ಪಾರ್ವತಿ ಅಮ್ಮ
Team Udayavani, Jun 11, 2017, 4:36 PM IST
ರಾಜ್ ಚಿತ್ರಗಳೆಲ್ಲವೂ ಹಿಟ್ ಆದರೂ ಕೆಲವು ನಿರ್ಮಾಪಕರು “ಚಿತ್ರದಿಂದ ನಷ್ಟ ಉಂಟಾಯಿತು’ ಎಂದೇ ಯಾವಾಗಲೂ ರಾಗ ಎಳೆಯುತ್ತಿ¨ªರಂತೆ. ಇದನ್ನೆಲ್ಲ ಗಮನಿಸಿದ ಪಾರ್ವತಮ್ಮ, “ನಷ್ಟವಾದರೆ ಕಾಲ್‌ಶೀಟ್ ಏಕೆ ಕೇಳುತ್ತೀರಾ?’ ಎಂದು ಪ್ರಶ್ನಿಸಲಾರಂಭಿಸಿದರು. ಕೊನೆಗೆ ಧೈರ್ಯ ಮಾಡಿ ರಾಜ್ ಅವರ ಚಿತ್ರಗಳನ್ನು ತಾವೇ ನಿರ್ಮಿಸಿ ಹಂಚಿಕೆ ಮಾಡಲು ಯೋಚಿಸಿದರು. ಇದರ ಮೊದಲ ±Åಯತ್ನವೇ 1972ರಲ್ಲಿ ಕಟ್ಟಿದ ಚಂದ್ರಿಕಾ ಮೂವೀಸ್. ಅದರಲ್ಲಿ ಪಾರ್ವತಮ್ಮ, ಕೆ.ಹೆಚ್. ನಾಗರಾಜ್, ವಿಕÅಂ ಶ್ರೀನಿವಾಸ್, ಕೆ.ಸಿ.ಎನ್.ಚಂದ್ರು, ದೊರೈ-ಭಗವಾನ್, ರಾಮನಾಥನ್, ಎಲ್ಲ ಸೇರಿ ಹುಬ್ಬಳ್ಳಿಯಲ್ಲಿ ಡಿಸ್ಟ್ರಿಬ್ಯೂಷನ್ ಆಫೀಸ್ ತೆರೆದರು.
ಕಳೆದ ಸಾಪ್ತಾಹಿಕದಿಂದ ಮುಂದುವರಿದುದು…
ಸಿದ್ಧಾರೂಢಮಠದ ಗೋವಿಂದ ಸ್ವಾಮಿಗಳು ಬಂದು ಪೂಜೆ ಮಾಡಿ ಆಶೀರ್ವದಿಸಿದರು. ಅಲ್ಲಿಯವರೆಗೂ ಹುಬ್ಬಳ್ಳಿ ಭಾಗ ಹೇಗಿದೆ ಅಂತ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಆಗ ಕೆ. ವಿ. ರಾಜು ಅವರು ಉತ್ತರ ಕರ್ನಾಟಕದ ಪ್ರಬಲ ಹಂಚಿಕೆದಾರರಾಗಿದ್ದರು. ಬೇರೆಯವರ ಸಿನಿಮಾಗೆ ಐವತ್ತು-ಅರವತ್ತು ಸಾವಿರ ಕೊಟ್ಟು ಪ್ರಿಂಟ್ ತೆಗೆದುಕೊಂಡು 7-8 ವರ್ಷ ಬರೆಸಿಕೊಂಡು ಬಿಡುತ್ತಿದ್ದರು. ರಾಜ್‌ಕುಮಾರ್ ಅವರ ಪಿಕ್ಚರಿಗೆ ಮಾñÅ ಒಂದು-ಒಂದೂಕಾಲು ಲಕ್ಷ ಕೊಡುತ್ತ ಇದ್ದರು. ಆ ಬೆಲೆ ಕಡಿಮೆ ಅಂತ ಪಾರ್ವತಮ್ಮನವರಿಗೆ ಚೆನ್ನಾಗಿ ಗೊತ್ತಿತ್ತು. ಹುಬ್ಬಳ್ಳಿಯಲ್ಲೇ ಡಿಸ್ಟ್ರಿಬ್ಯೂಷನ್ ಆಫೀಸ್ ಪ್ರಾರಂಭಿಸಿದ ಮೇಲೆ ಆ ಬೆಲೆಗೆ ಪಿಕcರ್ ಕೊಡಲಿಲ್ಲ. ಆಗ ಅವರು ಎರಡು ಲಕ್ಷದವರೆಗೆ ಬಂದರು. ಪಾರ್ವತಮ್ಮ ಹಿಡಿದ ಪಟ್ಟು ಬಿಡಲಿಲ್ಲ. ತಾವೇ ಸಿನೆಮಾ ಬಿಡುಗಡೆ ಮಾಡುವುದಾಗಿ ಹೇಳಿದರು. ಆಗ ರಾಜ್ ಅವರು ಮಧ್ಯ±Åವೇಶ ಮಾಡಿ, “ತುಂಬಾ ವರ್ಷದಿಂದ ರಾಜು ಅವರು ಇದಾರೆ, ಅವರಿಗೆ ಕೊಡು’ ಅಂದಿದ್ದರು.
ಸರಿ, ಎರಡೂವರೆ ಲಕ್ಷಕ್ಕೆ ಒಂದು ಪ್ರಿಂಟ್ ಕೊಟ್ಟರು. ಹೀಗೆ, ರಾಜ್‌ಕುಮಾರ್ ಅವರ ಚಿತ್ರಗಳಿಗೆ ±Åತ್ಯೇಕ ಮಾರುಕಟ್ಟೆಯನ್ನೇ ಬೆಳೆಸಿದ್ದರು ಪಾರ್ವತಮ್ಮನವರು. ಆಗ ರಾಜ್ ಅವರ ಚಿತ್ರಗಳು ಐವತ್ತು, ನೂರು ದಿನಗಳು ಕಡ್ಡಾಯವಾಗಿ ಓಡುತ್ತಿದ್ದವು. ಈ ಉತ್ಸಾಹದಲ್ಲಿ 1975ರಲ್ಲಿ ಮೊದಲ ಬಾರಿಗೆ ಪಾರ್ವತಮ್ಮನವರು ಪೂರ್ಣಿಮಾ ಎಂಟರ್‌ಪ್ರೈಸಸ್ ಪ್ರಾರಂಭಿಸಿದರು. ತ್ರಿಮೂರ್ತಿ ಈ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರ. ಆಗ ಪುನೀತ್ ರಾಜ್‌ಕುಮಾರ್ 25 ದಿವಸದ ಮಗು. ಆ ಮಗು ಕೆಮರಾ ಚಾಲನೆ ಮಾಡಿತು. ತಲ್ಲಂ ನಂಜುಂಡಶೆಟ್ಟರ ಮನೆಯಲ್ಲಿ ಮೊದಲ ಶಾಟ್ ತೆಗೆದರು. ಅಲ್ಲೇ ಪಿಕ್ಚರ್ ತೆಗೆದುಕೊಳ್ಳೋದಿಕ್ಕೆ ಕೆಲವರು ಮುಂದೆ ಬಂದರು. ಪಾರ್ವತಮ್ಮ ಅಡ್ವಾನ್ಸ್ ಕೇಳಿದರು. “ಒಂದು ಲಕ್ಷ ಕೊಡ್ತೀನಿ’ ಅಂದಾಗ ಪಾರ್ವತಮ್ಮ ಒಪ್ಪಿರಲಿಲ್ಲ. ಮೂರು ಲಕ್ಷ ಕೇಳಿದರು. ಅವರೂ ಒಪ್ಪಿಕೊಂಡರು. “ಯಾಕೆ ಒಪ್ಪಿಕೋತಾರೆ ಹೇಳಿ? ದುಡ್ಡು ಬರೋದ್ರಿಂದ ತಾನೇ?’ ಇದು ಪಾರ್ವತಮ್ಮನವರ ±Åಶ್ನೆಯಾಗಿತ್ತು. ಆಗಲೇ ಪಾರ್ವತಮ್ಮನವರ ಮನಸ್ಸಿಗೆ “ಬೆಂಗಳೂರಿನಲ್ಲಿ ನಾವು ಒಂದು ಹಂಚಿಕೆ ಆಫೀಸ್ ಮಾಡಬೇಕು’ ಎಂಬ ಯೋಚನೆ ಬಂತು. ರಾಜ್‌ಕುಮಾರ್ ಅವರಿಗೆ ಹೇಳಿದರು. ರಾಜ್ ಅವರು ಸಂತೋಷದಿಂದ ಒಪ್ಪಿದರು. ಇದರ ಫಲವಾಗಿ 1980ರಲ್ಲಿ ವಜ್ರೆàಶ್ವರಿ ಕಂ¸çೆನ್ಸ್ ಮೂಲಕ ವಿತರಿಸಿದ ಮೊದಲ ಚಿತ್ರ ರವಿಚಂ¨Å.
ಹಂಚಿಕೆ ನಿರ್ಮಾಣ ಎರಡನ್ನೂ ತಮ್ಮ ಸ್ವಂತ ಬ್ಯಾನರಿನಿಂದ ಮಾಡಲು ಪ್ರಾರಂಭಿಸಿದ ಮೇಲೆಯೂ ಬೇರೆ ನಿರ್ಮಾಪಕರ ಚಿತ್ರಗಳಲ್ಲೂ ರಾಜ್ ಪಾತ್ರವಹಿಸುತ್ತಿದ್ದರು. ರಾಜ್ ಮೊದಲಿನಿಂದಲೂ “ನಿರ್ಮಾಪಕರು ಅನ್ನದಾತರು’ ಎನ್ನುತ್ತ ಬೆಳೆದರು. ತಮ್ಮದೇ ಬ್ಯಾನರಿನಲ್ಲಿ ಸಿನೆಮಾ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಇನ್ನೊಬ್ಬ ನಿರ್ಮಾಪಕರ ಚಿತ್ರಕ್ಕೆ ಎರಡನೇ ಆದ್ಯತೆ ನೀಡಕೂಡದು ಎಂಬುದು ರಾಜ್ ಅವರ ನೀತಿಯಾಗಿತ್ತು. ಅದನ್ನು ಪಾರ್ವತಮ್ಮನವರೂ ಒಪ್ಪಿಕೊಂಡಿದ್ದರು. ಬೆಂಗಳೂರಿನಲ್ಲಿ ಆಫೀಸ್ ಮಾಡಿದಾಗ ಪಾರ್ವತಮ್ಮನವರ ಜೊತೆಯಲ್ಲಿ ಘಟಾನುಘಟಿಗಳಾದ ಪ¨¾ಶ್ರೀ ದ್ವಾರಕಾನಾಥ್, ಕೆ. ಹೆಚ್. ನಾಗರಾಜ್ ಅವರು ಚಿñÅದುರ್ಗ, ಶಿವಮೊಗ್ಗ ಏರಿಯಾ ಜವಾಬ್ದಾರಿ ತಗೊಂಡರು. ಪಾರ್ವತಮ್ಮನವರ ತಮ್ಮ ಚಿನ್ನೇಗೌಡರು, ಮೈದುನ ವರದಪ್ಪ ಜೊತೆಗಿ¨ªರು. ಹಾಗಾಗಿ ಎಲ್ಲವನ್ನು ನಿರ್ವಹಿಸುವಲ್ಲಿ ಅವರಿಗೆ ತೊಂದರೆಯಾಗುತ್ತಿರಲಿಲ.
ನಿರ್ಮಾಪಕಿಯಾಗಿ ಪಾರ್ವತಮ್ಮನವರು ಎಲ್ಲ ಹಂತದ ಕೆಲಸದಲ್ಲೂ ತೊಡಗಿಕೊಳ್ಳುತ್ತಿದ್ದರು. ಮೊದಲು ಸೋದರ ಗೋವಿಂದರಾಜ್ ಮ್ಯಾನೇಜರ್ ಆಗಿದ್ದರು. ಸ್ವತಃ ರಾಜ್, ವರದಪ್ಪ, ಚಿ. ಉದಯಶಂಕರ್ ಕೂತು ಕಥೆಯನ್ನು ಚರ್ಚಿಸುತ್ತಿದ್ದರು. ಚಿತ್ರದ ಬಗ್ಗೆ ಚರ್ಚಿಸುವ ಪದ್ಧತಿ ರಾಜ್ ಅವರ ಮನೆಯಲ್ಲಿ ಮೊದಲಿನಿಂದಲೂ ಇತ್ತು. ಇವರೆಲ್ಲ ಸೇರಿ ಒಳ್ಳೆಯ ತಂಡವನ್ನು ಕಟ್ಟಿ¨ªರಿಂದ, ಅಷ್ಟೇನೂ ಸವಾಲನ್ನು ಎದುರಿಸಬೇಕಾಗಲಿಲ್ಲ. ಆನಂತರ ರಾಜ್ ಅವರು ಅಭಿನಯಿಸುವ ಚಿತ್ರಗಳ ಸಂಖ್ಯೆ ಕಡಿಮೆ ಮಾಡಿಕೊಂಡರು. ಇದರ ಫಲವಾಗಿ ತಮ್ಮ ಸಂಸ್ಥೆಯ ನಿರ್ಮಾಣದ ಚಿತ್ರಗಳಲ್ಲಿ ಮಾತ್ರ ಅಭಿನಯಿಸುವುದು ಅನಿವಾರ್ಯವಾಯಿತು. ಒಂದು ಕಾಲದಲ್ಲಿ ಕ®°ಡ ಚಿತ್ರರಂಗಕ್ಕೆ ಮದ್ರಾಸ್ ಅನಿವಾರ್ಯವಾಗಿತ್ತು. ಚಿತ್ರದ ಎಲ್ಲ ಕೆಲಸಗಳು ಮದ್ರಾಸಿನಲ್ಲೇ ನಡೆಯುತ್ತಿ¨ªವು. ಆಗಿನ ಕಾಲಕ್ಕೆ ಕ®°ಡದ ಹೆಸರಾಂತ ನಟರು ಮದಾಸ್ರಿನಲ್ಲಿಯೇ ಮನೆ ಮಾಡಿಕೊಂಡು ನೆಲೆಸಿದ್ದು ಉಂಟು. ಕೆಲ ಕಾಲಾನಂತರ ರಾಜ್ ಕುಟುಂಬ ಮದ್ರಾಸನ್ನು ಬಿಟ್ಟು ಬೆಂಗಳೂರಿನಲ್ಲಿ ನೆಲೆಸಿತು. ಅದಕ್ಕೆ ಮುಖ್ಯ ಕಾರಣರಾಗಿದ್ದರು ಪಾರ್ವತಮ್ಮ. ಅಷ್ಟೇ ಅಲ್ಲ, ಕನ್ನಡ ಚಿತ್ರರಂಗಕ್ಕೆ ಬೆಂಗಳೂರನ್ನು ಒಂದು ಭದ್ರ ಬುನಾದಿಯನ್ನಾಗಿ ಮಾಡುವಲ್ಲಿ ರಾಜ್ ಹಾಗೂ ಪಾರ್ವತಮ್ಮನವರ ಕೊಡುಗೆ ಅನನ್ಯವಾದುದು. ಬೆಂಗಳೂರಿನ ಗಾಂಧಿನಗರದಲ್ಲಿ ಚಿñÅ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಅಲ್ಲಿ ಚಿತ್ರರಂಗ ತಳವೂರುವಲ್ಲಿ ಅವರು ಅಪಾರವಾಗಿ ಶ್ರಮಿಸಿದ್ದರು.
ನಿರ್ಮಾಪಕಿಯೂ ಹೌದು, ವಿತರಕಿಯೂ ಹೌದು
ಕನ್ನಡ ಚಿತ್ರರಂಗದಲ್ಲಿ ಪೂರ್ಣ ±Åಮಾಣದ ನಿರ್ಮಾಪಕಿ ಹಾಗೂ ವಿತರಕಿ ಎಂದು ಪಾರ್ವತಮ್ಮನರನ್ನು ಕರೆಯಬಹುದು. ಪಾರ್ವತಮ್ಮನವರಿಗೂ ಮುಂಚೆ ಶ್ರೀಮತಿ ಎಂ.ವಿ. ರಾಜಮ್ಮನವರು ರಾಧಾರಮಣ ಹಾಗೂ ಮಕRಳರಾಜ್ಯವನ್ನು ನಿರ್ಮಾಣ ಮಾಡಿದ್ದರು. ಪದ್ಮಿನಿ ಪಿಕ್ಚರ್ ಮೂಲಕ ಪಂತುಲು ಅವರು ರಾಜಮ್ಮನವರ ಹೆಸರಿನಲ್ಲಿ ಚಿತ್ರ ನಿರ್ಮಿಸಿದ್ದರು. ಆದರೆ ರಾಜಮ್ಮನವರು ವಿತರಕಿಯಾಗಿರಲಿಲ್ಲ. ಮುಂದೆ ಅವರು ನಿರ್ಮಾಪಕಿಯಾಗಿ ಮುಂದುವರಿಯಲಿಲ್ಲ. ರಾಜಮ್ಮನವರಿಗೆ ಮೊದಲ ಆದ್ಯತೆ ಅಭಿನಯವಾಗಿದ್ದರಿಂದ ಅದರ ಕಡೆಗೆ ಹೆಚ್ಚು ಗಮನಕೊಟ್ಟರು. ಪಾರ್ವತಮ್ಮನವರು ಪೂರ್ಣಿಮಾ ಎಂಟರ್‌ಪ್ರೈಸಸ್ ಹಾಗೂ ವಜ್ರೆàÍÌರಿ ಕಂಬೈನ್ಸ್ ಹುಟ್ಟು ಹಾಕಿ ನಿರ್ಮಾಣ- ಹಂಚಿಕೆ ಎರಡನ್ನೂ ಮಾಡುವುದರ ಮೂಲಕ ಕನ್ನಡದ ಮೊತ್ತಮೊದಲ ಪೂರ್ಣಪ್ರಮಾಣದ ನಿರ್ಮಾಪಕಿ ಹಾಗೂ ವಿತರಕಿಯೂ ಆಗಿದ್ದರು.
ರಾಜ್ ಅಭಿನಯಿಸಿದ ಕಾದಂಬರಿ ಆಧಾರಿತ ಚಿತ್ರಗಳ ಆಯ್ಕೆಯಲ್ಲಿ ಪಾರ್ವತಮ್ಮನವರ ಪಾñÅ ಬಹು ಮುಖ್ಯವಾದದ್ದು. ಮೊದಲಿನಿಂದಲೂ ಅವರಿಗೆ ಕಾದಂಬರಿ ಓದುವ ಗೀಳು. ಪುಸ್ತಕ ಓದಿ ಅದೇನಾದರೂ ಹಿಡಿಸಿದರೆ, ಇದನ್ನು ಸಿನಿಮಾ ಮಾಡಬಹುದೆಂದು ರಾಜ್ ಅವರಿಗೆ ಅಥವಾ ಉದಯಶಂಕರ್ ಅವರಿಗೆ ಕೊಡುತ್ತಿದ್ದರು. ಅವರುಗಳು ಓದಿ ವರದಪ್ಪನವರಿಗೆ ಹೇಳುತ್ತಿದ್ದರು. ಎಲ್ಲರೂ ಒಪ್ಪಿದ ಮೇಲೆ ಅದನ್ನು ಚಿತ್ರಕ್ಕೆ ಒಗ್ಗಿಸುತ್ತಿದ್ದರು. ಹೀಗಾಗಿ, ರಾಜ್ ಅವರ ಅನೇಕ ಚಿತ್ರಗಳು ಕ®°ಡ ಕಾದಂಬರಿಗಳನ್ನಾಧರಿಸಿವೆ. ಕ®°ಡದ ಪ್ರತಿಷ್ಠಿತ ಬರಹಗಾರರಾದ ತ.ರಾ.ಸು., ಅ.ನ.ಕೃ, ಚದುರಂಗ, ತ್ರಿವೇಣಿ, ಬಿ. ಪುಟ್ಟಸಾಮಯ್ಯ, ಮನುಮೂರ್ತಿ, ಪಂಕಜ, ಟಿ.ಕೆ. ರಾಮರಾವ್, ವಾಣಿ, ಅಶ್ವಿನಿ, ವಿಜಯ ಸಾಸನೂರ, ರಾಧಾದೇವಿ, ಕುಮುದಾ, ವಿಶಾಲಾಕ್ಷಿ ದಕ್ಷಿಣಾಮೂರ್ತಿ, ಕೃಷ್ಣಮೂರ್ತಿ ಪುರಾಣಿಕ್, ದೇವುಡು ಮೊದಲಾದವರ ಕಾದಂಬರಿಗಳನ್ನು ಸತ್ವಪೂರ್ಣವಾಗಿ ಬೆಳ್ಳಿಪರದೆಯ ಮೇಲೆ ಮೂಡಿಸಿದರು. ಬಂಗಾರದ ಮನುಷ್ಯ, ಎರಡು ಕನಸು, ಮಯೂರ, ಸಮಯದ ಗೊಂಬೆ, ಸಿಪಾಯಿರಾಮು, ಸಂಧ್ಯಾರಾಗ, ಸಾûಾತ್ಕಾರ, ಗಿರಿಕನ್ಯೆ, ಬಾಳು ಬೆಳಗಿತು, ಆಕಸ್ಮಿಕ, ಧ್ರುವತಾರೆ, ಜೀವನ ಚೈñÅ, ಶಬ್ದವೇಧಿ- ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.
ವಿಶಿಷ್ಟವಾದ ಕಾದಂಬರಿ ಆಧಾರಿತ ಚಿತ್ರಗಳಲ್ಲಿನ ರಾಜ್ ಅವರ ಅಭಿನಯ ಚಿರಕಾಲ ಉಳಿಯುವಂತಹುದು. ಕಥೆಯ ಚರ್ಚೆಗಳಲ್ಲಿ ಕೆಲವೊಮ್ಮೆ ಪಾರ್ವತಮ್ಮನವರೂ ಭಾಗವಹಿಸುತ್ತಿದ್ದರು. ಸಾಮಾನ್ಯವಾಗಿ ಕಥೆಯ ಮೊದಲ ರೌಂಡ್ ಚರ್ಚೆ ಆದ ಮೇಲೆ ರಾಜ್ ಅವರು, ಮಹಿಳಾ ವೀಕ್ಷಕರು ಕಥೆಯನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಪಾರ್ವತಮ್ಮನವರ ಅಭಿಪ್ರಾಯ ಕೇಳುತ್ತಿದ್ದರಂತೆ. ಕೆಲವೊಮ್ಮೆ ಪಾರ್ವತಮ್ಮನವರು ಓದಿದ ಕಾದಂಬರಿ ಸಿನಿಮಾ ಆಗಿ ಪರಿವರ್ತನೆ ಆಗುತ್ತಿñ¤ಂತೆ. ಇದಕ್ಕೆ ದೊvx ಉದಾಹರಣೆ ದೇವುಡು ಅವರ ಕಾದಂಬರಿ ಆಧಾರಿತ ಚಿತ್ರ ಮಯೂರ. ಮೊದಲು ಕಾದಂಬರಿಯನ್ನು ಓದಿದ್ದು ಪಾರ್ವತಮ್ಮನವರಂತೆ. ನಂತರ ಎಲ್ಲರೂ ಸೇರಿ ಚರ್ಚಿಸಿ ಒಪ್ಪಿದ ನಂತರ ಸಿನಿಮಾ ಆಗಿ ರೂಪಾಂತರವಾಯಿತು. ಪಾರ್ವತಮ್ಮ ಓದಿದ ಕಾದಂಬರಿಯನ್ನು ಅಕಸ್ಮಾತ್ ಇವರ ತಂಡ ಸಿನಿಮಾ ಮಾಡಲು ಆಗದಿದ್ದರೆ, ಬೇರೆಯವರಿಗೆ ಸಿನಿಮಾ ಮಾಡಲು ಪಾರ್ವತಮ್ಮನವರು ಉತ್ತೇಜಿಸುತ್ತಿದ್ದರು. ಬಯಲು ದಾರಿ ಚಿತ್ರ ಆಗುವುದಕ್ಕೆ ಮುಂಚೆ ಅದನ್ನು ರಾಜ್ ತಂಡ ಚಿತ್ರ ಮಾಡಲು ಹೊರಟಿತು. ಆದರೆ ಆ ಸಮಯಕ್ಕೆ ರಾಜ್ ಅವರ ಡೇಟ್ ಹೊಂದಾಣಿಕೆಯಾಗಲಿಲ್ಲ. ಹಾಗಾಗಿ ರಾಜ್ ಮತ್ತು ಪಾರ್ವತಮ್ಮನವರು ದೊರೆ-ಭಗವಾನ್ ಅವರಿಗೆ ಈ ಕಥೆಯ ಬಗ್ಗೆ ಹೇಳಿ “ಅನಂತನಾಗ್ ಆ ಪಾñÅ ಮಾಡಿದರೆ ಚೆನ್ನ’ ಎಂದೂ ಹೇಳಿದ್ದರಂತೆ.
ಒಮ್ಮೆ ಶಿವರಾಜ್‌ಕುಮಾರ್‌ಗೆ ಒಂದು ಕಥೆ ಹೇಳಲು ನಾಗಾಭರಣ ಬಂದಿದ್ದರು. ಶಿವಣ್ಣನವರ ಮನೆಯಲ್ಲಿ ಅದರ ಮಾತುಕತೆ ಇತ್ತು. ಪಾರ್ವತಮ್ಮ ಅಲ್ಲಿಗೆ ಹೋಗಿರಲಿಲ.É ಕಥೆ ಕೇಳಿದ ಉದಯ್‌ಶಂಕರ್, “ಈ ಕಥೆ ಶಿವಣ್ಣನಿಗೆ ಹೆವಿ ಆಗುñ¤ದೆ. ರಾಜ್ ಅವರಿಗೆ ಚೆನ್ನಾಗಿ ಹೊಂದುತ್ತೆ’ ಅಂತ ಹೇಳಿದರಂತೆ. ಅದಕ್ಕೆ ಪಾರ್ವತಮ್ಮನವರನ್ನೇ ಕರೆಸಿ ಕಥೆ ಕೇಳಿಸಿದರು. ಕಥೆ ಕೇಳಿದ ಪಾರ್ವತಮ್ಮ ತಕ್ಷಣ, “ಈ ಕಥೆ ರಾಜ್‌ಕುಮಾರ್ ಅವರಿಗೇ ಸರಿ. ಶಿವಣ್ಣನಿಗೆ ಅಲ್ಲ’ ಅಂದರಂತೆ. ಆಗ ಅಲ್ಲೇ ಇದ್ದ ಉದಯ್‌ಶಂಕರ್ ರಾಜ್ ಅವರಿಗೆ ಹೇಳಿದರಂತೆ “ಈಗಲಾದರೂ ಒಪ್ಕೋ’ ಅಂತ. ಆಕಸ್ಮಿಕ ಪಿಕ್ಚರ್ ಆದದ್ದು ಹೀಗೆ. ಕರುಣೆಯೆ ಕುಟುಂಬದ ಕಣ್ಣು ಚಿತ್ರದಿಂದ ಶಬ್ದವೇಧಿ ಚಿತ್ರದವರೆಗೆ ರಾಜ್‌ಕುಮಾರ್ ಅವರು 33 ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಪಾರ್ವತಮ್ಮನವರ ಸಂಸ್ಥೆ ಮನೆಮಂದಿಯೆಲ್ಲಾ ಕುಳಿತು ವೀಕ್ಷಿಸುವಂತಹ ಚಿತ್ರಗಳನ್ನೇ ನಿರ್ಮಾಣ ಮಾಡಿತು. ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಂಸಾರಿಕ ಕ್ಷೇñÅವನ್ನು ಬಿಟ್ಟು ಬೇರೆ ಚಿತ್ರ ಮಾಡಿಲ್ಲ. ಒಂದೊಂದು ಚಿತ್ರವೂ ಜನಜೀವನಕ್ಕೆ ಪೂರಕ-ಪ್ರೇರಕವಾಗುವಂತಹ ಸಂದೇಶ ಹೊಂದಿದ್ದು, ಸಾಮಾಜಿಕ ಮಹತ್ವ ಪಡೆದಿವೆ. 54 ವರ್ಷಗಳ ಕಾಲ ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರ ಒಡನಾಡಿಯಾಗಿ, ಪತ್ನಿಯಾಗಿ ಸದಾ ಅವರ ನೆರಳಾಗಿ ಚಿತ್ರರಂಗದ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮ ಪತಿಯೊಂದಿಗೆ ತೊಡಗಿಸಿಕೊಂಡಿದ್ದ ಪಾರ್ವತಮ್ಮನವರು 35 ವರ್ಷಗಳ ಕಾಲ, ಅಂದರೆ ಸುಮಾರು 1954ರಿಂದ 1990ರವರೆಗೆ ಮದ್ರಾಸಿನಲ್ಲಿದ್ದರು. ರಾಜ್ ಅವರ ಅತ್ತೆ ಹಾಗೂ ತಂಗಿ ಶಾರದಮ್ಮ ಮದ್ರಾಸ್ ಮನೆಯನ್ನು ನಿರ್ವಹಿಸಲು ಪಾರ್ವತಮ್ಮನವರಿಗೆ ನೆರವಾದರು. 1980ರಲ್ಲಿ ಬೆಂಗಳೂರಿನಲ್ಲಿ ವಜ್ರೆàಶ್ವರಿ ಕಂಬೈನ್ಸ್ ಪ್ರಾರಂಭಿಸಿದ ಮೇಲೆ ಮದ್ರಾಸಿನಿಂದ ಬೆಂಗಳೂರಿಗೆ ಓಡಾಡುತ್ತಿದ್ದರು. ಮಕ್ಕಳೆಲ್ಲರ ವಿದ್ಯಾಭ್ಯಾಸ ಅಲ್ಲಿಯೇ ನಡೆಯುತ್ತ ಇತ್ತು. ರಾಜ್ ಅವರಿಗೆ ಬಹದ್ದೂರು ಗಂಡು ಚಿತ್ರೀಕರಣ ಸಂದರ್ಭದಲ್ಲಿ ಕುತ್ತಿಗೆಗೆ ಪೆಟ್ಟು ಬಿದ್ದು ತೊಂದರೆಯಾದಾಗ ಡಾಕrರ್ ಅವರಿಗೆ ದೀರ್ಘವಾದ ವಿಶ್ರಾಂತಿ ಪಡೆಯಲು ಹೇಳಿದ್ದರು. ಆ ಸಂದರ್ಭದಲ್ಲಿ ಪಾರ್ವತಮ್ಮನವರು ರಾಜ್ ಅವರನ್ನು ನೋಡಿಕೊÙÛಲು ಅವರ ಜೊತೆ ಚಿತ್ರೀಕರಣಕ್ಕೂ ಹೋಗುತ್ತಿದ್ದರು. ಅಲ್ಲಿಂದ ಮುಂದೆ ಪಾರ್ವತಮ್ಮ ಎಂದೂ ರಾಜ್ ಅವರನ್ನು ಒಂಟಿಯಾಗಿರಲು ಬಿಡಲಿಲ್ಲ. ಅವರ ಊಟ, ವಿಶ್ರಾಂತಿಯ ಬಗ್ಗೆ ಕಾಳಜಿ ವಹಿಸಿದರು. ಮನೆಯಲ್ಲಿ ಮಕ್ಕಳ ಯೋಗಕ್ಷೇಮದ ಹೊಣೆ, ಮಕ್ಕಳು ಏನು ಓದಬೇಕು, ಏನಾಗಬೇಕು ಅನ್ನುವುದರ ಬಗ್ಗೆಯೂ ಅವರು ಜವಾಬ್ದಾರಿ ವಹಿಸಿದರು.
ವೀರಪ್ಪನ್ ಪ್ರಕರಣ
ಡಾ. ರಾಜ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ ಸಂದರ್ಭದಲ್ಲಿ ಪಾರ್ವತಮ್ಮ ವಿಚಲಿತರಾಗಲಿಲ್ಲ. ಆಗ ಅವರು ತೋರಿದ ಸಂಯಮ ಮತ್ತು ಅವರನ್ನು ಬಿಡಿಸಿಕೊಂಡು ಬರುವಲ್ಲಿ ಅವರು ವಹಿಸಿದ ಮುಖ್ಯ ಪಾñÅ ಎಲ್ಲರಿಗೂ ಆದರ್ಶಪ್ರಾಯವಾದುದು. ಪತಿಯನ್ನು ಬಿಡಿಸಿಕೊಂಡು ಬರುವಲ್ಲಿ ಅವರಿಗಿದ್ದ ಆಳವಾದ ನಂಬಿಕೆ ಅವರ ಗಟ್ಟಿತನಕ್ಕೆ ಇನ್ನೊಂದು ನಿದರ್ಶನವಾಗಿದೆ.
ಕೊನೆಯ ದಿನದವರೆಗೂ ಪಾರ್ವತಮ್ಮನವರು ತಮ್ಮ ನಿರ್ಮಾಣ ಸಂಸ್ಥೆಯಿಂದ ಸುಮಾರು 43 ಚಿತ್ರಗಳನ್ನು ನಿರ್ಮಿಸಿದ ಕೀರ್ತಿಗೆ ಪಾñÅರಾಗಿದ್ದರು. 1978ರಲ್ಲಿ ಇವರು ನಿರ್ಮಿಸಿದ ಶಂಕರ್ ಗುರು ಚಿತ್ರವು ಒಂದೇ ಚಿತ್ರಮಂದಿರದಲ್ಲಿ 365 ದಿನಗಳ ಕಾಲ ಪ್ರದರ್ಶನಗೊಂಡು ದಾಖಲೆ ಮಾಡಿದೆೆ. 1989ರಲ್ಲಿ ನಿರ್ಮಿಸಿದ ನಂಜುಂಡಿ ಕಲ್ಯಾಣ ಚಿತ್ರವು 365 ದಿನಗಳ ಕಾಲ ಓಡಿದೆ. 15 ಚಿñÅಗಳು 25 ವಾರ, 31 ಚಿñÅಗಳು ಶತದಿನೋತ್ಸವವನ್ನು ಆಚರಿಸಿವೆ. 75 ಬೇರೆ ನಿರ್ಮಾಪಕರ ಚಿತ್ರಗಳನ್ನು ವಿತರಣೆ ಮಾಡಿದಂತಹ ಕೀರ್ತಿಗೆ ಪಾñÅರಾಗಿದ್ದಾರೆ. 25 ವರ್ಷಗಳವರಗೆ ಒಂದೇ ಜಾಗದಲ್ಲಿ ಹಂಚಿಕೆಯ ಆಫೀಸ್ ನಡೆಸಿರುವ ದಾಖಲೆಯೂ ಪಾರ್ವತಮ್ಮನವರಿಗೆ ಸಲ್ಲಬೇಕು. “ವಜ್ರೆàಶ್ವರಿ ಕಂಬೈನ್ಸ್’ ಇನ್ನು ಗಾಂಧಿನಗರದಲ್ಲಿ ಯಾರೂ ವಜ್ರೆàÍÌರಿ ಎಂದು ಕರೆಯುವುದಿಲ್ಲ. ಅದರ ಬದಲಿಗೆ “ಹೆಡ್ ಆಫೀಸ್’ ಎಂದು ಗೌರವದಿಂದ ಕರೆಯುತ್ತಾರೆ. ಈ “ವಜ್ರೆàಶ್ವರಿ’ಯನ್ನು ಹುಟ್ಟುಹಾಕಿ ಬೆಳೆಸಿದ ಕೀರ್ತಿ ಪೂರ್ಣವಾಗಿ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೇ ಸಲ್ಲುತ್ತದೆ. ಹಲವಾರು ಯುವಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟು, ತಮ್ಮ ಚಿತ್ರಗಳ ಮೂಲಕ ಅವರನ್ನು ಸ್ಟಾರ್‌ಗಳನ್ನಾಗಿ ಮಾಡಿದ ಹಿರಿಮೆ ಪಾರ್ವತಮ್ಮನವರಿಗೆ ಸಲ್ಲುತ್ತದೆ. ನಿರ್ಮಾಪಕಿಯಾಗಿ ಅವರಿಗೆ ಅಪಾರವಾದ ಆತ್ಮವಿಶ್ವಾಸವಿತ್ತು. ಯಾವುದೇ ದೊಡ್ಡ ಚಿತ್ರ ರಿಲೀಸ್ ಆಗುತ್ತಿರಲಿ, ಅದರ ಎದುರು ರಾಜ್ ಅವರ ಚಿತ್ರ ರಿಲೀಸ್ ಆಗಿ ಜಯಭೇರಿ ಬಾರಿಸಬಲ್ಲದು ಎಂಬ ಅಚಲ ನಂಬಿಕೆ ಅವರಿಗಿತ್ತು.
ರಾಜ್ ಅವರು ವಜ್ರೆàಶ್ವರಿ ಸಂಸ್ಥೆಗೆ ಬಂದರೆ ಪಾರ್ವತಮ್ಮನವರ ಜಾಗದಲ್ಲಿ ಎಂದೂ ಕೂರುತ್ತಿರಲಿಲ್ಲ ವಂತೆ. ಯಾಕೆಂದರೆ, ರಾಜ್ ಅವರ ±Åಕಾರ ಅದು ಪಾರ್ವತಮ್ಮನವರ ಜಾಗ. ಅವರ ಸಂಸ್ಥೆ ನಿರ್ಮಿಸಿದ ಆಕಾಶ್ ಚಿತ್ರದ ಶತದಿನೋತ್ಸವ ಆಚರಿಸಿದ ಸಂದರ್ಭದಲ್ಲಿ ಈ ಸಂಸ್ಥೆಗೆ ದುಡಿದ ಎಲ್ಲರನ್ನೂ ಸನ್ಮಾನಿಸಲಾಗಿತ್ತು. ಪಾರ್ವತಮ್ಮನವರನ್ನು ಅರಸಿಕೊಂಡು ಹಲವಾರು ±Åಶಸ್ತಿಗಳು ಬಂದಿದ್ದವು.
“ಪತಿಯ ಸಹಕಾರದಿಂದಲೇ ತಾನು ಇಷ್ಟೆಲ್ಲಾ ಸಾಧಿಸಿದ್ದು’ ಎಂದು ಹೇಳುತ್ತಿದ್ದ ಪಾರ್ವತಮ್ಮನವರು ಕನ್ನಡ ಚಿತ್ರರಂಗದ “ರಾಜಕುಮಾರ’ನ ಕಾಲ್‌ಶೀಟ್ ಹೊಂದಿಸುವ ಜವಾಬ್ದಾರಿಯ ಜೊತೆಗೆ 25 ದಿನದ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಚಿತ್ರ ನಿರ್ಮಾಣಕ್ಕೆ ಇಳಿದಿದ್ದರು. ಸಂಸಾರ ಹಾಗೂ ಸಿನೆಮಾ ಎರಡೂ ರಥಗಳನ್ನು ಒಟ್ಟೊಟ್ಟಿಗೆ ನಡೆಸಿಕೊಂಡು ಬಂದ ಪಾರ್ವತಮ್ಮನವರು ನಿರ್ಮಾಪಕಿಯಾಗಿಯೂ, ಸೊಸೆಯಾಗಿಯೂ, ಹೆಂಡತಿಯಾಗಿಯೂ, ತಾಯಿಯಾಗಿಯೂ ಎಲ್ಲ ಪಾñÅಗಳನ್ನು ಸಮದೂಗಿಸಿ ಸಾಗಿಸಿದ ಕೌಶಲ ಅಸಾಮಾನ್ಯವಾದುದು.
ಸಮಾಜಸೇವೆಯ ಮಾನವೀಯ ಮುಖ
ಪಾರ್ವತಮ್ಮನವರು ರಾಜ್ ಅವರ ಜೊತೆಗೂಡಿ ಕಲಾಸೇವೆ, ಸಾರ್ವಜನಿಕ ಸೇವೆಗೆ ಸದಾಕಾಲ ಚೈತನ್ಯ ತುಂಬುತ್ತ ಬಂದಂತಹ ಮಹಿಳೆ. ಪಾರ್ವತಮ್ಮನವರು ಕೈಗೊಂಡಿದ್ದ ಬಹುಮುಖ್ಯವಾದ ಸಮಾಜಸೇವೆಯೆಂದರೆ ಮೈಸೂರಿನ ಡಿ.ಸಿ.ಪಿ ಆಗಿದ್ದ ಕೆಂಪಯ್ಯನವರ ಪ್ರೇರಣೆಯಿಂದ 1997ರಲ್ಲಿ ಸ್ಥಾಪಿಸಿದ ಪುನರ್ವಸತಿ ಕೆಂದ್ರ ಕರ್ನಾಟಕದಲ್ಲಿ ಮೊತ್ತವೆೊದಲ ಬಾರಿಗೆ ನಿರಾಶ್ರಿತ ಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರವನ್ನು ಮೈಸೂರಿನಲ್ಲಿ ಸ್ಥಾಪಿಸಿದ್ದು. ಇದರ ಹೆಸರು ಶಕ್ತಿಧಾಮ. ಈ ಪುನರ್ವಸತಿ ಕೇಂ¨Åದಲ್ಲಿ ನೂರಾರು ಹಲವು ಸಮಸ್ಯೆಗಳಲ್ಲಿ ಸಿಲುಕಿದ ಹೆಣ್ಣುಮಕ್ಕಳು ಆಶ್ರಯವನ್ನು ಪಡೆದುಕೊಂಡಿದ್ದಾರೆ. ಇಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವುದರೊಂದಿಗೆ ಊಟ ವಸತಿಯನ್ನೂ ಒದಗಿಸಿ, ಅವರಿಗೆ ಸ್ವಯಂ ಉದ್ಯೋಗದಲ್ಲಿ ತರಬೇತಿ ನೀಡಿ ಅಂತಹ ಮಹಿಳೆಯರು ÓÌಂತ ಕಾಲಿನ ಮೇಲೆ ನಿಲ್ಲುವಂತೆ ಮಾಡಲಾಗುñ¤ದೆ. ಪಾರ್ವತಮ್ಮನವರು ಈ ಕೇಂದ್ರದ ಅದರ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಬಹಳಷ್ಟು ಸಾರಿ ರಾಜ್ ಸಂಗೀತ ಸಂಜೆಯ ಹಣ ಒಮ್ಮೊಮ್ಮೆ ನೇರವಾಗಿ ಶಕ್ತಿಧಾಮದ ಕೆಲಸಗಳಿಗೆ ವಿನಿಯೋಗವಾಗುತ್ತಿತ್ತು.
ರಾಜ್ಯಕ್ಕೆ ಬರ ಬಂದಾಗ, ನೆರೆ ಬಂದಾಗ, ದೇಶದ ವಿವಿಧೆೆಡೆ ಭೂಕಂಪವಾದಾಗ, ಪಾರ್ವತಮ್ಮ ರಾಜ್‌ಕುಮಾರ್ ಮುಂಚಣಿಯಲ್ಲಿ ನಿಂತು, ರಾಜ್‌ಕುಮಾರ್ ಹಾಗೂ ಚಿತ್ರೋದ್ಯಮದ ಎಲ್ಲಾ ಗಣ್ಯರನ್ನು ಒಟ್ಟುಗೂಡಿಸಿ, ಧನ ಸಂಗÅಹಿಸಿ ಕೊಡುವಲ್ಲಿ ಮಹñÌದ ಪಾñÅ ವಹಿಸಿದ್ದರು. ಕರ್ನಾಟಕದಲ್ಲಿ ಕಲಾಭವನಗಳ ಕೊರತೆ ಕಂಡಾಗ, ರಾಜ್‌ಕುಮಾರ್ ಅವರ ರಸಮಂಜರಿ ಕಾರ್ಯಕ್ರಮ ಏರ್ಪಡಿಸಿ, ಧನ ಸಂಗ್ರಹಿಸಿ, ಸರಕಾರಕ್ಕೆ ನೆರವಾಗಿದ್ದರು. ಕನ್ನಡ ಚಿತ್ರೋದ್ಯಮದ ಬೆಳವಣಿಗೆಯ ಕುರಿತೇ ಕೊನೆಯ ಉಸಿರಿನವರೆಗೂ ಯೋಚಿಸುತ್ತಿದ್ದರು. ಗೋಕಾಕ್ ಚಳುವಳಿಯಂಥ ಹೋರಾಟಗಳ ಹಿಂದೆ ರಾಜ್‌ಕುಮಾರ್ ಅವರಿಗೆ ಪ್ರೇರಣಾಶಕ್ತಿಯಾಗಿ ನಿಂತಿದ್ದನ್ನು ಯಾರೂ ಮರೆಯುವಂತಿಲ್ಲ.
– ವತ್ಸಲಾ ಮೋಹನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.