ಒಂದು ಕತೆ

Team Udayavani, Dec 3, 2017, 6:10 AM IST

story.jpg

ಅಕºರನು ದೇಶವನ್ನು ಆಳುತ್ತಿದ್ದ ಸಂದರ್ಭ. ಕೆಲದಿನಗಳು ಕುಟುಂಬದೊಂದಿಗೆ ಕಳೆಯುವ ಉದ್ದೇಶದಿಂದ ಆತ ಮಿತ ಪರಿವಾರದೊಂದಿಗೆ ದೆಹಲಿಗೆ ಸಮೀಪವಿದ್ದ ಲಖನೌಗೆ ಬಂದ. ಐದಾರು ದಿನಗಳನ್ನು ಸಂಭ್ರಮದಿಂದ ಕಳೆದ.

ರಾಜಧಾನಿಗೆ ವಾಪಸಾಗಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ ಅನ್ನುವಾಗಲೇ ವಿಶ್ರಾಂತಿ ಗೃಹದಿಂದ ಆಚೆ ಬಂದು ಒಮ್ಮೆ ಸುತ್ತಲೂ ಕಣ್ಣು ಹಾಯಿಸಿದ. ವಿಶ್ರಾಂತಿ ಗೃಹದ ಮೇಲೆ ಹಾರುತ್ತಿದ್ದ ರಾಜಲಾಂಛನವಿದ್ದ ಬಾವುಟ, ಒಂದು ಕಡೆಗೆ ವಾಲಿಕೊಂಡಿರುವುದು ಅವನ ಕಣ್ಣಿಗೆ ಬಿತ್ತು. ಕೂಡಲೇ ಕಾವಲಿನವರನ್ನು  ಕರೆದ ಅಕºರ್‌ ತಾನು ಕಂಡದ್ದನ್ನು ಅವನಿಗೂ ತೋರಿಸಿ “”ರಾಜಲಾಂಛನವಿರುವ ಆ ಬಾವುಟ ಸರಿಯಾಗಿ ಹಾರುತ್ತಿಲ್ಲ. ಯಾಕೆ ಹಾಗಾಗಿದೆ ಎಂದು ಕೂಡಲೇ ಹೋಗಿ ನೋಡಿಕೊಂಡು ಬಾ” ಎಂದು ಆಜ್ಞಾಪಿಸಿದ.

ಕಾವಲಿನವನು ಶರವೇಗದಲ್ಲಿ ಹೋಗಿ ಬಂದು ನಂತರ ಹೇಳಿದ. “”ಜಹಾಂಪನಾ, ರಾಜಲಾಂಛನದ ಬಾವುಟವನ್ನು ಕಟ್ಟಿರುವ ಜಾಗದಲ್ಲಿಯೇ ಒಂದು ಗುಬ್ಬಿ ಗೂಡು ಕಟ್ಟಿದೆ. ಅದರೊಳಗೆ ಮೊಟ್ಟೆಗಳನ್ನೂ ಇಟ್ಟು ಬಿಟ್ಟಿದೆ. ಈ ಕಾರಣದಿಂದಾಗಿಯೇ ಬಾವುಟದ ಒಂದು ಭಾಗಕ್ಕೆ ಹೆಚ್ಚಿನ ಹೊರೆ ಬಿದ್ದಂತಾಗಿ ಅದು ಸರಿಯಾಗಿ ಹಾರಾಡುತ್ತಿಲ್ಲ. ಆ ಗೂಡನ್ನು ಕಿತ್ತೆಸೆದು ಬಾವುಟ ಪಟಪಟನೆ ಹಾರಾಡುವಂತೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಈ ಕೆಲಸವೂ ಆರಂಭವಾಗುತ್ತದೆ.”

ಕಾವಲಿನವನ ಮಾತುಗಳನ್ನು ಆಲಿಸಿದ ಅಕºರ್‌ ತಕ್ಷಣವೇ ಹೀಗೆಂದ, “”ಏನು? ಆ ಗುಬ್ಬಿಯ ಗೂಡನ್ನು ಕಿತ್ತು ಹಾಕ್ತಾರಾ? ಬೇಡ, ಬೇಡ ಯಾವುದೇ ಕಾರಣಕ್ಕೂ ಹಾಗೆ ಮಾಡಬಾರದೆಂದು ಈಗಲೇ ಹೋಗಿ ಆ ಅಧಿಕಾರಿಗೆ ತಿಳಿಸು’
“”ಜಹಾಂಪನಾ… ನಿಮ್ಮ ಆದೇಶವನ್ನು ತಪ್ಪದೇ ಪಾಲಿಸುತ್ತೇನೆ. ಆದರೆ… ಒಂದು ಸಂಶಯವಿದೆ. ತಾವೂ ಸೇರಿದಂತೆ ಸಮಸ್ತ ಪರಿವಾರ ವೂ ದೆಹಲಿಗೆ ವಾಪಾಸಾಗಲು ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಹೀಗಿರುವಾಗ ರಾಜಲಾಂಛನವಿರುವ ಬಾವುಟವನ್ನು ತೆರವು ಮಾಡಲೇಬೇಕಲ್ಲವೆ?” ಕಾವಲಿನವನು ಅನುಮಾನದಿಂದಲೇ ಕೇಳಿದ.

“”ಹೌದು. ಇಂದು ಸಂಜೆ ನಾವೆಲ್ಲರೂ ದಿಲ್ಲಿಗೆ ಹೊರಡಬೇಕು. ಅದೇ ನೆಪ ಮಾಡಿಕೊಂಡು ಈ  ಡೇರೆಯನ್ನು ಕಿತ್ತು ಹಾಕುವುದು ಬೇಡ. ಹಾಗೇನಾದರೂ ಮಾಡಿದರೆ ಡೇರೆಯ ಮೇಲ್ಭಾಗದಲ್ಲಿರುವ ಬಾವುಟ ಮತ್ತು ಅದಕ್ಕೆ ಆಸರೆಯಾಗಿರುವ ಧ್ವಜಸ್ತಂಭವೂ ಬಿದ್ದು ಹೋಗುತ್ತದೆ. ಹಾಗಾಗುವುದು ಬೇಡ. ಈ ಡೇರೆಯನ್ನು ಧ್ವಜಸ್ತಂಭ ಮತ್ತು ಬಾವುಟವನ್ನು ಯಥಾಸ್ಥಿತಿಯಲ್ಲಿ ಉಳಿಸುವಂತೆ ರಾಜಪರಿವಾರದ ರಕ್ಷಣಾ ಅಧಿಕಾರಿಗೆ ತಿಳಿಸು” ಅಕºರ್‌ ಆದೇಶಿಸಿದ.
“”ಅಪ್ಪಣೆ ಜಹಾಂಪನಾ. ನಿಮ್ಮ ಆದೇಶನ್ನು ಈಗಲೇ ತಿಳಿಸಿ ಬರುತ್ತೇನೆ” ಎನ್ನುತ್ತಾ ಕಾವಲಿನವನು ಹೊರಟು ನಿಂತ.

“”ಒಂದು ನಿಮಿಷ ನಿಲ್ಲು. ಮತ್ತೂಂದು ಮಾತನ್ನೂ ಹೇಳಬೇಕಿದೆ. ಆ ಗುಬ್ಬಿಯ ಗೂಡಿಗೆ, ಗೂಡಲ್ಲಿರುವ ಮೊಟ್ಟೆಗಳಿಗೆ ಹಾಗೂ ತಾಯಿ ಗುಬ್ಬಿಗೆ ಬೇರೆ ಪಕ್ಷಿಗಳಿಂದ ಅಥವಾ ಮನುಷ್ಯರಿಂದ ಯಾವುದೇ ತೊಂದರೆಯೂ ಆಗದಂತೆ ನೋಡಿಕೊಳ್ಳಬೇಕು. ಇದು ಅಕºರ್‌ ದೊರೆಯ ಆದೇಶವೆಂದೂ ರಕ್ಷಣಾ ಅಧಿಕಾರಿಗೆ ತಿಳಿಸತಕ್ಕದ್ದು”
“”ಅಪ್ಪಣೆ ಮಹಾಸ್ವಾಮಿ. ಈ ಮಾತುಗಳನ್ನೂ ತಿಳಿಸುವೆೆ. ನಾನಿನ್ನು  ಹೊರಡಬಹುದೆ?” ಆ ಸೇವಕ ವಿನಯದಿಂದಲೇ ಕೇಳಿಕೊಂಡ.

“”ಮತ್ತೂಂದು ಮಾತು ಹೇಳಲು ಮರೆತಿದ್ದೆ” ಅನ್ನುತ್ತಾ, ರಾಜಲಾಂಛನದ ಬಾವುಟವಿದ್ದ ದಿಕ್ಕನ್ನೇ ನೋಡುತ್ತ ಅಕºರ್‌ ಹೇಳಿದ. “”ಇನ್ನು ಕೆಲವೇ ದಿನಗಳಲ್ಲಿ ಆ ಗುಬ್ಬಿಗೂಡಿನಲ್ಲಿರುವ ಮೊಟ್ಟೆಗಳಿಂದ ಮರಿಗಳು ಹೊರ ಬರುತ್ತವೆ. ಅವು ಚೆನ್ನಾಗಿ ಬೆಳೆದು ಸ್ವತಂತ್ರವಾಗಿ ಹಾರಾಡಲು ಕಲಿಯುವವರೆಗೂ ರಾಜಪರಿವಾರದವರಿಗೆಂದು ನಿರ್ಮಿಸಿರುವ ಈ ಮನೆಯನ್ನಾಗಲಿ, ಈ ಮನೆಯ ಮೇಲ್ಭಾಗದಲ್ಲಿ ಹಾರಾಡುತ್ತಿರುವ ಧ್ವಜಸ್ತಂಭವನ್ನಾಗಲಿ, ಆ ಗುಬ್ಬಿ ಗೂಡನ್ನೇ ಆಗಲಿ ಯಾರಿಂದಲೂ ಸಣ್ಣದೊಂದು ತೊಂದರೆಯೂ ಆಗದಂತೆ ನೋಡಿಕೊಳ್ಳಬೇಕು. ಇದು ಅಕºರ್‌ ದೊರೆಯ ಆದೇಶ”
ಇಷ್ಟು ಹೇಳಿದ ನಂತರ ಅಕºರನ ಮೊಗದ ಮೇಲೆ ಮಂದಹಾಸವೊಂದು ತೇಲಿತು. ಗುಬ್ಬಿಗೂಡು, ನೂರು ಚುಕ್ಕಿಗಳ ಮೊಟ್ಟೆ. ಅದನ್ನು ಸೀಳಿಕೊಂಡು ಹೊರಬಂದು ಆ———… ಎಂದು ಬಾಯೆ¤ರೆವ ಮರಿ. ಮಕ್ಕಳಿಗೆ ಎಲ್ಲೆಲ್ಲಿಂದಲೋ ಆಹಾರ  ತಂದುಕೊಡುವ ತಾಯಿ ಹಕ್ಕಿ ನಂತರ ಅವುಗಳಿಗೆ ಹಾರಾಡಲು, ಹೋರಾಡಲು, ಬಾಳಲು ಕಲಿಸುವ ಬಾಳೆಂಬ ಪಾಠಶಾಲೆ… ಎಷ್ಟು ಸುಂದರ ಅಲ್ಲವೇ ಈ ಜಗತ್ತು- ಅಂದುಕೊಳ್ಳುತ್ತಲೇ ಆತ ಅಂತಃಪುರದ ಕಡೆಗೆ ಹೆಜ್ಜೆ ಹಾಕಿದ.

– ಎ. ಆರ್‌. ಮಣಿಕಾಂತ್‌

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.