ತೆರೆದಷ್ಟೇ ಬಾಗಿಲು, ಕಾವ್ಯ ಮತ್ತು ಕಲೆ ಬೆಸೆದುಕೊಳ್ಳುವ ಕ್ಷಣ
Team Udayavani, Oct 29, 2017, 6:25 AM IST
ನಿನ್ನೆ ಮತ್ತು ಇಂದು ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಬೆಂಗಳೂರು ಲಿಟರೇಚರ್ ಫೆಸ್ಟಿವಲ್‌ನಲ್ಲಿ ಕನ್ನಡದ ಒಂದು ಕವಿತೆ ಮತ್ತು ಆ ಕವಿತೆಯನ್ನನುಸರಿಸಿದ ಇನ್‌ಸ್ಟಲೇಶನ್ ಆರ್ಟ್ ಪ್ರಸ್ತುತಗೊಳ್ಳಲಿದೆ.
ಪರಮಾತ್ಮ ಸಿನೆಮಾದಲ್ಲಿ ಕರಡಿಯ ವೇಷ ಹಾಕಿಕೊಂಡಿರುವ ಅಳಿಯನನ್ನು ಮಾವನು ಕರಡಿಯೆಂದೆಣಿಸಿ ಹೊಡೆಯುವ ದೃಶ್ಯವಿದೆ, ನೆನಪಿದೆಯಾ? ಅದನ್ನು ಕಂಡಾಗಲೆÇÉಾ ತೀರಾ ಭಾವುಕಳಾಗುತ್ತೇನೆ. ಮೇಲ್ನೋಟಕ್ಕೆ ಸಹಜ ಎನಿಸುವಂತಹ ಆ ನೋಟ ಒಳಗೆಲ್ಲ ಅವ್ಯಕ್ತವಾದಂಥ ಭಾವನೆಯನ್ನು ಉಕ್ಕರಿಸುತ್ತದೆ. ಅಕ್ಷರಗಳ ಮಿತಿಯನ್ನು ಮೀರಿ ಗಂಟಲು ಉಬ್ಬುತ್ತದೆ. ಹೀಗೆ ಸಾಕಷ್ಟು ಸಾಲುಗಳು ಬರೆದಿರುವ ಪದಗಳಿಂದ ಆಚೆಗೂ ಚಾಚಿ ನಾಭಿಯನ್ನು ಹಿಡಿದು ಜಗ್ಗುವುದು ವ್ಯಕ್ತಕ್ಕೆ ಇರುವ ಜಾದೂಗಾರಿಕೆ. ಇಂತಹ ಮೋಡಿ ಮಾಡಿ ಹೃದಯದ ಹಣೆಗೆ ಮುತ್ತಿಡುವ ಕವಿಗಳು ಜಯಂತ್ ಕಾಯ್ಕಿಣಿ ಮತ್ತು ಪ್ರತಿಭಾ ನಂದಕುಮಾರ್.
ಜಯಂತ್‌ರ ಬರವಣಿಗೆಗಳಲ್ಲಿನ ಪದಗಳು ಕಣ್ಣಿನಿಂದ ಇಳಿದು ಹೃತ್ಕವಾಟಗಳಲ್ಲಿ ಉಸಿರಾಗುವುದು ಮಾತ್ರವಲ್ಲ, ಮುಚ್ಚಿದ ಕಣ್ಣುಗಳಿಗೂ ಪೂರ್ಣ ದೃಶ್ಯವನ್ನೇ ಒದಗಿಸಿ ತುಟಿಗಳನ್ನು ಅರಳಿಸುವುದೂ ಹೌದು. ಪ್ರತಿಭಾ ಹೇಳುತ್ತಾರೆ, “”ಜಯಂತ್ ಕಾಯ್ಕಿಣಿಯವರ ಬರಹಗಳಲ್ಲಿ ಸಾಧಾರಣ ಪದಗಳಿಗೂ ಅಸಾಮಾನ್ಯವಾದದ್ದನ್ನು ಕಟ್ಟಿಕೊಡುವ ಅಪರೂಪದ ಗುಣವಿದೆ. ಅದು ನನ್ನನ್ನು ಬಹುವಾಗಿ ಸೆಳೆಯುತ್ತದೆ”
ಅದರ ಜಾಡಿನÇÉೇ ಒಂದೊಮ್ಮೆ ಪ್ರತಿಭಾ ಅವರು “ಶ್ರಾವಣ ಮಧ್ಯಾಹ್ನದ ಮಗು’ ಎನ್ನುವ ತಮ್ಮ ಲೇಖನದಲ್ಲಿ ಜಯಂತ್ ಅವರ ಬರಹದಲ್ಲಿ ಮಗು ಎನ್ನುವ ಪದವನ್ನು ಹೇಗೆ ಗಾಢವಾದ, ತೀವ್ರತರಹದ ರೂಪಕವಾಗಿ ಬಳಸಿ¨ªಾರೆ ಎನ್ನುವುದನ್ನು ಹೇಳಿದ್ದರು. ಈಗ ಅದರದ್ದೇ ಮುಂದುವರಿದ ಭಾಗದಂತೆ ಜಯಂತ್ ಕಾಯ್ಕಿಣಿಯವರ ಬರಹಗಳಲ್ಲಿ “ಬಾಗಿಲು’ ಎನ್ನುವ ಪದ ಬಳಕೆ ವಿವಿಧತೆಯಲ್ಲಿ, ಅಪರಿಮಿತವಾದದ್ದನ್ನು ಮುಟ್ಟಿಸಲು ಬಳಸಿಕೊಳ್ಳಲಾಗಿದೆ ಎನ್ನುವುದನ್ನು ಕವಿಯತ್ರಿ ನಮ್ಮೆದುರು ತೆರೆದಿಡಲಿ¨ªಾರೆ. ಹೌದು, ಅಕ್ಷರಶಃ ಬಾಗಿಲುಗಳನ್ನು ಬಳಸಿಯೇ ಹೊಸಲೋಕಕ್ಕೆ ಬಾಗಿಲು ತೆರೆದುಕೊಡಲಿ¨ªಾರೆ. ಜಗತ್ತಿನಲ್ಲೆಲ್ಲ ಇಂತಹ ಕಲಾಕೃತಿಗಳ ಅನಾವರಣದ (Art Installation) ಮೂಲಕ ಕ್ರಿಯಾಶೀಲತೆಯನ್ನು ತೋರಿರುವವರು ನೂರಾರು ಮಂದಿ ಇದ್ದರೂ ಈ ತೆರೆದಷ್ಟೇ ಬಾಗಿಲು ಕಲಾಕೃತಿಯ ಅನಾವರಣ ವಿಶೇಷವಾದದ್ದೇ ಹೌದು. ಕನ್ನಡ ಕಾವ್ಯ ಕುಟುಂಬದ ಅವಿಭಾಜ್ಯ ಕವಿಯೊಬ್ಬರು ಮತ್ತೂಬ್ಬ ಮಹೋನ್ನತ ಕವಿಯ ಬರಹಕ್ಕೆ ಸಲ್ಲಿಸುತ್ತಿರುವ ಗೌರವವೂ ಇದಾಗಿದೆ. ನಿಜದ ಬಾಗಿಲುಗಳ ನಡುವಿನÇÉೇ ಇಬ್ಬರು ಕವಿಗಳ ಧ್ವನಿಯಲ್ಲಿ ಬಾಗಿಲು ದೃಶ್ಯವಾಗುತ್ತ ಭಾವಕೋಶಗಳಲ್ಲಿ ಸೇರಿಕೊಳ್ಳುವ ಸೋಜಿಗವನ್ನು ದೃಶ್ಯ ಮತ್ತು ಶ್ರವಣ ಮಾಧ್ಯಮದಲ್ಲಿ ನಮ್ಮೆದುರು ಇಡಲು ಪ್ರತಿಭಾ ನಂದಕುಮಾರ್ ಅವರ ಪರಿಕಲ್ಪನೆ ಮತ್ತು ನಿರ್ದೇಶನಕ್ಕೆ ಜೊತೆಯಾಗಿರುವವರು ಛಾಯಾಗ್ರಾಹಕ ಸಂದೀಪ್ ಹೊಳ್ಳ, ಕೆಮರಾಮನ್ ವಿವೇಕ್ ಗೌಡ ಮತ್ತು ಸಂಕಲನಕಾರ ರವಿ ಆರಾಧ್ಯ.
“ಬರೆಯುವಾಗ ಸಹಜವಾಗಿ ಭಾಷೆಯ ಒಂದು ಪರಿಕರವಾಗಿ ಮಾತ್ರ ನಾವು ಬಳಸಿರುವ ಪದವೊಂದು ಓದುಗನಿಗೆ ವಿಶೇಷವಾಗಿ ತಟ್ಟುವುದು ಸಂತೋಷದ ವಿಷಯವೇ. ಆ ದಿನವನ್ನು ನಾನು ಕೂಡ ಕುತೂಹಲದಿಂದ ಕಾಯುತ್ತಿದ್ದೇನೆ’ ಎನ್ನುವ ಜಯಂತ್ ಕಾಯ್ಕಿಣಿಯವರದ್ದೇ ಕವನದ ಸಾಲುಗಳು;
ಎಲ್ಲ ಆಸ್ಪತ್ರೆಗಳ ಬಾಗಿಲು ತೆರೆಯಲಿ
ಜ್ವರದ ಕಣ್ಣಿನ ಮಕ್ಕಳು ನನ್ನ ಮಡಿಲಿಗೆ ಬರಲಿ
ಕಿರಣ ಸೋಕಿದರೆ ಸಾಕು ಮಾಯಲಿ ಗಾಯ
ಒಡೆಯದಿರಲಿ ಕಂಬನಿಗೆ ಎದೆಯ ಹಾಲು
ಅಕ್ಷರಗಳು ಪದವಾಗಿ, ಪದವು ಸಾಲುಗಳಲ್ಲಿ ಏನೋ ಹೇಳುತ್ತಿದೆ. ಹೇಳುತ್ತಿರುವುದನ್ನು ಮೀರಿ ಮತ್ತೇನೋ ಹೇಳುತ್ತಿದೆ. ಹೇಳಲಾಗದ್ದನ್ನೂ ಹೇಳುವಂತೆ ಏನೆÇÉಾ ಹೇಳುತ್ತಿದೆ. ಹಾಗೆ ಹೇಳುತ್ತಿರುವುದನ್ನು ಪ್ರತಿಭಾ ನಂದಕುಮಾರ್ ಅವರ ದೃಷ್ಟಿ ಹೇಗೆÇÉಾ ಕಟ್ಟಿಕೊಡುತ್ತದೆ ಎನ್ನುವುದು ತಿಳಿಯಲಿದೆ- ಅಕ್ಟೋಬರ್ 28 ಮತ್ತು 29ರಂದು ಬೆಂಗಳೂರಿನ ಹೊಟೇಲ್ ಲಲಿತ್ ಅಶೋಕ್‌ನಲ್ಲಿ ಆಯೋಜನೆಗೊಂಡಿರುವ “ಬೆಂಗಳೂರು ಲಿಟರೇಚರ್ ಫೆಸ್ಟಿವಲ್’ನಲ್ಲಿ.
– ಅಂಜಲಿ ರಾಮಣ್ಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.