ಈ ಮೂವರೂ ಬೇರೆ ಅಲ್ಲ
Team Udayavani, Mar 4, 2018, 6:30 AM IST
ಸಿತಾರ್ ಒಂದು ಅನನ್ಯವಾದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ವಾದ್ಯ! ನೋಡಲೂ ಸುಂದರ ಮತ್ತು ಕೇಳಲೂ ಆನಂದ. ಹೀಗೆ ಬಹಳಷ್ಟು ಸಂಗೀತಪ್ರೇಮಿಗಳು ಹೇಳುವುದನ್ನು ಸಂಗೀತವಲಯದಲ್ಲಿ ನಾವು ನೋಡುತ್ತೇವೆ. ಆದರೆ ಸಿತಾರಿನ ಸಂಗೀತವನ್ನು ಕೇಳಿದರೆ ಆನಂದವು ತಂತಾನೇ ಹುಟ್ಟುವಂಥ ನಾದವನ್ನು ನುಡಿಸುವುದು ಸುಲಭ ಸಾಧ್ಯವಾ?
ಹಾಗೆ ನೋಡಿದರೆ ಜಗತ್ತಿನ ಎಲ್ಲ ಪ್ರಕಾರಗಳ ತಂತಿವಾದ್ಯಗಳೂ ನುಡಿಸಲು ಸುಲಭಸಾಧ್ಯವಂತೂ ಅಲ್ಲ. ಗಿಟಾರ್ ಹಿಡಿದು ತಂತಿಗಳ ಮೇಲೆ ಬಗೆಬಗೆಯ ರೀತಿಗಳಲ್ಲಿ ಬೆರಳುಗಳನ್ನಿಟ್ಟು ಕಾvÕ…ì ನುಡಿಸುವ ಗಿಟಾರ್ ಪ್ರೇಮಿಗಳಿಗೆ ಗಿಟಾರನ್ನು ಆಧುನಿಕ ಸಂಗೀತ ಅಥವಾ ಪ್ರಾಚೀನ ಶಾಸ್ತ್ರೀಯ ಸಂಗೀತದ ಪ್ರಕಾರಕ್ಕೆ ಹೊಂದಿಸಿ ನುಡಿಸಲು ಸುಲಭವಾಗಿ ಸಾಧ್ಯವಾಗುವುದಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ಆ ಪ್ರಕಾರವು ಬಯಸುವ ಅಸಾಧಾರಣ ಮಟ್ಟದ ತಾಲೀಮು, ಶ್ರದ್ಧೆ ಮತ್ತು ತನ್ನೊಳಗಿನ ಸಂಗೀತದ ಕ್ಷಮತೆಯ ಅರಿವು.
ಸಂಗೀತವನ್ನು ಅಸಾಧಾರಣವಾಗಿ ಪ್ರೀತಿಸುತ್ತ ಕೇಳುಗರ, ಹಾಗೆ ನಿರಂತರವಾಗಿ ಸಂಗೀತವನ್ನು ಕೇಳುತ್ತ ಸಂಗೀತಕ್ಕೆ ತಮ್ಮದೇ ಅರ್ಥವ್ಯಾಪ್ತಿಯೊಂದನ್ನು ಕಂಡುಕೊಳ್ಳುತ್ತಾರೆ. ಆ ಅರ್ಥವ್ಯಾಪ್ತಿಯೊಳಗಿನ ಸಂಗೀತವು ವೈಯಕ್ತಿಕ ಮಟ್ಟದಲ್ಲಿ ತೀರಾ ಮಹಣ್ತೀ¨ªಾಗಿದ್ದರೂ ಕೆಲವೊಮ್ಮೆ ಎಲ್ಲರಿಗೂ ಸರಿಯೇ ಹೌದು ಎನ್ನಿಸಬೇಕಾಗಿಲ್ಲ. ಉದಾಹರಣೆಗೆ ಇಳೆಯಾರಾಜಾರನ್ನು ಇನ್ನಿಲ್ಲದಂತೆ ಪ್ರೀತಿಸುವ ಅವರ ಅಭಿಮಾನಿಗಳಿಗೆ ಬೇರೆ ಯಾವ ಸಂಗೀತ ನಿರ್ದೇಶಕರೂ ಇಷ್ಟವಾಗುವುದಿಲ್ಲ. ಶಾಸ್ತ್ರೀಯ ಸಂಗೀತದಲ್ಲಿಯೂ ಹಾಗೆಯೇ. ಭೀಮಸೇನ್ ಜೋಶಿಯವರನ್ನು ಹಾಗೆ ಪ್ರೀತಿಸುವ ಕೇಳುಗರಿಗೆ ಕುಮಾರ ಗಂಧರ್ವರ ಗಾಯನದ ಬಗ್ಗೆ ತಗಾದೆ ಇರಬಹುದು. ಹಾಗಾಗಿ, ಸಂಗೀತದ ಅರ್ಥ ತೀರಾ ವೈಯಕ್ತಿಕ ಮಟ್ಟ¨ªಾಗಿರುತ್ತದೆ. ನಿಜವಾಗಿ ನಾವು ಅದನ್ನು ಪ್ರಕೃತಿ ಎಂದು ಹೇಳಬಹುದು. ರಾಗದ ಸ್ವಭಾವಕ್ಕೆ ತಕ್ಕಂತೆ ಮನುಷ್ಯನ ಸ್ವಭಾವ, ಕೇಳುಗನ ಸ್ವಭಾವ ಮತ್ತು ಕಲಾವಿದನ ಸ್ವಭಾವ. ಮಾಲ್‌ಕಂಸ್, ಬಿಲಾಸ್‌ಖಾನಿ ತೋಡಿಯಂಥ ಗಂಭೀರ ರಾಗಗಳನ್ನು ಅಷ್ಟಾಗಿ ಹಚ್ಚಿಕೊಳ್ಳದ ಕೇಳುಗರೂ ನಮ್ಮಲ್ಲಿ¨ªಾರೆ. ನಾವು ಆ ಕಾರಣಕ್ಕಾಗಿ ಅವರ ಸಂಗೀತವ್ಯಾಪ್ತಿಯನ್ನು ಅಥವಾ ಅವರು ಕೇಳುವ ಸಂಗೀತದ ಮಟ್ಟವನ್ನು ನಾವು ಗುರುತಿಸಲಿಕ್ಕಾಗುವುದಿಲ್ಲ.
ಸ್ವಭಾವ, ಪ್ರಕೃತಿ ಮತ್ತು ರಾಗಗಳು ಹೀಗೆ ಒಂದಕ್ಕೊಂದು ಹೊಂದಿಕೊಂಡು ಸಂಗೀತದ ಕೇಳುಗರ ಜಗತ್ತಿನಲ್ಲಿ ನಡೆಯುವಂತೆ ಕಲಾವಿದರಲ್ಲಿಯೂ ನಡೆಯುತ್ತವೆ. ಹಿಂದೂಸ್ತಾನಿ ಸಂಗೀತದಲ್ಲಿ ಮೈಹರ್ ಘರಾನೆ ಎಂಬ ಘರಾನೆಯೊಂದಿದೆ. ಖ್ಯಾತ ಸರೋದ್ ವಾದಕರಾದ ಉಸ್ತಾದ್ ಅಲಿ ಅಕºರ್‌ಖಾನರ ತಂದೆ ಬಾಬಾ ಉಸ್ತಾದ್ ಅÇÉಾವುದ್ದೀನ್ ಖಾನರು ಈ ಘರಾನೆಯ ಮುಖ್ಯ ಪ್ರವರ್ತಕರು. ಸುಮಾರು ನೂರಕ್ಕೂ ಹೆಚ್ಚು ವಾದ್ಯಗಳಲ್ಲಿ ಪರಿಣತಿಯನ್ನು ಮತ್ತು ನುಡಿಸಾಣಿಕೆಯಲ್ಲಿ ಕೌಶಲವನ್ನೂ ಹೊಂದಿದ್ದ ಇವರು ಕಾರ್ಯಕ್ರಮಗಳಲ್ಲಿ ಮಾತ್ರ ಬಹುತೇಕವಾಗಿ ಸರೋದ್ ವಾದ್ಯವನ್ನೇ ನುಡಿಸುತ್ತಿದ್ದರು. ಸುರ್ ಸಿಂಗಾರ್ ಮೊದಲಾದ ಅವರದೇ ಆವಿಷ್ಕಾರಗಳನ್ನು ಅವರ ನುಡಿಸುತ್ತಿದ್ದರೂ ಸರೋದ್ ಅವರ ಮುಖ್ಯ ವಾದ್ಯವಾಗಿತ್ತು. ಸಾಮಾನ್ಯವಾಗಿ ಸಂಗೀತದಲ್ಲಿ ಒಲವಿದ್ದ ಹೊಸ ಆಸಕ್ತರು ಅವರಲ್ಲಿಗೆ ವಾದ್ಯ ಸಂಗೀತವನ್ನು ಕಲಿಯಲು ಬಂದರೆಂದು ಇಟ್ಟುಕೊಳ್ಳಿ. ಶಿಷ್ಯನಾಗಬಯಸುವವನಿಗೆ ಸರೋದ್ ಕಲಿಯಬೇಕು ಎಂದಿದ್ದರೆ ಇವರು ಹಲವಾರು ವಾದ್ಯಗಳನ್ನು ಆತನಿಗೆ ಕೊಟ್ಟು ಮೂಲಪಾಠಗಳನ್ನು ಹೇಳಿಕೊಟ್ಟು ನುಡಿಸಲು ಹೇಳುತ್ತಿದ್ದರು. ವಾಸ್ತವದಲ್ಲಿ ಆತನಿಗೆ ಸರೋದ್ ಕಲಿಯಬೇಕು ಎಂದಿದ್ದರೂ ಇವರ ಕಣ್ಣಿಗೆ ಆತನಲ್ಲಿ ಸರೋದ್‌ಗಿಂತ ಸಿತಾರಿನಲ್ಲಿ ಹೆಚ್ಚು ಭವಿಷ್ಯವು ಕಾಣಿಸುತ್ತಿತ್ತು ಮತ್ತು ನಿನಗೆ ಸಿತಾರ್ ಹಿಡಿಸುತ್ತದೆ ಎಂದು ಹೇಳಿ ಕೈಗೆ ಸಿತಾರ್ ಹಿಡಿಸುತ್ತಿದ್ದರು. ಇದೊಂದು ಉದಾಹರಣೆಯಷ್ಟೆ. ಇಲ್ಲಿ “ಹಿಡಿಸುತ್ತದೆ’ ಎಂಬುದು ಕೈಗೆ ಒಗ್ಗುತ್ತದೆ ಎಂದಷ್ಟೆ ಅಲ್ಲ, ಆ ಶಿಷ್ಯನ ಮನೋಸ್ಥಿತಿಯನ್ನು ಮತ್ತು ನುಡಿಸಾಣಿಕೆಯ ಕೌಶಲ್ಯವನ್ನೂ ಅರಿತು ಮುಂದೆಂದೋ ಮಹಾನ್ ಕಲಾವಿದನಾಗಲಿ ಎಂಬ ಬಂಗಾರದಂಥ ಬಯಕೆಯಿಂದ ಆ ವ್ಯಕ್ತಿತ್ವಕ್ಕೆ ತಕ್ಕುದಾದ ವಾದ್ಯವನ್ನು ನೀಡುವಂಥ ಗುರುಭಾವ ಅದು!
ತಂತಿವಾದ್ಯಗಳಲ್ಲಿ ಮುಖ್ಯವಾಗಿ ಸಿತಾರನ್ನು ಶುದ್ಧವಾಗಿ ಶ್ರುತಿ ಮಾಡಿ ಎಲ್ಲ ತಂತಿಗಳನ್ನು ಸ್ವರಬದ್ಧವಾಗಿ ಕಟ್ಟಿ ಮಿಜರಾಬಿನಿಂದ ಎರಡು ಬಾರಿ ಮೀಟಿದರೂ ಆನಂದಾನುಭೂತಿಯಾಗುವಷ್ಟು ಚೆನ್ನಾಗಿ ಅದು ಕೇಳಿಸುತ್ತದೆ. ಹಾಗಂಥ ಅದು ಆ ಎರಡು ಮೀಟು ಹಾಕಿದವನ ಸಾಧನೆಯಲ್ಲ. ಸಾವಿರಾರು ವರ್ಷಗಳಿಂದ ಮೂಲ ವೀಣೆಯಿಂದ ಪರ್ಷಿಯಾದ ಸೆಹತಾರಿನ ಪ್ರಭಾವದಲ್ಲಿ ರೂಪಾಂತರಗೊಳ್ಳುತ್ತ ಬಂದು ಇಂದ್ ಸಿತಾರ್ ಆಗಿ ನಿಂತ ಆ ವಾದ್ಯದ ಸಾಧನೆಯದು. ಹಾಗೆ ಹೇಳಿದರೆ ಆ ವಾದ್ಯವನ್ನು ಚೆನ್ನಾಗಿ ತಯಾರು ಮಾಡಿದ ಸಿತಾರ್ ತಯಾರಕನ ಸಾಧನೆಯದು. ಸಿತಾರಿನಂಥ ವಾದ್ಯದಲ್ಲಿ ಜೀವ ತುಂಬಿದ ರಾಗವನ್ನು ಆ ರಾಗದ ಜೀವವನ್ನಿಟ್ಟುಕೊಂಡು ರಾಗದಾರಿಯ ಉದ್ದಕ್ಕೂ ಅದೇ ಜೀವವನ್ನು ಉಳಿಸಿಕೊಂಡು ಜೊತೆಗೆ ತನ್ನ ಜೀವವನ್ನೂ, ಅಂದರೆ ತನ್ನ ವಿಶಿಷ್ಟ ಅಂದಾಜ… ಅನ್ನು ಬೆರೆಸಿ ನುಡಿಸಿ ಮನಗೆಲ್ಲುವುದು ನಿಜಕ್ಕೂ ಸುಲಭದ ಮಾತಲ್ಲ. ಪ್ರಾಯಶಃ ಇದು ಎಲ್ಲ ಬಗೆಯ ಸಂಗೀತ ಪ್ರಕಾರಗಳಲ್ಲಿ ಅದರಲ್ಲೂ ಭಾರತೀಯ ವಾದ್ಯ ಸಂಗೀತಪ್ರಕಾರದಲ್ಲಿ ಅನ್ವಯವಾಗಿಯೇ ತೀರುತ್ತದೆ. ಹಾಡುವುದನ್ನು ಕಲಿಯುವ ವಿದ್ಯಾರ್ಥಿಗೆ ಸ್ವರಪೆಟ್ಟಿಗೆಯನ್ನು ತಿಕ್ಕುವ ಕೆಲಸವನ್ನು ಗುರು ಹೇಳಿಕೊಟ್ಟಂತೆ ಸಿತಾರ್, ಸರೋದ್ ಮೊದಲಾದ ತಂತಿವಾದ್ಯಗಳಲ್ಲಿ ಬೆರಳುಗಳನ್ನು ಜಡ್ಡುಗಟ್ಟಿಸುವ ಕ್ರಮವಿರುತ್ತದೆ. ಬೆರಳುಗಳು ನೋವುಂಡಷ್ಟೂ ರಾಗದ ಭಾವ ತೀವ್ರವಾಗುತ್ತ ಹೋಗುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಸಿತಾರ್ ನುಡಿಸುವವರೆಲ್ಲರಿಗೂ ತಕ್ಕಮಟ್ಟಿಗೆ ಹಾಡುವುದು ಗೊತ್ತಿರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಹಾಡುವವರು ಹಾಡುವ ರಾಗವನ್ನೇ ಸಿತಾರ್ ವಾದಕರು ಗಂಟೆಗಟ್ಟಲೆ ನುಡಿಸುವುದು.
ಇಷ್ಟಾಗಿ ಎಲ್ಲ ರಾಗಗಳೂ ಎಲ್ಲರ ಕೈಯಲ್ಲೂ ಹಾಗೆಯೇ ಹೊಮ್ಮುವುದಿಲ್ಲ. ಕೇಳುಗರ ರಾಗದ ಆಯ್ಕೆಯಂತೆ ಹಾಡುಗರ ನುಡಿಸುವವರ ಆಯ್ಕೆಯೂ ಇರುತ್ತದೆ. ಉಸ್ತಾದ್ ವಿಲಾಯತ್ ಖಾನರು ವರ್ಷಗಟ್ಟಲೆ ತಮ್ಮ ಸಂಜೆಯ ಕಛೇರಿಗಳಲ್ಲಿ ಪೂರಿಯಾ ರಾಗವನ್ನೇ ನುಡಿಸಿದ್ದರಂತೆ! ಯಾವ ಮಟ್ಟಕ್ಕೆ ಅಂದರೆ, ಒಂದು ಹಂತದಲ್ಲಿ ಪೂರಿಯಾ ರಾಗ, ಸಿತಾರ್ ಮತ್ತು ಉಸ್ತಾದ್ ವಿಲಾಯತ್ ಖಾನರು ಈ ಮೂವರೂ ಬೇರೆ ಅಲ್ಲ ಎಂಬ ದಿವ್ಯಸಂಗೀತಸ್ಥಿತಿ!
ಕೇಳುಗರನ್ನೂ ರಾಗಗಳು ಸೆಳೆಯುತ್ತವೆ ಮತ್ತು ಕಲಾವಿದರನ್ನೂ ಸೆಳೆಯುತ್ತವೆ. ಕೆಲವು ರಾಗಗಳು ಹೈಸ್ಕೂಲಿನ ಮೊದಲ ಪ್ರಣಯದಂತೆ, ಅನುಭವಕ್ಕೆ ಮತ್ತು ದರ್ಶನಕ್ಕೆ. ಎಲ್ಲ ರಾಗಗಳನ್ನ ಕೇಳುತ್ತ ಕಡೆಗೆ ಶಾಶ್ವತವಾಗಿ ಉಳಿವ ರಾಗಗಳು ನಿಜವಾದ ಪ್ರಕೃತಿ.
– ಕಣಾದ ರಾಘವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.