ಮತ್ತೆ ಮತ್ತೆ ಹೊಸವರ್ಷ
Team Udayavani, Jan 7, 2018, 6:15 AM IST
ಹೊಸವರ್ಷದ ಆಗಮನವನ್ನು ಕಳೆದ ರವಿವಾರ “ಸಾಪ್ತಾಹಿಕ ಸಂಪದ’ದಲ್ಲಿ ಜಯಂತ ಕಾಯ್ಕಿಣಿ ಕವಿತೆಯ ಮೂಲಕ ಕಟ್ಟಿಕೊಟ್ಟಿದ್ದರು. ಅದರ ಕುರಿತ ಈ ಪ್ರತಿಸ್ಪಂದನ ಹೊಸವರ್ಷದ ಸಂಭ್ರಮವನ್ನು ಈ ರವಿವಾರಕ್ಕೂ ದಾಟಿಸಿದೆ.
ಪ್ರಿಯ ಜಯಂತ,
ಕಳೆದ ವಾರದ ಉದಯವಾಣಿ “ಸಾಪ್ತಾಹಿಕ ಸಂಪದ’ದ ನಿನ್ನ ಕವಿತೆ “ಕಾರ್ಯಕ್ರಮ’ವನ್ನು ಮತ್ತೆ ಮತ್ತೆ ಓದುತ್ತ ನನ್ನ ಹೊಸವರ್ಷ ನಿಜಕ್ಕೂ ಹೊಸದಾಗುತ್ತಿದೆ. ಪರಿಪಕ್ವವಾದ ಅಷ್ಟೇ ಆಳವಾದ ಪ್ರತಿಭೆ ಇದರಲ್ಲಿ ಪ್ರತಿಫಲಿಸಿದೆ. ದಿನನಿತ್ಯದ ಹುಲುವಿವರಗಳಲ್ಲೇ ನೀನು ಅದ್ಭುತವನ್ನು ಮನಗಾಣುವ ರೀತಿ ವಿಶೇಷವಾದದ್ದು. ಅಡಿಗರ “ಮೋಹನ ಮುರಲಿ’ ಸೆಳೆಯುವ “ತೀರ’ ಒಂದು ಬಗೆಯದಾದರೆ, ನಿನ್ನ ಈ ಕವಿತೆಯಲ್ಲಿ ಸೆಳೆಯುವ “ಸಮುದ್ರ’ ಇನ್ನೊಂದು ಬಗೆಯದು. ಅಲೆ ಅಲೆಯಾಗಿ ಕರೆಯುವಂಥಾದ್ದು. ಮೂರರಲ್ಲಿ ಎರಡು ಸಾಲು ಸಮುದ್ರ, ಒಂದು ಸಾಲು ಭೂಮಿ ! ನಿನ್ನ ಕವಿತೆ ಹೇಳುತ್ತದೆ, “ಹುಷಾರು! ಹುಷಾರು!’. ವಾಹ್ ವಾಹ್ ಅಂತೇನೆ ನಾನು. ಸಮುದ್ರವೇ ಒಂದು ಇಡಿ. ಭೂಮಿ ಅನ್ನೋದು ಮಾನವ, ಪಶು, ವಿಹಗ, ಜಂತು, ವೃಕ್ಷ ಮತ್ತು ಪಾಷಾಣಗಳಿಗೆ ಸಿಕ್ಕ ಒಂದು ಅವಕಾಶ. ಪ್ರಜ್ಞಾಪೂರ್ವಕವಾಗಿಯೋ ಸುಪ್ತಪ್ರಜ್ಞಾಪೂರ್ವಕವಾಗಿಯೋ ನೀನೊಂದು ಮಾಸ್ಟರ್ ಪೀಸನ್ನು ರಚಿಸಿರುವಿ. ಆಶಯ ಮತ್ತು ಆಕೃತಿ ಅಂತೆಲ್ಲ ಹೇಳುತ್ತಾರೆ. ನೀನಂತೂ ಕಾವ್ಯ ಮತ್ತು ಗದ್ಯದ ನಡುವಿನ ಸೂಕ್ಷ್ಮ ಗೆರೆಯನ್ನು ಅಳಿಸಿಬಿಟ್ಟಿರುವಿ. ಲೆಕ್ಕಣಿಕೆಯನ್ನು ಚಲಿಸುವ ನಿನ್ನ ಕೈಗಳಿಗೆ ಇನ್ನೂ ಹೆಚ್ಚಿನ ಕಸುವನ್ನು ಹಾರೈಸುತ್ತೇನೆ. ಜೈ ಹೋ!
– ನಿದ್ದೆಯಲ್ಲಿರುವ ಮಗು ದೇವರೊಂದಿಗೆ ಸಂಭಾಷಿಸುತ್ತಿರುವ ಕ್ಷಣ ಹೊಸತೇ.
– ಮುಂಜಾವ ಹೂವನ್ನು ಅರಳಿಸುವ ಮೂಲಕ ಭೂಮಿ ಆಕಾಶವನ್ನು ನೋಡಿ ನಗುತ್ತಿರುವ ಕ್ಷಣ ಹೊಸತೇ.
– ಜಗವೆಲ್ಲ ನಿದ್ದೆಯಲ್ಲಿರುವಾಗ ಮೂಡಲಮನೆಯಲ್ಲಿ ಸೂರ್ಯ ಇದ್ದಕ್ಕಿದ್ದಂತೆ ಎದ್ದು ಕುಳಿತುಕೊಳ್ಳುತ್ತಿರುವ ಕ್ಷಣ ಹೊಸತೇ.
– ಪ್ರತಿದಿನ ಬೆಳಗನ್ನು ಬೆರಗಿನಿಂದ ಕಾಣುವ ಕಣ್ಣುಗಳು ತೆರೆಯುತ್ತಿರುವ ಕ್ಷಣ ಹೊಸತೇ.
– ಇಷ್ಟೆಲ್ಲ ಹೊಸತಿರುವಾಗ ಹೊಸವರ್ಷದ ಸಂಭ್ರಮ ಮುಗಿಯಲುಂಟೆ?
– ಅನಂತನಾಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.