ಕವಿಪತ್ನಿ ದಿನಾಚರಣೆ
Team Udayavani, Mar 3, 2019, 12:30 AM IST
ಕೆ. ಎಸ್. ನರಸಿಂಹಸ್ವಾಮಿಯವರ ಪತ್ನಿ ವೆಂಕಮ್ಮನವರ ನೆನಪಿನಲ್ಲಿ ನಿನ್ನೆ ಬೆಂಗಳೂರಿನಲ್ಲಿ ಕವಿಪತ್ನಿ ದಿನಾಚರಣೆ. ಕವಿ ಎಸ್. ಜಿ. ಸಿದ್ದರಾಮಯ್ಯನವರ ಪತ್ನಿ ಪ್ರೇಮಲೀಲಾ ಅವರಿಗೆ “ನಿನ್ನೊಲುಮೆಯಿಂದಲೇ…’ ಗೌರವ ಪ್ರದಾನ.
ದಾಂಪತ್ಯ ನಿಷ್ಠೆ ಎನ್ನುವ ಪದ ಈ ದಿನಗಳಲ್ಲಿ ಅಂಥ ಮಹಣ್ತೀದ್ದೆಂದು ಅನ್ನಿಸುವುದಿಲ್ಲ. ಜೀವನಪೂರ್ತಿ ಒಟ್ಟಿಗೆ ಕಳೆಯಬೇಕು ಅಂತ ಬಯಸಿ-ಪ್ರೀತಿಸಿ ಮದುವೆಯಾಗುವ ಸಂಬಂಧಗಳೂ ಹಾಳಾಗುತ್ತವೆ. ಕೆಲವು ಅಂಟಿಕೊಂಡಿರುತ್ತವೆ. ಕೆಲವು ಬೆಳೆಯುತ್ತವೆ. ಕೆಲವು ಎಲ್ಲವನ್ನೂ ದಾಟಿ ಮುಂದಿನ ಜನಾಂಗಕ್ಕೂ ಉಳಿದುಬಿಡುತ್ತವೆ. ಒಂದು ಜಿಜ್ಞಾಸೆ ನನ್ನ ಕಾಡುತ್ತದೆ- ಹಾಗಾದರೆ ದಾಂಪತ್ಯ ಎಂದರೆ ಏನು ಅಂತ. ದೇಹ ನಂಟಿನ ಕೊನೆಯಲ್ಲಿ ಉಳಿವ ಪ್ರೇಮದ ಹೂ ಮಾತ್ರ.
ಇದು ವಿಸ್ಮಯ! ಒಂದು ಹೆಣ್ಣಿಗೊಂದು ಗಂಡು ಹೇಗೋ ಏನೋ ಹೊಂದಿಕೊಂಡು ಎನ್ನುವ ಕೆ. ಎಸ್. ನರಸಿಂಹಸ್ವಾಮಿಯವರ ಮಾತಿನಂತೆ ದುಃಖವನ್ನೂ ಹಗುರ ಮಾಡುವ ಈ ದಾಂಪತ್ಯ ಪ್ರೇಮ ಬಹು ದೊಡ್ಡದು. ನೋಡಲಿಕ್ಕೆ ಪ್ರಾಕೃತಿಕವಾದ ಸಂಗತಿಯಷ್ಟೇ ಎಂದು ಕಾಣುವ ಈ ಒಡನಾಟ ಜಗದ ಜೀವದ ನಂಟಿನ ಲೀಲೆಯೇ ಸರಿ. ಇಷ್ಟೆಲ್ಲ ನನಗೆ ನೆನಪಾಗುತ್ತಿರುವುದು ಈ ಸಲ ಕೆ.ಎಸ್.ನ. ಅವರ ಪತ್ನಿ ವೆಂಕಮ್ಮನವರ ಹೆಸರಲ್ಲಿ ಕೊಡಮಾಡುತ್ತಿರುವ ಕವಿಪತ್ನಿ ದಿನದ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಪ್ರೇಮಲೀಲಾ ಎಸ್. ಜಿ. ಸಿದ್ದರಾಮಯ್ಯ ಅವರನ್ನು ಮಾತನಾಡಿಸಿದಾಗ.
“ನಿಮಗೆ ಈ ಪ್ರಶಸ್ತಿ ಸಿಕ್ಕಿದೆ ಎಂದು ತಿಳಿದಾಗ ಏನನ್ನಿಸಿತು?’ ಎಂದು ಕೇಳಿದೆ. ತಕ್ಷಣ ಅವರು ತಮ್ಮ ಮಗ ಹಿಂದೆ ಆಡಿದ ಮಾತುಗಳನ್ನು ನೆನೆಸಿಕೊಂಡರು. “ಅಪ್ಪನ ಜೊತೆ ಇಷ್ಟು ವರ್ಷ ಇದ್ದೀಯಲ್ಲ, ನಿನಗೆ ಪ್ರಶಸ್ತಿ ಬರಬೇಕು’ ಅಂದಿದ್ದ, ಅದು ಈಗ ನೆರವೇರಿತು. ಆದರೆ ಇಂಥಾದ್ದೊದು ಪ್ರಶಸ್ತಿ ಇದೆ ಅಂತ ನನಗೆ ಗೊತ್ತಿರಲಿಲ್ಲ ಎಂದು ಫಕ್ಕನೆ ನಕ್ಕರು. ಆ ನಗುವಿನ ಜೊತೆಗೆ ಕಣ್ಣ ಒಳಗೆ ಒಂದು ಹನಿ ಫಳ್ಳೆಂದು ಹೊಳೆಯಿತು. ಏರಿಳಿತಗಳಿಲ್ಲದ ಹದವಾದ ಮಾತು, ಮಿತವಾದ ನಗು, ವ್ಯಕ್ತಿತ್ವದಲ್ಲಿ ಎದ್ದು ಕಾಣುವ ಗಾಂಭೀರ್ಯ, ಸ್ವಾಭಿಮಾನ ಎಲ್ಲವೂ ಪ್ರೇಮಲೀಲಾ ಎನ್ನುವ ಹೆಣ್ಣನ್ನಾಗಿಸಿದೆಯಾ ಅನ್ನಿಸಿದ್ದು ಸುಳ್ಳಲ್ಲ. ಹೌದು, ಕನ್ನಡ ಭಾಷೆಯನ್ನು ಆಡಳಿತಾತ್ಮಕವಾಗಿ ಅನುಷ್ಠಾನಗೊಳಿಸಲು ಅಹರ್ನಿಶಿ ದುಡಿಯುತ್ತಿರುವ ಕನ್ನಡದ ಹೆಸರಾಂತ ಕವಿ ಎಸ್. ಜಿ. ಸಿದ್ದರಾಮಯ್ಯನವರ ಪತ್ನಿ ಈಕೆ. ಸಿದ್ದರಾಮಯ್ಯನವರ ಸಾಧನೆಯ ಹಿಂದಿರುವ ಪ್ರಮುಖ ಶಕ್ತಿ.
ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿರುವ ಎಸ್.ಜಿ.ಎಸ್. ಅವರ ಬೆಂಬಲಕ್ಕೆ ನಿಂತಿರುವ ಪ್ರೇಮಲೀಲಾ ಸರಳ ಸಜ್ಜನಿಕೆಯ ಮಹಿಳೆ. ಹಾಗೆಂದು ಅವರ ದಾಂಪತ್ಯದಲ್ಲಿ ಜಗಳ ಇಲ್ಲ ಅಂತಲ್ಲ. ಅಂಥಾದ್ದೇ ಸಂದರ್ಭಗಳನ್ನು ಭಾವುಕವಾಗಿ ನೆನೆಸಿಕೊಳ್ಳುತ್ತಾರೆ. ಅಂಥ ಜಗಳದಿಂದ ಸಿಕ್ಕ ವಾಚನ್ನು ಭದ್ರವಾಗಿರಿಸಿಕೊಂಡಿ¨ªಾರೆ ! ತನಗಿಷ್ಟವಲ್ಲದ್ದನ್ನು ಗಂಡ ಬಲವಂತ ಮಾಡಿದಾಗ ಸಿಡಿಮಿಡಿಗೊಂಡಿದ್ದಾರೆ. ಮದುವೆಗೂ ಮುಂಚೆ ತಂದುಕೊಟ್ಟಿದ್ದ ಮೆರೂನ್ ಕಲರ್ ಸೀರೆಯನ್ನು, ಮದುವೆಯಾದ ನಂತರ ತಂದುಕೊಟ್ಟಿದ್ದ ಹಸಿರು ಮೈಸೂರ್ ಸಿಲ್ಕ್ ಸೀರೆಯನ್ನು ಜಗತ್ತಿನ ಅಮೂಲ್ಯವಸ್ತು ಎಂಬಂತೆ ನೆನೆಯುತ್ತಾರೆ. ಗಂಡನಿಗೆ ಇಷ್ಟವಾದ ಬಸ್ಸಾರು-ಮುದ್ದೆ, ಅಕ್ಕಿರೊಟ್ಟಿ, ಹೋಳಿಗೆ ಸಾರಿಗೆ ಪ್ರೀತಿಯನ್ನು ಬೆರೆಸಿ ಇನ್ನಷ್ಟು ರುಚಿಕಟ್ಟಾಗಿಸುತ್ತಾರೆ.
ದಾಂಪತ್ಯ ನಿಂತಿರುವುದು ಪರಸ್ಪರ ಅವಲಂಬನೆ, ಲಾಲನೆಗಳಲ್ಲಿ. ಇದು ಪ್ರಕೃತಿಯ ಮೂಲಭೂತ ಗುಣವೂ ಹೌದು. ಇದೇ ದಾಂಪತ್ಯದ ಶೀಲಗುಣ. ಈ ಅವಲಂಬನೆ ಭಾವನಾತ್ಮಕವೂ, ಗುಣಾತ್ಮಕವೂ ಆಗಬೇಕಿರುವ ಜರೂರು ಇರುತ್ತದೆ. ಸಾಮರಸ್ಯವೇ ಮುಖ್ಯವಾದ ಬದುಕಿನಲ್ಲಿ ಸರಿ-ತಪ್ಪುಗಳ ಆಚೆ ಒಂದು ಧ್ಯಾನ ಇದೆ. ಪ್ರೇಮದ ವಿನಾ ಬೇರೆ ದಾರಿಯಿಲ್ಲ. ತನ್ನ ಜೀವನದ ಭಾಗಸ್ವಾಮ್ಯವಾದ ಗಂಡನ ಬೆಳವಣಿಗೆಯಲ್ಲೇ ಸಂತಸ ಪಡುವವಳು ಹೆಂಡತಿ. ಕವಿ ಪತ್ನಿ ವೆಂಕಮ್ಮನವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಪ್ರೇಮಲೀಲಾ ಅವರನ್ನು ಸನ್ಮಾನಿಸಿದ್ದು ಅರ್ಥಪೂರ್ಣವೇ ಸರಿ.
ವೆಂಕಮ್ಮ ಕೆ. ಎಸ್. ನರಸಿಂಹಸ್ವಾಮಿ
ವೆಂಕಮ್ಮ ನರಸಿಂಹಸ್ವಾಮಿ ಹುಟ್ಟಿದ್ದು ಭಾದ್ರಪದ ಮಾಸ 1922ರ ಆಸುಪಾಸು. ನಾಡಿಗ್ ಭೀಮರಾವ್ ಅವರ ಒಬ್ಬಳೇ ಮಗಳು. 1935ರಲ್ಲಿ ಕೆ.ಎಸ್.ನ. ತಮ್ಮ ಭಾವಿಪತ್ನಿ ವೆಂಕಮ್ಮನನ್ನು ನೋಡಲು ತಿಪಟೂರಿಗೆ ಹೋಗಿದ್ದರಂತೆ! ಮೊದಲ ಭೇಟಿಯ ಸಂಭ್ರಮವನ್ನು ಎಷ್ಟೋ ವರ್ಷಗಳ ನಂತರವೂ ಅಷ್ಟೇ ಉತ್ಸುಕತೆಯಿಂದ ಹೇಳುತ್ತಿದ್ದರು: “ಆಗ ಆಕೆಗೆ ಹದಿಮೂರೋ ಹದಿನಾಲ್ಕೋ ವರ್ಷವಿರಬೇಕು. ಹುಣಸೆಕಾಯಿಯನ್ನು ತನ್ನ ಬಟ್ಟೆಯಲ್ಲಿ ಸುತ್ತಿಕೊಂಡು ಶಾಲೆಯಿಂದ ಮನೆಗೆ ಅವಸರದಲ್ಲಿ ಬರುತ್ತಿದ್ದಳು…’ “ಹಾಗಾದರೆ, ನಿಮ್ಮದು ಮೊದಲ ನೋಟದ ಪ್ರೇಮವೇ?’ ಎಂದು ಕೇಳಿದರೆ, “ಆಕೆಯನ್ನು ಒಲ್ಲೆ ಎನ್ನುವುದಕ್ಕೆ ನನ್ನ ಬಳಿ ಯಾವ ಕಾರಣವಿತ್ತು? ಅದೂ ಅಲ್ಲದೆ, ನಮ್ಮ ಮಾವನಿಗೆ ನನ್ನ ಸರ್ಕಾರೀ ಕೆಲಸದ ಬಗ್ಗೆ ಮೆಚ್ಚುಗೆ ಇತ್ತು’ ಎಂದು ನಗುತ್ತಿದ್ದರು! ಆನಂತರ ಗುರುಗಳಾದ ಪ್ರೊ. ತೀ.ನಂ. ಶ್ರೀಕಂಠಯ್ಯ ಅವರು ತಮ್ಮ ಮೊದಲ ಪುಸ್ತಕ ಒಲುಮೆಯ ಉಡುಗೊರೆಯ ಮೂಲಕ ವಧೂ-ವರರನ್ನು ಆಶೀರ್ವದಿಸಿದ್ದರಂತೆ!
ಇಬ್ಬರದು ಸಾಕಷ್ಟು ವ್ಯತಿರಿಕ್ತ ಸ್ವಭಾವ. ನರಸಿಂಹಸ್ವಾಮಿ ಅಂತಮುರ್ಖಿ, ಏಕಾಂಗಿತನವನ್ನು ಇಷ್ಟಪಡುತ್ತಿದ್ದರು. ಆದರೆ, ವೆಂಕಮ್ಮನವರು ತದ್ವಿರುದ್ದ. ಅವರಿಗೆ ಜನರೊಂದಿಗೆ ಒಡನಾಡುವುದೆಂದರೆ ಇಷ್ಟ. ಆದರೂ ಆ ವ್ಯತಿರಿಕ್ತ ಸ್ವಭಾವ ಅವರ ನಡುವಿನ ಬಾಂಧವ್ಯಕ್ಕೆ ಅಡ್ಡಿಯಾಗಲಿಲ್ಲ. ಅವರ ನಡುವೆ ಜಗಳವೇ ಆಗುತ್ತಿರಲಿಲ್ಲವೆಂದೇನಿಲ್ಲ. ಸಾಂದರ್ಭಿಕ ಕೋಪದಿಂದ ಆರಂಭವಾಗುತ್ತಿದ್ದ ವೆಂಕಮ್ಮನವರ ಮಾತು ನರಸಿಂಹಸ್ವಾಮಿಯವರ ಮೌನದಿಂದ ಕೊನೆಯಾಗುತ್ತಿತ್ತು. ಜೀವನ ಮಾತ್ರ ಅವರ ಕವನಗಳಲ್ಲಿ ವ್ಯಕ್ತವಾದಂತೆ ಸಂಭ್ರಮದಲ್ಲೇ ಕಳೆಯುತ್ತಿತ್ತು.
ಅವರ ಬದುಕಿನ ಅತ್ಯಂತ ನೋವಿನ ಸನ್ನಿವೇಶವೆಂದರೆ- ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಮೈಸೂರ ಮಲ್ಲಿಗೆ ಕವನ ಸಂಕಲನದ ಕೃತಿಸ್ವಾಮ್ಯವನ್ನು ಮಾರಬೇಕಾದ ಪರಿಸ್ಥಿತಿ ಬಂದಿದ್ದು. ಅವರು ತೀರಿಹೋಗುವ ಒಂದು ವರ್ಷ ಮೊದಲು ಅದರ ಹಕ್ಕು ಪುನಃ ಸಿಕ್ಕಿತು. ಆಗ ನರಸಿಂಹಸ್ವಾಮಿಯವರು ಹೇಳಿದ್ದು ಒಂದೇ ಮಾತು, “60 ವರ್ಷದ ಹಿಂದೆ ನಮ್ಮನ್ನು ಬಿಟ್ಟು ಹೋಗಿದ್ದ ಮಗು ಇಂದು ಮನೆಗೆ ಮರಳಿ ಬಂದಿದೆ!’ ವೆಂಕಮ್ಮ ಮತ್ತು ನರಸಿಂಹಸ್ವಾಮಿ 67 ವರ್ಷಗಳನ್ನು ಒಟ್ಟಿಗೆ ಕಳೆದವರು.
ಪಿ. ಚಂದ್ರಿಕಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.