ನಿಸಾರ್‌ 81, ನಿತ್ಯೋತ್ಸವದ ಕವಿಗೆ ಇಂದು ಹುಟ್ಟುಹಬ್ಬದ ಸಡಗರ


Team Udayavani, Feb 4, 2017, 7:31 PM IST

KS-Nisar-ahmed.jpg

ರಾಷ್ಟ್ರಕವಿ ಗೋವಿಂದ ಪೈ ಅವರ ಪುಣ್ಯದಿನದಂದು ಅವರ ಹೆಸರಿನ ಮೊತ್ತಮೊದಲನೆಯ ಕಾವ್ಯಪ್ರಶಸ್ತಿಯನ್ನು ನಮ್ಮ ನಡುವಿನ ಪ್ರೀತಿಯ ಅಭಿಮಾನದ ಕವಿ ಪ್ರೊ. ಕೆ.ಎಸ್‌. ನಿಸಾರ್‌ ಅಹಮ್ಮದ್‌ ಅವರಿಗೆ ಪ್ರದಾನ ಮಾಡುವ ಈ ಸಮಾರಂಭದಲ್ಲಿ ಅಭಿನಂದನೆಯ ಮಾತುಗಳನ್ನಾಡುವ ಅವಕಾಶ ಕೆಲವು ವರ್ಷಗಳ ಹಿಂದೆ ನನಗೆ ಬಂದಿತ್ತು. ಇವತ್ತು ನಿಸಾರ್‌ ಅಹಮದ್‌ರ 81ನೆಯ ಹುಟ್ಟುಹಬ್ಬ. ಅಂದು ನಾನು ಆಡಿದ ಮಾತುಗಳನ್ನು ನೆನಪಿಸಿಕೊಳ್ಳುವುದು ಇಂದಿಗೆ ಹೆಚ್ಚು ಪ್ರಸ್ತುತ ಮತ್ತು ಹುಟ್ಟುಹಬ್ಬ ಅರ್ಥಪೂರ್ಣ ಅಭಿನಂದನೆಯೆಂದು ಭಾವಿಸಿದ್ದೇನೆ. 

ಕನ್ನಡ ಸಂಶೋಧನೆಯ ಅಗ್ರಗಣ್ಯ ವಿದ್ವಾಂಸರಾದ ಗೋವಿಂದ ಪೈಯವರು ತಮ್ಮ ಗದ್ಯ ಬರಹಗಳಲ್ಲಿ ಕಾವ್ಯದ ಆದ್ರì ಭಾವಗಳನ್ನು ಪ್ರಕಟಿಸಿ¨ªಾರೆ. ಪಂಜೆ ಮಂಗೇಶರಾಯರು ಮತ್ತು ಎನ್‌.ಎಸ್‌. ಕಿÇÉೆಯವರು ತೀರಿಕೊಂಡಾಗ ಪೈಯವರು ಬರೆದ ಅಶ್ರುತರ್ಪಣದ ಬರಹಗಳು ತಮ್ಮ ಕಣ್ಣುಗಳನ್ನು ತೇವವನ್ನಾಗಿಸುತ್ತವೆ. ಅಂತಹ ವಿಚಾರ ಮತ್ತು ಭಾವನೆಗಳ ಮಧುರ ಬಾಂಧವ್ಯದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು ಕೆ.ಎಸ್‌. ನಿಸಾರ್‌ ಅಹಮ್ಮದ್‌ ಅವರು.

ಗೋವಿಂದ ಪೈಯವರ ಜನಪ್ರಿಯ ಕವನ ಕನ್ನಡಿಗರ ತಾಯಿಯ ಸಾಲುಗಳು :
ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ!
ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ!
ನಮ್ಮ ಮನವನೊಂದೆ ಕಲಸು!
ಇದನೊಂದನೆ ಕೋರುವೆ-
ಪೈಯವರ ಈ ಕವನದ ಜೊತೆಗೆ ನಿಸಾರ್‌ ಅವರ ನಾಡದೇವಿಯೆ ಕವನದ ಸಾಲುಗಳು ಬಹಳ ಮುಖ್ಯ ಅನ್ನಿಸುತ್ತವೆ:

ನಾಡದೇವಿಯೆ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ;
ನೋವು ನಗೆಯ ಸಮ್ಮಿಶ್ರದಲ್ಲಿ ಎದೆಯಾಯಿತದಕೆ ವಶ್ಯ.
ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ-
ಒಂದೆ ನೆಲದ ರಸ ಹೀರಲೇನು? ಸಿಹಿ, ಕಹಿಯ ರುಚಿಯ ಕಾಯಿ, ನಾಡದೇವಿಯೆ….
ನಿಸಾರರ ನಿತ್ಯೋತ್ಸವವನ್ನು ಹಾಡುವ ನಾವು ಅವರ ನಾಡದೇವಿ ಕವನದ ಭಾವತೀವ್ರತೆಗೂ ಸ್ಪಂದಿಸಬೇಕು. 
ಗೋವಿಂದ ಪೈಯವರು ವಿಶ್ವಧರ್ಮವನ್ನು ಮಾನವ ಧರ್ಮವನ್ನಾಗಿ ಪರಿಗ್ರಹಿಸಿ ಕಾವ್ಯರಚನೆ ಮಾಡಿದರು. ಏಸುಕ್ರಿಸ್ತನ ಕೊನೆಯ ದಿನವನ್ನು ಕುರಿತ ಗೊಲ್ಗೊಥಾ ಖಂಡಕಾವ್ಯ, ಬುದ್ಧನ ಕೊನೆಯ ದಿನವನ್ನು ವರ್ಣಿಸುವ ವೈಶಾಖೀ ಖಂಡಕಾವ್ಯ, ದೆಹಲಿ ಅಥವಾ ಮಹಾತ್ಮನ (ಗಾಂಧಿಯ) ಕಡೆಯ ದಿನ : ಇವು ಮೂರು ಧರ್ಮಗಳ ಮೂವರು ಮಹಾತ್ಮರ ಕೊನೆಯ ದಿನದ ನೋವು-ಸಾಂತ್ವನಗಳನ್ನು ಕಾವ್ಯಾತ್ಮಕವಾಗಿ ವರ್ಣಿಸುವ ರಚನೆಗಳು. ಶಾಂತಿ, ಅಹಿಂಸೆ, ದಯೆ, ಕ್ಷಮೆ – ಇಂತಹ ಗುಣಗಳನ್ನು ಅಸಾಮಾನ್ಯವಾಗಿ ಮೈಗೂಡಿಸಿಕೊಂಡಿದ್ದ ಮಹಾತ್ಮರು ಆದರ್ಶಪ್ರಾಯರು ಎನ್ನುವ ತತ್ವ ಇಲ್ಲಿ ಪ್ರಧಾನವಾಗಿದೆ. ಪೈಯವರ ಯೇಸು-ಕೃಷ್ಣ ಎನ್ನುವ ಕವನ ಎರಡು ಧರ್ಮಗಳ ಕಾರಣಿಕಪುರುಷರನ್ನು ಸಮೀಕರಿಸುವ ಅದ್ಭುತ ರೂಪಕ. 

ನಿಸಾರ್‌ ಅಹಮದ್‌ ಅವರ ಶಿಲುಬೆ ಏರಿ¨ªಾನೆ ಕವನದ ಸಾಲುಗಳು ಮನನೀಯವಾಗಿವೆ :
ನೀವು ಬಡಿದ ಸುತ್ತಿಗೆಗಳು
ಮೊಳೆಗಳು
ಮಕುಟ ಹೆಣೆದ ಮುಳ್ಳುಗಳು
ಹಬ್ಬಿಸಿದ ಸುಳ್ಳುಗಳು
ರೋಮನರ ಕಿವಿಡೆಬ್ಬಿಸುವ ಕೊಂಬುಗಳು
ಕಾಲರಾಯನ ಗುಜರಿ ಸೇರಿಲ್ಲ-

ವೇಷ ಮರೆಸಿವೆ ಅಷ್ಟೆ, ಈ ಎಲ್ಲ ಕೇಡುಗಳು;
ರೈಫ‌ಲ್ಲು, ಟ್ಯಾಂಕು, ಬಾಂಬು, ಗ್ರನೇಡುಗಳು
-ಅವಕ್ಕೆ ಚಲನೆಯೊದಗಿವೆ:
ನಿಮ್ಮವೇ ಬಲಿಷ್ಠ ಕೈಯಿಗಳು,
ಎದೆಯಾಳದ ಮುಯ್ಯಿಗಳು.
“ಇರುವನಕ ನಿಮ್ಮ ಸಾಮ್ರಾಜ್ಯ
ಆಗುತ್ತೇನೆ ಕ್ರೋಧ ತಿಳಿಗೇಡಿತನಕ್ಕೆ ಆಜ್ಯ
ಬಂದೇ ತೀರುತ್ತದೆ ದೈವೀರಾಜ್ಯ
ಎನ್ನುವಂತೆ ಏರಿ¨ªಾನೆ ಶಿಲುಬೆ-
ಇಗರ್ಜಿ ಮಸಜೀದು ದೇವಸ್ಥಾನ ಮಠಗಳಲ್ಲಿ
ಮತಮತದ ಮತಿರಹಿತ ಹಟಗಳಲ್ಲಿ;
ಕೋರ್ಟು ಕಾರ್ಖಾನೆ ಠಾಣೆ ಠಾಣೆಗಳಲ್ಲಿ,
ಕಣೆºಳಕ ಕಿತ್ತೆಸೆದು ಕುರುಡುಗೊಳಿಸುವ
ನಮ್ಮ ಬಂದಿಖಾನೆಗಳಲ್ಲಿ
ದವಾಖಾನೆಗಳ ಕೋಣೆ ಕೋಣೆಗಳಲ್ಲಿ;
ಮಾಹೆಗೊಂದಾವರ್ತಿ ಹಣತೆ ಹೊತ್ತಿಸಿಕೊಳದ
ದಲಿತವಾಸದ ಸೋಗೆ ಬಿಲಗಳಲ್ಲಿ-

ಗೋವಿಂದ ಪೈಯವರು ಏಸುಕ್ರಿಸ್ತ, ಬುದ್ಧ, ಶ್ರೀಕೃಷ್ಣ, ಮಹಾತ್ಮಗಾಂಧಿಯವರ ಬಗ್ಗೆ ಕಾವ್ಯಗಳನ್ನು ಬರೆದ ಹಾಗೆಯೇ ಶ್ರೀ ಗುಮ್ಮಟ ಜಿನಸ್ತುತಿಯನ್ನು ಬರೆದರು ಮತ್ತು ಉಮರ್‌ ಖಯ್ನಾಮ್‌ ಎಂಬ ಪಾರ್ಸಿ ಕವಿಯ “ರುಬಾಯಿಯಾತ್‌’ಗಳನ್ನು ಕನ್ನಡಕ್ಕೆ ಅನುವಾದಿಸಿದರು. ಉಮರ್‌ ಖಯ್ನಾಮ್‌ನ ಐವತ್ತು ರುಬಾಯಿಯಾತ್‌ಗಳ ಕನ್ನಡ ಅನುವಾದ ಕನ್ನಡ ಕಾವ್ಯಜಗತ್ತಿಗೆ ಪೈಯವರ ದೊಡ್ಡ ಕೊಡುಗೆ. ಹೀಗೆ ಕಾವ್ಯದ ವಸ್ತುವಿನ ಆಯ್ಕೆ ಮತ್ತು ನಿರ್ವಹಣೆಯಲ್ಲಿ ಗೋವಿಂದ ಪೈಯವರು ವಿಶ್ವಮಾನವ ಸಂದೇಶವನ್ನು ಸಹಜವಾಗಿ ಅಳವಡಿಸಿಕೊಂಡರು. ಗಾಂಧಿತತ್ವದ ಆದರ್ಶದ ಪ್ರಾಮಾಣಿಕ ಪರಿಪಾಲಕರಾಗಿದ್ದ ಗೋವಿಂದ ಪೈಯವರ ಸಾಹಿತ್ಯದಲ್ಲಿ ವಿಶ್ವಾತ್ಮಕತೆಯೆನ್ನುವುದು ಮುಖ್ಯ ತಿರುಳಾಗಿದೆ. 

ನಿಸಾರ್‌ ಅಹಮ್ಮದ್‌ ಅವರ ಕಾವ್ಯದಲ್ಲೂ ವಿಶ್ವಮಾನವ ತತ್ವದ ಎಲ್ಲ ನೆಲೆಗಳು ಗೋಚರಿಸುತ್ತದೆ. ಕಾವ್ಯದ ವಸ್ತುವಿನ ಆಯ್ಕೆಯಿಂದ ತೊಡಗಿ ಭಾಷೆಯ ಬಳಕೆಯವರೆಗೆ ನಿಸಾರ್‌ ಅಹಮ್ಮದ್‌ ಅಪ್ಪಟ ವಿಶ್ವಮಾನವ. ಅವರ ನಿಮ್ಮೊಡನಿದ್ದೂ ನಿಮ್ಮಂತಾಗದೆ  ಕವನವನ್ನು ನಾನು ಮೊದಲು ಕೇಳಿದ್ದು 1970ರಲ್ಲಿ ಬೆಂಗಳೂರಿನಲ್ಲಿ ಪ್ರೊ. ದೇ.ಜವರೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ನಿಸಾರ್‌ ಅಹಮ್ಮದ್‌ ವಾಚನ ಮಾಡಿದಾಗ. ನವ್ಯ ಸಾಹಿತ್ಯದ ಉಚ್ಛಾ†ಯದ ಕಾಲದಲ್ಲಿ ತಮ್ಮ ಓರಗೆಯ ಸಾಹಿತಿಗಳು ಪ್ರೇಕ್ಷಕರ ಮೊದಲ ಸಾಲಿನಲ್ಲಿ ಕುಳಿತಿ¨ªಾಗ ನಿಸಾರ್‌ ಓದಿದ ಈ ಕವಿತೆಗೆ ಆ ಕಾಲದ ಸಾಂದರ್ಭಿಕ ಅರ್ಥಗಳು  ಜೋಡಣೆಗೊಂಡು ಪ್ರೇಕ್ಷಕರ ಭಾರೀ ಕರತಾಡನದ ಮೆಚ್ಚುಗೆ ದೊರೆತಿತ್ತು. ಈ ಕವನ ಧಾರ್ಮಿಕ ಸಾಂಸ್ಕೃತಿಕ ಬಿಕ್ಕಟ್ಟಿನ ಬಹುಧ್ವನಿಗಳನ್ನು ಹೊಮ್ಮಿಸುವ ಎಲ್ಲ ಕಾಲಕ್ಕೂ ಸಲ್ಲುವ ಕವನ:

ನಿಮ್ಮೊಡನಿದ್ದೂ ನಿಮ್ಮಂತಾಗದೆ
ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದÇÉೆ ಬೇರೊತ್ತಿದರೂ ಬೀಗಿ
ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.
ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು
ಸಂಶಯದ ಪಂಜವೆತ್ತಿ
ನನ್ನ ನಂಬಿಕೆ ನೀಯತ್ತು ಹಕ್ಕು
ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ
ನೋವಿಗೆ ಕಣ್ಣು ತುಂಬಿದ್ದರೂ,
ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ
ನನ್ನೆದುರಿನÇÉೇ ತನಿಖೆ ಮಾಡುವ ಕ್ಷಣವನ್ನ
ಹುಸಿನಗುತ್ತ ಎದುರಿಸುವುದಿದೆಯಲ್ಲ
ಅದು ಬಲು ಕಷ್ಟದ ಕೆಲಸ.

ಗೋವಿಂದ ಪೈಯವರು ತಮ್ಮ ಕಾವ್ಯದಲ್ಲಿ ಹೊಸ ಶಬ್ದಗಳ ಸೃಷ್ಟಿಗೆ ಚಾಲನೆಯನ್ನು ಕೊಟ್ಟರು. ಅವರ ಒಂದು ಮುಖ್ಯ ಕೊಡುಗೆಯೆಂದರೆ ಕನ್ನಡದ “-ಇಸು’ ಪ್ರತ್ಯಯವನ್ನು ಭಿನ್ನ ಭಾಷೆಗಳ ಪದಗಳಿಗೆ ಜೋಡಿಸಿದ್ದು. ಉದಾಹರಣೆಗೆ ಅವರು “ಸಂಸ್ಕೃತಿಸು ಎನ್ನುವ ಪದವನ್ನು “ಸಂಸ್ಕƒತದಲ್ಲಿ ಮಾತನಾಡು’ ಎನ್ನುವ ಅರ್ಥದಲ್ಲಿ ಟಂಕಿಸಿ¨ªಾರೆ. ನಿಸಾರ್‌ ಅವರು ಇದೇ ರೀತಿಯ “-ಇಸು’ ಪ್ರತ್ಯಯವನ್ನು ಜೋಡಿಸಿ ಹೊಸ ಪದಗಳನ್ನು ಸೃಷ್ಟಿಸಿ¨ªಾರೆ: ಗುಮಾನಿಸು, ರವಾನಿಸು, ಬಯಾನಿಸು ಇತ್ಯಾದಿ. ನಿಸಾರ್‌ ಅವರ ಕಾವ್ಯದಲ್ಲಿ ಉರ್ದು, ಪಾರ್ಸಿ, ಅರಬಿ, ಇಂಗ್ಲಿಷ್‌, ಸಂಸ್ಕƒತ ಮುಂತಾದ ಭಾಷೆಗಳ ಪದಗಳು ವಿಶೇಷವಾಗಿ ಬಳಕೆಯಾಗಿವೆ. ಪೈಯವರ ಕಾವ್ಯದಲ್ಲಂತೂ ಅನೇಕ ಭಾರತೀಯ ಮತ್ತು ಜಾಗತಿಕ ಭಾಷೆಗಳ ಪದಗಳು ಕನ್ನಡೀಕರಣಗೊಂಡು ಕನ್ನಡ ಭಾಷಾಸಂಪತ್ತು  ಶ್ರೀಮಂತವಾಗಿದೆ. 

ಕೆ.ಎಸ್‌. ನಿಸಾರ್‌ ಅಹಮ್ಮದ್‌ ಅವರು 1984-87ರ ಅವಧಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಯು.ಆರ್‌. ಅನಂತಮೂರ್ತಿ, ಚದುರಂಗ, ಕಯ್ನಾರ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ, ಟಿ. ಸುನಂದಮ್ಮ, ಟಿ. ಕೆ. ರಾಮರಾವ್‌, ಗೀತಾ ಕುಲಕರ್ಣಿಯವರಿಂದ ಮೊದಲ್ಗೊಂಡು ಕನ್ನಡದ ಇಂದಿನ ಹಿರಿಯ ಸಾಹಿತಿಗಳವರೆಗೆ ಅಕಾಡೆಮಿಯ ಸದಸ್ಯರುಗಳ ಪಟ್ಟಿ ಶ್ರೀಮಂತವಾಗಿತ್ತು. ಆ ಸಂದರ್ಭದಲ್ಲಿ ಅವರ ಜೊತೆಗೆ ಅಕಾಡೆಮಿಯ ಸದಸ್ಯನಾಗಿ ಕೆಲಸ ಮಾಡುವ ಸದವಕಾಶ ಪಡೆದಿ¨ªೆ.  ಅವರು ಸಾಹಿತ್ಯ ಅಕಾಡೆಮಿಯನ್ನು ರಾಜ್ಯದಿಂದ ಜಿÇÉೆಗೆ, ಜಿÇÉೆಯಿಂದ ತಾಲೂಕಿಗೆ, ತಾಲೂಕಿನಿಂದ ಹೋಬಳಿಗೆ ಕೊಂಡೊಯ್ದು ಬಹುತೇಕ ತಾವೇ ಭಾಗವಹಿಸಿ ಕನ್ನಡದ ಲವಲವಿಕೆಯ ವಾತಾವರಣವನ್ನು ನಿರ್ಮಾಣ ಮಾಡಿದ್ದನ್ನು ಕಂಡಿದ್ದೇನೆ. ಹೊರವೇಷಕ್ಕೆ ಸೂಟುಬೂಟು, ಮಾತಿಗೆ ನಿಂತರೆ ಅಪ್ಪಟ ದೇಸೀಕನ್ನಡದ ನಿಸಾರ್‌ ಅಹಮ್ಮದ್‌ ಅವರು ಕನ್ನಡ ಕಾವ್ಯ ಮತ್ತು ಬದುಕನ್ನು ಮಂಜೇಶ್ವರದ ಕಡಲಿನಂತೆ ಉಕ್ಕಿಸಿದವರು; ಅವರು ಬಹು ಅರ್ಥಗಳಲ್ಲಿ ಗೋವಿಂದ ಪೈಯವರ ಆದರ್ಶದ ನಿಜವಾದ ಉತ್ತರಾಧಿಕಾರಿ.

– ಬಿ. ಎ. ವಿವೇಕ ರೈ

ಟಾಪ್ ನ್ಯೂಸ್

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.