಗಲ ಟಾರು ಪ್ಯಾಚಿನ ನಮ್ಮ ದೇಶದ ರಸ್ತೆಗಳಲ್ಲಿ ಲಕ್ಷಾಂತರ ಪಡ್ಡೆ ಹುಡುಗ್ರು ಬೈಕು, ಸ್ಕೂಟರು ಓಡಿಸಿದರು.

ಕರ್ನಾಟಕದಿಂದ ಅದ್ರಲ್ಲಿ  ಗೆದ್ದಿದ್ದು ಯಾರು ಗೊತ್ತೆ ಸಾರ್‌?”
“”ಯಾರು?” ಅವನ ಸುದೀರ್ಘ‌ ವಿವರಣೆ ಕೇಳಿ ನಿರುತ್ಸಾಹದಿಂದ ಕೇಳಿದೆ.
“”ನಿಮ್ಮ ಶಿಷ್ಯರು ಸಾರ್‌, ಕÇÉೇಶಿ, ಮÇÉೇಶಿ, ಚನ್ನೇಶಿ, ವೀರೇಶಿ ಮತ್ತೆ ಧೀರೇಶಿ ಇವರೇ!”

ಕೇಳಿದ್ದು ನಂಬಲಾಗಲಿಲ್ಲ. ಈ ಪೋಕರಿಗಳು ನಾಸಾದವರು ಮಾಡಿದ ಟೆಸ್ಟಲ್ಲಿ ಗೆದ್ದಿ¨ªಾರೆ, ಮಂಗಳಗ್ರಹದಲ್ಲಿ ವಾಹನ ಓಡಿಸ್ತಾರೆ ಅನ್ನೋದು ನಂಬಲಸಾಧ್ಯವಾದ ಮಾತಾಗಿತ್ತು.

“”ನಂಬಿಕೆ ಬರ್ತಿಲ್ವಾ ಸಾರ್‌. ನೋಡಿ ಆ ದೃಶ್ಯ ವಿಡಿಯೋ ಮಾಡಿದೀವಿ. ಈ ಮೊಬೈಲಲ್ಲಿ ನೋಡಿ ಸಾರ್‌”
ಒಬ್ಬ ಮೊಬೈಲು ಕಣ್ಮುಂದೆ ಹಿಡಿದ. ಉಳಿದ ನಾಲ್ವರೂ ತಮ್ಮ ತಲೆಗಳನ್ನು ನನ್ನ ತಲೆಯೊಟ್ಟಿಗೆ ಜೋಡಿಸಿದರು. ಮೊಬೈಲಿನ ಸ್ಕ್ರೀನ್‌ ನೋಡಿದೆ.

ಕÇÉೇಶಿ ಮತ್ತವನ ಗ್ಯಾಂಗು ತಮ್ಮ ದೈತ್ಯ ಮೋಟಾರು ಬೈಕುಗಳನ್ನು ರೊಂಯ್‌ಗಾಟ್ಟಿಸುತ್ತ ರಸ್ತೆಗಳಲ್ಲಿ ಓಡಿಸುತ್ತಿದ್ದುದು ಕಾಣಿಸಿತು. ಹೊಂಡಗಳನ್ನು ಮಿಂಚಿನ ವೇಗದಲ್ಲಿ ತಪ್ಪಿಸುತ್ತಿದ್ದರು. ಕೆಲವು ಕಡೆ ಒಂದೇ ಚಕ್ರದಲ್ಲಿ ವೀಲಿಂಗ್‌ ಮಾಡುತ್ತಿದ್ದರು. ಅವರ ಜೊತೆ ಓಡಿಸುತ್ತಿದ್ದ ಹಲವರು ಕೆಳಗೆ ಬೀಳುತ್ತಿದ್ದರು. ಕÇÉೇಶಿ ಮತ್ತವನ ಗ್ಯಾಂಗು ಮಾತ್ರ ಆತ್ಮವಿಶ್ವಾಸದಿಂದ, ತಮ್ಮ ಬೈಕುಗಳು ಮಾರಣಾಂತಿಕವಾಗಿ ಕುಂಯುYಟ್ಟಿದ್ದರೂ ಬಿಡದೆ, ಹೊಂಡಗಳನ್ನು ದಾಟಿಸುತ್ತ ಅಂಗೈಯಗಲದ ಟಾರು ಪ್ಯಾಚಿನ ಮೇಲೆ ಸಾಗುವ ದೃಶ್ಯ ರೋಮಾಂಚನ ಮಾಡುವಂತಿತ್ತು. ಆದರೆ, ನನ್ನ ಉಪಾಧ್ಯಾಯ ಮನಸ್ಸು ಮಾತ್ರ ಅದನ್ನು ಮೆಚ್ಚಲಿಲ್ಲ!

“”ಇಲ್ನೋಡಿ ಸಾರ್‌, ಇದು ಫಿನಿಶಿಂಗ್‌ ಲೈನು. ಇಲ್ಲಿಗೆ ಬಂದು ತಲುಪಿದವರು ನಿಮ್ಮ ಶಿಷ್ಯರೇ ಸಾರ್‌”
“”ಎಲಾ ಫ‌ಟಿಂಗರಾ?” ಉದ್ಗರಿಸಿದೆ.
“”ಏನು ಸೂಪರ್‌ ಡ್ರೈವಿಂಗು ಸಾರ್‌? ಮೈ ಜುಂ ಅನ್ನೋಲ್ಲವೆ ಸಾರ್‌”
“”ತಲೇನೂ ಗುಂ ಅನ್ತಾ ಇದೆ” 

“”ನಾಳೆ ಹತYಂಟೆಗೆ ಅವರಿಗೆ ನಮ್ಮ ಯುವಕ ಸಂಘದಿಂದ ಸನ್ಮಾನ ಸಾರ್‌. ತಾವು ದಯವಿಟ್ಟು ಬಂದು ನಿಮ್ಮ ಶಿಷ್ಯರ ಬಗ್ಗೆ ಮಾತಾಡಬೇಕು, ಅವರಿಗೆ ಆಶೀರ್ವಾದ ಮಾಡಬೇಕು. ಇದು ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಹೆಮ್ಮೆ ಸಾರ್‌. ಅವರ ಸಾಕ್ಷಾತ್‌ ಗುರುಗಳಾದ ತಮಗೆ ಎಷ್ಟು ಕೃತಜ್ಞತೆ ಹೇಳಿದ್ರೂ ಸಾಲದು”

– ಎಸ್‌. ಜಿ. ಶಿವಶಂಕರ್‌

ಟಾಪ್ ನ್ಯೂಸ್

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.