ಕಾವ್ಯಕ್ಕೆ ಅದರದ್ದೇ ಆದ ಓದುಗರು ಯಾವಾಗಲೂ ಇರುತ್ತಾರೆ…


Team Udayavani, Aug 13, 2023, 3:06 PM IST

ಕಾವ್ಯಕ್ಕೆ ಅದರದ್ದೇ ಆದ ಓದುಗರು ಯಾವಾಗಲೂ ಇರುತ್ತಾರೆ…

ಕವಿತೆಗಳಿಗಿದು ಕಾಲವಲ್ಲ ಎಂಬ ಮಾತು ಕ್ಲೀಷೆ ಅನ್ನಿಸಿಕೊಂಡಿರುವ ಈ ಹೊತ್ತಿನಲ್ಲಿ, “ನಿಮ್ಮಿಷ್ಟದ ಕವಿತೆ ಓದಿ, ಬಹುಮಾನ ಗೆಲ್ಲಿ’ ಎಂಬ ಆಫ‌ರ್‌ ಮುಂದಿಟ್ಟು ಕಾವ್ಯಲೋಕದಲ್ಲಿ ಸಂಚಲನ ತಂದವರು “ಮೈಲ್ಯಾಂಗ್‌ ಬುಕ್ಸ್‌’ನ ವಸಂತ ಶೆಟ್ಟಿ. ಹೊಸ ಬಗೆಯ ಓದುಗರನ್ನು ತಲುಪಲು ಹಲವು ದಾರಿಗಳಿವೆ, ನಾವು ಕಾಲಕ್ಕೆ ತಕ್ಕಂತೆ ಅಪ್ಡೇಟ್‌ ಆಗಬೇಕು ಅನ್ನುವ ಅವರು, ತಮ್ಮ ಪ್ರಯೋಗಗಳು ಮತ್ತು ಅದಕ್ಕೆ ಸಿಕ್ಕಿರುವ ಫ‌ಲಿತಾಂಶದ ಕುರಿತು ಮಾತಾಡಿದ್ದಾರೆ…

1 ಕಾವ್ಯ ಎಂಬುದು ರೂಪಕ ಪ್ರತಿಮೆ, ಧ್ವನಿಗಳ ವಾಚ್ಯವಲ್ಲದ ಪ್ರಕಾರ. ಅದು ಜನಸಾಮಾನ್ಯ ರಿಂದ ದೂರ. ಗದ್ಯ ವಾಚನದಿಂದ ಆಗುವಂಥ ತಕ್ಷಣದ ಪರಿಣಾಮ ಕಾವ್ಯ ವಾಚನದಿಂದ ಆಗದು ಅನಿಸ್ತದೆ. ಹೀಗಿರುವಾಗ ಕಾವ್ಯವಾಚನಕ್ಕೂ ಬಹುಮಾನ ಅನ್ನುವ ಯೋಜನೆಯ ಮುಖ್ಯ ಉದ್ದೇಶ ಏನು?

ಕಾವ್ಯ ಜನಸಾಮಾನ್ಯರಿಂದ ದೂರ ಅನ್ನುವ ಅನಿಸಿಕೆ ನಿಜವಲ್ಲವೇನೋ ಅನ್ನಿಸುತ್ತದೆ. ಕಾವ್ಯಕ್ಕೆ ಓದುಗರು ಹಿಂದೆಯೂ ಇದ್ದರು. ಈಗಲೂ ಇದ್ದಾರೆ. ಮುಂದೆಯೂ ಇರುತ್ತಾರೆ. ಒಂದು ಸುಂದರ ಕವಿತೆಯನ್ನು ಸಿನಿಮಾದಲ್ಲಿ ಅಳವಡಿಸಿದರೆ ಅದು ಕೋಟಿಗಟ್ಟಲೆ ಜನರನ್ನು ತಲುಪುವ ಉದಾಹರಣೆಗಳು ನಮ್ಮ ಮುಂದಿವೆ. ಕತೆ ಬರೆಯುವವರಂತೆಯೇ ಕವಿತೆ ಬರೆಯುವವರ ಸಂಖ್ಯೆಯೂ ದೊಡ್ಡದಿದೆ. ಸಾಮಾನ್ಯ ಜನರಿಗೆ ಎಟುಕುವಂತೆ ಅವುಗಳನ್ನು ಆಡಿಯೋದ ರೂಪದಲ್ಲಿ ಪ್ರಸ್ತುತಪಡಿಸುವ ಅಭ್ಯಾಸ ಡಿಜಿಟಲ್‌ ಅಂಗಳದಲ್ಲಿ ರೂಪುಗೊಳ್ಳಲಿ ಎಂದು ಕಾವ್ಯ ವಾಚನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕತೆ, ಕಾವ್ಯಗಳನ್ನು ಡಿಜಿಟಲ್‌ ಜಗತ್ತಿನಲ್ಲಿರುವ ಜನರಿಗೆ ತಲುಪಿಸುವ ನಮ್ಮ ಪ್ರಯತ್ನಕ್ಕೆ ವೇಗ ದೊರೆಯಲಿ ಎಂಬುದೇ ಬಹುಮಾನ ನೀಡಿಕೆಯ ಹಿಂದಿರುವ ಉದ್ದೇಶವೂ ಆಗಿದೆ.

2 ಈ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದ ಪ್ರಭಾವ ಪಡೆದ ಕವಿತೆಗಳೇ ಜಾಸ್ತಿ. ಅದರ ನಡುವೆ ಸಾಹಿತ್ಯಿಕ ಗುಣದ ಕವಿತೆಯನ್ನು ಹೇಗೆ ಹುಡುಕ್ತೀರಿ?

ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿಗೆ ಎಲ್ಲರಿಗೂ ಸ್ವಾತಂತ್ರ್ಯವಿದೆ. ಗುಣಮಟ್ಟದ ಬರಹ ಮಾಡುವವರು ಹಂತಹಂತವಾಗಿ ಬೆಳಕಿಗೆ ಬರುತ್ತಾರೆ. ಕೇವಲ ಗುಣಮಟ್ಟದ ಬರಹ ಮಾಡುವ‌ರಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಇರಬೇಕು ಅನ್ನುವ ಕಟ್ಟಳೆಯಿದ್ದಿದ್ದರೆ ಇಷ್ಟೊಂದು ವೈವಿಧ್ಯಮಯವಾದ, ತುರುಸಿನ ಒಡನಾಟವಿರುವ ವೇದಿಕೆಗಳಾಗಿ ಸೋಶಿಯಲ್‌ ಮೀಡಿಯಾ ರೂಪುಗೊಳ್ಳುತ್ತಿರಲಿಲ್ಲ. ಬರಹಗಾರರು ಮತ್ತು ವಾಚಕರು ಒಂದೇ ವೇದಿಕೆಯಲ್ಲಿ ಒಡನಾಡುತ್ತ, ಆಡಿಯೋದ ಮೂಲಕ ಹೊಸ ಹೊಸ ಓದುಗರನ್ನು ತಲುಪಬೇಕು. ಹೆಚ್ಚೆಚ್ಚು ಕೇಳುಗರು ಬಂದಂತೆ ಸಾಹಿತ್ಯಕ ಗುಣದ ಕವಿತೆ, ಕತೆಗಳು ಬೆಳಕಿಗೆ ಬರಲು ಸಾಧ್ಯವಾಗುತ್ತದೆ.

3 ನೀವು ತಂತ್ರಜ್ಞಾನ ನೋಡಿರುವವರು, ಜೊತೆಗೆ ಸಾಹಿತ್ಯವನ್ನೂ ಬಲ್ಲವರು! ಇವೆರಡನ್ನೂ ಒಟ್ಟಿಗೆ ಸೇರಿಸಿ ಜನರಿಗೆ ತಲುಪಿಸುವ ಪ್ರಯತ್ನ ಮಾಡಿರುವಿರಿ. ಕವಿತೆಗಳಿಗೇ ಪ್ರಾಮುಖ್ಯತೆ ಕೊಡಬೇಕು ಅನ್ನಿಸಿದ್ದು ಯಾಕೆ?

ಕವಿತೆಯೂ ಸಾಹಿತ್ಯದ ಒಂದು ಮುಖ್ಯ ಪ್ರಕಾರ. ಕಳೆದ ತಿಂಗಳು ಕತೆಗಳದ್ದು ಮಾಡಿದ್ದೆವು. ಈ ಬಾರಿ ಕವಿತೆಗೆ ಪ್ರಾಮುಖ್ಯತೆ ಕೊಡಬೇಕು ಅನ್ನಿಸ್ತು. ಹಾಗಾಗಿ ಕವಿತೆಗೆ ಜಾಗ ಕೊಟ್ವಿ. “ಮೈಲ್ಯಾಂಗ್‌ ಆಡಿಯೋ’ದಲ್ಲಿ ಕತೆ, ಧಾರಾವಾಹಿ, ಕವಿತೆ, ಸ್ಟಾಂಡ್‌ ಅಪ್‌ ಕಾಮಿಡಿ, ಲೇಖನಗಳು ಸೇರಿದಂತೆ ಎಲ್ಲ ಬಗೆಯ ಕಂಟೆಂಟ್‌ ಅನ್ನು ಆಡಿಯೋದ ಮೂಲಕ ಜನರಿಗೆ ತಲುಪಿಸುವ ಆಯ್ಕೆಗಳಿವೆ.

4 ಹೆಚ್ಚು ಕ್ಲಿಕ್‌ ಲಿಸನ್‌ ಎಂಬುದನ್ನು ಆಧರಿಸಿ ತಾನೇ ಬಹುಮಾನ ಕೊಡೋದು? ಗಟ್ಟಿಯಿಲ್ಲದ ಕಾವ್ಯ, ಗಟ್ಟಿ ಕಾವ್ಯವನ್ನು ಹಿಂದಿಕ್ಕಿ ಜಾಸ್ತಿ ಕ್ಲಿಕ್‌ ಪಡೆದು, ಅದಕ್ಕೆ ಬಹುಮಾನ ಬಂದರೆ, ನೀವು ವಿಭಿನ್ನ ಪ್ರಯೋಗದಿಂದ ಏನು ಉಪಯೋಗ?

ಆನ್‌ಲೈನ್‌ ಜಗತ್ತಿನಲ್ಲಿ ಒಂದು ಬಲವಾದ ಸಾಹಿತ್ಯಿಕ ಸಮುದಾಯ ರೂಪುಗೊಳ್ಳಲು ಯಾವೆಲ್ಲ ಪ್ರಯೋಗಗಳು, ಸ್ಪರ್ಧೆಗಳು ನೆರವಾಗುವುದೋ ಅವುಗಳನ್ನು ಮಾಡಬೇಕೆಂಬುದು ನಮ್ಮ ನಿಲುವು. ಗುಣಮಟ್ಟದ ಪ್ರಶ್ನೆಯನ್ನು ನಾವು ಕೇಳುಗರ ತೀರ್ಮಾನಕ್ಕೆ ಬಿಡುತ್ತೇವೆ. ಯಾವುದೇ ವೇದಿಕೆ ಬೆಳೆಯುತ್ತ ಹೋದಂತೆ, ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಿದಂತೆ ಗುಣಮಟ್ಟದ ಪ್ರಶ್ನೆ ತಾನೇ ತಾನಾಗಿ ತನ್ನ ಸ್ಥಾನ ಕಂಡುಕೊಳ್ಳುತ್ತದೆ. ಸಾಹಿತ್ಯಿಕ ಮೌಲ್ಯವುಳ್ಳ ಕತೆ, ಕವಿತೆಗಳನ್ನು ಉತ್ತೇಜಿಸುವ ಇನ್ನಷ್ಟು ಉಪಕ್ರಮಗಳನ್ನು ಮುಂಬರುವ ದಿನಗಳಲ್ಲಿ “ಮೈಲ್ಯಾಂಗ್‌ ಆಡಿಯೋ’ ಕೈಗೊಳ್ಳಲಿದೆ.

5″ಮೈಲ್ಯಾಂಗ್‌ ಬುಕ್ಸ್‌’ ಅಪ್ಲಿಕೇಶನ್‌ ಮತ್ತು ಆಡಿಯೋ ಅಪ್ಲಿಕೇಶನ್‌ನಿಂದ ಪ್ರಿಂಟ್‌ ಆದ ಪುಸ್ತಕ ಖರೀದಿ ಕಡಿಮೆ ಆಗಲ್ಲವಾ? ಪ್ರಿಂಟ್‌ ವರ್ಷನ್‌ ನಂಬಿದವರಿಗೆ ತೊಂದರೆ ಆಗಲ್ಲವಾ?

ಪ್ರಕಟಿತ ಪುಸ್ತಕಗಳನ್ನು ಓದುವ ಜನರೇ ಬೇರೆ. ಡಿಜಿಟಲ್‌ ಆವೃತ್ತಿಗಳ ಓದುಗರು/ ಕೇಳುಗರೇ ಬೇರೆ. ಹಾಗಾಗಿ, ಪ್ರಿಂಟ್‌ ಆಗುವ ಪುಸ್ತಕಗಳಿಗೆ ಡಿಜಿಟಲ್‌ ವ್ಯವಸ್ಥೆಯಿಂದ ಯಾವುದೇ ತೊಂದರೆಯೂ ಆಗುವುದಿಲ್ಲ. “ಮೈಲ್ಯಾಂಗ್‌ ಬುಕ್ಸ್‌’ನಲ್ಲಿ ಒಂದೂವರೆ ಲಕ್ಷದಷ್ಟು ಬಳಸುಗರು ಇದ್ದಾರೆ. ಕನ್ನಡ ಪುಸ್ತಕಗಳನ್ನು ಇ ಬುಕ್‌ ಮತ್ತು ಆಡಿಯೋ ಪುಸ್ತಕದ ರೂಪದಲ್ಲಿ ಕೊಂಡು ಓದುವ, ಕೇಳುವ ಆಯ್ಕೆಗಳಿವೆ. ಇದು 3 ವರ್ಷದಿಂದ ಯಶಸ್ವಿಯಾಗಿ ನಡೆಯುತ್ತಿದೆ. ಪ್ರಕಾಶಕರಿಗೂ, ಲೇಖಕರಿಗೂ, ಓದುಗರಿಗೂ ಸಾಕಷ್ಟು ಅನುಕೂಲ ಕಲ್ಪಿಸಿದೆ. 3 ತಿಂಗಳ ಹಿಂದೆ ಶುರುವಾದ “ಮೈಲ್ಯಾಂಗ್‌ ಆಡಿಯೋ’ ಬರೆಯುವವರು ಮತು  ವಾಚಿಸುವವರನ್ನು ಜೋಡಿಸುತ್ತ, ಆಡಿಯೋದ ಮೂಲಕ ಒಂದು ಗಟ್ಟಿಯಾದ ಸಮುದಾಯ ರೂಪಿಸುವ ಗುರಿ ಹೊಂದಿದೆ.

ಇದು ಮೊಬೈಲ್‌ಗ‌ಳ ಕಾಲ. ಎಲ್ಲರ ಜ್ಞಾನ ಮತ್ತು ಮನರಂಜನೆಯ ಬಹುತೇಕ ಅಗತ್ಯಗಳನ್ನು ಮೊಬೈಲ್‌ ಮತ್ತು ಇಂಟರ್‌ನೆಟ್‌ ಪೂರೈಸುತ್ತಿವೆ. ಈ ಚಲನೆ ಇನ್ನೆಂದೂ ಹಿಮ್ಮುಖವಾಗುವುದಿಲ್ಲ. ಹೀಗಿರುವಾಗ ಈ ಬದಲಾವಣೆಗೆ ಒಗ್ಗಿಕೊಂಡು ಸಾಹಿತ್ಯದ ಎಲ್ಲ ಪ್ರಕಾರಗಳ ಪ್ರಸಾರಕ್ಕೂ ಡಿಜಿಟಲ್‌ ಮಾಧ್ಯಮಗಳನ್ನೂ ಸೂಕ್ತವಾಗಿ ಬಳಸಿಕೊಂಡರೆ, ಒಂದಷ್ಟು ಹೊಸ ಓದುಗರನ್ನು ತಲುಪಲು ಸಾಧ್ಯವಿದೆ. ಇದು ಭಾಷೆಯ ಬೆಳವಣಿಗೆಗೂ ಪೂರಕವಾದ ಹೆಜ್ಜೆಯಾಗಲಿದೆ.

ವಾರದ ಅತಿಥಿ: ವಸಂತ ಶೆಟ್ಟಿ ಮುಖ್ಯಸ್ಥರು, ಮೈಲ್ಯಾಂಗ್‌ ಬುಕ್‌

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.