ಪಂಪನಿಂದ ಹಂಪನವರೆಗೆ
Team Udayavani, Jan 29, 2017, 3:45 AM IST
ಇತ್ತೀಚೆಗೆ, ಅಂದರೆ ಡಿಸೆಂಬರ್ 28ರಂದು ನನ್ನ ಅಮ್ಮ (ನಾಡೋಜ ಡಾ|| ಕಮಲಾಹಂಪನಾ) ಕೊಪ್ಪದಲ್ಲಿ ನನ್ನ ಮನೆಯಲ್ಲಿ ಉಳಿದಿದ್ದರು. ಅವರೊಡನೆ ಬಂದ ಅಪ್ಪಾಜಿ ನಾಡೋಜ ಡಾ. ಹಂಪ ನಾಗರಾಜಯ್ಯನವರು ಕುಪ್ಪಳ್ಳಿಯಲ್ಲಿ ಉಳಿದಿದ್ದರು. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಅಪ್ಪಾಜಿ, ಪ್ರತಿವರ್ಷ 29ರಂದು ರಾಷ್ಟ್ರಕವಿ ಕುವೆಂಪುರವರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ರಾಷ್ಟ್ರ ಪುರಸ್ಕೃತ ಸಾಹಿತಿಗೆ ರೂ. 5 ಲಕ್ಷ ಹಣ ನೀಡಿ ಸನ್ಮಾನಿಸುವ ಈ ಸಮಾರಂಭದ ಸಿದ್ಧತೆಯಲ್ಲಿ ಅಪ್ಪಾಜಿ ತೊಡಗಿದ್ದರು, ಅಪ್ಪಾಜಿಯಿಂದ ಅಮ್ಮನಿಗೆ ಕರೆಬಂತು. ನಾನು ಸ್ಪೀಕರ್ ಆನ್ ಮಾಡಿ ನನ್ನ ಮನೆ ಹಿತ್ತಲಲ್ಲಿದ್ದ ಅಮ್ಮನಿಗೆ ಫೋನ್ ನೀಡಿದೆ. ತಕ್ಷಣ ಅಮ್ಮ ಅಪ್ಪಾಜಿಗೆ “ಸ್ಪೀಕರ್ ಆನ್ ಇದೆ. ನೀವು ಏನೇನೊ ಮಾತಾಡ್ ಬಿಡಬೇಡಿ’ ಅಂದರು.
82ರ ಹರೆಯದ ಅಮ್ಮನನ್ನು 81ರ ಅಪ್ಪಾಜಿಯು ಮಾತನಾಡಿಸುವ ಬಗೆಯೇ ಹೀಗೆ ರಸಿಕತೆಯ ಈ ಸುರಛಾಪಕ್ಕೆ ಅಮ್ಮನೇ ಆಡುಂಬೊಲ. ಹೀಗಿರುವುದರಿಂದಲೇ ನಮ್ಮ ಮನೆಯಲ್ಲಿ ನಿತ್ಯಂ ಪೊಸತು ಎನುವಂತೆ ಅಮ್ಮಾ ಅಪ್ಪಾಜಿಯ ಸಲ್ಲಾಪ , ಮುದ್ದಣ-ಮನೋರಮೆಯರ ಸಲ್ಲಾಪಕ್ಕಿಂತ ಮಿಗಿಲಾಗಿ ಸಾಗಿ ಬಂದಿದೆ. 58 ವರ್ಷದ ಅವರ ದಾಂಪತ್ಯದ ಸೊಗಸು ಇನ್ನೂ ತಿದ್ದಿ ತೀಡಿದಷ್ಟು ಸುಗಂಧ ಸೂಸುತ್ತಲೇ ಘಮ ಘಮಿಸುತ್ತಿದೆ.
ಎಂದಿಗೂ ಕೋಪಗೊಳ್ಳದ ಅಸಾಧ್ಯ ತುಂಟೋಕ್ತಿಗಳಿಂದ ಅಮ್ಮನನ್ನು ಛೇಡಿಸುವ ಅಪ್ಪಾಜಿಯನ್ನು ಮಾತಿನಲ್ಲಿ ಜಯಿಸಲು ಅಸಾಧ್ಯ. ತಮ್ಮ ಶತ್ರುಗಳನ್ನು ಮಿತ್ರರಂತೆ ಅಪ್ಪಿಕೊಳ್ಳುವ ಅಪ್ಪಾಜಿಯಲ್ಲಿನ ಹಾಸ್ಯಪ್ರಜ್ಞೆ, ಜಾಣ್ಮೆ, ತಾಳ್ಮೆ, ಜನರ ಬಗೆಗಿನ ಒಲ್ಮೆ ಇದನ್ನು ನಾನು ಇನ್ಯಾರಲ್ಲೂ ಕಂಡಿಲ್ಲ.
ಒಬ್ಬ ಉತ್ತಮ ವಿದ್ಯಾರ್ಥಿ ಉತ್ತಮ ವಾಗ್ಮಿಯೂ ಆಗಬಲ್ಲನೆಂದರೆ ತುಸು ಕಷ್ಟವೇ. ಆದರೆ, ಅಪ್ಪಾಜಿ ಒಬ್ಬ ಒರೇಷಿಯಸ್ ಓದುಗಾರ. ಅಸಾಧ್ಯ ಜ್ಞಾಪಕ ಶಕ್ತಿಯುಳ್ಳ ಅಪ್ಪಾಜಿ ಅನೇಕ ಕಾವ್ಯಗಳನ್ನು ಕಂಠಸ್ಥ ಮಾಡಿಕೊಂಡಿ¨ªಾರೆ. ಅವುಗಳನ್ನು ತಮ್ಮ ವಾಗ್ಝರಿಯಲ್ಲಿ ಎಲ್ಲಿ ಬೇಕೋ ಅಲ್ಲಿ, ಎಷ್ಟು ಬೇಕೋ ಅಷ್ಟು ಬಳಸಿಕೊಳ್ಳುವ ಜಾಣ್ಮೆ ಅಪ್ಪಾಜಿಯಲ್ಲಿದೆ. ಎರಡು ನಿಮಿಷದ ಭಾಷಣವನ್ನು ಎಷ್ಟು ಅದ್ಭುತಗೊಳಿಸಬಲ್ಲರೋ ಅಷ್ಟೇ ಬೆರಗನ್ನು ತಮ್ಮ ಎರಡು ಗಂಟೆಯ ಭಾಷಣದುದ್ದಕ್ಕೂ ಕಾಪಿಡುವ ಒಬ್ಬ ಅದ್ಭುತ ವಾಗ³ಟು.
ಪಂಪನ ಆದಿಪುರಾಣದಂತೆ ರತ್ನಾಕರವರ್ಣಿಯ ಭರತೇಶ ವೈಭವವನ್ನೂ ವರ್ಣರಂಜಿತವಾಗಿ ವರ್ಣಿಸ ಬಲ್ಲಂತೆ ಧಿ ಹರಿಹರ, ರಾಘವಾಂಕರನ್ನೂ, ಇಂದಿನ ವಿವೇಕಾನಂದರ ವಾಣಿಯನ್ನು ಅದ್ಭುತವಾಗಿ ಸಾಮಾನ್ಯರಿಗೆ ಮುಟ್ಟಿಸಬಲ್ಲ ವಾಕ್ಚತುರತೆ ಅಪ್ಪಾಜಿಗಿದೆ. ತುಂಬಿದ ಕಂಠದಿಂದ ಬರುವ ಅವರ ಪದಲಾಲಿತ್ಯ, ಒಂದಿನಿತೂ ತೊದಲದ, ನೆನಪು ಮಾಸದ ಆ ಅಸ್ಖಲಿತ ವಾಗ½ರಿಯು ವಿಶಾಲವಾದ ಗಂಗೆಯಂತೆ. ಅದು ಹರಿದು ಧುಮ್ಮಿಕ್ಕುವ ಚೆಲುವು ಕೇಳುಗನಿಗೆ ಜೋಗದ ಜಲಪಾತದ ಸೊಬಗಂತೆ ಕಂಡರೆ ಕೇಳುಗನಿಗೆ ಅಪ್ಪಾಜಿಯ ಮಾತು ಗಳು ಹಾವಿನ ಮುಂದೆ ಪುಂಗಿ ಊದುವಂತೆ ಕಂಡು ಬರುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳಿಗಂತೂ ಅಪ್ಪಾಜಿಯ ಭಾಷಣಗಳು ಹಾಡುಗಬ್ಬದಂತೆ ಕಿವಿಗೆ ಇಂಪನ್ನು, ಮನಕ್ಕೆ ತಂಪನ್ನೂ, ಜ್ಞಾನಕ್ಕೆ ಬೆಳಕನ್ನು ನೀಡಿ ತಣಿಸುತ್ತವೆ. ಅವರ ಪ್ರಾಂಜಲ ಚಿತ್ತ, ಅವರು ಕಾವ್ಯಶಕ್ತಿಯಿಂದ ಗ್ರಹಿಸಬಲ್ಲ ಒಳನೋಟಗಳು, ವಸ್ತುನಿಷ್ಠತೆೆ ಇವು ಒಬ್ಬ ದಾರ್ಶನಿಕನಿಗೆ ಇರಬಲ್ಲ ಒಳಹೊಳಹುಗಳು ತುಂಬಿದ ಕೊಡ ತುಳುಕದು ಎಂಬಂತೆ ಬದುಕುತ್ತಿರುವ ಇವರು ಗಳಿಸಿರುವ ಜನರ ಪ್ರೀತಿ ಸೀಮಾತೀತ.
ಕಾವೇರಿಯಿಂದಮಾ ಗೋದಾವರಿ ವರಮಿರ್ಪ ನಾಡದ ಕನ್ನಡದೊಳ್ ಮಾತ್ರವಲ್ಲದೇ ಹೊರನಾಡಲ್ಲೂ, ಹೊರಧಿದೇಶಗಳಲ್ಲೂ ಕನ್ನಡಿಗರಷ್ಟೇ ಅಲ್ಲದೇ ಕನ್ನಡೇತರರಿಂದಲೂ ವಿಶ್ವವಿಖ್ಯಾತ ವಿದ್ವಜ್ಜನರಿಂದಲೂ ಅಪ್ಪಾಜಿ ಗಳಿಸುವ ಜನಮನ್ನಣೆ ಅಸಾಧ್ಯ. ಈ ರೀತಿಯ ಪ್ರೀತಿಯಲ್ಲಿ ಮುಳುಗೇಳುವ ಅಪ್ಪಾಜಿ ಹಿಂದೆ ಅಮೆರಿಕಕ್ಕೆ ಹೋಗಿ¨ªಾಗ ಹೇಳಿದ್ದರು, “ನಾನು ಅಮೇರಿಕೆಯಲ್ಲಿ ಒಂದೇ ಒಂದು ಡಾಲರ್ ಸಹ ಖರ್ಚು ಮಾಡದೇ ಸುಮಾರು 2 ವರ್ಷಗಳವರೆಗೂ ಇಲ್ಲಿ ಇರಬಹುದು’ ಎಂದು. ಅವರು ಗಳಿಸಿರುವ ಪ್ರೀತಿ, ಮನ್ನಣೆಯನ್ನು ಗಮನಿಸಿದಾಗ ಇದು ಖಂಡಿತ ಉತ್ಪ್ರೇಕ್ಷೆೆ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇತ್ತೀಚೆಗಷ್ಟೇ ರಷ್ಯಾ, ಸ್ವೀಡನ್ ಹಾಗೂ ಗೆಂಟ್‌ಗಳಲ್ಲಿನ ಯೂನಿವರ್ಸಿಟಿಗಳಲ್ಲಿ ಅಪ್ಪಾಜಿ ಪತ್ರಿಕೆ ಪ್ರಸ್ತುತಪಡಿಸಿದ್ದರು. ತಮ್ಮ ಮೌಲಿಕ ಲೇಖನಗಳನ್ನು ಪ್ರಸ್ತುತಪಡಿಸಿದ ಘನವೆತ್ತ ವಿದ್ವಾಂಸರೆಲ್ಲ ತಮ್ಮ ಸಂದೇಹಗಳನ್ನು ಅಪ್ಪಾಜಿಯೊಡನೆ ಪರಿಹರಿಸಿಕೊಂಡರು. ಜೊತೆಗೆ ಅವರೆಲ್ಲಾ ಅಪ್ಪಾಜಿಯನ್ನು ಆಚಾರ್ಯ ಎಂದೇ ಸಂಬೋಧಿಸಿದ್ದು ಅಪ್ಪಾಜಿಯ ಜ್ಞಾನದ ಮಟ್ಟವನ್ನು ತೋರಿಸುತ್ತದೆ. ಇದನ್ನು ಕಣ್ಣಾರೆ ಕಾಣುವ ಸೌಭಾಗ್ಯ ನನಗೆ, ನನ್ನ ತಂಗಿಗೆ ಪ್ರಾಪ್ತವಾದುದು ನಮ್ಮಿಬ್ಬರ ಅಹೋಭಾಗ್ಯ. ಪ್ರಪಂಚವೇ ಪ್ರೀತಿಸುವ ಅಪ್ಪಾಜಿಯನ್ನು ಮನೆಯವರಾದ ನಾವೆಲ್ಲ ಪ್ರೀತಿಸದಿರಲು ಸಾಧ್ಯವೇ. ಅದರಲ್ಲೂ ಇಬ್ಬರು ಅಜ್ಜಿಯರ ಮಡಿಲಿನಿಂದ ನೇರವಾಗಿ ಅಪ್ಪಾಜಿಯ ಹೊಟ್ಟೆಯ ಮೇಲೆ ಮಲಗುತ್ತಾ ಅಪ್ಪಾಜಿಯ ಎದೆ ಬಡಿತವನ್ನೇ ಲಾಲಿ ಹಾಡಾಗಿಸಿಕೊಂಡು ಬೆಳೆದ ನನ್ನನಂತು ಕೇಳುವುದೇ ಬೇಡ.
ನಮ್ಮ ಮನೆಯಲ್ಲಿ ತಿಂಗಳಲ್ಲಿ ಒಮ್ಮೆಯಾದರೂ ಹಬ್ಬದೂಟ ಹಾಗೂ ಅಪ್ಪಾಜಿಯ ಸಹೋದ್ಯೋಗಿಗಳ ಮಿತ್ರರು ಮನೆಗೆ ಬರುವುದು ಇದ್ದೇ ಇತ್ತು. ಆಗೆಲ್ಲಾ ನನ್ನ ಅಣ್ಣ, ತಂಗಿ ಹಾಗೂ ನನ್ನನ್ನು ಚಂದ್ರಶೇಖರ ಕಂಬಾರ ಮಾವ ಹಾಗೂ ಲಕ್ಷ್ಮಿನಾರಾಯಣ ಭಟ್ ಮಾವ ಕೇಳುತ್ತಿದ್ದರು, “ನಿಮಗೆಲ್ಲಾ ಅಮ್ಮಾ ಇಷ್ಟಾನೋ ಅಪ್ಪಾನೋ’ ಎಂದು. ಅತ್ಯಂತ ವಿನಯದಿಂದ ನನ್ನ ಅಣ್ಣ ಹಾಗೂ ತಂಗಿ ಇಬ್ಬರೂ, “ಇಬ್ಬರೂ ಇಷ್ಟ’ ಎಂದೇ ಹೇಳುತ್ತಿದ್ದರು. ಆದರೆ ನನ್ನ ಉತ್ತರ ಮಾತ್ರ ಇಂಥ ಯಾವುದೇ ವಿನಯವಂತಿಕೆ ಇಲ್ಲದೆ ಒಂದಿನಿತು ಡಿಪ್ಲೊಮೆಸಿ ಇಲ್ಲದೆ ಸೀದಾ ಸಾದಾ “ನನಗೆ ತುಂಬಾ ಇಷ್ಟ ಅಪ್ಪಾಜಿ’ ಎಂದೇ ಇರುತ್ತಿತ್ತು. ಚಿಕ್ಕವಳಿ¨ªಾಗಲೂ ಏನೇ ಆದರೂ ಅಪ್ಪಾಜಿ ಎಂದೇ ಅಳುತ್ತಿ¨ªೆ. ಅಮ್ಮಾ ಎಂದು ಅತ್ತ ನೆನಪಿಲ್ಲ. ಅಪ್ಪಾಜಿಯ ಎದೆಬಡಿತಕ್ಕೂ ನನ್ನ ಎದೆಬಡಿತಕ್ಕೂ ಎಂತಹ ಅವಿನಾಭಾವ ಸಂಬಂಧವೆಂದರೆ ಒಮ್ಮೆ ಕಾಫಿ ಪುಡಿ ತರಲು ಮÇÉೇಶ್ವರಂಗೆ ಹೋಗಿದ್ದ ನನಗೆ ಅಪಘಾತವಾಗಿತ್ತು. ಅತ್ತ ಪ್ರಜ್ಞೆ ಇಲ್ಲದೆ ನಾನುಧಿ ಇತ್ತ ನನಗೇನೋ ಆಗಿದೆ ಎಂದರಿತ ಪ್ರಜ್ಞೆಯಿಂದ ರಾಜಾಜಿನಗರದ ಮನೆಯಲ್ಲಿ ಒ¨ªಾಡಿದ ಅಪ್ಪಾಜಿ. ಯಾರೇನೇ ಹೇಳಿದರೂ ಅಪ್ಪಾಜಿಯ ದುಗುಡ ನಿಂತಿರಲಿಲ್ಲ. ತಲೆಯಿಂದ ರಕ್ತ ಸುರಿಯುತ್ತಿದ್ದ ನನ್ನನ್ನು ಹೊತ್ತುಕೊಂಡೇ ಆಸ್ಪತ್ರೆಗೆ ಒಯ್ದವರು ಅಪ್ಪಾಜಿ. ಈ ನಮ್ಮ ನಾಡಿಮಿಡಿತ ಇನ್ನೂ ನಿಂತಿಲ್ಲ. ಇಂದಿಗೂ ನನಗೇನೇ ಆದರೂ ಅದು ಅಪ್ಪಾಜಿಗೆ ತಿಳಿಯುತ್ತದೆ.
ಏಕಸಂಧಿಗ್ರಾಹಿಧಿಸೂಕ್ಷ್ಮಗ್ರಾಹಿ
ಅಸಾಧ್ಯ ತುಂಟತನದಿಂದ ಮೆಟ್ಟಿಲುಗಳನ್ನು ಜಿಗಿ ಜಿಗಿಯುವ ಅಪ್ಪಾಜಿಯು ಈ ಭುವಿಗೂ ಜಿಗಿಯುತ್ತಲೇ ಬಂದವರು! “ಅಮ್ಮಾ ನನ್ನ ತುಂಟತನಕ್ಕೆ ನಿನ್ನೊಡಲು ಸಾಲದು’ ಎನ್ನುತ್ತಾ ಅಕ್ಟೋಬರ್ 7ರಂದು 1935ರಲ್ಲಿ ನನ್ನ ಅಜ್ಜಿಯ ಒಡಲಿನಿಂದ ಮಡಿಲಿಗೆ 7ನೇ ತಿಂಗಳೇ ಜಿಗಿದವರು ನನ್ನ ಅಪ್ಪಾಜಿ. ಅಪ್ಪಾಜಿಗಿಂತ ಮೊದಲು ಹುಟ್ಟಿದ ಮಕ್ಕಳೆÇÉಾ ಅಲ್ಪಾಯುಗಳಾದದ್ದರಿಂದ ಅಜ್ಜಿ ಪದ್ಮಾವತಮ್ಮನವರು ತಂದೆ ಹುಟ್ಟುವ ಮೊದಲೇ ನಾಗರ ಪ್ರತಿಷ್ಠೆ ಮಾಡಿಸಿ ಸುತ್ತಮುತ್ತಲ 9 ಹಳ್ಳಿಗಳಿಗೆ ಹಬ್ಬದೂಟ ಹಾಕಿಸಿದ್ದವರು. ನನ್ನ ಅಜ್ಜ ಶಾನುಭೋಗ ಪದ್ಮನಾಭಯ್ಯನವರು ಸುತ್ತಮುತ್ತಲ 8 ಹಳ್ಳಿಗಳ ವ್ಯಾಜ್ಯಗಳನ್ನು ತಮ್ಮ ಜಾಣ್ಮೆಯಿಂದ ಪರಿಹರಿಸುತ್ತಿದ್ದರು. ನನ್ನ ಅಜ್ಜನ ಮನೆಯ ಮುಂದಿನ ಚಾವಡಿಯಲ್ಲಿ ನಿತ್ಯ ಸಂಜೆ ರಾಮಾಯಣ, ರತ್ನಾಕರವರ್ಣಿಯ ಭರತೇಶ ವೈಭವ ಇತ್ಯಾದಿಗಳ ಪಾರಾಯಣ ನಡೆಯುತ್ತಲೇ ಇತ್ತು. ಇದನ್ನು ನಮ್ಮ ಅಜ್ಜಿಯ ಮಡಿಲಲ್ಲಿ ಕುಳಿತು ತಮ್ಮ ತುಂಟ ಕಿವಿಗಳಿಂದ ಆಲಿಸುತ್ತಿದ್ದ ಏಕಸಂಧಿಗ್ರಾಹಿಯಾದ ನಮ್ಮ ಅಪ್ಪಾಜಿಗೆ ಸಾಹಿತ್ಯದ ಮೇಲೆ ಒಲವು ಮೂಡಿದ್ದು ಸಹಜವೇ ಆಗಿತು.
ಇಂದಿನಂತಲ್ಲದೇ ಅಂದಿನ ಬಿಎ ಆನರ್ಸ್ ಎರಡೇ ವರ್ಷಕ್ಕೆ ಮುಗಿಯುತ್ತಿತ್ತು ಹಾಗೂ ಜಾಣರೆನಿಸಿದ ವಿದ್ಯಾರ್ಥಿಗಳು ಮಾತ್ರ ಬಿಎ ಆನರ್ಸ್ ತೆಗೆದುಕೊಳ್ಳುವ ಸಾಹಸ ಮಾಡುತ್ತಿದ್ದರು. ಬಿಎ ಆನರ್ಸ್‌ನಲ್ಲಿ ರ್‍ಯಾಂಕ್ ಗಳಿಸಿರುವ ಅಪ್ಪಾಜಿಯು ತಮ್ಮ ತುಂಟತನದ ನಡುವೆ ಸೂಕ್ಷ್ಮ ಗ್ರಾಹಿಯಾಗಿ ರುವುದು, ಅದರೊಡನೆ ಅಪಾರವಾದ ತಾಳ್ಮೆ ಯನ್ನು ಮೈಗೂಡಿಸಿಕೊಂ ಡಿರುವುದು, ಅವರ ಅಗಾಧ ಓದಿಗೆ ಬೇಕಾದ ಏಕಾಗ್ರತೆಯನ್ನು ಹೊಂದಿರುವುದು, ಒಂದಕ್ಕೊಂದು ವೈರುಧ್ಯದಿಂದ ಕೂಡಿದ್ದರೂ ಒಂದನ್ನೊಂದು ಬೆಸೆವ ಕೊಂಡಿಗಳಾಗಿದೆ. ಆದ್ದರಿಂದಲೇ ಅವರಿಗೆ ಕರಗತವಾಗಿರುವ ಕಾವ್ಯಗಳು ಅವರ ಅಂಗೈಮೇಲಿನ ನೆಲ್ಲಿಕಾಯಿಗಳಾಗಿವೆ. ಯಾರಾದರೂ ಏನೋ ಕಂಠಪಾಠ ಮಾಡಿಕೊಂಡು ಬಂದು ಅಪ್ಪಾಜಿಯ ಮುಂದೆ ಕಾವ್ಯದ ಕೆಲವು ಸಾಲುಗಳನ್ನು ಉದ್ಧರಿಸಿದಾಗ ಅದಕ್ಕೆ ಇಂಬುಕೊಡುವಂತಹ ಇನ್ನಿತರ ಕಾವ್ಯದ ಭಾಗಗಳನ್ನು ಆ ಕ್ಷಣದಲ್ಲಿ ಉದ್ಧರಿಸಿ ಅವರನ್ನು ಚಕಿತಗೊಳಿಸುವ, ಅವರ ಜ್ಞಾನದ ಹರಹು ಇನ್ನಷ್ಟು ವಿಸ್ತರಿಸುವ ಅಪ್ಪಾಜಿಯು ಆಗ ನನ್ನ ಕಣ್ಣಿಗೆ ಹಿಂದಿನ ಕಾಲದ ಋಷಿ ಮುನಿಗಳಂತೆ ಗೋಚರಿಸುತ್ತಾರೆ. ಅವರೊಂದು ನೆನಪಿನ ಕಣಜ , ಅವರೊಂದು ಜ್ಞಾನದ ಭಂಡಾರ, ಜ್ಞಾನದ ತವನಿಧಿ, ನಡೆದಾಡುವ ಭಾಷಾಕೋಶ, ಆದ್ದರಿಂದಲೇ ಅವರು ಓಜ. ಅದಕ್ಕಾಗಿಯೇ ಅವರಾಗಿ¨ªಾರೆ ನಾಡೋಜ. ಈ 81ರ ಹರೆಯದಲ್ಲೂ 18ರ ಯುವಕರನ್ನು ನಾಚಿಸುವಂತೆ ಜೀವನೋತ್ಸಾಹದಿಂದ ತುಡಿಯುವ ಅಪ್ಪಾಜಿ ಮಾಡಿರುವ ಸಾಹಿತ್ಯ ಕೃಷಿಯೊಡನೆ ಇನ್ನಿತರ ಕೆಲವಾದರೂ ಕೆಲಸಗಳನ್ನು ನೆನಪಿಸಿಕೊಳ್ಳದೆ ಇರಲಾಗದು. ಚೆನ್ನೈನಲ್ಲಿ ಸರ್ವಜ್ಞನ ಮೂರ್ತಿಯನ್ನು ಸ್ಥಾಪಿಸಿದ್ದು, ದಿವಂಗತ ನಿರಂಜನರಿಗೆ ಕನ್ನಡ ವಿ. ವಿ.ಯಿಂದ ಗೌರವ ಡಾಕ್ಟರೇಟ್ ಪದವಿ ಕೊಡುವಂತೆ ಮನವೊಲಿಸಿದ್ದು, ಕನ್ನಡ ವಿಶ್ವವಿದ್ಯಾನಿಲಯದಿಂದ ಸಮಗ್ರ ಜೈನ ಸಾಹಿತ್ಯ ಸಂಪುಟಗಳು ಹೊರಬರಲು ಸರ್ಕಾರದಿಂದ ಆರ್ಥಿಕ ನೆರವು ಕೊಡಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ¨ªಾಗ ನೂರಾರು ಯುವಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ, ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರಿಂದ ಇಂದು ಅವರಲ್ಲಿ ಅನೇಕರು ಖ್ಯಾತ ಬರಹಗಾರ ರಾಗಿ ರೂಪುಗೊಂಡಿ¨ªಾರೆ. ಅವರ ಇಂತಹ ತೆರೆಯ ಹಿಂದಿನ ರಚನಾತ್ಮಕ ಕೊಡುಗೆಗಳು ಅನನ್ಯ ಹಾಗೂ ಅನರ್ಘÂ. ಈ ರೀತಿ ಸಂಸಾರ, ಸಮಾಜ, ಸಂಸ್ಥೆಯ ಆಡಳಿತ ಹೀಗೆ ಎಲ್ಲವನ್ನೂ ಸಮರಸವಾಗಿ ತೂಗಿಸಿಕೊಂಡು ಹೋಗುವ ಜಾಣ್ಮೆ ಹಾಗೂ ಕ್ರೀಡಾ ಮನೋಭಾವ ನಮ್ಮ ಅಪ್ಪಾಜಿಯದು. ಕ್ರೀಡಾಮನೋಭಾವ ನಮ್ಮ ಅಪ್ಪಾಜಿಯಲ್ಲಿ ಇರಬೇಕಾದ್ದೇ. ಏಕೆಂದರೆ, ಕಾಲೇಜಿನ ದಿನಗಳಲ್ಲಿ ಟೆನ್ನಿಸ್‌ನಲ್ಲಿ ಕಾಲೇಜಿನ ಚಾಂಪಿಯನ್ ಆಗಿದ್ದವರು ಅಪ್ಪಾಜಿ. ಅಷ್ಟೇ ಅಲ್ಲ ಶೇಕ್ಸ್‌ಪಿಯರ್‌ನ ನಾಟಕಗಳಲ್ಲಿ ಅದರಲ್ಲೂ ತಮ್ಮ ಅಸ್ಖಲಿತ ವಾಗjರಿಯಿಂದ ಬ್ರೂಟಸ್‌ನ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿ ನನ್ನ ಅಮ್ಮನ ಹೃದಯವನ್ನು ಅಪಹರಿಸಿದವರು.
ಅಪ್ಪಾಜಿಯು ಬರೆದಿರುವ ಪುಸ್ತಕಗಳು ತಮಗೆಲ್ಲರಿಗೂ ಪರಿಚಿತವೇ. ದ್ರಾವಿಡ ಭಾಷಾವಿಜ್ಞಾನಿಯಾದ ಅಪ್ಪಾಜಿಯು ಕನ್ನಡ, ತೆಲುಗು, ಹಿಂದಿ ಹಾಗೂ ಆಂಗ್ಲ ಭಾಷೆಗಳಲ್ಲಿ ಲೀಲಾಜಾಲವಾಗಿ ಅತ್ಯಂತ ಮನೋಹರವಾಗಿ ಮಾತನಾಡುವ ಸೊಗಸನ್ನು ಆಲಿಸಿದವರಷ್ಟೇ ಬಲ್ಲರು. ಈಗ ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪಾಜಿಯ ಕಿರೀಟಕ್ಕೆ ಕಲಶಪ್ರಾಯವಾಗಿ ಸಂದಿರುವ ಪಂಪ ಪ್ರಶಸ್ತಿಯು ನಮಗೆಲ್ಲರಿಗೂ ಹೆಮ್ಮೆಯನ್ನೂ ಹೇಳಲಾರದ ಸಂತಸವನ್ನೂ ತಂದಿದೆ.
2011 ರಲ್ಲಿ ಬಿಡುಗಡೆಯಾದ ನನ್ನ ಕವನ ಸಂಕಲನದಲ್ಲಿ ಅಪ್ಪನ ಬಗ್ಗೆ ಬರೆದಿರುವ ಕವನದಲ್ಲಿ “ಪಂಪನಿಂದ ಹಂಪನವರೆಗೆ ಕನ್ನಡ ಕಾವ್ಯದ ಕಾಲಾವಧಿ ಇದೆ’ ಎಂದೇ ಬರೆದಿ¨ªೆ. ಅದು ಈಗ ನನಸಾಗಿರುವುದು ನನಗೆ ಇನ್ನಿಲ್ಲದ ಸಂತಸವನ್ನು ತಂದಿದೆ.
– ಎಚ್. ಎನ್. ರಾಜ್ಯಶ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragod ಅಪರಾಧ ವಾರ್ತೆ; ಆನೆಯ ತುಳಿತಕ್ಕೆ ಮಾವುತ ಸಹಿತ ಇಬ್ಬರ ಸಾವು
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Kasaragod: ವಂದೇ ಭಾರತ್‌ಗೆ ಕಲ್ಲೆಸೆತ, ಹಳಿಯಲ್ಲಿ ಕಲ್ಲಿರಿಸಿದ ಇಬ್ಬರ ಬಂಧನ
Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.