ವಿವಾದದ ಮೂಲಕವೇ ಸುದ್ದಿಯಾಗುತ್ತಿರುವ ಮಳೆ ಹುಡುಗಿ
Team Udayavani, Mar 23, 2019, 12:01 PM IST
ಕೆಲವು ನಾಯಕ ನಟಿಯರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಅನಗತ್ಯ ವಿಷಯಗಳು, ವಿವಾದಗಳಿಂದಲೇ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಹೀಗೆ ಸಿನಿಮಾಗಳಿಗಿಂತ ಹೊರತಾಗಿ ಬೇರೆ ವಿಷಯಗಳಿಗೇ ಸುದ್ದಿಯಾಗುವ ನಾಯಕಿಯರ ಸಂಖ್ಯೆಗೇನೂ ಕಡಿಮೆಯಿಲ್ಲ. ಹೀಗೆ ವಿವಾದಗಳಿಂದಲೇ ಸುದ್ದಿಯಾಗುವ ನಾಯಕಿಯರ ಲಿಸ್ಟ್‌ಗೆ ಈಗ ಮಳೆ ಹುಡುಗಿ ಪೂಜಾ ಗಾಂಧಿಯ ಹೆಸರೂ ಸೇರಿಕೊಂಡಿದೆ.
ಮುಂಗಾರು ಮಳೆ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಪೂಜಾಗಾಂಧಿ ಮೊದಲ ಚಿತ್ರದಲ್ಲೇ ಸಿನಿಪ್ರಿಯರ ಗಮನ ಸೆಳೆದ ಹುಡುಗಿ. ಮುಂಗಾರು ಮಳೆ ಚಿತ್ರದ ಬಳಿಕ ಒಂದರ ಹಿಂದೊಂದು ಚಿತ್ರಗಳ ಆಫರ್ ಪೂಜಾ ಗಾಂಧಿಯನ್ನು ಹುಡುಕಿಕೊಂಡು ಬಂದರೂ, ಯಾವ ಚಿತ್ರಗಳೂ ಪೂಜಾಗೆ ಹೇಳಿಕೊಳ್ಳುವಂಥ ಯಶಸ್ಸು ತಂದುಕೊಡಲಿಲ್ಲ. ಇದರ ನಡುವೆಯೇ ಪೂಜಾ ಗಾಂಧಿ ಹೆಸರು ಚಿತ್ರರಂಗದಲ್ಲಿ ಇಬ್ಬರು-ಮೂವರ ಜೊತೆ ತಳುಕು ಹಾಕಿಕೊಂಡಿತ್ತು. ಪೂಜಾ ಮದುವೆಯಾಗುತ್ತಾರೆ ಎಂಬ ಸುದ್ದಿ ಕೂಡ ಗಾಂಧಿನಗರದಲ್ಲಿ ಜೋರಾಗಿಯೇ ಹರಿದಾಡಿತು. ಇದಕ್ಕೆ ಪುಷ್ಟಿ ನೀಡುವಂತೆ ಪೂಜಾ ಗಾಂಧಿ, ಆನಂದ್ ಎಂಬುವವರ ಜೊತೆ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದರು. ಆನಂತರ ಅದೇನಾಯಿತೋ, ಏನೋ.., ಪೂಜಾ ಮತ್ತು ಆನಂದ್ ಸಂಬಂಧದಲ್ಲಿ ಬಿರುಕು ಮೂಡಿತು. ಕೆಲವೇ ತಿಂಗಳಲ್ಲಿ ಇಬ್ಬರ ನಡುವೆ ನಡೆದಿದ್ದ ಎಂಗೇಜ್‌ಮೆಂಟ್ ಕೂಡ ರದ್ದಾಯಿತು.
ಅದಾದ ಬಳಿಕ ರಾಜಕೀಯ ಅಂತ ಬ್ಯುಸಿಯಾದ ಪೂಜಾ ಮೊದಲು ಜೆಡಿಎಸ್, ನಂತರ ಕೆಜೆಪಿ, ಬಳಿಕ ಬಿಎಸ್‌ಆರ್ ಕಾಂಗ್ರೆಸ್- ಹೀಗೆ ಎರಡೇ ವರ್ಷದಲ್ಲಿ ಮೂರ್‍ನಾಲ್ಕು ರಾಜಕೀಯ ಪಕ್ಷಗಳ ಕದ ತಟ್ಟಿದರು. ಅಲ್ಲದೆ ರಾಯಚೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೂ ಸ್ಪರ್ಧಿಸಿ ಸೋಲುಂಡರು. ರಾಜಕೀಯ ಯಾವಾಗ ಕೈ ಹಿಡಿಯುವುದು ಕಷ್ಟ ಎಂದು ಗೊತ್ತಾಯಿತೋ, ಮತ್ತೆ ಚಿತ್ರರಂಗದತ್ತ ಮುಖ ಮಾಡಿದರು. ಆದರೆ, ಚಿತ್ರರಂಗದಲ್ಲೂ ಪೂಜಾಗೆ ಹೇಳಿಕೊಳ್ಳುವಂಥ ಅವಕಾಶಗಳು ಸಿಗಲಿಲ್ಲ. ಬಳಿಕ ತಾನೇ ಒಂದಷ್ಟು ಚಿತ್ರಗಳನ್ನು ನಿರ್ಮಿಸಿ, ನಟಿಸುವುದಾಗಿ ಘೋಷಿಸಿಕೊಂಡರು. ಏಕಕಾಲಕ್ಕೆ ಅದ್ದೂರಿಯಾಗಿ ಐದಾರು ಚಿತ್ರಗಳು ಸೆಟ್ಟೇರಿದ್ದೂ ಆಯಿತು. ಆ ನಂತರ ಆ ಚಿತ್ರಗಳು ಏನಾದವು, ತೆರೆಗೆ ಬರುತ್ತವೆಯಾ, ಇಲ್ಲವಾ? ಎಂಬ ಯಾವ ಮಾಹಿತಿಗಳೂ ಇಲ್ಲವಾಯಿತು.
ಇಷ್ಟೆಲ್ಲ ನಡೆದಿರುವಾಗಲೇ, ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ದಿ ಲಲಿತ್ ಅಶೋಕ್ ಹೊಟೇಲ್‌ನಲ್ಲಿ ರೂಮ್ ಬಾಡಿಗೆಗೆ ಪಡೆದಿದ್ದ ಪೂಜಾ, ಅದರ ಬಿಲ್ ಪಾವತಿಸದೆ ತಲೆ ಮರೆಸಿಕೊಂಡಿದ್ದಾರೆ ಎಂದು ಹೊಟೇಲ್ ವ್ಯವಸ್ಥಾಪಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಈ ಸುದ್ದಿ ಹೊರಬೀಳುತ್ತಿದ್ದಂತೆ, ಬಾಕಿ ಇರುವ ಹೊಟೇಲ್ ಬಿಲ್ ಪಾವತಿಸಿ ಪೂಜಾ ಸಂಧಾನಕ್ಕೆ ಮುಂದಾದರೂ, ಅಷ್ಟರಲ್ಲಾಗಲೇ ಈ ಪ್ರಕರಣದಲ್ಲಿ ಪೂಜಾ ಗಾಂಧಿ ಹೆಸರಿನ ಜೊತೆ ರಾಜಕಾರಣಿಯೊಬ್ಬರು ಮತ್ತು ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಹೆಸರು ಕೂಡ ತಳುಕು ಹಾಕಿಕೊಂಡಿತ್ತು.
ಆದರೆ, ಈ ಎಲ್ಲ ವಿವಾದಗಳನ್ನು ಅಲ್ಲಗಳೆಯುವ ಪೂಜಾ ಗಾಂಧಿ, ಇದು ತನ್ನ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿರುವವರ ಕೃತ್ಯ ಎನ್ನುತ್ತಾರೆ. ಒಟ್ಟಾರೆ ತನ್ನ ಸಿನಿಮಾಗಳಿಗಿಂತ, ವಿವಾದಗಳಿಗೆ ಸುದ್ದಿಯಾಗುತ್ತಿರುವ ಪೂಜಾ ಗಾಂಧಿ ಮತ್ತೆ ತನ್ನ ಸಿನಿಮಾಗಳ ಮೂಲಕ ಸುದ್ದಿಗೆ ಬರುತ್ತಾರಾ? ಅಥವಾ ಇಂತಹ ವಿವಾದಗಳ ಸುಳಿಯಲ್ಲಿ ಸಿಕ್ಕಿ ಕಳೆದು ಹೋಗುತ್ತಾರಾ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.