ನಿಶ್ವಿ‌ಕಾ ಬಿಝಿ ಹುಡುಗಿ

Team Udayavani, Mar 18, 2018, 7:30 AM IST

s-1.jpg

ಕನ್ನಡದ ನಾಯಕಿ ನಟಿಯರಿಗೆ ಅವಕಾಶ ಸಿಗೋದು ಕಡಿಮೆ ಎಂಬ ಮಾತು ಆಗಾಗ ಕೇಳಿಬರುತ್ತಲೇ ಇರುತ್ತವೆ. ಅದಕ್ಕೆ ಸರಿಯಾಗಿ ಕೆಲವೊಮ್ಮೆ ಒಂದು ಸಿನೆಮಾ ಒಪ್ಪಿಕೊಂಡ ನಟಿಯರು ಮತ್ತೆ ಕಾಣಸಿಗೋದೇ ಇಲ್ಲ. ಆದರೆ, ನಿಶ್ವಿ‌ಕಾ ನಾಯ್ಡು ಮಾತ್ರ ಆ ವಿಚಾರದಲ್ಲಿ ಅದೃಷ್ಟವಂತೆ. ಮೊದಲ ಸಿನೆಮಾ ರಿಲೀಸ್‌ ಆಗುವ ಮುನ್ನವೇ ಮತ್ತೆರಡು ಸಿನೆಮಾಗಳನ್ನು ಒಪ್ಪಿಕೊಂಡಿದ್ದಾರೆ. ಒಟ್ಟು ಮೂರು ಸಿನೆಮಾಗಳನ್ನು ಕೈಯಲ್ಲಿಟ್ಟುಕೊಂಡಿರುವ ನಿಶ್ವಿ‌ಕಾ ಈಗ ಯಾವ ಸಿನೆಮಾ ತನಗೆ ಬ್ರೇಕ್‌ ಕೊಡುತ್ತದೆ ಎಂದು ಕುತೂಹಲದೊಂದಿಗೆ ಎದುರು ನೋಡುತ್ತಿದ್ದಾರೆ. ನಿಶ್ವಿ‌ಕಾ ಪಕ್ಕಾ ಕನ್ನಡದ ಹುಡುಗಿ. ಅನೀಶ್‌ ತೇಜೇಶ್ವರ್‌ ನಾಯಕರಾಗಿರುವ ವಾಸು ಪಕ್ಕಾ ಲೋಕಲ್‌ ಎಂಬ ಸಿನೆಮಾಕ್ಕೆ ನಾಯಕಿಯಾಗುವ ಮೂಲಕ ನಿಶ್ವಿ‌ಕಾ ಹೆಸರು ಚಾಲ್ತಿಗೆ ಬಂತು. ಆ ಸಿನೆಮಾ ಬಿಡುಗಡೆಯಾಗುವ ಮುನ್ನ ನಿಶ್ವಿ‌ಕಾಗೆ ಸಿಕ್ಕಿದ್ದು ಅಮ್ಮಾ ಐ ಲವ್‌ ಯೂ. ಚಿರಂಜೀವಿ ಸರ್ಜಾ ನಾಯಕರಾಗಿರುವ ಈ ಚಿತ್ರದ ಚಿತ್ರೀಕರಣ ಕೂಡಾ ಮುಗಿದು ಹೋಗಿದೆ. ಈಗ ನಿಶ್ವಿ‌ಕಾ ಪಡ್ಡೆಹುಲಿ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್‌ ನಾಯಕರಾಗಿರುವ ಈ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ.

ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಕೋರ್ಸ್‌ ಮುಗಿಸಿದ ಕೂಡಲೇ ನಿಶ್ವಿ‌ಕಾ ಮುಖಮಾಡಿ ದ್ದು ಮುಂಬೈನತ್ತ. ಅದು ನಟನಾ ತರಬೇತಿಗೆ. ಮುಂಬೈನಲ್ಲಿ ಒಂದು ವರ್ಷ ಆ್ಯಕ್ಟಿಂಗ್‌ ಕೋರ್ಸ್‌ ಕೂಡಾ ಮಾಡಿದ್ದಾರಂತೆ ನಿಶ್ವಿ‌ಕಾ. ಚಿತ್ರರಂಗಕ್ಕೇ ಬರಬೇಕೆಂಬ ಆಸೆಯಿಂದ ಇದ್ದ ನಿಶ್ವಿ‌ಕಾಗೆ ಈಗ ಕೈ ತುಂಬಾ ಸಿನೆಮಾ ಸಿಕ್ಕಿರೋದು ಖುಷಿ ತಂದಿದೆ. ಎಲ್ಲಾ ಓಕೆ, ಒಂದು ಸಿನೆಮಾನೂ ಬಿಡುಗಡೆ ಯಾಗುವ ಮುನ್ನ ಸಿನೆಮಾ ಮೇಲೆ ಸಿನೆಮಾ ಒಪ್ಪಿಕೊಳ್ಳಲು ಕಾರಣವೇನು ಎಂದು ನೀವು ಕೇಳಬಹುದು. “”ನಾನು ಒಪ್ಪಿಕೊಂಡಿರುವ ಮೂರು ಚಿತ್ರಗಳಲ್ಲೂ ನನ್ನ ಪಾತ್ರ ವಿಭಿನ್ನವಾಗಿದೆ. ವಾಸು ಸಿನೆಮಾದಲ್ಲಿ ನಾನು ಮೆಡಿಕಲ್‌ ಸ್ಟೂಡೆಂಟ್‌. ಬೋಲ್ಡ್‌ ಅಂಡ್‌ ಬಬ್ಲಿ ಪಾತ್ರ. ಇನ್ನು ಅಮ್ಮಾ ಐ ಲವ್‌ ಯೂ ಸಿನೆಮಾದಲ್ಲಿ ತುಂಬಾ ಸೆಟಲ್ಡ್‌ ಆಗಿರುವ ಪಾತ್ರ. ಯಾರ ಕೈಕೆಳಗೂ ಕೆಲಸ ಮಾಡದೇ ಸ್ವಂತ ಉದ್ಯೋಗ ಮಾಡಬೇಕೆಂದು ಕನಸು ಕಾಣುವ ಪಾತ್ರ. ಪಡ್ಡೆಹುಲಿ ಚಿತ್ರದಲ್ಲಿ ಕಾಲೇಜು ಹುಡುಗಿ. ಹೀಗೆ ನನಗೆ ಮೂರು ಸಿನೆಮಾಗಳಲ್ಲೂ ವಿಭಿನ್ನ ಪಾತ್ರ ಸಿಕ್ಕಿದೆ. ಈಗಾಗಲೇ ಎರಡು ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ” ಎನ್ನುತ್ತಾರೆ ನಿಶ್ವಿ‌ಕಾ. ಸಿನೆಮಾ ತೆರೆಕಂಡ ನಂತರ ಪ್ರೇಕ್ಷಕರು ತನ್ನ ಯಾವ ಪಾತ್ರವನ್ನು ಹೆಚ್ಚು ಇಷ್ಟಪಡುತ್ತಾ ರೆಂದು ನೋಡಿಕೊಂಡು ಮುಂದೆ ಪಾತ್ರಗಳನ್ನು ಆಯ್ಕೆ ಮಾಡುತ್ತಾ ರಂತೆ. ಅಂದ ಹಾಗೆ, ಮೂರು ಸಿನೆಮಾಗಳಲ್ಲೂ ನಿಶ್ವಿ‌ಕಾ ಆಡಿಷನ್‌ ಕೊಟ್ಟು ಆಯ್ಕೆಯಾಗಿದ್ದಂತೆ. ನಿಶ್ವಿ‌ಕಾಗೆ ನಟಿ ರಮ್ಯಾ ಎಂದರೆ ತುಂಬಾ ಇಷ್ಟವಂತೆ. “”ನಾನು ಏಕಾಏಕಿ ಮೂರು ಸಿನೆಮಾ ಒಪ್ಪಿಕೊಂಡಿರೋದರಿಂದ ಎಲ್ಲರಿಗೂ ಯಾರು ಈ ಹುಡುಗಿ ಎಂಬ ಕುತೂಹಲವಿದೆ. ನಾನು ಕೂಡಾ ಅವರ ನಂಬಿಕೆಯನ್ನು ಉಳಿಸಿಕೊಳ್ಳಬೇಕು” ಎನ್ನುತ್ತಾರೆ ನಿಶ್ವಿ‌ಕಾ.

ಟಾಪ್ ನ್ಯೂಸ್

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

2-bng

Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್‌ ?

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

7-bunts

Mangaluru: ಡಿ. 7: ಮುಂಬಯಿಯಲ್ಲಿ ವಿಶ್ವ ಬಂಟರ ಸಮಾಗಮ

6-udupi

Udupi: ಪ್ರಧಾನಿ ಸಹೋದರ ಸೋಮು ಬಾೖ ಶ್ರೀ ಕೃಷ್ಣಮಠಕ್ಕೆ ಭೇಟಿ

Mangaluru: ಮಕ್ಕಳ ಮಾರಾಟ, ಖರೀದಿಗೆ 5 ವರ್ಷ ಜೈಲು ಶಿಕ್ಷೆ

Mangaluru: ಮಕ್ಕಳ ಮಾರಾಟ, ಖರೀದಿಗೆ 5 ವರ್ಷ ಜೈಲು ಶಿಕ್ಷೆ

5-MAHE

MAHE Convocation: ನ. 8-10: ಮಾಹೆ ಘಟಿಕೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.