ಮಳೆಹನಿ
Team Udayavani, Jul 16, 2017, 2:50 AM IST
ಹೂವಿನ ದಳದ ಮೇಲೆ ಕುಳಿತ ಹನಿ ವ್ಯರ್ಥವಾಗುವುದಿಲ್ಲ. ಒಂದೋ ಅದು ನದಿಗೆ ಬಿದ್ದು ಸಾಗರ ಸೇರುತ್ತದೆ ಅಥವಾ ನೆಲಕ್ಕೆ ಬಿದ್ದು ಬೀಜ ಮೊಳಕೆಯೊಡೆಯಲು ಪ್ರೇರಣೆಯಾಗುತ್ತದೆ ಅಥವಾ ಆವಿಯಾಗಿ ಮುಗಿಲು ಸೇರಿ ಮತ್ತೆ ಮಳೆಹನಿ ಕನಸು ಕಾಣುತ್ತದೆ.
.
ಮೋಡಕ್ಕೆ ಭಾರ ತಡೆಯಲು ಕಷ್ಟವಾದಾಗ ಮಳೆ ಬೀಳುತ್ತದೆ; ಹೃದಯಕ್ಕೆ ಭಾರ ಆಧರಿಸಲು ಅಶಕ್ಯವಾದರೆ ಕಣ್ಣೀರು ಬರುತ್ತದೆ. ಎರಡನ್ನೂ ತಡೆಯುವುದು ಅಸಾಧ್ಯ.
.
ಬಿಸಿಲಿನ ವೇಳೆಯಲ್ಲಿ ಸುರಿಯುವ ಮಳೆ ಸಂತೋಷದಲ್ಲಿ ಬರುವ ಕಣ್ಣೀರಿನಂತೆ. ಬರಲಿ ಬಿಡಿ !
.
ಕೆಲವರು ಬೇಸರದಿಂದ ಹೇಳುತ್ತಾರೆ, “ಮಳೆ ಬಂದರೆ ನೀರು ಹರಿದು ಎಲ್ಲೆಲ್ಲೂ ಕೆಸರಾಗುತ್ತದೆ’
ಆದರೆ, ಕೆಸರಿನಲ್ಲಿ ಹೂವಿನ ಗಿಡ ಚಿಗುರುವುದನ್ನು , ತಾವರೆ ಹೂವು ಅರಳುವುದನ್ನು ಅವರು ನೋಡಿರುವುದಿಲ್ಲ.
.
ಮಳೆಯ ಸದ್ದಿನಲ್ಲೊಂದು ನಾದವಿರುತ್ತದೆ. ಆ ನಾದವನ್ನು ಆಲಿಸಲಾಗದವರು ಯಾವ ಸಂಗೀತ ಕಛೇರಿಯನ್ನೂ ಆನಂದಿಸಲಾರರು.
.
ಬಿಸಿಲು ಬೀಳುವ ವೇಳೆಯಲ್ಲಿ ಮಳೆಯ ಕುರಿತ ಕವನಗಳನ್ನು ಬರೆಯುವುದು ಒಳ್ಳೆಯದು. ಏಕೆಂದರೆ, ಮಳೆ ಬೀಳುವ ಕಾಲದಲ್ಲಿ ಮಳೆಯೇ ಇದೆಯಲ್ಲ ; ಕವನ ಎಂಥದಕ್ಕೆ !
.
ಆಶಾವಾದಿಯ ಉವಾಚ, “ಮಳೆ ಬರುತ್ತಿದೆ. ಊರಿಡೀ ಛಾವಣಿ ಹೊದಿಸಲು ಸಾಧ್ಯವಿಲ್ಲ, ಆದರೆ, ನನ್ನ ತಲೆಯ ಮೇಲೆ ಕೊಡೆ ಹಿಡಿಯುತ್ತೇನೆ !’
.
ಪ್ರೇಯಸಿಯೊಬ್ಬಳು ಪ್ರಿಯಕರನಿಗೆ ದೂರವಾಣಿಯಲ್ಲಿ ಹೇಳುತ್ತಾಳೆ, “ಇಲ್ಲಿ ಮಳೆ ಬರುತ್ತಿದೆ. ನಿನಗಾಗಿ ಮಳೆಯ ನೀರನ್ನು ತೆಗೆದಿಡಬಲ್ಲೆ. ಆದರೆ, ಮಳೆಯ ಸದ್ದನ್ನು ಸಂಗ್ರಹಿಸಿಡುವುದು ಹೇಗೆ?’
.
ಮಳೆ ಬಂದಾಗ ಬಿರುಗಾಳಿ ಬೀಸುತ್ತದೆ, ಗುಡುಗು ಬರುತ್ತದೆ ಎಂದು ಕೆಲವರು ಹೆದರುತ್ತಾರೆ. ಇನ್ನು ಕೆಲವರು ಮಳೆ ಬಂದಾಗ ಹೂವು ಅರಳುತ್ತದೆ ಎಂದು ಸಂತೋಷಪಡುತ್ತಾರೆ.
– ಅಪ್ಸರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.