ಗ್ಲ್ಯಾಮರ್‌ನಿಂದ ಹಾರರ್ ಕಡೆಗೆ ನೀತೂ ಪಯಣ
Team Udayavani, Mar 31, 2019, 6:02 AM IST
ಇಲ್ಲಿಯವರೆಗೆ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿರುವ ಕರಾವಳಿ ಚೆಲುವೆ ನೀತೂ ಶೆಟ್ಟಿ ಇದೇ ಮೊದಲ ಬಾರಿಗೆ ಪ್ರೇಕ್ಷಕರನ್ನು ಬೆದರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಹೌದು,ಇಲ್ಲಿಯವರೆಗೆ ಕಾಲೇಜು ಹುಡುಗಿಯಾಗಿ,ಗೃಹಿಣಿಯಾಗಿ,ಪೊಲೀಸ್ ಆಫೀಸರ್ ಆಗಿ, ಗಯ್ನಾಳಿ ಹುಡುಗಿಯಾಗಿ ಹಲವು ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಿರುವ ನೀತೂ ಇದೇ ಮೊದಲ ಬಾರಿಗೆ ವಜ್ರಮುಖೀ ಚಿತ್ರದಲ್ಲಿ ದೆವ್ವದ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಕಳೆದ ಒಂದೆರಡು ವರ್ಷಗಳಿಂದ ತೆರೆಮೇಲೆ ಅಷ್ಟಾಗಿ ಎಲ್ಲೂ ಕಾಣಿಸಿಕೊಂಡಿರದ ನೀತೂ, ಇದೇ ಚಿತ್ರದ ತಯಾರಿಯಲ್ಲಿದ್ದು ಈ ಬಾರಿ ಹಾರರ್ ಲುಕ್‌ನಲ್ಲಿ ಡಿಫರೆಂಟ್ ಎಂಟ್ರಿಗೆ ರೆಡಿಯಾಗುತ್ತಿದ್ದಾರೆ.
ಈ ಬಗ್ಗೆ ಮಾತನಾಡುವ ನೀತೂ, ನಾನೊಬ್ಬ ಕಲಾವಿದೆಯಾಗುವ ಕನಸನ್ನಿಟ್ಟುಕೊಂಡು ಚಿತ್ರರಂಗಕ್ಕೆ ಬಂದವಳು. ಹಾಗಾಗಿ ಪ್ರತಿ ಚಿತ್ರದಲ್ಲೂ ಆದಷ್ಟು ಹೊಸಥರದ, ವಿಭಿನ್ನ ಪಾತ್ರಗಳು ಸಿಗಬಹುದಾ ಎಂದು ಬಯಸುತ್ತಿರುತ್ತೇನೆ. ಆದ್ರೆ ಕೆಲವೇ ಕೆಲವು ಚಿತ್ರಗಳಲ್ಲಿ ಮಾತ್ರ ನಾನು ಬಯಸುವಂಥ ಪಾತ್ರಗಳು ಸಿಗುತ್ತವೆ. ಅಂಥ ಪಾತ್ರಗಳು ಸಿಕ್ಕರೆ ಖುಷಿಯಿಂದ ಒಪ್ಪಿಕೊಂಡು ಮಾಡುತ್ತೇನೆ. ವಜ್ರಮುಖೀ ಚಿತ್ರದಲ್ಲಿ ಅಂಥದ್ದೇ ಒಂದು ಪಾತ್ರ ಸಿಕ್ಕಿದೆ. ಇಲ್ಲಿಯವರೆಗೆ ಸಿಕ್ಕ ಬಹುತೇಕ ಪಾತ್ರಗಳು ಗ್ಲಾಮರಸ್ ಲುಕ್‌ನಲ್ಲಿದ್ದವು. ಆದರೆ ಈ ಚಿತ್ರದಲ್ಲಿ ಮೊದಲ ಬಾರಿಗೆ ನನ್ನ ಪಾತ್ರ ಹಾರರ್ ಲುಕ್‌ನಲ್ಲಿದೆ. ನಾನು ಖುಷಿಯಿಂದ ಈ ಪಾತ್ರವನ್ನು ಮಾಡಿದ್ದೇನೆ. ನನಗೂ ಈ ಚಿತ್ರದ ಮೇಲೆ, ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ ಎನ್ನುತ್ತಾರೆ.
ಒಟ್ಟಾರೆ ಇಲ್ಲಿಯವರೆಗೆ ತಮ್ಮ ಗ್ಲಾಮರಸ್ ಲುಕ್‌ನಿಂದ ಒಂದಷ್ಟು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ನೀತೂ, ಈಗ ಹೆದರಿಸಿ, ಬೆದರಿಸಿ ಮತ್ತೆ ನಿದ್ದೆ ಬಾರದಂತೆ ಮಾಡಲು ಹೊರಟಿದ್ದಾರೆ. ವಜ್ರಮುಖೀ ಗೆಟಪ್‌ನಲ್ಲಿ ನೀತೂ ಅವರನ್ನು ನೋಡಿ ಅದೆಷ್ಟು ಮಂದಿ ಬೆಚ್ಚಿ ಬೀಳಲಿದ್ದಾರೆ ಅನ್ನೋದು ಗೊತ್ತಾಗಬೇಕಾದರೆ ಚಿತ್ರ ತೆರೆಗೆ ಬರಬೇಕು.
ಅಂದಹಾಗೆ, ಕಳೆದ ಎರಡು ವರ್ಷಗಳಿಂದ ಒಂದಷ್ಟು ಚಿತ್ರಗಳ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದ ನೀತೂ ಈ ವರ್ಷ ಆ ಚಿತ್ರಗಳ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಸದ್ಯ ವಜ್ರಮುಖೀ, 1888, ಹ್ಯಾಂಗೋವರ್, ತ್ಯಾಗು, ಐಸ್‌ಪೈಸ್, ಬೆಂಗಳೂರು ಮೆಟ್ರೋ ಹೀಗೆ ನೀತೂ ಅಭಿನಯದ ಒಂದಷ್ಟು ಚಿತ್ರಗಳು ಈ ವರ್ಷ ತೆರೆಗೆ ಬರಲು ಸಿದ್ಧತೆ ನಡೆಸುತ್ತಿದ್ದು, ಇಷ್ಟು ಚಿತ್ರಗಳಲ್ಲಿ ಯಾವ ಚಿತ್ರ ಮತ್ತೆ ನೀತೂ ಕೈ ಹಿಡಿಯಲಿದೆ ಅನ್ನೋದು ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.