ಪೋಲೆಂಡ್‌ನ‌ಲ್ಲಿ ಪಂಪನ ಧ್ಯಾನ


Team Udayavani, Jun 2, 2019, 6:00 AM IST

c-3

ಮೇ 12ರಂದು ನಾನು ಪೋಲೆಂಡ್‌ ದೇಶದ ಪೋಸ್ನನ್‌ನ ಸಣ್ಣ ವಿಮಾನ ನಿಲ್ದಾಣದಲ್ಲಿ ಇಳಿದಾಗ ಜಿಟಿಜಿಟಿ ಮಳೆ ಬೀಳುತ್ತಿತ್ತು. ಪ್ರೊ. ಕ್ರಾಗ್‌ ಮತ್ತು ಸಂಶೋಧಕ ಅಭಿಷೇಕ್‌ ಜೈನ್‌ ನನಗಾಗಿ ಕಾಯುತ್ತಿದ್ದವರು ನನ್ನ ಎಲ್ಲ ಭಾರಗಳನ್ನು ಹಗುರವಾಗಿಸಿದರು. ಯೂರೋಪಿನ ಕೆಲವು ದೇಶಗಳಿಗೆ ಸಾಕಷ್ಟು ಬಾರಿ ಹೋಗಿದ್ದರೂ ಪೋಲೆಂಡ್‌ಗೆ ಇದು ನನ್ನ ಮೊದಲ ಪದಾರ್ಪಣ. ಪ್ರೊ. ಕ್ರಾಗ್‌ ಅವರ ಕಾರು ಚಲಿಸುತ್ತಿದ್ದಂತೆ ಕುತೂಹಲದಿಂದ ಹೊರಗೆ ಕಣ್ಣು ಹಾಯಿಸಿದಂತೆ ಎಲ್ಲೆಡೆಯೂ ಹಸಿರು ಹೊದಿಕೆಯ ನೋಟ ಕಣ್ಮನಗಳಿಗೆ ತಂಪು ನೀಡಿತು. ಪೋಸ್ನನ್‌ ನಗರ ಪ್ರವೇಶಿಸಿ, ಹತ್ತು ಮಹಡಿಗಳ ಕಟ್ಟಡದ ಒಳಹೊಕ್ಕದ್ದು ವಿಶ್ವವಿದ್ಯಾಲಯದ ಅತಿಥಿಗೃಹಕ್ಕೆ. ಒಳಗೆ ಹೋದಾಗ ಕಂಡದ್ದು ಅದರ ಒಳಗೆ ನನ್ನದೇ ಆದ ಒಂದು ಸುಸಜ್ಜಿತ ಮನೆಯನ್ನು.

ಪೋಸ್ನನ್‌ ಇದು ಪೋಲೆಂಡ್‌ (ಪೋಲಿಷ್‌ ಭಾಷೆಯಲ್ಲಿ “ಪೋಲ್‌ ಸ್ಕ’) ದೇಶದ ಪಶ್ಚಿಮ ಭಾಗದಲ್ಲಿ ವಾರ್ತ ನದಿಯ ದಡದಲ್ಲಿ ಇರುವ ಒಂದು ಹಳೆಯ ನಗರ. ಹತ್ತನೆಯ ಶತಮಾನದಲ್ಲಿ ಇದು ಸ್ಥಾಪನೆ ಆಯಿತು ಎನ್ನುವ ಉಲ್ಲೇಖ ಇದೆ. ಸುಮಾರು ಐದೂವರೆ ಲಕ್ಷ ಜನಸಂಖ್ಯೆ ಇರುವ ಪೋಸ್ನನ್‌ ನಗರ ಪ್ರಸಿದ್ಧ ಆಗಿರುವುದು ಇಲ್ಲಿನ ಹಳೆಯ ಕಾಲದ ಸುಂದರ ಕಟ್ಟಡಗಳಿಗಾಗಿ ಮತ್ತು ಉತ್ತಮ ವಿಶ್ವವಿದ್ಯಾನಿಲಯಗಳಿಗಾಗಿ. ಪೋಸ್ನನ್‌ನಲ್ಲಿ ಒಂಬತ್ತು ವಿಶ್ವವಿದ್ಯಾಲಯಗಳಿವೆ; ಖಾಸಗಿಯವು ಬೇರೆ ಇವೆ. ಇವುಗಳಲ್ಲಿ ಸುಮಾರು ಒಂದು ಲಕ್ಷ ನಲುವತ್ತು ಸಾವಿರ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಅವುಗಳಲ್ಲಿ ಪ್ರಸಿದ್ಧವಾದುದು ಆದಮ್‌ ಮಿಕಿವಿಜ್‌ ವಿಶ್ವವಿದ್ಯಾನಿಲಯ. ಇದಕ್ಕೆ ಈಗ ನೂರು ವರ್ಷ ತುಂಬಿದ ಸಂಭ್ರಮ. ಪೋಲೆಂಡ್‌ನ‌ ರಾಷ್ಟ್ರೀಯ ಕವಿ ಆದಮ್‌ ಮಿಕಿವಿಜ್‌ (Adam Mickiewicz) ನ ಹೆಸರನ್ನು ಈ ವಿವಿಗೆ ಇಡಲಾಗಿದೆ. ಆದಮ್‌ ಮಿಕಿವಿಜ್‌ (1798-1855) ಪೋಲಿಷ್‌ ಭಾಷೆಯ ಕವಿ, ನಾಟಕಕಾರ, ಪ್ರಬಂಧಕಾರ, ಅನುವಾದಕ, ಪ್ರಾಧ್ಯಾಪಕ ಆಗಿದ್ದುದರ ಜೊತೆಗೆ ರಾಜಕೀಯ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದವರು.

ಪೋಲೆಂಡ್‌ ಜೊತೆಗಿನ ನನ್ನ ಸಂಬಂಧ ಆಕಸ್ಮಿಕ. ಪ್ರೊ. ಉಲಿಕ್‌ ತಿಮ್‌ ಕ್ರಾಗ್‌ ಅವರ “ಸಂಶೋಧನಾ ಯೋಜನೆ’ ಏಷ್ಯಾದ ಚಾರಿತ್ರಿಕ ಸಂಕಥನಗಳ ಕಥನದ ಮಾದರಿಗಳು ಇದರಲ್ಲಿ ಅವರು ಭಾರತ, ಚೀನಾ ಮತ್ತು ಟಿಬೆಟ್‌ಗಳ ಪ್ರಾಚೀನ ಅಭಿಜಾತ ಸಾಹಿತ್ಯದ ಕೃತಿಗಳನ್ನು ಅಧ್ಯಯನ ನಡೆಸುತ್ತಿದ್ದಾರೆ. ಆಕಸ್ಮಿಕವಾಗಿ ಭೇಟಿಯಾದ ಪ್ರೊ. ಕ್ರಾಗ್‌ ಅವರು ಈ ಯೋಜನೆಯ ಬಗ್ಗೆ ಪ್ರಸ್ತಾವಿಸಿದಾಗ ನಾನು ಭಾರತದಲ್ಲಿ ಕನ್ನಡದ ಪ್ರಾಚೀನ ಕೃತಿಗಳನ್ನು ಈ ದೃಷ್ಟಿಯಿಂದ ಅಧ್ಯಯನ ಮಾಡಬಹುದು ಎಂದು ತಿಳಿಸಿ, ಪಂಪಭಾರತದ ಪ್ರಸ್ತಾವ ಮಾಡಿದೆ. ಪಂಪಭಾರತದ ಐತಿಹಾಸಿಕತೆಯ ವಿವರಗಳನ್ನು ಕೊಟ್ಟೆ. ಇದರಿಂದ ಕನ್ನಡಸಾಹಿತ್ಯದ ಬಗ್ಗೆ ಆಸಕ್ತಿ ತಾಳಿದ ಕ್ರಾಗ್‌ ಅವರು ಅವರ ಸಂಶೋಧನಾ ಯೋಜನೆಯಲ್ಲಿ ಕನ್ನಡಸಾಹಿತ್ಯವನ್ನು ಸೇರಿಸಿಕೊಂಡರು. ಅದರ ಮುಂದುವರಿಕೆಯಾಗಿ ಪಂಪ ನನ್ನನ್ನು ಪೋಲೆಂಡ್‌ಗೆ ಕರೆದುಕೊಂಡು ಬಂದ!

ಮೂಲತಃ ಡೆನ್ಮಾರ್ಕ್‌ನವರಾದ ಪ್ರೊ. ಕ್ರಾಗ್‌ ಅವರು ಟಿಬೆಟಿಯನ್‌ ಅಧ್ಯಯನ ಮತ್ತು ಇಂಡಾಲಜಿ- ಹೀಗೆ ಎರಡು ಎಂಎ ಪದವಿಗಳನ್ನು ಹಾಗೂ ಪ್ರಾಚೀನ ಬೌದ್ಧ ಸಿದ್ಧಾಂತಗಳ ಬಗ್ಗೆ ಪಿಎಚ್‌ಡಿ ಪದವಿಯನ್ನೂ ಪಡೆದಿ¨ªಾರೆ. ಭಾರತ, ಚೀನಾ ಮತ್ತು ಟಿಬೆಟ್‌ಗಳಲ್ಲಿ ಬೌದ್ಧ ಮತ್ತು ಜೈನ ಪರಂಪರೆಗಳ ಅನೇಕ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿ¨ªಾರೆ. ಪ್ರೊ. ಕ್ರಾಗ್‌ ಅವರು ಪ್ರಕೃತ ಪೋಲೆಂಡ್‌ನ‌ ಪೋಸ್ನನ್‌ನ ಆದಮ್‌ ಮಿಕ್‌ ವಿಜ್‌ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ತಮ್ಮ ಸಂಶೋಧನೆಯ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ವಿಕ್ರಮಾರ್ಜುನ ವಿಜಯ ಎಂಬ ಸಂಕಥನ
ಪಂಪನು ತನ್ನ ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ ಕಥೆಯ ನಾಯಕನಾದ ಅರ್ಜುನನನ್ನು ತನ್ನ ಆಶ್ರಯದಾತನಾದ ಅರಿಕೇಸರಿಯೊಡನೆ ಸಮೀಕರಿಸಿ ಸಂಕಥನವನ್ನು ಕಟ್ಟಿದ್ದು ಮಾತ್ರವಲ್ಲದೆ, ತನ್ನ ಕೃತಿಯನ್ನು “ಇತಿಹಾಸ ಕಥೆ’ ಎಂದು ಕರೆಯುತ್ತಾನೆ. ಅಲ್ಲಿ “ಇತಿಹಾಸ’ವೂ ಇದೆ, “ಕಥೆ’ಯೂ ಇದೆ. ಪಂಪನು ತನ್ನ ಆದಿಪುರಾಣ ಕಾವ್ಯವನ್ನು ಆದಿತೀರ್ಥೇಶ್ವರನ ಚರಿತ ಎಂದು ಕರೆಯುತ್ತಾನೆ. ಪಂಪನ ಬಳಿಕದ ಅನೇಕ ಜೈನ ಕವಿಗಳು ತಮ್ಮ ಪುರಾಣಕಾವ್ಯಗಳನ್ನು ಚರಿತಪುರಾಣ ಎಂದು ಕರೆದರು. ಚರಿತ, ಚಾರಿತ್ರ, ಇತಿಹಾಸ ಮತ್ತು ಕಥೆ- ಒಂದರೊಡನೆ ಇನ್ನೊಂದು ಸೇರಿಕೊಂಡು ಚಾರಿತ್ರಿಕ ಸಂಕಥನ ಆಗುತ್ತದೆ.

ಪೋಲೆಂಡ್‌ ದೇಶದ ಎರಡನೆಯ ಅತಿ ದೊಡ್ಡ ನಗರ ಮತ್ತು ಹಿಂದಿನ ರಾಜಧಾನಿ ಕ್ರಾಕೊ. ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ಬದುಕಿನ ನಗರ ಕ್ರಾಕೊ ಯುರೋಪಿನ ಅತ್ಯಂತ ಸುಂದರ ನಗರಗಳಲ್ಲಿ ಒಂದು. ಕಲಾತ್ಮಕ ಪರಂಪರೆಯ ವೈವಿಧ್ಯಮಯ ಸುಂದರ ಕಟ್ಟಡಗಳ ನಗರ ಕ್ರಾಕೊದ ಹಳೆಯ ಪಟ್ಟಣವನ್ನು ಯುನೆಸ್ಕೋ ಜಾಗತಿಕ ಪರಂಪರೆಯ ತಾಣವಾಗಿ ಗುರುತಿಸಿದೆ. ಕ್ರಾಕೊದ ಯಾಗಿಯೆಲ್ಲೋನಿಯನ್‌ (Jagiellonian )ವಿಶ್ವವಿದ್ಯಾಲಯ ಜಗತ್ತಿನ ಪ್ರಾಚೀನ ವಿವಿಗಳಲ್ಲಿ ಪ್ರಮುಖವಾದುದು. (ಸ್ಥಾಪನೆ: 1364). ಈ ವಿಶ್ವವಿದ್ಯಾಲಯದ ಓರಿಯಂಟಲ್‌ ಅಧ್ಯಯನ ಸಂಸ್ಥೆಯ ಭಾಗವಾಗಿ ಇರುವ ಇಂಡಾಲಜಿ ವಿಭಾಗದಲ್ಲಿ ಪ್ರಾಧ್ಯಾಪಕಿ ಪ್ರೊ. ಲಿಡಿಯಾ ಸುದಿಕ. ಇವರು ನಮ್ಮನ್ನು ಪೋಸ್ನನ್‌ನಿಂದ ಕ್ರಾಕೊಗೆ ತಮ್ಮ ಸಂಸ್ಥೆಗೆ ಆಹ್ವಾನಿಸಿ, ಉಪನ್ಯಾಸಗಳನ್ನು ಕೊಡಲು ಕೇಳಿಕೊಂಡರು. ಕಳೆದ ವಾರ ಕ್ರಾಕೊದಲ್ಲಿ ನಾನು ಕೊಟ್ಟ ಉಪನ್ಯಾಸ ಪಂಪನ ಕಾವ್ಯಗಳಲ್ಲಿ ಲೌಕಿಕ ಮತ್ತು ಧರ್ಮದ ಪರಿಕಲ್ಪನೆಗಳ ಭಿನ್ನತೆ ಹಾಗೂ ಮಿಶ್ರಣ. ಸುಮಾರು ಐವತ್ತು ವಿದ್ಯಾರ್ಥಿಗಳು ಮತ್ತು ಕೆಲವು ಪ್ರಾಧ್ಯಾಪಕರು ಇದ್ದ ಸಭೆಯಲ್ಲಿ ಎಲ್ಲರಿಗೂ ಇಂಗ್ಲಿಷ್‌ ಅರ್ಥವಾಗುತ್ತಿತ್ತು. ಆದರೂ ಪವರ್‌ ಪಾಯಿಂಟ್‌ನೂ° ಬಳಸಿದೆ. ಅಲ್ಲಿ ಇದ್ದ ಯಾರಿಗೂ ಕನ್ನಡ ಭಾಷೆ ಸಾಹಿತ್ಯದ ಪರಿಚಯ ಇರಲಿಲ್ಲ. ಹಾಗಾಗಿ, ಜರ್ಮನಿ ಗಿಂತ ಭಿನ್ನವಾಗಿ ಕನ್ನಡ ಕರ್ನಾಟಕದ ಪರಿಚಯ ಮಾಡಿ,

ವಿಷಯ ಪ್ರವೇಶ ಮಾಡಿದೆ. ವಿಶೇಷವೆಂದರೆ, ಪೋಲಿಷ್‌ ವಿದ್ಯಾರ್ಥಿಗಳು ನನ್ನ ಉಪನ್ಯಾಸ ಆಲಿ ಸಿದ ಬಳಿಕ ಆಸಕ್ತಿದಾಯಕ ಪ್ರಶ್ನೆಗಳನ್ನು ಕೇಳಿದ್ದು. “ಕರ್ನಾಟಕಕ್ಕೆ ಬನ್ನಿ’ ಎಂದು ಆ ವಿದ್ಯಾರ್ಥಿಗಳನ್ನು ನಾನು ಆಹ್ವಾನಿಸಿದಾಗ, ಅವರ ನಗುಮುಖ ಕಂಡಾಗ ಪಂಪನ ಬನವಾಸಿ ನೆನಪಾಯಿತು. ಅಕ್ಕರದ ಗೊಟ್ಟಿಯಲ್ಲಿ ಪೋಲೆಂಡ್‌ನ‌ ವಿದ್ಯಾರ್ಥಿ ಗಳ ನಡುವೆ ಪಂಪ ನಗುತ್ತಿದ್ದ. ಆರಂಕುಶಮಿಟ್ಟೊಡಮ್‌ ನೆನೆವುದೆನ್ನ ಮನಂ…

ಬಿ. ಎ. ವಿವೇಕ ರೈ

ಟಾಪ್ ನ್ಯೂಸ್

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.