ಯುದ್ಧ ಕಾಲದಲ್ಲಿ ನೆನಪಿಸಿಕೊಳ್ಳಬೇಕಾದ ಓಶೋ ಹೇಳಿದ ಕತೆ
Team Udayavani, Mar 3, 2019, 12:30 AM IST
ಜಪಾನ್ ದೇಶದಲ್ಲಿ ಒಬ್ಬ ರಾಜನಿದ್ದ. ಅವನು ವೃದ್ಧನಾದ. ಮಗನನ್ನು ಕರೆದ. ಹೇಳಿದ, “”ಹುಡುಗ ! ನನ್ನ ಕಾಲ ಮುಗಿಯಿತು. ಈ ರಾಜ್ಯದ ಭಾರವನ್ನು ಸಮರ್ಥನೊಬ್ಬನಿಗೆ ಕೊಟ್ಟು ವಿರಮಿಸುವ ಕಾಲ ಬಂದಿದೆ. ಸಹಜವಾಗಿ ಆ ಅಧಿಕಾರದಂಡ ನನ್ನ ಕೈಯಿಂದ ನಿನಗೆ ಬರಬೇಕು. ಆದರೆ, ನೀನು ಜಾಗೃತಿ ಎಂಬ ವಿದ್ಯೆಯನ್ನು ಗಳಿಸದೇ ಹೋದರೆ ನಿನಗೆ ರಾಜನಾಗುವ ಅವಕಾಶ ಸಿಗದಿರಬಹುದು. ನಾನು ಈ ರಾಜ್ಯವನ್ನು ನಿದ್ದೆ ಮಾಡುವ, ಎಚ್ಚರವಿಲ್ಲದ, ಜಾಗೃತನಾಗದ ವ್ಯಕ್ತಿಗೆ ಖಂಡಿತ ಕೊಡಲಾರೆ. ನನ್ನ ತಂದೆಯಿಂದ ಈ ರಾಜ್ಯವನ್ನು ನಾನು ಪಡೆದದ್ದು ಅವರ ಮಗ ನಾನೆಂಬ ಒಂದೇ ಕಾರಣಕ್ಕಲ್ಲ; ನಾನು ಜಾಗೃತನೂ ಆಗಿದ್ದೆನೆಂಬ ಕಾರಣಕ್ಕೆ. ನಿನಗೆ ಗೊತ್ತಿರಬಹುದು, ನನಗಿಂತ ಹಿರಿಯರಾದ ಮಕ್ಕಳೂ ನನ್ನ ತಂದೆಗೆ ಇದ್ದರು. ಹಾಗಾಗಿ ಈ ಸಿಂಹಾಸನಕ್ಕೆ ನಾನು ನೇರ ಹಕ್ಕುದಾರನಾಗಿರಲಿಲ್ಲ. ಆದರೆ ತನ್ನ ಎಲ್ಲ ಮಕ್ಕಳ ಪೈಕಿ ಈತನೊಬ್ಬ ಹೆಚ್ಚು ಎಚ್ಚರ ಉಳ್ಳವನು ಎಂಬುದನ್ನು ಗುರುತಿಸಿದ ತಂದೆ ನನ್ನ ಕೈಗೆ ರಾಜ್ಯದ ಅಧಿಕಾರಸೂತ್ರ ಕೊಟ್ಟರು. ಅದು ಆ ಕಾಲದ ಮಾತಾಯಿತು ಬಿಡು. ಈಗ ನಿನ್ನ ಮುಂದಿರುವ ಸವಾಲು ಇನ್ನೂ ಕಠಿಣ. ಯಾಕೆಂದರೆ, ನೀನು ನನ್ನ ಏಕಮಾತ್ರ ಪುತ್ರ. ನೀನು ಈ ರಾಜ್ಯವನ್ನು ಹೆಗಲ ಮೇಲೆ ಹೊರಲು ಸಮರ್ಥನೆಂದು ನನಗೆ ಸಾಬೀತು ಮಾಡದೆಹೋದರೆ ಈ ರಾಜ್ಯವನ್ನು ಸಮರ್ಥರಾದ ಅನ್ಯರಿಗೆ ಕೊಡಬಹುದಾದ ಅಧಿಕಾರ ನನಗೆ ಬಂದುಬಿಡುತ್ತದೆ. ಯೋಚಿಸು!”
“”ಅಪ್ಪ! ನಾನು ಜಾಗೃತಿ ಬೆಳೆಸಿಕೊಳ್ಳಬೇಕಾದರೆ ಏನು ಮಾಡಬೇಕು? ಅದನ್ನಾದರೂ ಹೇಳು” ಎಂದ ಮಗ.
“”ಈ ರಾಜ್ಯದ ಕೊಟ್ಟಕೊನೆಯಲ್ಲಿರುವ ಬೆಟ್ಟದ ತಪ್ಪಲಲ್ಲಿ ಒಬ್ಬರು ಗುರುಗಳಿ¨ªಾರೆ. ನನ್ನ ಗುರುಗಳು ಅವರು. ನನಗೋ ಈಗ ಹಣ್ಣು ವಯಸ್ಸು. ಅಂದ ಮೇಲೆ ಅವರ ವಯಸ್ಸು ಇನ್ನೂ ಹೆಚ್ಚೆಂಬುದು ಸಹಜವೇ ತಾನೆ? ಆದರೆ, ರಾಜನಾಗಲು ಬೇಕಾದ ಅರ್ಹತೆಯನ್ನು ಪಾಠ ಮಾಡಬೇಕಾದರೆ ಅದಕ್ಕೆ ಅವರೊಬ್ಬರೇ ಸಮರ್ಥರೆಂಬುದು ನನ್ನ ಬಲವಾದ ನಂಬಿಕೆ. ಹೋಗು, ಅವರ ಬಳಿ ಕೆಲದಿನಗಳ ಕಾಲ ಇದ್ದು ಪಾಠ ಕಲಿತು ಬಾ” ಎಂದ ತಂದೆ.
ಮಗ ಹೊರಟ. ಹಲವಾರು ದಿನಗಳ ಪ್ರಯಾಣದ ನಂತರ ಅವನಿಗೆ ತನ್ನ ತಂದೆಯ ಗುರುಗಳ ಆಶ್ರಮ ಸಿಕ್ಕಿತು. ಅಲ್ಲಿ ಹೋಗಿ ನೋಡಿದರೆ, ತಂದೆ ಹೇಳಿದ್ದಂತೆ, ಆ ಗುರು ನಿಜಕ್ಕೂ ಬಹಳ ವೃದ್ಧರಾಗಿದ್ದರು. ಅವರಲ್ಲಿಗೆ ಹೋಗಿ ನಮಸ್ಕರಿಸಿ ರಾಜಪುತ್ರ ತಾನು ಬಂದ ಕಾರಣವನ್ನು ಅರುಹಿದ. “”ಗುರುಗಳೇ, ಸಮಯ ಬಹಳಿಲ್ಲ. ನನ್ನ ತಂದೆ ಹಾಸಿಗೆ ಹಿಡಿದಿದ್ದಾರೆ. ಅವರೆದುರು ಆದಷ್ಟು ಶೀಘ್ರದಲ್ಲಿ ನಾನು ನನ್ನ ತಯಾರಿಯನ್ನು ತೋರಿಸಬೇಕಾಗಿದೆ” ಎಂದೂ ಸೇರಿಸಿದ. ಗುರುಗಳು ಅವನ ಮಾತನ್ನಷ್ಟೂ ಕೇಳಿಸಿಕೊಂಡರು.
“”ಹೌದು, ಈಗ ನೆನಪಾಗುತ್ತಿದೆ. ಬಹಳ ಬಹಳ ವರ್ಷಗಳ ಹಿಂದೆ ನನ್ನ ಶಿಷ್ಯನಾಗಿದ್ದವನು ನಿನ್ನ ತಂದೆ. ಬಹಳ ಚುರುಕು. ತೀಕ್ಷ್ಣಮತಿ. ಕುಶಾಗ್ರಬುದ್ಧಿ ಅವನದು. ರಾಜನಾಗಲು ತಕ್ಕ ಎಚ್ಚರ ಇದ್ದಂಥ ವ್ಯಕ್ತಿ. ಅವನ ಮಗ ನೀನು ಎಂದು ಹೇಳುತ್ತಿದ್ದೀಯೆ. ಅಂದ ಮೇಲೆ ನಿನಗೂ ಅಂಥ ಗುಣಗಳನ್ನು ಆರ್ಜಿಸಲು ಸಾಧ್ಯ ಇರಲಿಕ್ಕೇಬೇಕು. ಬಾ, ನಾನು ನಿನಗೆ ಚತುರತೆಯ ಪಟ್ಟುಗಳನ್ನು ಕಲಿಸುತ್ತೇನೆ” ಎಂದು ಹೇಳಿ ವೃದ್ಧಗುರು ಆ ಶಿಷ್ಯನನ್ನು ತನ್ನ ಆಶ್ರಮಕ್ಕೆ ಸೇರಿಸಿಕೊಂಡರು.
ಮರುದಿನದಿಂದ ರಾಜಪುತ್ರನ ಅಭ್ಯಾಸ ಪ್ರಾರಂಭವಾಯಿತು. “”ಈ ಪಾಠ ತುಂಬ ಸರಳವಾದದ್ದು. ನೀನು ಇಲ್ಲಿದ್ದು ಆಶ್ರಮವಾಸಿ ಗಳು ಮಾಡುವ ನಿತ್ಯಕೆಲಸಗಳೆಲ್ಲವನ್ನೂ ಮಾಡುವೆ. ನೆಲ ಒರೆಸುವೆ, ಹಸುಗಳ ಗಂಜಳ ಎತ್ತುವೆ, ಹೂ ಕೊಯ್ಯುವೆ, ಅತಿಥಿಗಳು ಬಂದಾಗ ಹಣ್ಣು-ನೀರು ಕೊಡುವೆ. ಆಗೆಲ್ಲ ನಿನ್ನ ಹಿಂದಿನಿಂದ ಬಂದು – ಯಾವ ಕ್ಷಣದಲ್ಲಾದರೂ – ನಾನು ಬೆತ್ತದಿಂದ ಬಾರಿಸುತ್ತೇನೆ. ಅದರ ಎಚ್ಚರ ನಿನಗಿರಬೇಕು. ಅಷ್ಟೆ” ಎಂದು ಗುರು, ಈ ಹುಡುಗ ಮಾಡಬೇಕಿದ್ದ ಕೆಲಸವನ್ನು ವಿವರಿಸಿದರು. ಗುರುವಿಗೆ ತನ್ನ ಆಗಮನದ ಉದ್ದೇಶ ತಿಳಿಯಲಿಲ್ಲವೋ ಏನೋ ಎಂಬ ಆತಂಕದಲ್ಲಿ ರಾಜಕುಮಾರ, “”ನಾನು ಬಂದಿರುವುದು ಜಾಗೃತಿಯ ಪಾಠ ಹೇಳಿಸಿಕೊಳ್ಳುವುದಕ್ಕೆ” ಎಂದು ಮತ್ತೆ ಸ್ಪಷ್ಟಪಡಿಸಿದ. “”ಗೊತ್ತು. ಇದೇ ಆ ಪಾಠ” ಎಂಬ ಉತ್ತರ ಬಂತು.
ಗುರುವಾಕ್ಯ! ಮೀರುವಂತಿಲ್ಲ! ಅವನ ಆಶ್ರಮವಾಸ ಪ್ರಾರಂಭವಾಯಿತು. ದೈನಂದಿನ ಕೆಲಸ ಮಾಡುತ್ತಿರುವಾಗಲೇ ಅವನಿಗೆ ಹಿಂದಿನಿಂದ ಬೆನ್ನ ಮೇಲೆ, ಕಾಲ ಮೇಲೆ, ಸೊಂಟದ ಮೇಲೆ ಬೆತ್ತದೇಟುಗಳು ಬೀಳುತ್ತಿದ್ದವು. ಪ್ರತಿದಿನ ಅಂಥ ಹತ್ತಾರು ಏಟಗಳು. ಒಂದಕ್ಕಿಂತ ಒಂದು ಬಿಗಿ, ಖಾರ. ಮೊದಮೊದಲಿಗೆ ರಾಜಕುಮಾರನಿಗೆ ತನ್ನ ಬೆನ್ನಹಿಂದೆ ಗುರು ಬಂದು ನಿಂತದ್ದು ಗೊತ್ತೇ ಆಗುತ್ತಿರಲಿಲ್ಲ. ಬೆನ್ನಿಗೊಂದು ಛಡಿಯೇಟು ಬಿದ್ದಾಗಲೇ ಅವನು ಎಚ್ಚರಾಗುತ್ತಿದ್ದದ್ದು.
ಆದರೆ ಬರಬರುತ್ತ ಅವನ ಮನಸ್ಸು ಸೂಕ್ಷ್ಮವಾಗತೊಡಗಿತು. ವಾರ ಕಳೆದ ಬಳಿಕ ಅವನಿಗೆ ತನ್ನ ಗುರು ತನ್ನ ಆಸುಪಾಸಿನಲ್ಲಿ¨ªಾರೆ ಅನ್ನಿಸಿದಾಗ ಅವರ್ಣನೀಯವಾದೊಂದು ಪ್ರಜ್ಞೆ ಜಾಗೃತವಾಗುತ್ತಿತ್ತು. ತಿಂಗಳು ಕಳೆವಷ್ಟರಲ್ಲಿ ಅವನಲ್ಲಿ ಬಹಳಷ್ಟು ಸುಧಾರಣೆಗಳಾದವು. ಬಹಳಷ್ಟು ಸಲ ಅವನಿಗೆ ತನ್ನ ಗುರು ತನ್ನ ಬೆನ್ನ ಹಿಂದೆ ಇ¨ªಾರೆ ಎಂಬ ಎಚ್ಚರ ಮೂಡಿಬಿಡುತ್ತಿತ್ತು. ಒಂದು ವರ್ಷ ಆಗುವಷ್ಟರಲ್ಲಿ ಆತ ಅದೆಷ್ಟು ಜಾಗೃತನಾಗಿಬಿಟ್ಟನೆಂದರೆ, ತನ್ನ ಸಹಪಾಠಿಗಳ ಜೊತೆ ಕೂತು ಯಾವುದೋ ಪ್ರಿಯ ವಿಷಯದ ಕುರಿತು ಅತ್ಯಂತ ಪರವಶನಾಗಿ ಮಾತಾಡುತ್ತಿದ್ದಾಗಲೂ, ತನ್ನ ಬೆನ್ನ ಹಿಂದಿನಿಂದ ಬೀಸಿ ಬಂದ ಬೆತ್ತವನ್ನು ಹಿಂತಿರುಗಿ ನೋಡದೆಯೇ ಕೈಯಲ್ಲಿ ತಡೆದು ತನ್ನ ಮಾತಿನ ಓಘವನ್ನು ವ್ಯತ್ಯಾಸ ಮಾಡಿಕೊಳ್ಳದೆ ಸಂಭಾಷಣೆ ಮುಂದುವರಿಸುವಷ್ಟು ಜಾಣನಾಗಿದ್ದ.
ಅದೊಂದು ದಿನ ಗುರುಗಳು ಅವನನ್ನು ಕರೆದರು. “”ಈಗ ನೀನು ಜಾಗೃತಿಯ ಮೊದಲ ಹಂತವನ್ನು ಸಾಧಿಸಿದ್ದಿ. ನಾಳೆಯಿಂದ ನಿನ್ನ ಎರಡನೆಯ ಪಾಠ ಶುರು” ಎಂದರು.
“”ಅಂದರೆ ನಾನು ಇದುವರೆಗೆ ಕಲಿತದ್ದು ಕೇವಲ ಒಂದು ಪಾಠ. ಅಷ್ಟೇನೇ?”
“”ಹೌದು”
ರಾಜಕುಮಾರನಿಗೆ ಬವಳಿ ಬರುವಂತಾಯಿತು.
“”ನಿನ್ನ ಎರಡನೇ ಪಾಠವೂ ಈ ಮೊದಲ ಪಾಠದಂತೆಯೇ ಇರುತ್ತದೆ ಹೆಚ್ಚಾಕಡಿಮೆ. ನೀನು ನಿ¨ªೆ ಮಾಡುವಾಗ ನಾನು ಬಂದು ಹೊಡೆಯುತ್ತೇನೆ. ಆ ಹೊಡೆತಗಳನ್ನು ನೀನು ತಪ್ಪಿಸಿಕೊಳ್ಳಬೇಕು ಎಂದರು ಗುರು. ಮತ್ತೂಮ್ಮೆ ಹೌಹಾರಿಬೀಳುವಂತಾಯಿತು ರಾಜಪುತ್ರನಿಗೆ! ಏನು? ನಿದ್ದೆಯಲ್ಲಿ ಎಚ್ಚರಿರಬೇಕೆ? ನಿಮ್ಮ ಪೆಟ್ಟುಗಳನ್ನು ತಪ್ಪಿಸಿಕೊಳ್ಳಬೇಕೆ? ಇದು ಹೇಗೆ ಸಾಧ್ಯ!” ಎಂದ.
“”ಸಾಧ್ಯ! ಈ ವಿದ್ಯೆಯನ್ನು ಗಳಿಸುತ್ತಿರುವವರಲ್ಲಿ ನೀನು ಮೊದಲನೆಯವನೂ ಅಲ್ಲ, ಕೊನೆಯವನೂ ಆಗಲಾರೆ. ನಿನ್ನ ತಂದೆ ಈ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದ. ನನ್ನ ಸಾವಿರಾರು ಶಿಷ್ಯರು ಈ ವಿದ್ಯೆಯನ್ನು ಕಲಿತಿದ್ದಾರೆ. ನನ್ನ ಕೈಯಲ್ಲಿ ಅರ್ಹತಾಪತ್ರ ಪಡೆಯಬೇಕಾದರೆ ಈ ಪರೀಕ್ಷೆಯನ್ನು ಗೆಲ್ಲುವುದು ಅನಿವಾರ್ಯ” ಎಂದರು ಗುರು. ಗುರುವಾಕ್ಯ! ಯುವಕ ತಯಾರಾದ.
ಮೊದಮೊದಲು ಅವನು ಅತ್ಯಂತ ಗಾಢ ನಿದ್ರೆಯಲ್ಲಿ¨ªಾಗಲೇ ಧುಂ ಎಂದು ಬೆತ್ತದೇಟು ಬೀಳುತ್ತಿತ್ತು. ಧಡ್ಡನೆ ಎಚ್ಚೆತ್ತು ಏಟು ಬಿದ್ದ ಜಾಗದಲ್ಲಿ ತ್ವರೆಯಿಂದ ಸವರಿಕೊಳ್ಳುತ್ತಿದ್ದ. ಮೊದಲು ಹೀಗೆ ನಿದ್ರೆ ಮಾಡುವಾಗ ಆರು, ಎಂಟು, ಹತ್ತು ಸಲವೆಲ್ಲ ಏಟು ಬೀಳುತ್ತಿತ್ತು. ಆದರೆ ಆರು ತಿಂಗಳು ಕಳೆವಷ್ಟರಲ್ಲಿ ಅವನೊಳಗಿಂದ ಒಂದು ವಿಚಿತ್ರವಾದ ಜಾಗೃತಪ್ರಜ್ಞೆಯೊಂದು ಹುಟ್ಟಿಕೊಂಡಿತು. ಗುರುಗಳು ಬಂದು ಇನ್ನೇನು ಬೆತ್ತವನ್ನು ಬೀಸುತ್ತಾರೆನ್ನು°ವಷ್ಟರಲ್ಲಿ ಅವನಿಗೆ ತಟ್ಟನೆ ಎಚ್ಚರಾಗಿಬಿಡುತ್ತಿತ್ತು. ಯಾವುದೋ ಕಾಣದ ಕೈಯೊಂದು ಅವನನ್ನು ಚಿವುಟಿ ಎಬ್ಬಿಸಿಬಿಟ್ಟಂತೆ ಆಗುತ್ತಿತ್ತು. ಅದೊಂದು ದಿನ ಗುರು ಬಳಿಬಂದು ಇನ್ನೇನು ಬೆತ್ತವನ್ನು ಗಾಳಿಯಲ್ಲಿ ಬೀಸಿ ಅವನ ಕಾಲಿಗೆ ಹೊಡೆಯಬೇಕು ಎನ್ನುವಷ್ಟರಲ್ಲಿ ರಾಜಕುಮಾರ, “”ಏಕೆ ವೃಥಾ ಶ್ರಮಪಡುತ್ತೀರಿ. ನನ್ನ ಬಲಗಾಲಿನ ಹೆಬ್ಬೆರಳಿಗೆ ಹೊಡೆಯಲೆಂದು ಎತ್ತಿರುವ ಬೆತ್ತವನ್ನು ದಯವಿಟ್ಟು ಇಳಿಸಿ. ನಿದ್ರೆಯಲ್ಲಿದ್ದರೂ ನಿಮ್ಮ ನಡೆಯನ್ನು ಕಾಣಬÇÉೆ” ಎಂದುಬಿಟ್ಟ. ಗುರುಗಳು ಅವನನ್ನು ಏಕಾಂತಕ್ಕೆ ಕರೆದು ಹೇಳಿದರು, “”ನೀನೀಗ ನನ್ನ ಎರಡನೆ ಪಾಠವನ್ನೂ ಕಲಿತು ತೇರ್ಗಡೆಯಾದಂತಾಯಿತು. ಇನ್ನು ಮೂರನೆಯ ಪಾಠ, ನಾಳೆಯಿಂದ ಪ್ರಾರಂಭ. ಇದೂ ನಿನ್ನ ಮೊದಲ ಪಾಠದಂತೆಯೇ ಇರುತ್ತದೆ. ಆದರೆ, ಬೆತ್ತದ ಬದಲು ಖಡ್ಗದಿಂದ ಹೊಡೆಯುತ್ತೇನೆ”
“”ಖಡ್ಗದಿಂದ?” ರಾಜಕುಮಾರ ಉಗುಳು ನುಂಗಿದ.
“”ಕೇಳಿಸಿಕೊಂಡೆಯಷ್ಟೆ?”
ಆ ರಾತ್ರಿ ರಾಜಕುವರ ಅಕ್ಷರಶಃ ನಿದ್ರೆಯನ್ನೇ ಮಾಡಲಿಲ್ಲ. ಬೆತ್ತದ ಏಟನ್ನಾದರೂ ಸಹಿಸಬಹುದು; ಆದರೆ ಕತ್ತಿಯೇಟು? ಈ ಗುರುವಿಗೆ ತಲೆ ಕೆಟ್ಟಿದೆಯೇ ಎಂದು ಮನಸ್ಸು ಒಂದೇ ಯೋಚನೆಯನ್ನು ಮತ್ತೆ ಮತ್ತೆ ಮಾಡುತ್ತಿತ್ತು. ಬೆಳಗಾಗುವಷ್ಟರಲ್ಲಿ ರಾಜಕುಮಾರನ ಮನಸ್ಸಿನಲ್ಲಿ ಒಂದು ಯೋಚನೆ ದೃಢವಾಯಿತು. ಅದೇನೆಂದರೆ, ನನ್ನನ್ನು ಕತ್ತಿಯೇಟು ಕೊಟ್ಟು ಪರೀಕ್ಷಿಸಬಯಸುವ ಈ ಗುರು ಸ್ವತಃ ಅಂತಹ ಪರೀಕ್ಷೆ ಎದುರಿಸಿಯಾರೇ? ತಾನೇ ತೇರ್ಗಡೆಯಾಗದ ಪರೀಕ್ಷೆಯನ್ನು ಈತ ವಿದ್ಯಾರ್ಥಿಗೆ ಒಡ್ಡುತ್ತಿರಬಹುದಲ್ಲ? ಇವರನ್ನೂ ಯಾಕೆ ನಾನು ಅಂಥದೊಂದು ಪರೀಕ್ಷೆಗೆ ಇವರನ್ನೇ ಈಡುಮಾಡಬಾರದು? ಅಷ್ಟು ಯೋಚಿಸುತ್ತಿದ್ದ ಹೊತ್ತಿನÇÉೇ ಅವನ ಹೊದಿಕೆಯನ್ನು ಯಾರೋ ಬಲವಾಗಿ ಎಳೆದುಹಾಕಿದರು. “”ಮೂರ್ಖ! ಚಾಪೆಯಿಂದ ಈಚೆ ಬಾ. ಏನು, ನಿನ್ನ ಗುರುವನ್ನೇ ಖಡ್ಗದಿಂದ ಹೊಡೆದುಹಾಕುವ ಯೋಚನೆ ಮಾಡುತ್ತಿದ್ದೀಯಾ? ನಾಚಿಕೆಯಾಗಬೇಕು ನಿನಗೆ” ಎಂದರು ಪಕ್ಕದÇÉೇ ನಿಂತಿದ್ದ ಗುರುಗಳು. ತನ್ನ ಹಿಂದಿನಿಂದ ಬೀಸಿ ಬರುವ ಬೆತ್ತವೋ ಕತ್ತಿಯೋ ಮಾತ್ರವಲ್ಲ, ಯೋಚನೆಗಳನ್ನು ಕೂಡ ಕಾಣಬಲ್ಲವರಾಗಿದ್ದರು ಅವರು. ಯುವಕನಿಗೆ ತನ್ನ ಮೂರ್ಖತನದಿಂದ ನಾಚಿಕೆಯಾಯಿತು. ಇಷ್ಟೊಂದು ಕೀಳುಮಟ್ಟದಲ್ಲಿ ಯೋಚಿಸಬಿಟ್ಟೆನಲ್ಲ ಎಂದು ಮನಸ್ಸಿನಲ್ಲೇ ಗೋಳಾಡಿದ. ಗುರುಗಳ ಕಾಲ ಬಳಿ ಮಂಡಿಯೂರಿಕೂತು ಕ್ಷಮಿಸಿ ಎಂದ. ಅಷ್ಟು ಹೇಳಬೇಕಾದರೂ ಅವನಿಗೆ ಲಜ್ಜೆಯಿಂದ ಮೈಯೆಲ್ಲ ಮುಳ್ಳೆದ್ದಿತು. ಗುರುಗಳು ಅವನಿಗೆ ಶಿಕ್ಷೆಯನ್ನೇನೂ ಕೊಡಲಿಲ್ಲ. ಏನನ್ನೂ ಹೇಳಲೂ ಇಲ್ಲ.
ಅಂದಿನಿಂದ ಅವನ ಮೂರನೆಯ ಪಾಠ ಮೊದಲಾಯಿತು. ಶಿಷ್ಯ ಈಗ ಅತ್ಯಂತ ತೀವ್ರ ಜಾಗೃತಾವಸ್ಥೆಯನ್ನು ಪಡೆದಿದ್ದ. ತನ್ನ ಸುತ್ತಮುತ್ತಲ ಪ್ರತಿಯೊಬ್ಬರ ಚಲನೆಯನ್ನೂ ಆತ ಗಮನಿಸಬಲ್ಲವನಾಗಿದ್ದ, ಕೇಳಬಲ್ಲವನಾಗಿದ್ದ. ತನ್ನ ಉಸಿರಾಟ, ತನ್ನ ಹೃದಯಬಡಿತಗಳು ಕೂಡ ಅವನಿಗೆ ಕೇಳುವಂತಿತ್ತು. ಎಲೆಗಳ ನಡುವೆ ಸಂಚರಿಸುವ ಮಂದಮಾರುತದ ತೇಲಾಟವನ್ನೂ ಅವನ ಕಿವಿಗಳು ಗುರುತಿಸುತ್ತಿದ್ದವು. ಅಷ್ಟೇಕೆ, ಮರದಿಂದ ಉದುರಿಬೀಳುವ ಹಣ್ಣೆಲೆಯ ಸದ್ದನ್ನು ಕೂಡ ಅವನು ಗುರುತಿಸುತ್ತಿದ್ದ. ದಿನೇ ದಿನೇ ಅವನ ಜಾಗೃತಾವಸ್ಥೆಯ ಬೆಳವಣಿಗೆ ಅವನಿಗೇ ಆಗುತ್ತಿತ್ತು. ಗುರುವಿಗೆ ಒಂದೇ ಒಂದು ಸಲವೂ ತನ್ನ ಈ ಶಿಷ್ಯನನ್ನು ಹಿಂದಿನಿಂದ ಕತ್ತಿಯಲ್ಲಿ ಹೊಡೆಯಲು ಆಗಲೇ ಇಲ್ಲ. ಜೀವನ್ಮರಣದ ಪ್ರಶ್ನೆಯಾದ್ದರಿಂದ ಶಿಷ್ಯನ ಮೈಯೆಲ್ಲ ಕಣ್ಣಾಗಿತ್ತು; ಮೈಯ ನರನರಗಳೂ ಕಿವಿಗಳಾಗಿ ತೆರೆದುಬಿಟ್ಟಿದ್ದವು. ಚಿಟ್ಟೆಯ ರೆಕ್ಕೆಬಡಿತ ಕೂಡ ಅವನ ಕಿವಿಗಳಲ್ಲಿ ತರಂಗಗಳನ್ನೆಬ್ಬಿಸುತ್ತಿತ್ತು.
ಮೂರು ದಿನಗಳು ಕಳೆದರೂ ಕತ್ತಿಯಿಂದ ಹೊಡೆವ ಒಂದೇ ಒಂದು ಅವಕಾಶವೂ ಗುರುವಿಗೆ ಸಿಗಲಿಲ್ಲ. ನಾಲ್ಕನೆಯ ದಿನ ಗುರು ತನ್ನ ಶಿಷ್ಯನನ್ನು ಏಕಾಂತಕ್ಕೆ ಕರೆಸಿ ಕೂರಿಸಿಕೊಂಡು, “”ನಿನ್ನ ಆಶ್ರಮವಾಸ ಇಂದಿಗೆ ಮುಗಿದಿದೆ. ನೀನೀಗ ಮರಳಿ ರಾಜಧಾನಿಗೆ ಹೋಗಬಹುದು” ಎಂದರು.
ಆರ್‌ಎಚ್‌ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.