ನೈಜೀರಿಯಾದ ಕತೆ: ಆನೆ ಮತ್ತು ಆಮೆ


Team Udayavani, Apr 21, 2019, 6:00 AM IST

3

ಒಂದು ಕೊಳದಲ್ಲಿ ನೀರಾನೆಯೊಂದು ತನ್ನ ದೊಡ್ಡ ಪರಿವಾರದೊಡನೆ ನೆಮ್ಮದಿಯಿಂದ ಬದುಕಿಕೊಂಡಿತ್ತು. ಅದೊಮ್ಮೆ ದೊಡ್ಡ ಆನೆ ಕೊಳಕ್ಕೆ ಬಂದಿತು. ನೀರು ಕುಡಿದು ದಣಿವಾರಿಸಿಕೊಂಡಿತು. ಸೆಖೆ ಕಳೆಯಬೇಕೆಂಬ ಹುಮ್ಮಸ್ಸಿನಿಂದ ಕೊಳದ ನೀರಿಗಿಳಿದು ಈಜಿತು. ಸೊಂಡಿಲಿನಿಂದ ಕೊಳದಾಳದ ಕೆಸರನ್ನು ಮೇಲೆತ್ತಿ ಹಾರಿಸಿತು. ಇದರಿಂದ ನೀರಾನೆಗೆ ತುಂಬ ಭಯವಾಯಿತು. ಆನೆಯ ಮುಂದೆ ಬಂದು ನಯವಿನಯದಿಂದ ತಲೆಬಾಗಿ, “”ಬಾಯಾರಿಕೆಯಾದರೆ ಬೇಕಾದಾಗ ಬಂದು ನೀರು ಕುಡಿ. ಕೊಳ ನನ್ನಪ್ಪನದೇನೂ ಅಲ್ಲ. ಆದರೆ ಸುಮ್ಮನೆ ಸೊಂಡಿಲಿನಿಂದ ರಾಡಿಯೆಬ್ಬಿಸಿದರೆ ನೀರು ಹಾಳಾಗುತ್ತದೆ. ಬೇರೆಯವರಿಗೆ ಕುಡಿಯಲು ಕಷ್ಟವಾಗುತ್ತದೆ. ನೀನು ನೀರಿಗಿಳಿದು ನಿನ್ನ ದೈತ್ಯ ಪಾದಗಳಿಂದ ತಮ್ಮನ್ನು ತುಳಿದು ಅಪ್ಪಚ್ಚಿ ಮಾಡಬಹುದೆಂದು ನನ್ನ ಹೆಂಡತಿ ಮಕ್ಕಳಿಗೆ ತುಂಬ ಭಯವಾಗಿದೆ. ದಯವಿಟ್ಟು ಸಭ್ಯತನದಿಂದ ವರ್ತಿಸು” ಎಂದು ಕೇಳಿಕೊಂಡಿತು.

ಸೊಕ್ಕಿದ ಆನೆಗೆ ನೀರಾನೆಯ ವಿನಯದಿಂದ ಮನ ಕರಗಲಿಲ್ಲ. ಕೋಪದಿಂದ ಕಣ್ಣು ದೊಡ್ಡದು ಮಾಡಿತು. “”ನನ್ನಂಥ ದೊಡ್ಡವನಿಗೆ ನೀತಿ ಹೇಳುವಷ್ಟು ಧೈರ್ಯ ನಿನಗೆ ಬಂತೆ? ವನರಾಜ ಸಿಂಹಕ್ಕೆ ಹೆದರಿಲ್ಲ. ಇನ್ನು ನಿನ್ನ ಮಾತಿಗೆ ಮನ್ನಣೆ ಕೊಡುವುದುಂಟೆ? ನಾಳೆಯೂ ಬರುತ್ತೇನೆ, ನಾಡದ್ದು ಬರುತ್ತೇನೆ, ದಿನವೂ ಬಂದು ನೀರಾಟವಾಡಿ ಹೋಗುತ್ತೇನೆ. ಎದೆಯಲ್ಲಿ ಕೆಚ್ಚು ಇದ್ದರೆ ನನ್ನನ್ನು ಎದುರಿಸು. ಇಲ್ಲವಾದರೆ ಬಾಯಿ ಮುಚ್ಚಿಕೊಂಡು ಬಿದ್ದಿರು” ಎಂದು ಕಟುವಾಗಿ ಹೇಳಿತು.

ಆನೆಗೆ ಎದುರಾಡಲು ನೀರಾನೆಗೆ ಧೈರ್ಯವಿರಲಿಲ್ಲ. ಹೀಗಾಗಿ ತಲೆತಗ್ಗಿಸಿ ಸುಮ್ಮನಾಯಿತು. ಆದರೆ, ದಿನಾಲೂ ಆನೆ ಕೊಳಕ್ಕೆ ಬಂದು ತಿಳಿನೀರನ್ನು ಕದಡುತ್ತಿದ್ದುದರಿಂದ ಜೀವನ ಮಾಡುವುದು ಕಷ್ಟವಾಯಿತು. ಈ ವಿಷಯವನ್ನು ತನ್ನ ಆಪ್ತ ಗೆಳೆಯನಾದ ಆಮೆಯ ಬಳಿ ಹೇಳಿಕೊಂಡಿತು. “”ದೊಡ್ಡ ಸಂಸಾರ ನನ್ನದು. ಇಷ್ಟರ ತನಕ ಗೌರವದಿಂದ ಜೀವನ ಮಾಡಿದೆ. ಒಬ್ಬರೊಂದಿಗೆ ಜಗಳ ಮಾಡಿಲ್ಲ, ಛೀ ಎಂಬ ಮಾತು ಕೇಳಿಸಿಕೊಂಡಿಲ್ಲ. ಈಗ ಆನೆಯಿಂದಾಗಿ ಬದು ಕಿನ ನೆಮ್ಮದಿಗೇ ಭಂಗ ಬಂದಿದೆ” ಎನ್ನುತ್ತ ಕಣ್ಣೀರಿಳಿಸಿತು.

ಆಮೆ ಮಂದಹಾಸ ಬೀರಿತು. “”ಗುಡ್ಡಕ್ಕೆ ಗುಡ್ಡ ಅಡ್ಡ ಇದೆಯೆಂಬುದನ್ನು ಮರೆಯಬೇಡ. ಆನೆಗೆ ತಲೆ ದೊಡ್ಡದಿರಬಹುದು, ಆದರೆ ಮೆದುಳು ತುಂಬ ಚಿಕ್ಕದು. ನನ್ನ ತಲೆ ಸಣ್ಣದು. ಆದರೂ ಬುದ್ಧಿ ಚುರುಕಾಗಿಯೇ ಇದೆ. ನೀನು ನನಗೆ ಜೀವದ ಗೆಳೆಯ. ನಿನಗೆ ನೆರವಾಗಲು ದುಷ್ಟ ಆನೆಗೆ ಹೇಗೆ ಮದ್ದು ಅರೆಯುತ್ತೇನೆ ಅಂತ ನೀನೇ ನೋಡುತ್ತ ಇರು” ಎಂದು ಭರವಸೆ ನೀಡಿತು.

ಆನೆಯ ಹುಟ್ಟುಹಬ್ಬ ಬಂದಿತು. ಬೇಗನೆ ಸ್ನಾನ ಮುಗಿಸಿ ಬಂದು ಸಡಗರ-ಸಂಭ್ರಮ ಆಚರಿಸಬೇಕೆಂದು ಕೊಳದ ಕಡೆಗೆ ಹೊರಟಿತು. ದಾರಿಯಲ್ಲಿ ಆಮೆ ಒಂದು ಚೀಲದ ತುಂಬ ಮೊಳಕೆ ಕಾಳುಗಳು ಮತ್ತು ಹುರಿದ ಸಿಗಡಿ ಇರಿಸಿಕೊಂಡು ತಿನ್ನುತ್ತ ಇತ್ತು. ಆನೆ ಮೂಗರಳಿಸಿತು. “”ಏನೋ ಅದು, ತುಂಬ ಪರಿಮಳ ಬರುತ್ತ ಇದೆ. ತಿನ್ನುವ ತಿಂಡಿ ರುಚಿಯಾಗಿರಬೇಕಲ್ಲವೆ?” ಎಂದು ಕೇಳಿತು. ಆಮೆ ಒಂದು ಹಿಡಿ ತೆಗೆದು ಆನೆಗೆ ಕೊಡುತ್ತ, “”ನೀವೇ ತಿಂದು ನೋಡಿ. ಅದರ ರುಚಿಗೆ ಮನ ಸೋಲುತ್ತೀರಿ” ಎಂದಿತು.

ಆನೆ ಅದನ್ನು ತಿಂದು ನೋಡಿ ಖುಷಿಪಟ್ಟಿತು. “”ಇಷ್ಟೊಂದು ರುಚಿಯಾಗಿದೆ! ಇದನ್ನು ಯಾವುದರಿಂದ ತಯಾರಿಸಿದ್ದೀ?” ಎಂದು ಕೇಳಿತು. “”ತಯಾರಿಕೆ ತುಂಬ ಕಷ್ಟವೇ. ಆದರೆ ನಾಲಿಗೆಯ ರುಚಿಗೆ ಬೇಕಾಗಿ ಏನಾದರೂ ಮಾಡಲೇಬೇಕಲ್ಲವೆ! ನನ್ನ ಒಂದು ಕಣ್ಣನ್ನು ಕಿತ್ತು ಅದರಿಂದ ತಯಾರಿಸಿದ ಖಾದ್ಯ ಇದು” ಆಮೆ ಒಂದು ರೆಪ್ಪೆಯನ್ನು ತೆರೆಯದೆ ಕಣ್ಣು ಕುರುಡಾಗಿರುವಂತೆ ತೋರಿಸಿತು.

ಭೋಳೆ ಆನೆ ಸುಳ್ಳು ಮಾತನ್ನು ನಂಬಿ ಬಿಟ್ಟಿತು. “”ಕಣ್ಣಿನಿಂದ ಇಂತಹ ಸೊಗಸಾದ ಭಕ್ಷ್ಯ ತಯಾರಿಸಬಹುದೆ? ನನಗೂ ಎರಡು ಕಣ್ಣುಗಳಿವೆ. ಒಂದು ಕಣ್ಣಿನಿಂದ ಇದನ್ನು ತಯಾರಿಸಿ ಹೆಂಡತಿಗೆ ಕೊಡಬೇಕೆಂಬ ಬಯಕೆ ಯಾಗಿದೆ. ಆದರೆ ತಯಾರಿಸುವ ವಿಧಾನ ಗೊತ್ತಿಲ್ಲ. ಕಣ್ಣನ್ನು ತೆಗೆಯುವ ಕ್ರಮವೂ ತಿಳಿದಿಲ್ಲ. ನೀನು ನಾಳೆ ನನ್ನ ಕಣ್ಣಿನಿಂದ ಈ ಸೊಗಸಾದ ಖಾದ್ಯವನ್ನು ತಯಾರಿಸಿ ತಂದು ಕೊಡುತ್ತೀಯಾ?” ಎಂದು ಕೇಳಿತು.

“”ಅದಕ್ಕೇನಂತೆ, ದೊಡ್ಡವರಾದ ನೀವು ಕೇಳಿದರೆ ಚಿಕ್ಕವನಾದ ನಾನು ಇಲ್ಲ ಅನ್ನುವುದುಂಟೆ? ಒಂದು ಚೂಪಾದ ಕೋಲಿನಿಂದ ಕುಟ್ಟಿದರೆ ಕಣ್ಣು ಹೊರಗೆ ಬರುತ್ತದೆ. ಅದನ್ನು ನನ್ನ ಕೈಗೆ ಕೊಡಿ. ನಾಳೆ ಈ ಖಾದ್ಯವನ್ನು ತಂದು ನಿಮಗೆ ಒಪ್ಪಿಸುತ್ತೇನೆ” ಎಂದು ಹೇಳಿತು ಘಾಟಿ ಆಮೆ.

ಆನೆ ತನ್ನ ಒಂದು ಕಣ್ಣನ್ನು ಕಿತ್ತು ಆಮೆಗೆ ಕೊಟ್ಟು ನೋವಿನಿಂದ ಒದ್ದಾಡಿತು. “”ಅಂತಹ ರುಚಿಕರ ತಿಂಡಿ ಸಿಗುವುದಾದರೆ ಎಂತಹ ನೋವನ್ನೂ ಸಹಿಸಿಕೊಂಡೇನು, ಇನ್ನೊಂದು ಕಣ್ಣು ಬೇಕಿದ್ದರೂ ಕೊಟ್ಟೇನು” ಎಂದು ಹೇಳಿತು. ಆಮೆ ಕಣ್ಣನ್ನು ಒಂದು ಪೊದೆಗೆ ಎಸೆಯಿತು. ಮರುದಿನ ಇನ್ನಷ್ಟು ರುಚಿಯಿರುವ ತಿಂಡಿಗಳೊಂದಿಗೆ ಆನೆ ಬರುವ ದಾರಿಯಲ್ಲಿ ಕಾದು ಕುಳಿತಿತು. ತಿಂಡಿಗಳ ಆಸೆಯಿಂದ ಬಂದ ಆನೆ ಅದು ತಂದ ತಿಂಡಿಯನ್ನು ತಿಂದ ಮೇಲೆ ಒಂದು ಕಣ್ಣನ್ನು ಕಳೆದುಕೊಂಡ ದುಃಖವನ್ನೇ ಮರೆತು ಸಂತೋಷಪಟ್ಟಿತು. ಆಮೆ, “”ನಾಳೆ ನಿಮ್ಮ ಇನ್ನುಳಿದ ಒಂದು ಕಣ್ಣಿನಿಂದ ಇದಕ್ಕಿಂತಲೂ ಸ್ವಾದವಿರುವ ಭಕ್ಷ್ಯಗಳನ್ನು ತಯಾರಿಸಿ ತಂದುಕೊಡಲೆ?” ಎಂದು ವಿಚಾರಿಸಿತು.

“”ಅದನ್ನು ನಾನೇ ಹೇಳುವವನಿದ್ದೆ. ಕಣ್ಣು ಹೋದರೇನು, ಮರಳಿ ಬರುವುದಿಲ್ಲವೆ? ಈ ಕಣ್ಣನ್ನು ಕಿತ್ತು ಕೊಡುತ್ತೇನೆ. ನಾಳೆ ಹೀಗೆಯೇ ಇರುವ ರುಚಿ ಕೆರಳಿಸುವ ತಿಂಡಿಗಳನ್ನು ತಯಾರಿಸಿ ತಂದುಬಿಡು” ಎನ್ನುತ್ತ ಆನೆ ತನ್ನ ಕಣ್ಣನ್ನು ಕಿತ್ತು ಆಮೆಯ ಕೈಯಲ್ಲಿರಿಸಿತು. ಆಮೆ ಮೆಲ್ಲಗೆ ಅಲ್ಲಿಂದ ಜಾರಿ ಕೊಳಕ್ಕೆ ಹೋಯಿತು. ಗೆಳೆಯನಾದ ನೀರಾನೆಯನ್ನು ಕೂಗಿ ಕರೆಯಿತು. “”ನೋಡಿದೆಯಾ, ದೇಹ ದೊಡ್ಡದಿದ್ದರೂ ಬುದ್ಧಿಯಲ್ಲಿ ಸೊನ್ನೆ ಯಾದ ಆನೆಯ ಕತೆ. ತನ್ನ ಕಣ್ಣುಗಳನ್ನು ತಾನೇ ಕಿತ್ತುಕೊಂಡು ಕುರುಡನಾಗಿಬಿಟ್ಟಿತು. ಇನ್ನು ಅದು ಕೊಳಕ್ಕೆ ಬರುವುದಿಲ್ಲ, ನಿನಗೆ ತೊಂದರೆ ಕೊಡುವುದಿಲ್ಲ” ಎಂದು ನಡೆದ ಕತೆ ಹೇಳಿತು. ನೀರಾನೆಗೆ ಆದ ಸಂತೋಷ ಅಷ್ಟಿಷ್ಟಲ್ಲ. ಗೆಳೆಯ ಆಮೆಯನ್ನು ಬಿಗಿಯಾಗಿ ಅಪ್ಪಿಕೊಂಡು ಕೃತಜ್ಞತೆ ಸಲ್ಲಿಸಿತು.

ಆನೆ ಕಣ್ಣುಗಳನ್ನು ಕಳೆದುಕೊಂಡು ಕುರುಡನಾಗಿ ಮನೆಗೆ ಹೋಗುವ ದಾರಿ ತಿಳಿಯದೆ ಅರಣ್ಯದಲ್ಲಿ ಅಲೆಯುತ್ತ ಇತ್ತು. ಅಲ್ಲಿಗೆ ನರಿ ಬಂದಿತು. “”ಗಜರಾಜರು ಹುಟ್ಟಿದ ಹಬ್ಬಕ್ಕೆ ನಾಟಕ ಪ್ರದರ್ಶಿಸುವ ಯೋಚನೆ ಏನಾದರೂ ಇದೆಯೆ? ನಡೆಯುವುದನ್ನು ನೋಡಿದರೆ ಹಾಗೆಯೇ ಅನಿಸುತ್ತದೆ” ಎಂದು ತಮಾಷೆ ಮಾಡಿತು. ಆನೆ ನೋವಿನಿಂದ ನರಳಿತು. “”ಸೋತುಬಿಟ್ಟೆ ಮಹರಾಯಾ. ಪುಟ್ಟ ಆಮೆ ಸತ್ಯವನ್ನೇ ಹೇಳುತ್ತದೆಂದು ಭಾವಿಸಿ ತಿಂಡಿ ತಿನ್ನುವ ಆಶೆಯಿಂದ ಕಣ್ಣುಗಳನ್ನು ಕಳೆದುಕೊಂಡೆ. ಮನೆಗೆ ಹೋಗುವ ದಾರಿ ತಿಳಿಯದೆ ಒದ್ದಾಡುತ್ತಿದ್ದೇನೆ. ನರಿರಾಯಾ, ಎಷ್ಟು ಖರ್ಚಾದರೂ ಚಿಂತೆಯಿಲ್ಲ. ನನಗೆ ಮರಳಿ ಕಣ್ಣುಗಳನ್ನು ಬರುವಂತೆ ಮಾಡುವ ಯಾರಾದರೂ ವೈದ್ಯರಿದ್ದರೆ ಕರೆತರುತ್ತೀಯಾ? ಕಣ್ಣುಗಳು ಬಂದರೆ ಸಾಕು, ಮತ್ತೆ ಯಾರಿಗೂ ತೊಂದರೆ ಕೊಡದೆ ನನ್ನ ಪಾಡಿಗೆ ಬದುಕುತ್ತೇನೆ” ಎಂದು ದೈನ್ಯವಾಗಿ ಕೇಳಿತು.

“”ಔಷಧಿ ಹಚ್ಚಿ ಹೋದ ಕಣ್ಣುಗಳು ಮತ್ತೆ ಚಿಗುರುವಂತೆ ಮಾಡುವ ಯಾವ ವೈದ್ಯನೂ ಕಾಡಿನಲ್ಲಿ ಇಲ್ಲ. ಆದರೆ ಯಾರ ಬಳಿಯಲ್ಲಾದರೂ ಕಣ್ಣುಗಳನ್ನು ಕೇಳಿ ತಂದರೆ ಕೊಕ್ಕರೆಯ ಬಳಿ ಅದನ್ನು ಮರಳಿ ಜೋಡಿಸುವ ಉಪಕರಣಗಳಿವೆ. ನೀನು ನನ್ನ ಜೊತೆಗೆ ಬಾ. ಯಾರಾದರೂ ನೇತ್ರದಾನ ಮಾಡುವವರಿದ್ದರೆ ವಿಚಾರಿಸಬಹುದು. ನೀನು ಶಾಶ್ವತವಾಗಿ ಕಣ್ಣುಗಳನ್ನು ಕೇಳಿದರೆ ನಿನಗೆ ಕಣ್ಣು ಕೊಟ್ಟು ಕುರುಡರಾಗಲು ಯಾರೂ ಇಷ್ಟಪಡುವುದಿಲ್ಲ. ಒಂದು ದಿನದ ಮಟ್ಟಿಗೆ ಸಾಲವಾಗಿ ಕೇಳಿದರೆ ದಯೆಯಿರುವ ಯಾರಾದರೂ ಮುಂದಾಗಬಹುದು” ಎಂದು ನರಿ ದಾರಿ ತೋರಿಸಿತು.

ಆನೆ ನರಿಯ ಮಾತನ್ನು ಒಪ್ಪಿತು. ನರಿ ಅದರ ಕೈ ಹಿಡಿದುಕೊಂಡು ಕಾಡಿನ ಎಲ್ಲ ಪ್ರಾಣಿಗಳು, ಪಕ್ಷಿಗಳ ಬಳಿಗೂ ಕರೆದೊಯ್ದಿತು. ಒಂದು ದಿನದ ಮಟ್ಟಿಗೆ ಕಣ್ಣುಗಳನ್ನು ಸಾಲವಾಗಿ ಕೊಡುವಂತೆ ಆನೆ ಕೇಳಿದಾಗ ಯಾವ ಜೀವಿಯೂ ಅದಕ್ಕೆ ಒಪ್ಪಲಿಲ್ಲ. “”ಯಾವ ಅಂಗಾಂಗ ಕಳೆದುಕೊಂಡರೂ ಬದುಕಿನಲ್ಲಿ ಹೇಗೋ ಸುಖದಿಂದ ಇರಬಲ್ಲೆವು. ಆದರೆ, ನೋಡುವ ಕಣ್ಣುಗಳನ್ನು ಅರೆಕ್ಷಣ ಕೂಡ ಕಳೆದುಕೊಳ್ಳಲು ನಮಗೆ ಸಾಧ್ಯವಿಲ್ಲ” ಎಂದು ಸ್ಪಷ್ಟವಾಗಿ ಹೇಳಿಬಿಟ್ಟವು.

ನಿರಾಶೆಯಿಂದ ಆನೆ ಮರಳುತ್ತಿರುವಾಗ ಒಂದು ಗೆದ್ದಲು ಬರುತ್ತ ಇತ್ತು. ನರಿ ಅದರೊಂದಿಗೆ ಕೇಳುವಂತೆ ಸೂಚಿಸಿತು. ಆನೆಯು ಒಂದು ದಿನದ ಮಟ್ಟಿಗೆ ಸಾಲವಾಗಿ ಕಣ್ಣುಗಳನ್ನು ಕೊಡುವಂತೆ ಕೋರಿದಾಗ ಗೆದ್ದಲು ಮನ ಕರಗಿ, “”ಒಂದು ದಿನಕ್ಕೆ ತಾನೆ? ತೆಗೆದುಕೋ. ಆದರೆ ನಾಳೆ ಬೆಳಗಾಗುವಾಗ ಮತ್ತೆ ತಂದುಕೊಡಬೇಕು” ಎಂದು ಹೇಳಿ ಕಣ್ಣುಗಳನ್ನು ಕೊಟ್ಟಿತು. ಅದನ್ನು ಕೊಕ್ಕರೆಯ ಬಳಿಗೆ ತೆಗೆದುಕೊಂಡು ಹೋಗಿ ಆನೆ ಹೋದ ಕಣ್ಣುಗಳ ಸ್ಥಾನದಲ್ಲಿರಿಸಿತು. ತನ್ನ ಮುಖದ ಗಾತ್ರಕ್ಕಿಂತ ಚಿಕ್ಕದಾದ ಕಣ್ಣುಗಳಾದರೂ ಆನೆಗೆ ನೋಡಲು ಕಷ್ಟವಾಗಲಿಲ್ಲ. ಆದರೆ ಕೊಟ್ಟ ಮಾತನ್ನು ಮರೆಯಿತು. ಗೆದ್ದಲಿಗೆ ಕಣ್ಣುಗಳನ್ನು ಮರಳಿ ಕೊಡಲಿಲ್ಲ. ಅದರಿಂದ ಈಗಲೂ ಗೆದ್ದಲಿನ ಜಾತಿ ಕುರುಡಾಗಿಯೇ ಇದೆ.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.