ಪ್ರೊಪೋಸಲ್ಲು


Team Udayavani, Aug 12, 2018, 6:00 AM IST

38.jpg

ಹಲೋ, ಡಾಕ್ಟರ್‌….ಅವರಾ?”
“”ಹೌದು… ಯಾರು ಮಾತಾಡ್ತಿರೋದು?”
“”ನಾನು ಆರಾಧ್ಯ ಅಂತಾ, ಮೈಸೂರಿಂದ ಮಾತಾಡ್ತಿದೀನಿ. ನನ್ನ ಮಗಳು ಮೈಕ್ರೋ ಬಯಾಲಜಿ. ಅವಳ ಬಗ್ಗೆ ಕೇಳಬೇಕಿತ್ತು, ನಿಮ್ಮ ಹತ್ರಾ”
ಸ್ನಾತಕೋತ್ತರ ವಿಭಾಗದಲ್ಲಿ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸು ತ್ತಿರುವ ನನಗೆ ಹಲವರಿಂದ ಕರೆ ಬರುತ್ತದೆ. ಈಗ ನಮ್ಮಲ್ಲಿಯೂ ಎಮ್ಮೆಸ್ಸಿ ಅಡ್ಮಿಷನ್‌ ನಡೆಯುತ್ತಿರುವುದರಿಂದ ಅದರ ಕುರಿತಾಗಿ ಕರೆಯಿರಬೇಕೆಂದು ಭಾವಿಸಿ “ಹಾಂ, ಕೇಳಿ ಕೇಳಿ..’ ಎಂದು ಅವಸರಿಸಿದೆ. ವಾಸ್ತವವಾಗಿ, ನಮ್ಮ ಕಾಲೇಜಿನಲ್ಲಿ ಅಡ್ಮಿಷನ್‌ ಮುಗಿದು ಹೊಸ ಮಕ್ಕಳಿಗೆ ಓರಿಯಂಟೇಷನ್‌ ಕಾರ್ಯಕ್ರಮ ಶುರುವಾಗಿತ್ತು. ಈ ಸಂದರ್ಭದಲ್ಲಿ ನನಗೆ ಆಹಾರ ವಿಭಾಗದ ಹೊಣೆ ಹೊರಿಸಲಾಗಿತ್ತು. ಈ ಕರೆ ಬಂದಾಗ ಸ್ವಯಂಸೇವಕರು ಯಾರ ತಟ್ಟೆಗೆ ಏನೇನು ಬಡಿಸುತ್ತಿದ್ದಾರೆ, ಎಷ್ಟೆಷ್ಟು ಬಡಿಸುತ್ತಿದ್ದಾರೆ ಎನ್ನುವ ನಿಗಾ ವಹಿಸುತ್ತಿದ್ದೆ. ಎಲ್ಲರಿಗೂ ಊಟ ಸಾಲುವಂತೆ ಮಾಡುವ ಮಹತ್ತರ ಜವಾಬ್ದಾರಿ ನನ್ನ ಮೇಲಿತ್ತು. ಎಲ್ಲಾದರೂ ಒಬ್ಬನ ತಟ್ಟೆಗೆ ಎರಡು ಜಿಲೇಬಿ ಬಡಿಸಿದರೆ ನಾನು ಲೆಕ್ಕ ಕೊಡಬೇಕು. ಹಾಗಾಗಿ ಅಲಕ್ಷ್ಯ ಮಾಡುವಂತಿರಲಿಲ್ಲ.

ಫೋನಾಚೆಗಿನ ಆರಾಧ್ಯರು ನೋಡಿ, “”ನಾನು ಆರಾಧ್ಯ, ನಮ್ಮೆಜಮಾನರ ಹೆಸರು ಜಯಂತ, ನಮ್ಮ ಮಗಳ ಬಗ್ಗೆ ಕೇಳಣಾ ಅಂತಾ ಫೋನ್‌ ಮಾಡೆªà…” ಎಂದ ಮೇಲೇ ನನ್ನ ಜೊತೆ ಮಾತಾಡುತ್ತಿರುವವರು ಹೆಣೆØಂಗಸು ಎಂದು ಗೊತ್ತಾಯಿತು. ಧ್ವನಿ ಅಷ್ಟು ಬಿರುಸಾಗಿತ್ತು.
ಜಿಲೇಬಿಯ ಸುರುಳಿಯೊಳಗೆ ಸುತ್ತಿಕೊಂಡಿದ್ದ ನನ್ನ ತಲೆಗೆ ಅವರ ಮಾತು ಎತ್ತ ಹೊರಳುತ್ತಿದೆ ಎನ್ನುವುದರ ಅರಿವಾಗದೇ “ಹಾಂ… ಹಾಂ.. ಕೇಳಿ, ಕೇಳಿ, ಬೇಗ, ನನಗೆ ಬೇರೆ ಕೆಲ್ಸಾ ಇದೆ’ ಎಂದು ಅವಸರಿಸಿದೆ.

“”ಏನಿಲ್ಲಾ, ನಮ್ಗೆ ಒಬ್ಳೆ ಮಗಳು. ಹೆಸರು ಲಕ್ಷ್ಮೀ ಅಂತಾ. ಮುದ್ದಿಂದಾ ಸಾಕಿದೀವಿ. ಅವಳ ಮುಂದಿನ ಭವಿಷ್ಯದ ಬಗ್ಗೆ ಮಾತಾಡೋದಿತ್ತು” ಎಂದರು ಮತ್ತೂಮ್ಮೆ. ನಮ್ಮ ವಿಭಾಗದಲ್ಲಿ ಕೆಲ ಸೀಟು ಬಾಕಿಯಿದ್ದಿದ್ದರಿಂದ ಯಾರೋ ಅಡ್ಮಿಷನ್ನಿಗೆ ವಿಚಾರಿಸುತ್ತಿದ್ದಾರೆಂದೇ ಮಾತಾಡುತ್ತಿದ್ದ ನನಗೆ ಯಾಕೋ ಅವರ ಧಾಟಿ ಬೇರೆಡೆ ಹೊರಳಿದ ಅನುಭವವಾಯಿತು. ಅವರ ಮಗಳು ಈಗಾಗಲೇ ಎಮ್ಮೆಸ್ಸೀ ಗ್ರಾಜುಯೇಟು. ಹಾಗಾಗಿ, ಅಡ್ಮಿಷನ್‌ ಕುರಿತಾಗಿ ಅವರ ಮಾತುಕತೆ ಇರದೇನೋ ಎಂದೆನಿಸತೊಡಗಿತ್ತು. ವಿದ್ಯಾಭ್ಯಾಸಕ್ಕಾದರೆ ಅವರ ಮಗಳ ವಿಷಯಕ್ಕೆ ಸಂಬಂಧಪಟ್ಟಂತೆ ಮೈಸೂರಿನಲ್ಲೇ ವಿಶ್ವವಿದ್ಯಾಲಯವಿದೆ. ಅದರ ವಿಚಾರಣೆಗೆ ಕುಟುಂಬಸ್ಥರ ಹೆಸರು, ಕುಲ-ಪುರಾಣಗಳ ಆವಶ್ಯಕತೆಯಿರುವುದಿಲ್ಲ. ಅವರೂರಲ್ಲೇ ಇರುವ ರಾಜ-ಮಹಾರಾಜ-ಯುವರಾಜರ ಸಂಸ್ಥೆಗಳ ದೊಡ್ಡ ದೊಡ್ಡ ತಲೆಗಳಿಂದಲೇ ಅದಕ್ಕೆ ತಕ್ಕುದಾದ ಉತ್ತರ ದೊರೆಯುವ ಸಂಭವನೀಯತೆಯಿರುವಾಗ ಅವರ ಮುದ್ದಿನ ಮಗಳ ಭವಿಷ್ಯದ ಕುರಿತು ಯಃಕಶ್ಚಿತ್‌ ನನ್ನನ್ನೇನು ಕೇಳುವುದು ಎಂದು ಗೊಂದಲಗೊಂಡೆ. ಅದೂ ಅಲ್ಲದೇ ಮಾತಿಗೂ ಮುಂಚೆಯೇ ನನ್ನ ಉಪನಾಮವನ್ನು ಗಮನಿಸಿ “ನೀವೂ ನಮ್ಮವ್ರು’ ಎಂದಿದ್ದರು, ತಪ್ಪಾಗಿ ಭಾವಿಸಿ. ಭವಿಷ್ಯ, ಅದೂ ಮದುವೆಯ ವಯಸ್ಸಿನ ಯುವತಿಯ ಭವಿಷ್ಯವೆಂದರೆ… ಇವರು ಬೇರೇನೋ ಕನಸಿನೊಂದಿಗೆ ಮಾತಾಡುತ್ತಿ¨ªಾರೇನೋ ಎಂಬ ಸಂದೇಹವೇರ್ಪಟ್ಟಿತು. ಕುತೂಹಲ ತಡೆಯಲಾಗದೇ, “”ತಡೀರಿ, ನೀವು ಅವಳ ಎಜುಕೇಷನ್‌ ಬಗ್ಗೆ ಕೇಳ್ತಾ ಇದೀರಾ? ಅಥವಾ ಬೇರೆ ಏನಾದ್ರೂ ಬಗ್ಗೆ ಕೇಳ್ತಾ ಇದೀರಾ?” ಎಂದು ಸಂದೇಹ ಪರಿಹಾರಕ್ಕೆ ಹೊರಳಿ ಪ್ರಶ್ನಿಸಿದೆ.

“”ಸಾರ್‌, ನನ್ನ ಮಗಳಿಗೆ ಗಂಡು ಹುಡುಕ್ತಾ ಇದೀವಿ. ಮೊನ್ನೆ ನಿಮ್ಮ ಲೇಖನ ಓದಿ ನಿಮ್ಮನ್ನೇ ಕೇಳ್ಳೋಣಾ ಅಂತಾ ಫೋನ್‌ ಮಾಡೆª. ನಿಮ್ಮ ಹಂಗೇ ಪೀಎಚ್ಡಿ ಆದವ್ರಿಗೇ ಕೊಡೋದು ಅಂತಾ ತೀರ್ಮಾನಿಸಿದಿವಿ. ಅದಕ್ಕೇ ಡೈರೆಕ್ಟಾಗಿ ಮಾತಾಡೋಣಾಂತ ಫೋನ್‌ ಮಾಡೆªà ಸಾರ್‌. ತಪ್ಪು ತಿಳೀಬೇಡಿ” ಎಂದರು ಆರಾಧ್ಯ.

ನಾನು ಇಲ್ಲಿಯವರೆಗೆ ಯಾವ ಪತ್ರಿಕೆಯಲ್ಲೂ ನನ್ನ ಫೋನ್‌ ನಂಬರನ್ನು ಪ್ರಕಟಿಸಿಲ್ಲ. ನನ್ನ ಫೇಸುºಕ್ಕಿನ ಅಕೌಂಟಿನಲ್ಲೂ ಅದರ ಉಲ್ಲೇಖವಿಲ್ಲ. ವ್ಯಕ್ತಿಯ ಮೂಲ ಗೊತ್ತಾಗುವವರೆಗೂ ನನ್ನ ಪರ್ಸನಲ್‌ ನಂಬರನ್ನು ಕೊಡುವ ಜಾಯಮಾನವೇ ನನ್ನದಲ್ಲ. ಅಂಥಾದ್ರಲ್ಲಿ ಇವರಿಗೆ ನನ್ನ ನಂಬರು ಹೇಗೆ ದೊರೆಯಿತು ಎನ್ನುವ ಗೊಂದಲವಾಯಿತು. ಬಹುಶಃ ಪತ್ರಿಕಾ ಕಚೇರಿಗೇ ಫೋನ್‌ ಮಾಡಿ ನಂಬರನ್ನು ದೊರಕಿಸಿಕೊಂಡಿದ್ದರೇನೋ? ಆ ಕುರಿತು ಪ್ರಶ್ನಿಸಲು ಹೋದರೆ ನಮ್ಮ ಮಾತುಕತೆ ಮದುವೆಯ ಹಂತಕ್ಕೂ ಮುಂದುವರೆದೀತೇನೋ ಎಂದು ಭಯ ಹುಟ್ಟಿ ತೆಪ್ಪಗಾದೆ. ಅವರ ಮಾತಿನ ಧಾಟಿ ಎತ್ತ ಸಾಗುತ್ತಿದೆ ಎನ್ನುವ ಅರಿವಾಯಿತು. ಕೂಡಲೇ “”ಸಾರ್‌, ನಾನೀಗ ತುಂಬಾ ಕೆಲಸದಲ್ಲಿದೀನಿ. ನಿಮ್ಮ ನಿರೀಕ್ಷೆಯ ಗಂಡೊಂದು ನನ್ನ ಗಮನಕ್ಕೆ ಬಂದರೆ, ಇದೇ ನಂಬರಿಗೆ ಫೋನ್‌ ಮಾಡಿ ಹೇಳ್ತೀನಿ” ಎಂದೆ. ಅವರು ಮತ್ತೂಮ್ಮೆ ತಮ್ಮ ವಿಳಾಸವನ್ನೂ, ನಾವಿಬ್ಬರೂ ಒಂದೇ “ಜಾತಿ’ಯವರೆಂದೂ ಒತ್ತಿ ಹೇಳಿ ಫೋನಿಟ್ಟರು.

ಒಬ್ಬ ವ್ಯಕ್ತಿಯ ಹೆಸರನ್ನು ನೋಡಿ ಮಗಳ ಭವಿಷ್ಯದ ಕುರಿತಾದ ತೀರಾ ಖಾಸಗೀ ವಿಚಾರವನ್ನು  ಅಪರಿಚಿತನೊಂದಿಗೆ ಯಾವ ಧೈರ್ಯದಿಂದ ಪ್ರಸ್ತಾಪಿಸಿದರೋ ಅರ್ಥವಾಗಲಿಲ್ಲ. ಹೆಸರನ್ನು ನೋಡಿದ ಕೂಡಲೇ ಆತನ ಚಾರಿತ್ರ್ಯವನ್ನೂ, ಗುಣವನ್ನೂ ಕಲ್ಪಿಸಿಕೊಂಡು ಮದುವೆಯವರೆಗೆ ಮುಂದುವರೆಯಲು ಹವಣಿಸುತ್ತಿರುವ ಅವರ ಅಮಾಯಕತೆಗೆ ನಗು ಬಂತು. ನಾನ್ಯಾರು ಎಂದು ಗೊತ್ತಿಲ್ಲ. ನನ್ನ ಬಣ್ಣ, ರೂಪ, ಎತ್ತರ, ಗುಣಾವಗುಣಗಳು, ವೈವಾಹಿಕ ಸ್ಥಿತಿ, ಆರ್ಥಿಕ ಸ್ಥಿತಿ, ಉದ್ಯೋಗ ಮತ್ತಿತರ ಯಾವುದೇ ವಿವರ ಗೊತ್ತಿಲ್ಲದಿದ್ದರೂ ಕೇವಲ ಲೇಖನವನ್ನೋದಿ ಈತ ನಮ್ಮ ಮಗಳಿಗೆ ಉತ್ತಮ ಸಂಗಾತಿಯಾಗಬಲ್ಲ ಎಂದು ಭ್ರಮಿಸಿದ್ದಕ್ಕೆ ಪಿಚ್ಚೆನ್ನಿಸಿತು. ಆದರೂ ಅವರ ಈ ಇನ್‌-ಡೈರೆಕr… ಪ್ರೊಪೋಸಲ್ಲಿಗೆ ರೋಮಾಂಚನಗೊಂಡೆನೆನ್ನಿ! ಆದರೇನು ಮಾಡೋದು? ಮದುವೆ ಎಂದರೆ ಪುಳಕಗೊಳ್ಳುವ ವಯಸ್ಸನ್ನೂ,  ಕ್ಯಾಡºರಿ ಅಡ್ವಟೈìಸೆ¾ಂಟಿನಂತೆ ಮನದಲ್ಲೇ ಲಡೂx ತಿನ್ನೋ ಕಾಲವನ್ನೂ ದಾಟಿ ಬಲು ದೂರ ಬಂದಾಗಿದೆ. ಅರ್ಧಕ್ಕರ್ಧ ತಲೆಕೂದಲು ಹಣ್ಣಾಗಿ, ದಾಂಪತ್ಯದ ದಶಕದಲ್ಲಿರುವ ನನಗೆ ಐದು ವರ್ಷದ ಮಗಳಿದ್ದಾಳೆನ್ನುವ ಸತ್ಯ ಆರಾಧ್ಯರಿಗೆ ಹೇಳುವ ಪ್ರಮೇಯವೇ ಬರಲಿಲ್ಲ! ಹೆಸರಲ್ಲೇನಿದೆ ಎನ್ನುವವರಿಗೆ ಈ ಘಟನೆಯನ್ನು ತಿಳಿಸಬೇಕೆನಿಸಿತು. 

ನನ್ನ ಪುಣ್ಯ, ನನ್ನಾಕೆ ಬಳಿಯಿರಲಿಲ್ಲ. ಇಲ್ಲದಿದ್ದರೆ ನಮ್ಮ ದಾಂಪತ್ಯದ ಆನಂದ ಸಾಗರಕ್ಕೆ ಹುಳಿ ಹಿಂಡಿದಂತಾಗುತ್ತಿತ್ತೇನೋ? ವಿಚಿತ್ರವೆಂದರೆ, ಈ ಘಟನೆಗೂ ಎರಡು ತಿಂಗಳ ಮುನ್ನ ನನ್ನ ಶಿಷೊತ್ತಮೆಯೋರ್ವಳು ರಾತ್ರೆ ಒಂಭತ್ತರ ಹೊತ್ತಿಗೆ ಫೋನ್‌ ಮಾಡಿ ಗೊತ್ತಿಲ್ಲದೇ ಹುಳಿ ಹಿಂಡಿದ್ದಳು. ಫೋನ್‌ ರಿಸೀವ್‌ ಮಾಡಿದ್ದು ನನ್ನಾಕೆ. “”ಹಲೋ, ಸರ್‌ ಇದಾರಾ? ನಾಳೆ ನಮ್ಮಪ್ಪ-ಅಮ್ಮ ಬರ್ತಿದಾರೆ, ಮಾತಾಡ್ಲಿಕ್ಕೆ…” ಎಂದು ಬಾಂಬಿಟ್ಟಿದ್ದಳು. ಹೊತ್ತಲ್ಲದ ಹೊತ್ತಲ್ಲಿ ಅಪರಿಚಿತ ಯುವತಿ ತನ್ನ ಗಂಡನಿಗೆ ಫೋನ್‌ ಮಾಡಿ ಮಾತಾಡ್ಲಿಕ್ಕೆ ಅಪ್ಪ-ಅಮ್ಮನ್ನ ಕರ್ಕೊಂಬರ್ತೀನಿ ಎಂದು ಹೇಳಿದರೆ ಯಾವ ಹೆಂಡತಿಗಾದರೂ ಸಂದೇಹ ಬಾರದಿರುತ್ತದೆಯೇ? ಆದರೆ, ವಿಷಯ ಬೇರೆಯಾಗಿತ್ತು. ಅಡ್ಮಿಷನ್ನಿನ ಡ್ನೂ ಡೇಟ್‌ ಮುಗಿದಿದ್ದರೂ ಆಕೆಗೆ ನಮ್ಮಲ್ಲಿ ಸೀಟು ಸಿಗುವಂತೆ ಮಾಡಿ¨ªೆ. ಎಮ್ಮೆಸ್ಸಿಯ ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ, ಮರುದಿನ ಆಕೆ ಊರಿಗೆ ಮರಳುವವಳಿದ್ದಳು. ಆ ಕಾರಣ ಕೃತಜ್ಞತೆ ಸಲ್ಲಿಸಲು ಅವಳ ಅಪ್ಪ-ಅಮ್ಮ ನನ್ನನ್ನು ಭೇಟಿಯಾಗಲು ಬಯಸಿದ್ದರು. ಅದನ್ನು ಸರಿಯಾಗಿ ಹೇಳುವುದನ್ನು ಬಿಟ್ಟು ನನ್ನ ಮಡದಿಯ ತಲೆಯಲ್ಲಿ ಹುಳ ಬಿಟ್ಟಿದ್ದಳು. ಮಾರನೆಯ ದಿನ ಅವಳಪ್ಪ-ಅಮ್ಮ ಬಂದು, ಹೊರೆ ಕಾಣಿಕೆಗಳನ್ನು ಅರ್ಪಿಸಿ, ಮಗಳನ್ನು ಕಾಲಿಗೆ ಬೀಳಿಸಿ ಕರೆದುಕೊಂಡು ಆನಂದಭಾಷ್ಪಗಳಿಂದ ತೆರಳಿದ ಮೇಲೆಯೇ ನನ್ನಾಕೆಗೆ ಸಮಾಧಾನವಾದದ್ದೆನ್ನಿ! 

ಮೊದಲೇ ಹೇಳಿದಂತೆ, ದಾಂಪತ್ಯದ ಸಾಗರವನ್ನು ಈಜುತ್ತ ಹತ್ತನೆಯ ವಸಂತಕ್ಕೆ ಕಾಲಿಟ್ಟಿರುವ ನನಗೆ ಈಗೀಗ ಆಧ್ಯಾತ್ಮ, ಪುರಾಣಗಳ ಮೇಲೆ ಭಯಂಕರ ಪ್ರೀತಿ ಹುಟ್ಟಿದೆ. ಆದ್ದರಿಂದ ದೊಡ್ಡ ದೊಡ್ಡ ಗ್ರಂಥಗಳನ್ನು ಎದುರು ಹಾಕಿ ಕುಳಿತುಕೊಳ್ಳುತ್ತೇನೆ. ಇಂತಹ ಸಂದರ್ಭದÇÉೇ ಮೇಲಿನೆರಡು ಘಟನೆಗಳು ನಡೆದಿವೆ. ಕಾಕತಾಳೀಯವೆಂಬಂತೆ ನನ್ನಾಕೆಗೆ ಎರಡು ದಿನಗಳ ಮುಂಚೆಯಷ್ಟೇ ನಾನು ಎಲ್ಲವನ್ನೂ ತೊರೆದು ಸನ್ಯಾಸಿಯಾದಂತೆ ಕನಸು ಬಿದ್ದಿತ್ತಂತೆ! ಹಾಗಂತ, ನನಗೇನೂ ಸನ್ಯಾಸಿಯಾಗುವ ಹಂಬಲವೇನಿಲ್ಲ. 

ಮನೋಜ ಗೋಡಬೋಲೆ

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.