ತೇರಗಾಂವ್‌ನಲ್ಲಿ ಕನ್ನಡ ಭುವನೇಶ್ವರಿಯ ಮೆರವಣಿಗೆ
Team Udayavani, Apr 16, 2017, 3:45 AM IST
2014ರ ಜ. 26 ರವರೆಗೆ ಈ ಊರಿಗೆ ಅಂಥಾ ಐಡೆಂಟಿಟಿಯೇನೂ ಇರಲಿಲ್ಲ. ಸುಮ್ಮನೆ ಕಾರವಾರ-ಬೆಳಗಾವಿ ಹೆ¨ªಾರಿಯ ಮೇಲೆ ಪವಡಿಸಿದ್ದ ಎಲ್ಲಾ ಹಳ್ಳಿಗಳಂತೆ ಆ ಊರಿಗೂ ನೀರು, ರೋಗ, ರುಜಿನ, ಬಡತನ, ಕಿತ್ತು ಹೋದ ರಸ್ತೆಗಳು, ಬಣ್ಣ ಕಾಣದ ಮನೆಗಳು ಸಣ್ಣ ಪುಟ್ಟ ಸಾಮಾಜಿಕ ವೈರುಧ್ಯದ ಭಿನ್ನಾಭಿಪ್ರಾಯದ ಜಗಳಗಳು ಹೀಗೆ ಭಾರತದ ಎಲ್ಲಾ ಅಪ್ಪಟ ಹಳ್ಳಿಗಳಂತೆ ಇದೂ ಬದುಕಿ ಬಿಟ್ಟು ತೆವಳಿಕೊಂಡೆ ಹೋಗುತ್ತಿತ್ತು. ಅದಕ್ಕೆ ಅನಾಹುತಕಾರಿಯಾಗಿ ಸೇರ್ಪಡೆಯಾಗುತ್ತಿದ್ದುದು ಮದ್ಯವೆಂಬ ವ್ಯಸನ ಮತ್ತು ಅದಕ್ಕೆ ತೀರ ಹೈಸ್ಕೂಲು ಕಾಲೇಜು ಎನ್ನದೆ ಮಕ್ಕಳು ಬಲಿಯಾಗತೊಡಗಿದಾಗ ಊರು ಬೆಚ್ಚಿ ಬಿದ್ದಿತ್ತು. ಇದಕ್ಕೆ ಬೆಂಬಲವಾಗಿ ಗೋವೆಯ ಅಗ್ಗದ ಮದ್ಯ ಇಲ್ಲಿ ನೀರಿನಂತೆ ಪ್ರವಹಿಸುತ್ತಿತ್ತು.
ಎಲ್ಲೆಡೆಗೂ ಇವತ್ತು ಕುಡಿತ ಎನ್ನುವುದು ರಕ್ತದಲ್ಲಿ ಸೇರಿ ಸಾಯಿಸುವ ನಿಧಾನ ವಿಷವಾಗಿ ದೇಶಾದ್ಯಂತ ಘೀಳಿಡುತ್ತಿದೆ. ಈ ಊರೂ ಅದರಿಂದ ಹೊರತಾಗಿರಲಿಲ್ಲ. ಆದರೆ ಯಾವಾಗ ಅದು ಕೈ ಮೀರಿ ಹೋಗುತ್ತಿದೆ ಎನ್ನುವುದು ಸ್ವತಃ ಹೊಸ ತಲೆಮಾರಿನ ಹುಡುಗರಿಗೇ ಅರಿವಿಗೆ ಬಂತೋ ಕೂಡಲೇ ಊರಿನ ಹುಡುಗರೆಲ್ಲಾ ಒಂದು ಸೈನ್ಯ ಕಟ್ಟಿಕೊಂಡರು. ಅದರ ಹೆಸರು ಶ್ರೀ ರಾಮ ಯುವ ಕೇಂದ್ರ.
ಆ ಮೂಲಕ ಮೊದಲ ಬಾರಿಗೆ ಊರಿನಲ್ಲಿ ಇವತ್ತಿಗೂ ಗ್ರಾಮ ಪದ್ಧತಿಯಾದ ಡಂಗೂರ ಸಾರುವ ಮೂಲಕ ಕುಡಿತಕ್ಕೆ ನಿಷೇಧ ಹೇರಲಾಯಿತು. ಈವತ್ತಿಗೂ ಇಲ್ಲಿ ಸಾಮೂಹಿಕ ನಿರ್ಣಯಗಳನ್ನು ಸಂಜೆಯ ಎಂಟು ಗಂಟೆಯ ಹೊತ್ತಿಗೆ ಸಾರುವುದರ ಮೂಲಕವೇ ತಿಳಿಯಪಡಿಸಲಾಗುತ್ತದೆ. ಕುಡಿತ ನಿಯಂತ್ರಣಕ್ಕಾಗಿ ಪಕ್ಕದ ತಾಲೂಕಾ ಪ್ರದೇಶದ ಪೊಲೀಸ್ ಠಾಣೆಯ ನೆರವನ್ನು ಪಡೆಯಲಾಯಿತು. ಮಾತಿಗೆ ತಪ್ಪಿ ಊರಿನ ಸಮಸ್ತರ ಅಭಿಪ್ರಾಯ ಮೀರಿ ಕುಡಿದು ಬಂದವರನ್ನು ಠಾಣೆಗೊಪ್ಪಿಸುವ ಕಾರ್ಯಕ್ಕೆ ಮುಂದಾದರು. ಅದಕ್ಕೂ ಮೊದಲು ಅವರನ್ನು ಸ್ಥಳೀಯವಾಗೇ ಮನವೊಲಿಸುವ ಕಾರ್ಯ ನಡೆಯಿತು. ಒಪ್ಪದವರನ್ನು ಬಲವಂತವಾಗಿ ಸಾಮೂಹಿಕ ಸಾಮಾಜಿಕ ನಿರ್ಣಯಕ್ಕೆ ಬದ್ಧರಾಗುವಂತೆ ಮಾಡಲಾಯಿತು. ಮೂರೇ ತಿಂಗಳಲ್ಲಿ ಸಮಸ್ತ ಚಟಗಳು ಹಿಡಿತಕ್ಕೆ ಬಂದವು. ನೋಡುನೋಡುತ್ತಿದ್ದಂತೆ ವ್ಯಸನ ಬಾಧೆಯಿಂದ ಗ್ರಾಮ ಹೊರಬಂದಿತ್ತು. ಅಂಥಾ ಗ್ರಾಮದಲ್ಲೀಗ ಸಾಹಿತ್ಯದ ತೇರು ಏಳೆಯಲು ಊರು ಸಿದ್ಧವಾಗುತ್ತಿದೆ.
ಅದು ತೇರಗಾಂವ್ ಗ್ರಾಮ.
ಇದು ಇತ್ತ ಮಲೆನಾಡೂ ಅಲ್ಲ. ಅತ್ತ ಅಪ್ಪಟ ಬಯಲು ಸೀಮೆಯೂ ಅಲ್ಲ. ಅವೆರಡರ ಮಧ್ಯೆ ತನ್ನದೇ ಸ್ವಂತಿಕೆಯನ್ನು ಗುರುತಿಸಿಕೊಂಡಿರುವ ನಾಡಿಗೆ ಇತಿಹಾಸದಲ್ಲಿ 1920 ರ ಸುಮಾರಿಗೆ ಗಾಂಧೀಜಿ ಭೇಟಿಯಾದ ಸಂಭ್ರಮವಿದ್ದರೆ, ಇತ್ತ ಪುರಾತನ ಕಾಲದಿಂದಲೂ ತನ್ನತನ ಕಾಯ್ದುಕೊಂಡ ಹೆಗ್ಗಳಿಕೆ ಇದಕ್ಕಿದೆ. ಅದಕ್ಕೆ ಪೂರಕವಾಗಿ ಈಗಲೂ ಊರಿನ ಪ್ರಮುಖ ನಿರ್ಣಯಗಳೆÇÉಾ ಪಂಚಾಯ್ತಿಕೆಯÇÉೇ ನಿರ್ಧಾರವಾಗುತ್ತವೆ.
ಉತ್ತರಕನ್ನಡ ಜಿÇÉೆಯ ಹಳಿಯಾಳ ತಾಲೂಕಿನಲ್ಲಿ ಸ್ವಂತ ಊರಿನಲ್ಲಿ ಒಂದು ಗ್ರಾಮ ಪಂಚಾಯಿತಿ ಹೊಂದಿರುವ ಹೆಗ್ಗಳಿಕೆಯ ಊರಿನಲ್ಲೀಗ 20 ನೇ ಜಿÇÉಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದ್ದು, ಗ್ರಾಮ ಮುಗುಮ್ಮಾಗಿ ಆತಿಥ್ಯ ವಹಿಸಿಕೊಳ್ಳಲು ಸಿದ್ಧವಾಗಿ ಮತ್ತೂಮ್ಮೆ ದಾಖಲೆ ಮಾಡಲು ಸಿದ್ಧವಾಗುತ್ತಿದೆ. ಇದೇ ಬರುವ ಏಪ್ರಿಲ್ 29-30 ರಂದು ತೇರಗಾಂವ್ ಗ್ರಾಮದಲ್ಲಿ ಜಿÇÉೆಯ 20 ನೇ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಇದು ಇತಿಹಾಸದ ಮಟ್ಟಿಗೆ ಮೊದಲ ಬಾರಿಗೆ ಹಳ್ಳಿಯೊಂದರಲ್ಲಿ ಜಿÇÉಾ ಮಟ್ಟದ ಸಮ್ಮೇಳನದ ಆಯೋಜನೆಯಾಗುತ್ತಿದೆ.
ಇದಕ್ಕಾಗಿಯೇ ವಿಶೇಷ ಬಂಡಿಯ ಸಿದ್ಧತೆ ನಡೆಯುತ್ತಿದ್ದು ಊರಿನಲ್ಲಿ ಸುಮಾರು 180 ವರ್ಷ ಇತಿಹಾಸವಿರುವ ಕೇವಲ ಹೋಳಿ ಹಬ್ಬಕ್ಕೆ ಮಾತ್ರ ಬಳಸುವ ಬಂಡಿಯನ್ನು ಜಾತ್ರೆಯಲ್ಲಿ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆಗಾಗಿ ಸಿದ್ಧಪಡಿಸಲಾಗುತ್ತಿದೆ.
ಆ ದಿನ ಇಲ್ಲಿನ ವಿಶೇಷವಾದ ಗೋಧಿ ಹುಗ್ಗಿ ಮತ್ತಿತರ ಊಟದ ಮೆನು ಸಿದ್ಧವಾಗಿದೆ. ಜಿÇÉಾ ಸಮ್ಮೇಳನಗಳಲ್ಲಿ ಅಪರೂಪವಾಗಿರುವ ಪುಸ್ತಕ ಮಳಿಗೆಗಳು ಇಲ್ಲಿ ಕಾಣಿಸಿಕೊಳ್ಳಲಿದ್ದು ಮೊದಲ ದಿನ ಸರಿ ಸುಮಾರು ಐದು ಸಾವಿರ ಜನರ ನಿರೀಕ್ಷೆ ಮಾಡಲಾಗಿದೆ. ಆ ಮಟ್ಟಿಗೆ ತಣ್ಣಗೆ ತನ್ನ ಪಾಡಿಗಿದ್ದ ಹಳ್ಳಿ ಸದ್ದು ಮಾಡುತ್ತಿದೆ.
– ಸಂತೋಷ ಕುಮಾರ್ ಮೆಹಂದಳೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.