ಬಾಲಿಯಲ್ಲೊಂದು ವಾನರ ವನ


Team Udayavani, Aug 6, 2017, 6:20 AM IST

vana.jpg

ಸೂರ್ಯ ರಶ್ಮಿಯೇ ನುಸುಳದಂಥ ದಟ್ಟ ಅರಣ್ಯ, ಅಲ್ಲಲ್ಲಿ ಪಾಚಿ-ಹಾವಸೆ ಬೆಳೆದ ಚಿತ್ರ ವಿಚಿತ್ರವಾದ ಬೃಹತ್‌ ಶಿಲ್ಪಗಳು, ಟಾರ್ಜಾನ್‌ ಸಿನೆಮಾ ನೆನಪಿಸುವ ಜೋತು ಬಿದ್ದ ಉದ್ದದ ಬಿಳಲುಗಳು, ದೂರದಲ್ಲಿ ಕಾಣುವ ದೇಗುಲ, ಹರಿವ ಝರಿ… ಯಾವುದೋ ಗತವೈಭವ ಕಣ್ಮುಂದೆ ಕಟ್ಟುತ್ತಾ ಮೈಮರೆತರೆ ಹುಷಾರ್‌ ! ಯಾವುದೇ ಅಡ್ಡಿ-ಆತಂಕವಿಲ್ಲದೇ ಮುಕ್ತವಾಗಿ ಜಿಗಿಯುವ, ಕುಣಿದಾಡುವ  ಮಂಗಗಳು ನಿಮ್ಮನ್ನು ಈ ಲೋಕಕ್ಕೆ ಎಳೆದುತರುತ್ತವೆ. ಆದರೆ ಏನೂ ಮಾಡುವಂತಿಲ್ಲ, ಏಕೆಂದರೆ, ಇದು ಅವುಗಳದ್ದೇ ರಾಜ್ಯ-ವಾನರ ವನ !

ಇಂಡೋನೇಷ್ಯಾದ ಬಾಲಿ ದ್ವೀಪದ ಸಾಂಸ್ಕೃತಿಕ ರಾಜಧಾನಿ ಉಬುಡ್‌ ಪಟ್ಟಣ. ಇಲ್ಲಿಂದ ದಕ್ಷಿಣಕ್ಕೆ ಮೂರು ಕಿಮೀ ದೂರದಲ್ಲಿ ಪಾಡಂತೆಗಾಲ್‌ ಎಂಬ ಪುಟ್ಟ ಹಳ್ಳಿ.ಅದರ ಅಂಚಿನಲ್ಲಿ ಸುಮಾರು ಇಪ್ಪತ್ತೇಳು ಎಕರೆ ವಿಶಾಲವಾದ ಮಳೆಕಾಡು. ಇದೇ ಉಬುಡ್‌ ಮಂಕಿ ಫಾರೆಸ್ಟ್‌. ಬಾಲಿಯಲ್ಲಿ ಅಲ್ಲಲ್ಲಿ ಈ ರೀತಿಯ ವಾನರ ವನಗಳನ್ನು ಕಾಣಬಹುದು. ಬಾಲಿಯಲ್ಲಿರುವ ಹಿಂದೂಗಳ ತ್ರಿಹಿತಕರಣ ಸಿದ್ಧಾಂತ ಇದಕ್ಕೆ ಮೂಲ. ಸಮಾಜದ ಜನರು, ಪ್ರಕೃತಿ ಮತ್ತು ದೇವರೊಡನೆ ಶಾಂತಿಯಿಂದ ನಡೆಸುವ ಸಹಜೀವನದಲ್ಲಿ ಎಲ್ಲರ ಹಿತ ಅಡಗಿದೆ ಎಂಬುದು ಇದರ ಅರ್ಥ. ಸೃಷ್ಟಿಸಿದ ದೇವರನ್ನು ನೆನೆಯುತ್ತ, ಬದುಕಿಗೆ ಆಧಾರವಾಗಿರುವ ಪ್ರಕೃತಿಯನ್ನು ಕಾಪಾಡುವುದು ಇಲ್ಲಿನ ಪ್ರಮುಖ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆ. ಹೀಗಾಗಿ, ಬಾಲಿಯಲ್ಲಿ ಎÇÉೆಲ್ಲೂ ಮರ, ಗಿಡ, ಪ್ರಾಣಿ-ಪಕ್ಷಿಗಳನ್ನು ಗೌರವದಿಂದ ಕಾಣಲಾಗುತ್ತದೆ. ಕಾಡು-ನೀರು ಇದ್ದಲೆಲ್ಲ ದೇಗುಲ ನಿರ್ಮಿಸಿ ಪವಿತ್ರ ಜಾಗ ಎಂದು ಗುರುತಿಸಲಾಗುತ್ತದೆ. ಇಲ್ಲಿ ದೇಗುಲ ಅಂದರೆ ಬರೀ ಗುಡಿ-ಗೋಪುರ, ಪ್ರಾಂಗಣವಲ್ಲ; ಕಾಡು, ನೀರು, ಕಲ್ಲು, ಬೆಟ್ಟದ ನಡುವಿನಲ್ಲಿ ಪರಿಸರಕ್ಕೆ ಧಕ್ಕೆ ಬಾರದ ಹಾಗೆ ಕಲ್ಲಿನ ಕಟ್ಟಡ. ವಾನರ ವನ ಪ್ರವೇಶಿಸುವಾಗಲೇ ಇದು ಪವಿತ್ರವಾದದ್ದು. ಇಲ್ಲಿರುವ ಮರ-ಪ್ರಾಣಿಗಳನ್ನು-ಪರಿಸರವನ್ನು ಗೌರವಿಸಿ ಎಂಬ ಕಟ್ಟುನಿಟ್ಟಾದ ಸೂಚನೆ ನೀಡಲಾಗಿತ್ತು. ಏಕೆಂದರೆ, ವಾನರ ವನ ಇಲ್ಲಿನವರಿಗೆ ಆಧ್ಯಾತ್ಮಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಂರಕ್ಷಣಾ ಕೇಂದ್ರವಾಗಿ ಮಹತ್ವದ್ದು. ಬೆಳಗ್ಗೆ ಎಂಟರಿಂದ ಸಂಜೆ ಆರರವರೆಗೆ ತೆರೆದಿರುವ, ಪ್ರವೇಶಧನ ಹೊಂದಿರುವ ವಾನರ ವನದ ಸಂಪೂರ್ಣ ನಿರ್ವಹಣೆ ಪಾಡಂತೆಗಾಲ್‌ ಗ್ರಾಮಸ್ಥರ ಸಮಿತಿಯದ್ದು.

ವಾನರ ವನದಲ್ಲಿ ಸುಮಾರು ಏಳುನೂರು ಮಂಗಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಬಾಲಿನೀಸ್‌ ಉದ್ದ ಬಾಲದ ಮಂಗಗಳಾದ ಇವುಗಳನ್ನು ಇಂಗ್ಲಿಶಿನಲ್ಲಿ ಮಕಾಕ್‌ ಕೋತಿಗಳು ಎನ್ನಲಾಗುತ್ತದೆ. ಐದು ಗುಂಪುಗಳಾಗಿ ಅರಣ್ಯದ ವಿವಿಧ ಭಾಗಗಳಲ್ಲಿ ವಾಸಿಸುವ ಇವುಗಳ ಪ್ರತೀ ಗುಂಪಿಗೂ ಶಕ್ತಿಶಾಲಿ ನಾಯಕ ಮಂಗವಿದೆ. ಪ್ರತೀ ಗುಂಪಿನಲ್ಲಿ ಹೆಣ್ಣು, ಗಂಡು, ಮರಿ ಎÇÉಾ ಸೇರಿ ಸುಮಾರು ನೂರರಿಂದ ನೂರಾಇಪ್ಪತ್ತು ಮಂಗಗಳಿರುತ್ತವೆ. ದಿನಕ್ಕೆ ಮೂರು ಬಾರಿ ಸಿಹಿಗೆಣಸನ್ನು ಇವುಗಳಿಗೆ ಆಹಾರವಾಗಿ ನೀಡಲಾಗುತ್ತದೆ.ಇದಲ್ಲದೇ ಸ್ವತಂತ್ರವಾಗಿರುವ ಮಂಗಗಳು ತಾವಾಗಿಯೇ ತೆಂಗಿನಕಾಯಿ, ಸೌತೆಕಾಯಿ, ಪಪ್ಪಾಯಾ ಹೀಗೆ ಅಲ್ಲಲ್ಲಿ ಬೆಳೆದಿರುವ ಹಣ್ಣು ತರಕಾರಿ ಕೊಯ್ದು ತಿನ್ನುತ್ತವೆ.ಪ್ರವಾಸಿಗರು ಬಾಳೆಹಣ್ಣುಗಳನ್ನು ಖರೀದಿಸಿ ಕೊಡಬಹುದು. ಮಂಗಗಳಿಗೆ ಚಿ±Õ…, ಬಿಸ್ಕಿಟ…, ಶೇಂಗಾ ಇಷ್ಟವಾದರೂ ಜಂಕ್‌ ಆಹಾರದಿಂದ ದಪ್ಪ ಆಗುತ್ತವೆ ಎಂಬ ದೃಷ್ಟಿಯಿಂದ ಅವುಗಳನ್ನು ನಿಷೇಧಿಸಲಾಗಿದೆ. ಹಾಗೆಯೇ ಮಂಗಗಳಿಗೆ ತೊಂದರೆಯಾಗಬಾರದು ಎಂದು, ನಾಯಿಗಳಿಗೆ ಪ್ರವೇಶವಿಲ್ಲ ! ಪ್ರವಾಸಿಗರನ್ನು ಕಂಡರೆ ಯಾವುದೇ ಹೆದರಿಕೆಯಿಲ್ಲದೇ ಬೆರೆಯುವ ಇಲ್ಲಿನ ಮಂಗಗಳ ಒಡನಾಟ  ಮುದ ನೀಡಿದರೂ ಎಚ್ಚರಿಕೆ ಅಗತ್ಯ. ಕೆಲವರಿಗೆ ಕಚ್ಚಿ, ಆಭರಣ, ಆಹಾರ ಕಸಿದ ಉದಾಹರಣೆಗಳು ಇವೆ. ಅರಣ್ಯ ಸಿಬ್ಬಂದಿ ಚಾಟರ್‌ ಬಿಲ್ಲು ಹಿಡಿದು ಓಡಿಸಲು ಸಿದ್ಧರಾಗಿದ್ದರೂ ಸುರಕ್ಷತೆ ದೃಷ್ಟಿಯಿಂದ ತೀರಾ ಹತ್ತಿರಕ್ಕೆ ಹೋಗದಿರುವುದೇ ಒಳ್ಳೆಯದು.

ಈ ವಾನರ ವನದಲ್ಲಿ ಮೂರು ದೇಗುಲಗಳಿವೆ. ಅರಣ್ಯದ ದಕ್ಷಿಣದಲ್ಲಿರುವ ಪುರ ದಲೆಮ್‌ ಅಗುಂಗ್‌ ಮುಖ್ಯ ದೇವಾಲಯ. ಇಲ್ಲಿ ಶಿವನನ್ನು ಪೂಜಿಸಲಾಗುತ್ತದೆ.ಉತ್ತರದಿಕ್ಕಿನಲ್ಲಿರುವ ಪುರ ಬೆಜಿಯಲ್ಲಿ ಗಂಗಾದೇವಿಯ ಆರಾಧನೆ. ಪವಿತ್ರ ನೀರಿನ ಚಿಲುಮೆಯನ್ನು ಇಲ್ಲಿ ಕಾಣಬಹುದು.ಉತ್ತರದಿಕ್ಕಿನಲ್ಲಿಯೇ ಇರುವ ಮತ್ತೂಂದು ದೇವಾಲಯ ಪುರ ಪ್ರಜಾಪತಿ. ಇದರ ಪಕ್ಕದಲ್ಲಿರುವ ರುದ್ರಭೂಮಿಯಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಸಾಮೂಹಿಕ ಚಿತಾಕ್ರಿಯೆ ನಡೆಯುತ್ತದೆ.

ಈ ವನದಲ್ಲಿ ಉದಯನ ವಿಶ್ವವಿದ್ಯಾಲಯದ ಸರ್ವೇ ಪ್ರಕಾರ ನೂರಾಹದಿನೈದು ವಿವಿಧ ಜಾತಿಯ ಮರಗಳನ್ನು ಗುರುತಿಸಲಾಗಿದೆ. ಪ್ರತೀ ಮರವೂ ಪೂಜ್ಯವಾದದ್ದು, ಮಹತ್ವದ್ದು. ಮಜೆಗನ್‌ ಅಥವಾ ಅಶ್ವತ್ಥ ಮರವನ್ನು ಶ್ರೇಷ್ಠ, ಮರಗಳ ರಾಜ ಎಂದು ಪರಿಗಣಿಸಿ ದೇಗುಲ ಕಟ್ಟುವಲ್ಲಿ ಬಳಸಲಾ ಗುತ್ತದೆ. ಹಾಗಾಗಿ ಅದನ್ನು ಸುಮ್ಮನೇ ಕಡಿಯು ವಂತಿಲ್ಲ. ಹಾಗೆಯೇ ಸರ್ಪಗಂಧಿ ಮರದಲ್ಲಿ ಇಡೀ ಅರಣ್ಯದ ಆತ್ಮವೇ ಇರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಅದನ್ನು ದೇವಸ್ಥಾನದ ಧಾರ್ಮಿಕ ಆಚರಣೆಗಳಲ್ಲಿ ಬಳಸುವ ಮುಖವಾಡ ತಯಾರಿಕೆಯಲ್ಲಿ ಉಪಯೋಗಿ ಸುತ್ತಾರೆ.

ಹಾಗೆಂದು, ಮರವನ್ನು ಹೇಗೆಂದರಲ್ಲಿ ಕಡಿಯುವಂತಿಲ್ಲ. ಒಳ್ಳೆಯ ದಿನ ಗೊತ್ತು ಮಾಡಿ, ಪೂಜಾರಿಯಿಂದ ಮರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಭಕ್ತಿಯಿಂದ ಮರದ ಆತ್ಮವನ್ನು, ಒಂದು ಕೊಂಬೆ ಕತ್ತರಿಸಲು ಅನುಮತಿ ಬೇಡಲಾಗುತ್ತದೆ. ನಂತರ ಕತ್ತರಿಸುವುದೂ ಮುಖವಾಡಕ್ಕೆ ಬೇಕಾದಷ್ಟೇ. ಎಲ್ಲೂ ಮರಕ್ಕೆ ಪೆಟ್ಟಾಗದಂತೆ, ಮರ ಸಾಯದಂತೆ ಕಾಳಜಿ ವಹಿಸಲಾಗುತ್ತದೆ. ಇದಲ್ಲದೇ ಎತ್ತೆತ್ತರಕ್ಕೆ ಬೆಳೆದ ಜಾಯಿಕಾಯಿ ಮರಗಳು ಪರ್ವತ ಪ್ರದೇಶದಿಂದ, ಬಹಳ ಹಿಂದೆ ಮೈದಾನಕ್ಕೆ ನಡೆದು ಬರುತ್ತಿದ್ದವು, ಆಗ ಮಾನವರು ಕಂಡದ್ದರಿಂದ ಇಲ್ಲಿಯೇ ನೆಲೆ ನಿಂತವು ಎಂಬ ಕತೆಯಿಂದ ಅವುಗಳಿಗೆ ವಿಶೇಷ ಸ್ಥಾನ. 

ಬಾಲಿಯಲ್ಲಿ ದೇವಾಲಯಗಳ ಬಳಿ ಅಲ್ಲಲ್ಲಿ  ವಿಗ್ರಹಗಳು, ಕೆಲವು ಮರಗಳ ಕಾಂಡಕ್ಕೆ ಕಪ್ಪು ಬಿಳಿ ಬಣ್ಣದ ಚೌಕಗಳಿರುವ ಬಟ್ಟೆ ಸುತ್ತಿರುವುದನ್ನು ಕಂಡಾಗ ಆಶ್ಚರ್ಯವಾಗಿತ್ತು. ವಿಚಾರಿಸಿದಾಗ ಸಿಕ್ಕ ಮಾಹಿತಿ; ಕಪ್ಪು ಮತ್ತು ಬಿಳಿ ಒಳ್ಳೆಯ ಮತ್ತು ಕೆಟ್ಟ ಶಕ್ತಿಯನ್ನು ಪ್ರತಿನಿಧಿಸುತ್ತವೆ. ಜಗತ್ತಿನಲ್ಲಿ ಎರಡೂ ಇವೆ, ಎರಡರ ನಡುವೆ ಸಮತೋಲನ ಇ¨ªಾಗ ಮಾತ್ರ ಶಾಂತಿ ಸಾಧ್ಯ. ಮರದಲ್ಲಿ, ವಿಗ್ರಹಗಳಲ್ಲಿ ವಿಶೇಷ ಶಕ್ತಿ ಇದೆಯೆಂದು ಸೂಚಿಸಲು ಹೀಗೆ ಮಾಡಲಾಗುತ್ತದೆ! ಇಂಥ ಮರ- ವಿಗ್ರಹ ಕಂಡಾಗ ಜನರು ತಲೆತಗ್ಗಿಸಿ ಪ್ರಾರ್ಥಿಸಿ ಮುನ್ನಡೆಯುತ್ತಾರೆ. ವಾನರವನದಲ್ಲಿಯೂ ಹೀಗೆ ಬಟ್ಟೆ ಸುತ್ತಿಟ್ಟ ಅನೇಕ ಮರಗಳನ್ನು ಕಾಣಬಹುದು.ಅಂದರೆ ಪ್ರಕೃತಿಯಲ್ಲಿ ದೇವರನ್ನು ಕಾಣುವ-ಕಾಪಾಡುವ ಸಂಸ್ಕೃತಿ ಇವರದ್ದು.
ಒಟ್ಟಿನಲ್ಲಿ ವಾನರವನ ಜೀವವೈವಿಧ್ಯದ ನೆಲೆ ಮತ್ತು ಪ್ರಕೃತಿಪೂಜೆಯ ತಾಣವಾಗಿ  ಮನಸೆಳೆಯುವುದರಲ್ಲಿ ಸಂಶಯವಿಲ್ಲ.

– ಕೆ. ಎಸ್‌. ಚೈತ್ರಾ

ಟಾಪ್ ನ್ಯೂಸ್

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.