“ಮುಗಿಯದ’ಕತೆಗಳು


Team Udayavani, Mar 17, 2019, 12:30 AM IST

sssss.jpg

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ  ನಡೆದಿರುವ ಮುಖ್ಯ ಚಳವಳಿಗಳಲ್ಲಿ ಒಂದಾದ ನವ್ಯ ಚಳವಳಿಯ ಬೆನ್ನಿಗೇ ಎನ್ನುವಂತೆ ಕಾಣಿಸಿಕೊಂಡ ಅಸಂಗತವಾದದ ಪ್ರೇರಣೆಯಿಂದ ಸೃಷ್ಟಿಯಾದ ಸಾಹಿತ್ಯಕೃತಿಗಳ, ಮುಖ್ಯವಾಗಿ ಸಣ್ಣಕತೆಗಳ ಧಾರೆಯೂ ಗಮನಾರ್ಹವಾದುದು. 

ಅಸಂಗತವಾದದ ಒಲವು-ನಿಲುವುಗಳು ಎಂ.ಎಸ್‌.ಕೆ. ಪ್ರಭು, ಸುಮತೀಂದ್ರ ನಾಡಿಗ, ಚಂದ್ರಶೇಖರ ಪಾಟೀಲ ಮುಂತಾದವರ ಕೃತಿಗಳಲ್ಲಿ ಬಿಂಬಿತವಾಗಿವೆ; ಇದೇ ರೀತಿ ಕೆ. ಟಿ. ಗಟ್ಟಿ, ತಿರುಮಲೇಶ್‌, ಶಾಂತಾರಾಮ ಸೋಮಯಾಜಿ ಮುಂತಾದವರ ಅಸಂಗತ ಛಾಯೆಯ ಕಥನ ವ್ಯವಸಾಯ ಕನ್ನಡದ ವೈವಿಧ್ಯಮಯ ಬೆಳಸಿಗೆ ತನ್ನದೇ ಕೊಡುಗೆಯನ್ನು ನೀಡಿದೆ. 

ಈಗ ಹೊರಬಂದಿರುವ ಎಸ್‌. ಶೇಷಾದ್ರಿ ಕಿನಾರ ಅವರ ಅವತಾರ ಸಂಕಲನದ 19 ಕಥೆಗಳೂ ಅಸಂಗತ ಕಥನಗಾರಿಕೆಯ ಲಕ್ಷಣಗಳನ್ನು ಸಮರ್ಥವಾಗಿ ಬಿಂಬಿಸುವ ರಚನೆಗಳಾಗಿವೆ. ಜತೆಗೆ, ಈ ಕಥೆಗಳಲ್ಲಿ ಕಂಡುಬರುವ ಕುತೂಹಲಕಾರಿ ಅನಿರೀಕ್ಷಿತ ಸನ್ನಿವೇಶಗಳು, ಸಾಂಕೇತಿಕ ಅರ್ಥಗಳನ್ನು ಸೂಚಿಸುವ ವಿಪುಲವಾದ ವಿವರಗಳು, ಕಾವ್ಯದ ಸಾಲುಗಳಂತೆ ಅರ್ಥ ಸಂದಿಗ್ಧತೆಗೆ ಹಾದಿಮಾಡಿಕೊಡುವ ಸಂಭಾಷಣೆಯ ತುಣುಕುಗಳು, ಸಂಕ್ಷೇಪ ಗುಣವೇ ಪ್ರಧಾನವಾದ ಚುರುಕಿನ ವಾಕ್ಯಗಳು ಇವೆಲ್ಲವೂ ಶೇಷಾದ್ರಿಯವರ ಬರವಣಿಗೆಯ ಆಕರ್ಷಣೆಗೆ ಕಾರಣವಾಗಿವೆ. ಗದ್ಯದ ವಾಕ್ಯಗಳು ಸಂಕ್ಷೇಪ ಗುಣದಿಂದ ಕೂಡಿದ್ದರೆ ಅವುಗಳಿಗೆ ಕಾವ್ಯದ ಸಾಲುಗಳ ಮೆರುಗು ದಕ್ಕುತ್ತದೆ; ನಿರೂಪಣೆ ಯೆಂಬುದು ನಿಜವಾದ ಅರ್ಥದಲ್ಲಿ “ವಚೋವಿಲಾಸ’ವೆನಿಸುತ್ತದೆ; ಕಥೆಗಳು ಹಲವು ರೂಪಕಾರ್ಥ ಸಮನ್ವಿತವಾಗಿ ಬರವಣಿಗೆ ತನ್ನಿಂದ ತಾನೇ “ಕೊಲಾಜ್‌’ ಆಗಿಬಿಡುತ್ತದೆ. 

ಇಲ್ಲಿನ ಅವತಾರ, ಪಾತ್ರ, ನಾನೆಂಬೋದು ನಾನಲ್ಲ, ಟೋಪಿ ಆಟ, ಹೂವೊಳು ಹಾವೇ ಮುಂತಾದ ರಚನೆಗಳಲ್ಲಿ ಕಥೆಗಾರ ಶೇಷಾದ್ರಿ ಕೇವಲ ಕಥೆಗಳನ್ನು ಬರೆದು ಮುಗಿಸಿರುವ ಲೇಖಕನಾಗಿ ಕಾಣಿಸದೆ ಕಥೆಯನ್ನು ಇನ್ನೂ ಹೇಳುತ್ತಲೇ ಹೋಗುತ್ತಿದ್ದಾರೆಂಬಂಥ ಅನುಭವ ಓದುಗರಿಗೆ ಆಗುತ್ತದೆ ಮೇಲೆ ಹೇಳಿದ ಅಸಂಗತ ಸಂವೇದನೆಯ ಕಥನಗಾರಿಕೆಯ ಸಾಧ್ಯತೆಯನ್ನು ಶೇಷಾದ್ರಿಯವರು ತೋರಿಸಿಕೊಡುತ್ತಲೇ ಅದನ್ನು ಮೀರಿ ನಿಂತಿರುವುದು ಹೀಗೆ. ಇಂಥ ಯಶಸ್ಸನ್ನು ಸಾಧಿಸಿರುವುದಕ್ಕಾಗಿ ಅವರನ್ನು ಅಭಿನಂದಿಸಬೇಕಾಗಿದೆ.

– ಜಕಾ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.