ಪೋಸ್ಟ್‌ಮನ್‌ ಪಾರಿವಾಳ


Team Udayavani, Apr 22, 2018, 6:00 AM IST

Pegions-Independence-Day_2B.jpg

ಒಡಿಶಾದಲ್ಲಿ ಕಳೆದ ರವಿವಾರ ಅಂದರೆ ಎ. 15 ಮಹಾಬಿಶು. ಅಂದು ಒಡಿಶಾ ಪೊಲೀಸ್‌ ಹಾಗೂ  ಕಲೆ ಹಾಗೂ ಸಂಸ್ಕೃತಿ ಪರಂಪರೆ ಸಂರಕ್ಷಿಸುವ ರಾಷ್ಟ್ರೀಯ ಸಂಸ್ಥೆ  “ಇಂಟೆಕ್‌’ ಸಂಯುಕ್ತವಾಗಿ 23 ಸಂದೇಶವಾಹಕ ಪಾರಿವಾಳಗಳ ಪ್ರದರ್ಶನ ಹಾರಾಟವನ್ನು ವ್ಯವಸ್ಥೆ ಮಾಡಿದ್ದವು.

ಪಾರಿವಾಳವೇ ಜಗತ್ತಿನ ಪ್ರಪ್ರಥಮ ಪೋಸ್ಟ್‌ಮನ್‌. ಹಾಗೆಯೇ ಇದು ಬೇಹುಗಾರಿಕೆಯಲ್ಲೂ ಮನುಷ್ಯನಿಗೆ ನೆರವಾಗುವ ಪಕ್ಷಿ.
ರಾಜ ಮಹಾರಾಜರು ಸಂದೇಶ ರವಾನೆಗಾಗಿ ಪಾರಿವಾಳಗಳನ್ನು ಬಳಸುತ್ತಿದ್ದರು. ಆಧುನಿಕ ಸಂಪರ್ಕ ವ್ಯವಸ್ಥೆ ಆರಂಭವಾದ ನಂತರವೂ ಮನುಷ್ಯ ಪಾರಿವಾಳಗಳನ್ನು ಮರೆತಿಲ್ಲ. ಪತ್ರ ರವಾನೆ, ಬೇಹುಗಾರಿಕೆಗಳಲ್ಲಿ ಪಳಗಿದ ಪಾರಿವಾಳಗಳನ್ನು ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತಿತ್ತು. ಬಾಂಬುಗಳೊಂದಿಗೆ ಪಾರಿವಾಳದ ಗೂಡುಗಳನ್ನು ಸೈನಿಕರು ಹೊತ್ತೂಯ್ಯುವುದೂ ಇತ್ತು. ಬಾಂಬ್‌ ಒಗೆದ ಮೇಲೆ ಆ ಸಂದೇಶವನ್ನು ಮೇಲಧಿಕಾರಿಗಳಿಗೆ ಮುಟ್ಟಿಸಲು ತರಬೇತಿ ಪಡೆದ ಪಾರಿವಾಳಗಳನ್ನು ಹಾರಿಬಿಡಲಾಗುತ್ತಿತ್ತು. ಭಾರತದಲ್ಲಿ ಪತ್ರ ವಿನಿಮಯಕ್ಕಾಗಿಯೇ ಪಾರಿವಾಳಗಳನ್ನು ಪಳಗಿಸುತ್ತಿದ್ದರು. ಯುದ್ಧ ಇನ್ನಿತರ ತುರ್ತು ಸಂದರ್ಭಗಳಲ್ಲಿಯೂ ಪಾರಿವಾಳಗಳನ್ನು ಬಳಸುವುದನ್ನು ರೂಢಿಗೆ ತಂದಿದ್ದು ಎರಡನೆಯ ಮಹಾಯುದ್ಧ ನಡೆದಿರುವಾಗ. ಒಡಿಶಾ ಪ್ರಾಂತ್ಯದಲ್ಲಿ ಪೊಲೀಸ್‌ ಇಲಾಖೆ ಪಾರಿವಾಳ ಪಡೆಯನ್ನು ಅಸ್ತಿತ್ವಕ್ಕೆ ತಂದಿದ್ದು 1946ರಲ್ಲಿ.

ಅಂದಾಜು ಏಳು ದಶಕಗಳಿಂದ ಒಡಿಶಾ ಪೊಲೀಸ್‌ ಇಲಾಖೆಯ ಭಾಗವಾಗಿರುವ ಪಾರಿವಾಳ ಪಡೆ ಈಗಲೂ ಕಾರ್ಯನಿರ್ವಹಿಸುತ್ತಿರುವುದು ವಿಶೇಷ ಸಂಗತಿ. “ಪೊಲೀಸ್‌ ಪಿಜನ್‌ ಸರ್ವಿಸ್‌’ ಎಂಬ ಹೆಸರಿನೊಂದಿಗೆ ಶುರುವಾದ ಪಾರಿವಾಳ ಪಡೆಯ ಸದಸ್ಯರನ್ನು ಅರಣ್ಯ, ನದಿ ಅಂಚು, ರಸ್ತೆ ಸಂಪರ್ಕ ಇಲ್ಲದ ಕಡೆಗಳಲ್ಲಿ ಶಿಬಿರ ಹೂಡುತ್ತಿದ್ದ ಪೊಲೀಸ್‌ ಪಡೆಗಳೊಂದಿಗೆ ಸಂಪರ್ಕ ಸಾಧಿಸಲು ಉಪಯೋಗಿಸಲಾಗುತ್ತಿತ್ತು. 

ಒಡಿಶಾದ ಕೋರಾಪುಟ್‌ ಜಿಲ್ಲೆಯಿಂದ ಕಾರ್ಯಾರಂಭ ಮಾಡಿದ ಪಾರಿವಾಳ ಪಡೆಯ ಕಾರ್ಯಾಚರಣೆ ಬಹುಬೇಗ ಉಳಿದ 24 ಜಿಲ್ಲೆಗಳಿಗೂ ವಿಸ್ತರಿಸಿತು. ಸುಮಾರು 700ಕ್ಕೂ ಹೆಚ್ಚು ಸಶಕ್ತ ಬೆಲ್ಜಿಯಂ ಜಾತಿಯ ಪಾರಿವಾಳಗಳು ರಾಜ್ಯದ ತುಂಬ ನಿರ್ದಿಷ್ಟ ಕೇಂದ್ರಗಳಿಗೆ ಸಂದೇಶ ರವಾನೆಯಲ್ಲಿ ತೊಡಗಿಕೊಂಡಿದ್ದವು.ಇಪ್ಪತ್ತೈದು ಕಿ. ಮೀ. ದೂರವನ್ನು 15ರಿಂದ 20 ನಿಮಿಷಕ್ಕೆ ಕ್ರಮಿಸುವ ಸಾಮರ್ಥ್ಯ ಹೊಂದಿದ್ದವು ಈ ಪಾರಿವಾಳಗಳು. ಇವುಗಳ ತಳಿ ಅಭಿವೃದ್ದಿ ಮತ್ತು ತರಬೇತಿಗಾಗಿ ಕಟಕ್‌ ಹಾಗೂ ಅಂಗುಲ್‌ಗ‌ಳಲ್ಲಿ ಕೇಂದ್ರಗಳೂ ಸ್ಥಾಪನೆಗೊಂಡವು. 

ಪಾರಿವಾಳಗಳನ್ನು ನೋಡಿಕೊಳ್ಳಲು, ಅವುಗಳಿಗೆ ಸೂಕ್ತ ತರಬೇತಿ ನೀಡಲು ಪೊಲೀಸರೂ ನಿಯುಕ್ತಿಗೊಂಡಿದ್ದರು. ಸಂದೇಶಗಳ ರವಾನೆಯ ಜವಾಬ್ದಾರಿಯನ್ನು ಪಾರಿವಾಳಗಳು ಸುಲಲಿತವಾಗಿ ನಿರ್ವಹಿಸುತ್ತ ವಿವಿಧ ಪೊಲೀಸ್‌ ಕೇಂದ್ರಗಳ ನಡುವಿನ ಸಂಪರ್ಕ ಸೇತುಗಳಾಗಿದ್ದವು.

ಕಾಲುಗಳಲ್ಲಿ ಕಟ್ಟಲಾಗುವ ಪುಟ್ಟ ಲೋಹದ ಪೆಟ್ಟಿಗೆಯಲ್ಲಿ ಇರಿಸಲಾದ ಲಿಖೀತ ಸಂದೇಶವಿರುವ ಕಾಗದ ಸುರುಳಿಗಳನ್ನು ನಿರ್ದೇಶಿತ ಜಾಗಕ್ಕೆ ಜತನದಿಂದ ತಲುಪಿಸುವ ಪಾರಿವಾಳಗಳ ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆಗೂ ಪಾತ್ರವಾಯಿತು. 1982ರಲ್ಲಿ ಪಾರಿವಾಳ ಪಡೆಯ ಕಾರ್ಯ ಮತ್ತಷ್ಟು ಪ್ರಶಂಸೆಗೆ ಕಾರಣವಾಯಿತು. ಆ ವರ್ಷ ಪ್ರವಾಹದಿಂದ ಬಾಂಕಿ ಪ್ರದೇಶ ಎಲ್ಲಾ ಬಗೆಯ ಸಂಪರ್ಕವನ್ನೂ ಕಳೆದುಕೊಂಡಿತು. ರಸ್ತೆ-ತಂತಿ ಸೌಲಭ್ಯ ಇರಲಿಲ್ಲ. ಅಂತಹ ಸಂದರ್ಭದಲ್ಲಿ ತುರ್ತು ಕಾರ್ಯಗಳಿಗೆ ಪಾರಿವಾಳಗಳು ನೆರವಾಗಿ “ಸೈ’ ಎನ್ನಿಸಿಕೊಂಡವು. ರಾಜ್ಯ ಸರ್ಕಾರ ಪರಿಹಾರ ಕಾರ್ಯ ಕೈಗೊಳ್ಳಲು ಏಕೈಕ ಸಾಧನವಾಗಿ ಕಾರ್ಯ ನಿರ್ವಹಿಸಿದವು. ಒಡಿಶಾ ಕರಾವಳಿಯಲ್ಲಿ ಚಂಡಮಾರುತ ಸಂಭವಿಸಿದಾಗಲೂ (1999) ಪಾರಿವಾಳಗಳ ಕಾರ್ಯಕ್ಷಮತೆ ಎಲ್ಲರ ಗಮನ ಸೆಳೆಯಿತು.

ನಿರ್ದಿಷ್ಟ ಕೆಲಸವಿರಲಿ, ಇಲ್ಲದಿರಲಿ ಪಾರಿವಾಳಗಳು ಮಾತ್ರ ಸನ್ನದ್ಧ ಸ್ಥಿತಿಯಲ್ಲಿ ಇರಬೇಕಾದುದು ಅತ್ಯಗತ್ಯ ಎನ್ನುತ್ತಾರೆ ಕಟಕ್‌ನಲ್ಲಿರುವ ಪಾರಿವಾಳ ಪಡೆಯ ಮುಖ್ಯಸ್ಥ ಬಿ. ಎನ್‌. ದಾಸ್‌. ಹೀಗಾಗಿ ಪ್ರತಿದಿನ ಮುಂಜಾನೆ-ಸಂಜೆ ಪಾರಿವಾಳಗಳ ಅಭ್ಯಾಸ ಇದ್ದೇ ಇರುತ್ತೆ. ಅವುಗಳಿಗೆ ಗೋಧಿ, ಬೇಳೆಕಾಳು-ಸಿರಿಧಾನ್ಯಗಳನ್ನು ಶುದ್ಧ ನೀರನ್ನು ಆಹಾರವಾಗಿ ನೀಡಲಾಗುತ್ತದೆ. ನಿಗದಿತ ಅವಧಿಯಲ್ಲಿ ಗೂಡುಗಳಿಂದ ಅವುಗಳಿಗೆ ಬಿಡುಗಡೆ, 20-30 ನಿಮಿಷಗಳ ಹಾರಾಟದ ಬಳಿಕ ಪಾರಿವಾಳಗಳು ಗೂಡು ಸೇರುತ್ತವೆ. 

ನಾವಿಂದು ಮಾಹಿತಿ ತಂತ್ರಜ್ಞಾನ ಯುಗದಲ್ಲಿದ್ದೇವೆ. ಇದು ಮೊಬೈಲ್‌-ಈಮೈಲ್‌ಗ‌ಳ ಸಮಯ. ಕ್ಷಣಮಾತ್ರದಲ್ಲಿ ಮಾಹಿತಿ ಜಗತ್ತಿನ ಯಾವ ಗಮ್ಯಕ್ಕೂ ತಲುಪುವ ಕಾಲ. ವೈರ್‌ಲೆಸ್‌, ಮೊಬೈಲ್‌, ಈಮೈಲ್‌ಗ‌ಳ ಭರಾಟೆಯಲ್ಲಿ ಪಾರಿವಾಳಗಳ ಪಡೆಯ ನಿರ್ವಹಣೆ ಕಷ್ಟಸಾಧ್ಯವೆಂಬ ನಿರ್ಧಾರಕ್ಕೆ ಆಡಳಿತ ವ್ಯವಸ್ಥೆ ಬಂದಿದೆ. ಆದರೂ ಒಡಿಶಾ ಸರ್ಕಾರ ಪಾರಿವಾಳ ಪರಂಪರೆಯನ್ನು ಸಂರಕ್ಷಿಸಿಕೊಳ್ಳಲು ತೀರ್ಮಾನಿದೆ. ಪಾರಿವಾಳ ಪಡೆ ಒಡಿಸ್ಸಾದ ಹೆಮ್ಮೆ ಎಂದು ಭಾವಿಸಿದ್ದು ಈಗಲೂ 150 ಪಾರಿವಾಳಗಳನ್ನು ಸಾಕಿ-ಸಲುಹಿ-ತರಬೇತಿಗೊಳಿಸಲಾಗುತ್ತಿದೆ. ಪ್ರತಿವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನೋತ್ಸವ ಕವಾಯತುಗಳಲ್ಲಿ ಪಾರಿವಾಳ ಪಡೆ ಪಾಲ್ಗೊಳ್ಳುತ್ತಿದೆ.

ಎಪ್ರಿಲ್‌ 15ರಂದು ಭುವನೇಶ್ವರ-ಕಟಕ್‌ ನಡುವಿನ 25 ಕಿಲೋ ಮೀಟರ್‌ ದೂರವನ್ನು ಕೇವಲ ಅರ್ಧ ಗಂಟೆಯಲ್ಲಿ ಹಾರಿಬಂದ ಪಾರಿವಾಳಗಳು ತಾವು ಹೊತ್ತುತಂದ ಸಂದೇಶಗಳನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ತಲುಪಿಸಿ ಕ್ರೀಡಾಂಗಣದಲ್ಲಿ ಚಪ್ಪಾಳೆ ಗಿಟ್ಟಿಸಿದವು.

– ಎನ್‌. ಜಗನ್ನಾಥ ಪ್ರಕಾಶ್‌

ಟಾಪ್ ನ್ಯೂಸ್

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Untitled-1

Kasaragod Crime News: ಬೈಕ್‌ ಕಳವು; ಇಬ್ಬರ ಬಂಧನ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.