ಪಂಚತಂತ್ರ: ಎರಡು ತಲೆಯ ಹಕ್ಕಿ
Team Udayavani, Jan 19, 2020, 5:59 AM IST
ಹಕ್ಕಿ ಒಂದು ರೂಪಕ, ಕಾವ್ಯ-ಶಾಸ್ತ್ರಗಳೆರಡರಲ್ಲಿಯೂ. ಮಾಂಡುಕ್ಯ ಉಪನಿಷತ್ತಿನಲ್ಲಿ ಎರಡು ಹಕ್ಕಿಗಳ ಕತೆ ಬರುತ್ತದೆ. ಒಂದು ಹಣ್ಣನ್ನು ತಿನ್ನುವ ಹಕ್ಕಿ, ಇನ್ನೊಂದು ಸುಮ್ಮನೆ ಅದನ್ನು ನೋಡುವ ಹಕ್ಕಿ. ದೇಹ-ಆತ್ಮಗಳ ಸಂಬಂಧಗಳ ಕುರಿತ ರೂಪಕಾತ್ಮಕ ಚಿತ್ರವಿದು. ಇದರ ಬಗ್ಗೆ ರವೀಂದ್ರನಾಥ ಠಾಕೂರ್, ಅರವಿಂದ ಘೋಷ್ ಮೊದಲಾದ ತಣ್ತೀಜ್ಞಾನಿಗಳು ವಿವಿಧ ಬಗೆಯ ವಿವರಣೆ ಕೊಟ್ಟಿದ್ದಾರೆ.
ಉಪನಿಷತ್ತಿನ ಕತೆಗೆ ಕಡಿಮೆ ಇಲ್ಲದಂತೆ ಪಂಚತಂತ್ರದಲ್ಲೊಂದು ಕತೆ ಬರುತ್ತದೆ. ಅದು ಎರಡು ತಲೆಯ ಹಕ್ಕಿಯ ಒಂದು ಕತೆ. ಎರಡು ತಲೆಯ ಹಕ್ಕಿಯೊಂದು ಮರದ ಮೇಲೆ ಕುಳಿತಿರುವಾಗ ನೀರಿನ ಮೇಲೆ ಹಣ್ಣೊಂದು ತೇಲುತ್ತಿರುವುದು ಕಾಣಿಸಿತು. ಹಣ್ಣೊಂದು ಅನಾಯಾಸವಾಗಿ ಸಿಗುವಾಗ ತಿನ್ನಬೇಕೆಂದು ಅನಿಸುವುದು ನಿಸರ್ಗ ಸಹಜ ಅಲ್ಲವೇ.
ಹಕ್ಕಿಯು ಹಾರಿ ಅದನ್ನು ಒಂದು ತಲೆಯ ಕೊಕ್ಕಿನಲ್ಲಿ ಕಚ್ಚಿಕೊಂಡಿತು. ಮರದಮೇಲೆ ಕುಳಿತು ಕೊಕ್ಕಿನಲ್ಲಿದ್ದ ಹಣ್ಣನ್ನು ತಿನ್ನಲಾರಂಭಿಸಿತು. ಆಗ ಎರಡನೆಯ ತಲೆಗೂ ಹಣ್ಣು ತಿನ್ನಬೇಕು ಎಂದು ಆಸೆಯಾಯಿತು. ತನಗೂ ಹಣ್ಣು ಕೊಡುವಂತೆ ಕೇಳಿತು. ಆಗ ಮೊದಲನೆಯ ತಲೆ, “”ಇದನ್ನು ನಾನು ಮೊದಲು ನೋಡಿದ್ದು. ಹಾಗಾಗಿ, ನಾನೇ ತಿನ್ನಲು ಯೋಗ್ಯ. ನಾನು ತಿಂದರೇನು, ನೀನು ತಿಂದರೇನು, ಸೇರುವುದು ಒಂದೇ ಹೊಟ್ಟೆಗೆ ತಾನೆ!” ಎಂದಿತು.
ಎರಡನೆಯ ತಲೆಗೆ ಮಾತು ಕಟ್ಟಿತು. ಬಾಯಿ ಚಪಲವನ್ನು ನಿಯಂತ್ರಿಸಿಕೊಂಡು ಸುಮ್ಮನಾಯಿತು.
ಮತ್ತೂಂದು ಸಲ ಇನ್ನೊಂದು ಹಣ್ಣು ನೀರಿನಲ್ಲಿ ತೇಲುತ್ತಿರುವುದು ಕಾಣಿಸಿತು. ಹಕ್ಕಿ ಅದನ್ನು ಎರಡನೆಯ ತಲೆಯಲ್ಲಿ ಎತ್ತಿಕೊಂಡು ಬಂದಿತು. ಆದರೆ, ಅದು ವಿಷಕಾರಿಯಾದ ಹಣ್ಣು. ಅದನ್ನು ಕುಕ್ಕಿ ತಿನ್ನುತ್ತಿರುವ ಎರಡನೆಯ ತಲೆಯನ್ನು ತಡೆದು ಮೊದಲನೆಯ ತಲೆ ಹೇಳಿತು, “”ಅದು ವಿಷಕಾರಿಯಾದ ಹಣ್ಣು. ತಿನ್ನಬೇಡ”
“”ಇದನ್ನು ಮೊದಲು ನೋಡಿದ್ದು ನಾನು. ಹಾಗಾಗಿ, ತಿನ್ನುವುದು ನಾನೇ. ತಿನ್ನಬಾರದು ಎನ್ನಲು ನೀನ್ಯಾರು?”
“”ಅಲ್ಲ… ಅದು ಸೇರುವುದು ಒಂದೇ ಹೊಟ್ಟೆಗಲ್ಲವೆ? ವಿಷ ಏರಿ ಸತ್ತರೆ?”
“”ಅದು ನನಗೆ ಗೊತ್ತಿಲ್ಲ. ನಾನು ತಿನ್ನುವುದು ತಿನ್ನುವುದೇ. ಈ ಹಿಂದೆ ಹಣ್ಣು ಕೊಡದೆ ನೀನೊಬ್ಬನೇ ತಿಂದಿದ್ದಿ. ಈಗ ನಾನು ತಿನ್ನುವಾಗ ನೀನು ಆಕ್ಷೇಪಿಸಬಾರದು” ಎಂದಿತು ಎರಡನೆಯ ತಲೆ.
“”ಬೇಡ, ಹಣ್ಣನ್ನು ತಿನ್ನಬೇಡ. ನೀನೊಬ್ಬನು ತಿಂದರೂ ನಾವಿಬ್ಬರೂ ಸಾಯುತ್ತೇವೆ” ಎಂದಿತು ಮೊದಲನೆಯ ತಲೆ.
ಆದರೆ ಹಣ್ಣು ತಿನ್ನುವ ಉತ್ಸಾಹದಲ್ಲಿ ಎರಡನೆಯ ತಲೆಗೆ ಯೋಚಿಸುವ ವ್ಯವಧಾನವೇ ಉಳಿದಿರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಮೊದಲನೆಯ ತಲೆ ತನಗೆ ಕೊಡದೇ ಹಣ್ಣು ತಿಂದಿತ್ತು.
“”ನೀನು ಆವತ್ತು ಮಾಡಿದ ತಪ್ಪಿಗೆ ಇವತ್ತು ಶಿಕ್ಷೆ ಅನುಭವಿಸಬೇಕು” ಎಂದದ್ದೇ ಎರಡನೆಯ ತಲೆ ಹಣ್ಣನ್ನು ಚಪ್ಪರಿಸಿಕೊಂಡು ತಿನ್ನಲು ಶುರು ಮಾಡಿತು.
ಹೊಟ್ಟೆಗೆ ಸೇರಿದ ಹಣ್ಣಿನಿಂದಾಗಿ ಹಕ್ಕಿಯ ದೇಹವಿಡೀ ವಿಷ ಆವರಿಸಿತು. ಕೆಟ್ಟ ವಿಚಾರಗಳಿಗೆ ಆ ತಲೆ, ಈ ತಲೆ ಎಂಬ ಭೇದವುಂಟೇ. ವಿಷವು ವ್ಯಾಪಿಸಲು ದೇಹದ ಆ ಭಾಗ ಈ ಭಾಗ ಎಂಬ ಭೇದವೂ ಇಲ್ಲ. ಹಕ್ಕಿಯೊಂದಿಗೆ ಎರಡೂ ತಲೆಗಳು ಸತ್ತು ಹೋದವು. ಕುಟುಂಬದ, ಸಮಾಜದ ಘಟಕಗಳು ಒಂದಕ್ಕೊಂದು ಪೂರಕವಾಗಿ ಇರಬೇಕೆಂಬುದನ್ನು ಸಾರುವ ಕತೆಯಿದು. ಒಬ್ಬರು ಹೇಳುವ ವಿಚಾರವನ್ನು ಮತ್ತೂಬ್ಬರು ತಾಳ್ಮೆಯಿಂದ ಆಲಿಸುವುದೇ ಒಳಿತಿನ ಲಕ್ಷಣ.
ಕೃಷ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.