ಅಕ್ಷರಗಳಲ್ಲಿ ಬದುಕಿನ ಬೆಲೆ
Team Udayavani, Sep 16, 2018, 6:00 AM IST
ಇದು ಲೇಖಕ ಚಂದ್ರಶೇಖರ ಪಾತೂರು ಅವರ ಚೊಚ್ಚಲ ಕೃತಿ. ಸುಮಾರು ಅರುವತ್ತರಷ್ಟು ಲೇಖನಗಳ ಗುತ್ಛ . ಇಲ್ಲಿನ ಬಹುಪಾಲು ಬರಹಗಳು ಇನ್ನೂರು-ಮೂನ್ನೂರು ಶಬ್ದ ಮೀರಿಲ್ಲ. ಓದುವ ವ್ಯವಧಾನ ಕಳೆದುಕೊಂಡ ಕಾಲಕ್ಕೆ ಸೂಕ್ತವಾದ ಚುಟುಕು ಬರಹಗಳಾದರೂ ಲೇಖಕರನ್ನು ಕಾಡಿದ ವಸ್ತುವಿನ ಕಾರಣಕ್ಕಾಗಿ ಓದಲೇಬೇಕಾದ ಕೃತಿ. ಕಾದಂಬರಿಯಂತೆ ದೀರ್ಘವಾಗಿ ಬರೆಯಬಹುದಾದ ಅತ್ಯಮೂಲ್ಯ ಅಂಶಗಳನ್ನು ಆಯ್ದು ಸಂಕ್ಷೇಪಿಸಿದ ಕಲೆಗಾರಿಕೆ ಇಲ್ಲಿನ ಬರಹಗಳಲ್ಲಿದೆ.
ಕಳೆದೆರಡು ದಶಕಗಳಿಂದ ನಮ್ಮ ಜೀವನಶೈಲಿ-ಸಂಬಂಧ ಗಳಲ್ಲಿ ವಿಪರೀತ ಪಲ್ಲಟಗಳು ಸಂಭವಿಸಿವೆ. ಮನೆ-ಮನಗಳಿಗೆ ಬದಲಾವಣೆಯ ಗಾಳಿ ಬೀಸಿವೆ. ಸಾಕಷ್ಟು ಪಡೆದುಕೊಂಡಿವೆ. ಅವೆಲ್ಲ ಮೂರ್ತರೂಪದಲ್ಲಿ ನಮ್ಮ ಮುಂದಿವೆ. ಆದರೆ, ಅಭಿವೃದ್ಧಿಯ ವೇಗ, ತಂತ್ರಜ್ಞಾನಗಳ ಮಹಾಪೂರ, ಮಾರುಕಟ್ಟೆಯ ಕಬಂಧಬಾಹುಗಳಿಗೆ ಸಿಲುಕಿ ಜೀವನ ಸ್ಪರ್ಧೆಯಾಗುತ್ತಿದೆ. ಗ್ರಾಮೀಣ ಬದುಕಿನಲ್ಲಿದ್ದ ಬಾಯಿತುಂಬಾ ಮಾತುಕತೆ, ಬಾಲ್ಯದ ನಿರಾಳತೆ, ರೇಡಿಯೋ ಉಂಟು ಮಾಡುತ್ತಿದ್ದ ಬೆರಗು, ಊರ ಸಂತೆ, ಜಾತ್ರೆಯ ಸುತ್ತಾಟ- ಇವೆಲ್ಲ ಉಂಟು ಮಾಡುತ್ತಿದ್ದ ಆನಂದ ಲೇಖಕರನ್ನು ಕಾಡುತ್ತದೆ. ಸವಿಸವಿ ನೆನಪುಗಳೇ ಇಲ್ಲಿನ ಬರಹಗಳ ಜೀವಾಳ.
ಉಳಿದಂತೆ ಮನುಷ್ಯಲೋಕದ ಸಂಕುಚಿತತೆ, ಕೆಟ್ಟ ಕುತೂಹಲ, ಸಾಕಷ್ಟು ಇದ್ದೂ ಅತೃಪ್ತಿಗೊಳ್ಳುವ ಮನಸ್ಸು, ನೀರು, ಪ್ಲಾಸ್ಟಿಕ್, ಆರೋಗ್ಯ ಮೊದಲಾದ ಜೀವನ್ಮುಖೀ ವಿಷಯಗಳ ಕುರಿತ ಬೆಲೆಕಟ್ಟಲಾಗದ ಬರಹಗಳು ಈ ಕೃತಿಯಲ್ಲಿದೆ. ನಮ್ಮೆಲ್ಲರ ಬದುಕಿನ ಕಥನವಾಗಿರುವುದರಿಂದ ಇಲ್ಲಿನ ಬರಹಗಳು ನಮಗೆ ಆಪ್ತವಾಗುತ್ತವೆ.
ಬದುಕಿನ ಬೆಲೆಯನೇನಾದರೂ ಬಲ್ಲಿರಾ…(ಅಂಕಣ ಬರಹಗಳ ಸಂಕಲನ)
ಲೇ.: ಚಂದ್ರಶೇಖರ ಪಾತೂರು (ಮೊ : 9964105598)
ಪ್ರ.: ಆಕೃತಿ-ಆಶಯ ಪಬ್ಲಿಕೇಶನ್ಸ್, ಲೈಟ್‌ಹೌಸ್ ಹಿಲ್ ರೋಡ್, ಮಂಗಳೂರು-1 (ಮೊ : 0824-2443002)
ಮೊದಲ ಮುದ್ರಣ: 2018 ಬೆಲೆ : 120 ರೂ.
– ಯೋಗೀಶ ಕೈರೋಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.