ಪಾರುಲ್ ಬಟರ್‌ಫ್ಲೈ ಕನಸು
Team Udayavani, Oct 7, 2018, 6:00 AM IST
ಪಾರುಲ್ ಯಾದವ್ ಅವರ ಸಿನೆಮಾ ಬಿಡುಗಡೆಯಾಗಿ ಎರಡು ವರ್ಷ ಕಳೆದಿದೆ. ಜೆಸ್ಸಿ ನಂತರ ಪಾರುಲ್ ನಟನೆಯ ಯಾವ ಕನ್ನಡ ಚಿತ್ರವೂ ಬಿಡುಗಡೆಯಾಗಿರಲಲ್ಲ. ಈಗ ಪಾರುಲ್ ದೊಡ್ಡ ಮಟ್ಟದಲ್ಲಿ ಕನ್ನಡಕ್ಕೆ ಬರಲು ಸಿದ್ಧರಾಗಿದ್ದಾರೆ. ಅದು ಬಟರ್‌ಫ್ಲೈ ಮೂಲಕ. ಪಾರುಲ್ ಯಾದವ್ ಬಟರ್‌ಫ್ಲೈ ಎಂಬ ಸಿನೆಮಾ ಒಪ್ಪಿಕೊಂಡಿರೋದು ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಹಿಂದಿಯಲ್ಲಿ ಯಶಸ್ಸು ಕಂಡ ಕ್ವೀನ್ ಚಿತ್ರದ ರೀಮೇಕ್ ಇದಾಗಿದ್ದು, ಕಂಗನಾ ಮಾಡಿದ ಪಾತ್ರವನ್ನು ಪಾರುಲ್ ಮಾಡುತ್ತಿದ್ದಾರೆ. ಬಟರ್‌ಫ್ಲೈ ಚಿತ್ರದ ಮೇಲೆ ಪಾರುಲ್‌ಗೆ ಸಿಕ್ಕಾಪಟ್ಟೆ ಪ್ರೀತಿ. ಅದಕ್ಕೆ ಎರಡು ಕಾರಣ. ಮೊದಲನೆಯದಾಗಿ ತುಂಬಾ ಭಿನ್ನವಾದ ಪಾತ್ರ ಪಾರುಲ್‌ಗೆ ಸಿಕ್ಕಿರುವುದು ಒಂದಾದರೆ, ಪಾರುಲ್ ಈ ಚಿತ್ರದ ಸಹ ನಿರ್ಮಾಪಕಿ ಕೂಡ. ಈ ಎಲ್ಲಾ ಕಾರಣಗಳಿಂದ ಪಾರುಲ್ ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಬಟರ್‌ಫ್ಲೈಗೆ ಸಮಯ ನೀಡಿದ್ದಾರೆ.
ಎಲ್ಲಾ ಓಕೆ, ಪಾರುಲ್ ಬಟರ್‌ಫ್ಲೈ ಬಿಟ್ಟು ಬೇರೆ ಯಾವ ಸಿನೆಮಾವೂ ಯಾಕೆ ಒಪ್ಪಿಕೊಳ್ಳಲಿಲ್ಲ ಎಂದು ನೀವು ಕೇಳಬಹುದು. ಪಾರುಲ್ ಈ ಸಿನೆಮಾ ಒಪ್ಪಿಕೊಳ್ಳುವಾಗಲೇ ಒಂದು ವಿಚಾರದಲ್ಲಿ ಪಕ್ಕಾ ಆಗಿದ್ದರಂತೆ. ಅದು ಬೇರೆ ಸಿನೆಮಾಗಳಿಗೆ ತೊಂದರೆ ಆಗಬಾರದೆಂದು. “ನಾನು ಯಾವುದಾದರೂ ಬೇರೆ ಸಿನೆಮಾವನ್ನು ಒಪ್ಪಿಕೊಂಡರೆ ಅವರು ಕೇಳಿದಾಗ ಡೇಟ್ಸ್ ಕೊಡಬೇಕು, ಶೂಟಿಂಗ್‌ಗೆ ಹೋಗಬೇಕು. ಇಲ್ಲದಿದ್ದರೆ ಅವರಿಗೆ ತೊಂದರೆಯಾಗುತ್ತದೆ. ನನ್ನಿಂದ ಯಾರೂ ತೊಂದರೆ ಅನುಭವಿಸೋದು ನನಗೆ ಇಷ್ಟವಿಲ್ಲ. ಆ ಕಾರಣದಿಂದಲೇ ಬಟರ್‌ಫ್ಲೈ ಮುಗಿಯುವವರೆಗೆ ಯಾವ ಚಿತ್ರವನ್ನು ಒಪ್ಪಿಕೊಳ್ಳಲಿಲ್ಲ’ ಎನ್ನುವುದು ಪಾರುಲ್ ಕೊಡುವ ಸ್ಪಷ್ಟನೆ.
ಬಟರ್‌ಫ್ಲೈ ಚಿತ್ರದಲ್ಲಿ ಪಾರುಲ್, ಪಾರ್ವತಿ ಎಂಬ ಪಾತ್ರ ಮಾಡಿದ್ದಾರೆ. ಗೋಕರ್ಣದ ಹುಡುಗಿಯಾಗಿ ಕಾಣಿಸಿಕೊಂಡಿರುವ ಪಾರುಲ್‌ಗೆ, ಈ ಚಿತ್ರ ಅದ್ಭುತ ಅನುಭವ ನೀಡಿತಂತೆ. ಇವತ್ತಿನ ಕಾಲದ ಎಲ್ಲಾ ಹೆಣ್ಣುಮಕ್ಕಳ ಪ್ರತೀಕವಾಗಿ ಪಾರ್ವತಿ ಪಾತ್ರ ಕಾಣಿಸಿಕೊಳ್ಳಲಿದೆ ಎಂಬುದು ಪಾರುಲ್ ಮಾತು. ಆರಂಭದಲ್ಲಿ ಈ ಚಿತ್ರವನ್ನು ಕನ್ನಡಕ್ಕೆ ತರುವಾಗ ತಾನು ನಾಯಕಿಯಾಗುತ್ತೇನೆಂಬುದು ಪಾರುಲ್‌ಗೆ ಗೊತ್ತಿರಲಿಲ್ಲವಂತೆ. ಆದರೆ, ನಿರ್ದೇಶಕ ರಮೇಶ್ ಅರವಿಂದ್ ಹಾಗೂ ತಂಡ ಹೇಳಿದ ಮೇಲೆ ನಟಿಸಲು ಒಪ್ಪಿದರಂತೆ ಪಾರುಲ್. ಸದ್ಯ ಪಾರುಲ್ ಬಟರ್‌ಫ್ಲೈ ಧ್ಯಾನದಲ್ಲಿದ್ದಾರೆ. ಇದೇ ತಿಂಗಳು ಚಿತ್ರದ ಪೋಸ್ಟರ್ ಬಿಡುಗಡೆಯಾಗಲಿದೆ. ಆ ನಂತರ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.