ರಾಜೀವ ಸ್ವರಸಂಚಾರ
Team Udayavani, Oct 15, 2017, 7:20 AM IST
ಅವರು ಸಂಗೀತ ಲೋಕವನ್ನು ಪ್ರವೇಶಿಸದೇ ಇರುತ್ತಿದ್ದರೆ ಕನ್ನಡ ಸಾಹಿತ್ಯದ ದಿಗ್ಗಜರ ಪಂಕ್ತಿಯಲ್ಲಿ ಆಸೀನರಾಗುತ್ತಿದ್ದರು !
ಗಾಂಧೀವಾದಿ ಪಂಡಿತ್ ತಾರನಾಥರ ಪುತ್ರ ಅಲಿ ಅಕºರ್ ಖಾನ್‌ರ ಶಿಷ್ಯರಾಗಿ ವಿಶ್ವವಿಖ್ಯಾತ ಸರೋದ್‌ವಾದಕರಾದದ್ದು ಒಂದು ದೊಡ್ಡ ಕತೆ. ನಾಡಿದ್ದು ಮಂಗಳವಾರ ಮೈಸೂರಿನ ರಂಗಾಯಣದಲ್ಲಿ ರಾಜೀವ್ ತಾರನಾಥ್‌ಅವರಿಗೆ 85ರ ಅಭಿನಂದನ ಕಾರ್ಯಕ್ರಮ…
ಭೂಮಿಯ ಮೇಲೆ ನಾಲ್ಕೂವರೆ ಬಿಲಿಯನ್ ವರ್ಷಗಳ ಜೀವಿಗಳ ಇತಿಹಾಸಕ್ಕೆ ಹೋಲಿಸಿದರೆ ಮನುಷ್ಯನ ಜೀವಿತಾವಧಿ ತುಂಬ ಪುಟ್ಟದೆಂದೇ ತೋರುತ್ತದೆ. ಅನಂತ ಕಾಲಪ್ರವಾಹದಲ್ಲಿ ದಶಕಗಳ ನಮ್ಮ ಬದುಕು ನ್ಯಾನೋ ಗಾತ್ರದ ಚಿಕ್ಕದೊಂದು ಬಿಂದುವಿನಂತೆ ತೋರಬಹುದು. ಆದರೆ ಪಂಡಿತ್ ರಾಜೀವ ತಾರಾನಾಥ್ ಅವರು ಎಂಟೂವರೆ ದಶಕ ಬಾಳಿದ, ಬಾಳುತ್ತಿರುವ ರೀತಿಯನ್ನು ನೋಡಿದಾಗ ಈ ಅನಂತ ಕಾಲಪ್ರವಾಹದಲ್ಲಿಯೂ ಮಾನವನ ಬದುಕು ದೊಡ್ಡದಾಗಿರಲು, ಅರ್ಥಪೂರ್ಣವಾಗಿರಲು ಸಾಧ್ಯ ಎನ್ನಿಸುತ್ತದೆ.
ಸರೋದ್‌ನ ಮೂಲ ಅಫ್ಘಾನಿಸ್ತಾನದ “ರುಬಾಬ್’ ಎಂದು ಹೇಳಲಾಗುತ್ತದೆ. 18ನೇ ಶತಮಾನದ ನಂತರ ಪ್ರಮುಖ ವಾದ್ಯವಾಗಿ ಗುರುತಿಸಿಕೊಂಡ ಸರೋದ್‌ನ ಇಂದಿನ ಸ್ವರೂಪಕ್ಕೆ ಎರಡು ಮಾದರಿಗಳಿವೆ. ಒಂದು ಲಕ್ನೋ ಘರಾನೆಯ ನಿಯಮತುÇÉಾಖಾನ್ ಅವರಿಂದ ಪರಿಷ್ಕƒತಗೊಂಡ ಮಾದರಿಯ ಸರೋದ್; ಅಮ್ಜದ್ ಅಲಿಖಾನ್, ಇನ್ನಿತರರು ಈ ಘರಾನೆಯ ಮಾದರಿಯ ಸರೋದ್ ಅನ್ನು ನುಡಿಸುತ್ತಾರೆ. ಇನ್ನೊಂದು ಉಸ್ತಾದ್ ಅÇÉಾವುದ್ದೀನ್ ಖಾನ್‌ರು ಅಭಿವೃದ್ಧಿಪಡಿಸಿದ ಮಾದರಿಯ ಸರೋದ್, ಸರಿಸುಮಾರು ಒಂದೂಕಾಲು ಶತಮಾನದ ಇತಿಹಾಸದ ಮೈಹರ್ ಘರಾನೆಯ ಸರೋದ್‌ನೊಂದಿಗೆ ರಾಜೀವ್‌ಜಿಯವರ ಒಡನಾಟ ಶುರುವಾಗಿ 62 ವರ್ಷಗಳಾಗಿವೆ. ಈ ದೃಷ್ಟಿಯಿಂದ ನೋಡಿದಾಗ ರಾಜೀವ್‌ಜಿಯವರ ಸಂಗೀತ ಪಯಣದ ಅವಧಿ ಎಷ್ಟು ದೊಡ್ಡದು ಮತ್ತು ಎಷ್ಟು ಮಹತ್ವದ್ದು ಎಂದು ಅರಿವಾಗುತ್ತದೆ.
ಸರೋದ್‌ನಂತಹ ವಾದ್ಯಗಳನ್ನು ಚಿಕ್ಕ ವಯಸ್ಸಿನಲ್ಲಿ ಅಂದರೆ ಬೆರಳುಗಳನ್ನು ಮಣಿಸಲು ಸಾಧ್ಯವಿರುವ ಎಳೆಯ ವಯಸ್ಸಿನಲ್ಲಿ ಕಲಿಯಬೇಕು. ರಾಜೀವ್‌ಜಿಯವರು ಗುರು ಉಸ್ತಾದ್ ಅಲಿ ಅಕºರ್‌ಖಾನ್ ಸಾಹೇಬರಲ್ಲಿ ಸರೋದ್ ಕಲಿಯಲು ಆರಂಭಿಸಿದ್ದು 23ರ ವಯಸ್ಸಿನಲ್ಲಿ. ಆದರೆ ಸರೋದ್‌ನ ಸ್ವರಗಳಿಗೆ ಮಣಿದಿದ್ದ ಮನಸ್ಸು ಬೆರಳುಗಳನ್ನು ಮಣಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಆದರೆ, ಅದು ಸಾಧ್ಯವಾಗಿ¨ªಾದರೂ ಹೇಗೆ? ಅವರ ಮಾತುಗಳÇÉೇ ಕೇಳಬೇಕು.
“”ಇದು ನಮ್ಮದು ಸಾಧಾರಣ ಜೀವನ, ಮನವೆಂಬ ಮರ್ಕಟ ಎÇÉೆÇÉೋ ಅಲೀತ ಇರ್ತದೆ, ಅದನ್ನು ಏಕತ್ರ ಮಾಡಿ, ಗುರುವಿನ ಮೇಲೆ ಪೂರ್ಣ ಮನಸ್ಸನ್ನೆ ಇಟ್ಟು ಕಲೀಬೇಕು. ದೇವರಿಗೆ ಸುಮ್ಮನೆ ಹೂವೆಸೆದು ಪೂಜೆ ಮಾಡೋ ಹಂಗೆ ಅಲ್ಲ, ಮನಸ್ಸೆಂಬ ಮರ್ಕಟವನ್ನು ಒಂದೇ ಕಡೆ ಸಂಪೂರ್ಣ ಕಟ್ಟಿ ಹಿಡಿದು ನಿಲ್ಲಿಸಿ, ಒಂದೇ ಮನಸ್ಸಿನಿಂದ ಸಾಧನೆ ಮಾಡಿದ್ರೆ ಮಾತ್ರ ಸ್ವರಗಳು ಒಲಿಯುತ್ತವೆ. ಇಚ್ಛಾಶಕ್ತಿ, ಅನುಷ್ಠಾನ ಎರಡೂ ಬಹಳ ಪ್ರಬಲವಾಗಿರಬೇಕು. ಯಾವುದನ್ನೂ ತೇಲಿಸಿಬಿಡೋ ಹಂಗೆ ಇಲ್ಲ. ನಾವು ಅಯ್ಯೋ ಏನೋ ಮಾಡಬೇಕಲ್ಲ ಅಂತ ಮಾಡ್ತೀವಿ. ಹಂಗಲ್ಲ, ಮನಸ್ಸು, ನಮ್ಮ ಚೈತನ್ಯ, ಎಲ್ಲವನ್ನೂ ಅದರತ್ತಲೇ ತಿರುಗಿಸಬೇಕು”
ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಆನ್‌ಲೈನ್ ದಿನಮಾನದಲ್ಲಿಯೂ ಹೀಗೆ ಕಲಿಯುವವರು, ಕಲಿಸುವವರು ಇ¨ªಾರೆಯೇ? ಗುರುಶಿಷ್ಯ ಪರಂಪರೆಗೆ ಎÇÉೋ ಸ್ವಲ್ಪ ಧಕ್ಕೆ ಒದಗಿದೆಯೇ?
“”ನಾನು ಹೆಂಗೆ ಕಲಿತೆ ಹಂಗೇ ಈಗಲೂ ಕಲೀತಾ ಇ¨ªಾರೆ, ಅಲ್ಪಸ್ವಲ್ಪ ವ್ಯತ್ಯಾಸಗಳಾಗಿರಬಹುದು, ಆ ತೀವ್ರತೆ, ಗುರುವಿನ ಸೇವೆ ಮಾಡುತ್ತ ಕಲಿಯೋದು ಈಗ ಸ್ವಲ್ಪ ಕಡಿಮೆ ಆಗಿದೆ. ಆದ್ರೂ ಗುರುಶಿಷ್ಯ ಪರಂಪರೆ ಸ್ವಲ್ಪ ಮಟ್ಟಿಗೆ ಮುಂದುವರೀತ ಇದೆ”
ಗುರುವಿನ ನೆನಪು ಮಾಡಿಕೊಳ್ಳದೇ ರಾಜೀವ್‌ಜಿಯವರ ಮಾತು ಮುಂದುವರೆಯುವುದೇ ಇಲ್ಲ.
“”ಸೂರ್ಯ ಹುಟ್ಟಿ ಹೊಳೀತ ಇರ್ತಾನೆ, ಅವನು ನಿಮಗಾಗಿ ಹೊಳೆಯೋದಿಲ್ಲ, ಹೊಳೆಯೋದು ಅವನ ಸ್ವಭಾವ. ಕೆಳಗೆ ಇರುವ ಗಿಡದ ಎಲೆಗಳು ಆ ಬಿಸಿಲನ್ನು, ಹೊಳಪನ್ನು ಹೀರಿಕೊಂಡು ಹಸಿರಾಗುತ್ತವೆ. ಕೆಲವು ಎಲೆಗಳು ತಮ್ಮ ಮೇಲೆ ಬಿದ್ದ ಅಷ್ಟೂ ಬಿಸಿಲನ್ನು ಹೀರಿಕೊಂಡು ಸೊಂಪಾಗಿ ಚಿಗುರ್ತವೆ, ಹೆಚ್ಚೆಚ್ಚು ಬೆಳೀತವೆ. ಇನ್ನು ಕೆಲವು ಎಲೆಗಳು ಅಷ್ಟು ಹೊಳಪನ್ನು ಹೀರಿಕೊಳ್ಳೋದಿಲ್ಲ, ಮುದುಡಿಹೋಗ್ತವೆ. ಗುರು ಹಂಗೆ. ಗುರು ತನ್ನ ಪ್ರತಿಭೆಯಿಂದ ಹೊಳೀತ ಇರ್ತಾನೆ, ನಾವು ಗುರುವಿನಿಂದ ಪಡೆದುಕೋಬೇಕು, ಗುರುವಿನಿಂದ ಎಷ್ಟು ಹೀರಿಕೊಳ್ತೀವೋ ಅಷ್ಟು ಚಿಗುರ್ತೇವೆ, ಅಷ್ಟು ಬೆಳೀತೇವೆ. ಈ ದುನಿಯಾದಲ್ಲಿ ಖಾನ್ ಸಾಹೇಬರಿದ್ದರು ಅಂತ ನಾನಿದ್ದೇನೆ. ಎÇÉೋ ಒಂದು ಕಡೆ ಅವರಿ¨ªಾರೆ, ನುಡಿಸ್ತಾ ಇ¨ªಾರೆ ಎನ್ನೋದೇ ನನಗೆ ಸಾಕಾಗಿತ್ತು. ಗುರು ಎನ್ನೋದು ಬಹಳ ಘನವಾದ ಒಂದು ಅನುಭವ. ಅವರು ಇಲ್ಲದಿದ್ದರೆ ನಾನೆಲ್ಲಿ ಇರುತ್ತಿ¨ªೆ! ”
ರಾಜೀವ್‌ಜಿಯವರಿಗೆ ಅವರ ಗುರು ಗೌರೀಶಂಕರ ಶಿಖರದ ಹಾಗೆ ಇದ್ದಂತೆ. ಹಾಗೆಯೇ ರಾಜೀವರು ಇಂದು ಹಲವರಿಗೆ ಅಪರೂಪದ ಅಂತರಂಗದ ಗುರು ಎನ್ನಿಸಿ¨ªಾರೆ.
ಸುಮಾರು ಮೂರು ದಶಕಗಳಿಂದ ರಾಜೀವ್‌ಜಿಯವರ ಶಿಷ್ಯೆಯಾಗಿ, ಮಗಳಾಗಿ ಅವರೊಂದಿಗೆ ಇರುವ ಕೃಷ್ಣಾ ಮನವಳ್ಳಿಯವರು, “”ಅವರು ನನಗೆ ಕಲಿಸಿದ್ದು ಸಂಗೀತ ಮಾತ್ರವಲ್ಲ, ಸಾಹಿತ್ಯ, ಬದುಕು, ಒಟ್ಟಾರೆಯಾಗಿ ವಿಶ್ವವನ್ನು ನೋಡುವ ನೋಟವನ್ನು ಆಕಾರಗೊಳಿಸಿದರು. ಗುರುವನ್ನು ಶಬ್ದಗಳಲ್ಲಿ ಹಿಡಿದಿಡುವುದು ಹೇಗೆ ಸಾಧ್ಯ? ಗುರು ಅಂದರೆ ಅದೊಂದು ಅವರ್ಣನೀಯ ಅನುಭವ. ಅವರೊಂದಿಗೆ ಬದುಕುತ್ತ, ನಿಧಾನವಾಗಿ ವ್ಯಕ್ತಿಯ ದೊಡ್ಡತನ ಅಂದರೆ ಏನು ಅನ್ನುವುದು ನನಗೆ ಅರ್ಥವಾಗುತ್ತ ಹೋಯಿತು, ನಿಜವಾದ ಅರ್ಥದಲ್ಲಿ ಬದುಕುವ ರೀತಿಯನ್ನು ಕಲಿಯುತ್ತ ಬಂದೆ” ಎನ್ನುತ್ತಾರೆ.
ಇಂದಿನ ಸಂಗೀತ ವಿಶ್ವವಿದ್ಯಾಲಯಗಳು ನೈಜ ಸಂಗೀತಗಾರರನ್ನು ಹುಟ್ಟುಹಾಕುತ್ತಿವೆಯೇ, ಗುರುಶಿಷ್ಯ ಪರಂಪರೆಯಲ್ಲಿ ಕಲಿತಂತೆ ಇಲ್ಲಿ ಕಲಿಯಲು ಸಾಧ್ಯವೇ ಎಂಬ ಅನುಮಾನಗಳು ಆಗೀಗ ಮೂಡುವುದು ಸಹಜ.
“”ಕಿಟಕಿ ಎಷ್ಟೇ ದೊಡ್ಡದಾಗಿದ್ದರೂ, ಗಾಜಿನ ಬಾಗಿಲು ಮುಚ್ಚಿದಾಗ ಬೆಳಕು ಸ್ವಲ್ಪ ಮಾತ್ರ ಬರುತ್ತೆ, ಬಾಗಿಲನ್ನು ತೆಗೆದಾಗ ಮಾತ್ರ ಬೆಳಕು ಪೂರ್ಣ ಬರುತ್ತೆ, ಹೊರಗಿನ ಸೂರ್ಯನ ಬಿಸಿಲು ಒಳಬರುತ್ತೆ, ಹಂಗೆ ಗುರುವಿನ ಎದುರು ಬಾಗಿಲು ತೆರೆದು ನಿಲ್ಲಬೇಕು, ಮನಸ್ಸನ್ನು ಮುಕ್ತವಾಗಿ ತೆರೆದು ನಿಲ್ಲಬೇಕು ಮತ್ತು ಆ ಶಾಖವನ್ನು, ಬಿಸಿಲನ್ನು, ಹೊಳಪನ್ನು ಹೀರಿಕೊಳ್ಳಬೇಕು, ನಮ್ಮ ಕಾಲೇಜುಗಳಲ್ಲಿ ಇದು ಅಷ್ಟು ಪರಿಣಾಮಕಾರಿಯಾಗಿ ಆಗುತ್ತೆ ಅಂತ ನಂಗೆ ಅನ್ನಿಸಲ್ಲ” .
ರಾಜೀವ್‌ಜಿಯವರು ಅಲಿ ಅಕºರ್ ಖಾನ್ ಸಾಹೇಬರ ಹೊಳಪನ್ನು ಹೀರಿಕೊಂಡು ಬೆಳೆದಂತೆ, ಈಗ ರಾಜೀವರ ಸಂಗೀತಕ್ಕೆ ಮನಸ್ಸು ತೆರೆದು ನಿಂತ ಹಲವಾರು ಶಿಷ್ಯರು ದೂರದ ಅಮೆರಿಕದಲ್ಲಿಯೂ ಇ¨ªಾರೆ. ಕಳೆದ 28 ವರ್ಷಗಳಿಂದ ಅಮೆರಿಕದಲ್ಲಿ ರಾಜೀವ್‌ಜಿಯವರ ಪ್ರವಾಸ, ಕಛೇರಿಗಳನ್ನು ಏರ್ಪಡಿಸುತ್ತ, ಅವರಿಂದ ಗಾಯನ ಸಂಗೀತವನ್ನು ಕಲಿಯುತ್ತಿರುವ ಲೆಸ್ಲಿà ಶೈಡರ್ ಇಂತಹದೊಂದು ಅವಕಾಶ ತಮಗೆ ದೊರೆತಿದ್ದೇ ಬದುಕು ಕೊಟ್ಟ ಒಂದು ಅಮೂಲ್ಯ ನಿಧಿ ಎಂದು ಅಭಿಮಾನದಿಂದ ಹೇಳುತ್ತಾರೆ. “”ರಾಜೀವ್‌ಜಿಯವರು ಶಿಷ್ಯರಿಂದ ಆಳವಾದ ಸಮರ್ಪಣೆ, ಏಕತ್ರ ಸಾಧನೆಯನ್ನು ನಿರೀಕ್ಷಿಸುವ ಗುರು. ಶಿಷ್ಯರು ಗುರು ಕಲಿಸುವಾಗ ತೀವ್ರವಾಗಿ ಗ್ರಹಿಸುತ್ತ, ರಾಗಗಳ ಆಳಕ್ಕಿಳಿದು ಶೋಧಿಸುತ್ತ, ಏಕಾಗ್ರಚಿತ್ತರಾಗಿ ಕಲಿಯಬೇಕು ಎಂದು ಅವರು ಬಯಸುತ್ತಾರೆ. ಅವರದು ಬಹಳ ವಿಶೇಷವಾದ ಸಾರ್ವತ್ರಿಕವಾದ ಮನಸ್ಸು. ಯಾವುದೇ ಸಂಸ್ಕƒತಿಯ ಯಾವುದೇ ವಯೋಮಾನದ ಯಾರೊಂದಿಗೇ ಆದರೂ ತಮಗೆ ಗೊತ್ತಿರುವ ಒಂಬತ್ತು ಭಾಷೆಗಳಲ್ಲಿ ಸುಲಲಿತವಾಗಿ ಮಾತನಾಡುತ್ತ, ತಮಾಷೆ ಮಾಡುತ್ತ, ಸ್ವಲ್ಪ ಹೊತ್ತಿನಲ್ಲಿಯೇ ಆಪ್ತತೆ ಮೂಡಿಸಿಬಿಡುತ್ತಾರೆ. ಬದುಕಿನ ಕುರಿತ ಆಳವಾದ ಚಿಂತನೆ, ಜೊತೆಗೆ ಗಂಟೆಗಟ್ಟಲೆ ಮಾಡುವ ಕಠಿಣವಾದ ರಿಯಾಜ್, ಈ ಎರಡೂ ಅವರ ಸಂಗೀತದಲ್ಲಿ ಶಾಂತವಾಗಿ ಪ್ರತಿಫಲನಗೊಳ್ಳುತ್ತದೆ” ಎನ್ನುತ್ತಾರೆ ಲೆಸ್ಲಿà.
ರಾಜೀವ್‌ಜಿ ಸ್ವತಃ ಹಾಗೆ ಹೊಳೆೆಯುವ ಗುರುವಾಗಿ ಇರುವುದು ಕೇವಲ ಸಂಗೀತಲೋಕದಲ್ಲಿ ಮಾತ್ರವಲ್ಲ, ಮೈಸೂರು, ಹೈದರಾಬಾದಿನಲ್ಲಿ ಇಂಗ್ಲಿಶ್ ಸಾಹಿತ್ಯವನ್ನು ಕಲಿಸುತ್ತಿ¨ªಾಗ ಈ ಬಗೆಯ ಪ್ರಖರ ಹೊಳಪಿನ ಗುರುವಾಗಿದ್ದರು.
ಮೈಸೂರಿನ ರೀಜನಲ್ ಕಾಲೇಜಿನಲ್ಲಿ ರಾಜೀವ್‌ಜಿಯವರಿಂದ ಇಂಗ್ಲಿಶ್ ಸಾಹಿತ್ಯವನ್ನು ಕಲಿತ ನಿವೃತ್ತ ಐಜಿಪಿ ಚಂದ್ರಶೇಖರ್ ಅವರ ಬದುಕಿನಲ್ಲಿ ರಾಜೀವರ ಪ್ರಸೆನ್ಸ್ ಈಗಲೂ ಅಷ್ಟೇ ಗಾಢವಾಗಿದೆ. “”ನಾನು ರಾಜೀವರ ಪ್ರಭಾವಳಿಗೆ ಸಿಕ್ಕಿದ್ದು 51 ವರ್ಷಗಳ ಹಿಂದೆ. ಹೀಗೆ ಅರ್ಧ ಶತಮಾನದ ನಂತರವೂ ರಾಜೀವರು ನನಗೆ ಇಂದಿಗೂ ಜೀವಂತ ಪ್ರಭಾವವಾಗಿ¨ªಾರೆ. ಈ ಅವಧಿಯಲ್ಲಿ ನಾನು ಅವರಿಂದ ಕಲಿಯಲು ಅಥವಾ ಸುಮ್ಮನೆ ಅವರ ಜೊತೆಗಿರಲು ಹೋಗುತ್ತಲೇ ಇದ್ದೇನೆ. ಏಛಿ ಜಿs ಞy susಠಿಛಿnಚncಛಿ ಅವರ ಸಂಗೀತದ ಅನುಭವ ಅತ್ಯಂತ ಉತ್ಕƒಷ್ಟ ಮತು ಹೋಲಿಕೆಗೆ ಮೀರಿದ್ದು, ಈ ಸ್ವರಾನುಭವ, ಗುರುವೆಂಬ ಭಾವ ಪದಗಳ ಅಳತೆಗೆ ಮೀರಿದ್ದು. ಇಂತಹ ಶ್ರೇಷ್ಠ ವ್ಯಕ್ತಿಗೆ ಸಿಗಬೇಕಿದ್ದಷ್ಟು ಮನ್ನಣೆ ಸಿಗಲಿಲ್ಲ ಎನ್ನುವುದು ನನ್ನ ಕೊರಗು”
ಅಮೆರಿಕದ ಶಿಷ್ಯ ಪಾಲ್ ಸಿತಾರ್ ವಾದಕ ಲಿವಿಂಗ್ ಸ್ಟೋನ್ ಹೇಳುವಂತೆ , “”ರಾಜೀವರ ಸಂಗೀತ ಮಳೆಯಂತೆ. ನಾನು ನನ್ನ ಬೊಗಸೆಗೆ ದಕ್ಕಿದಷ್ಟು ಮಾತ್ರ ಹಿಡಿದುಕೊಳ್ಳಬÇÉೆ”
.
ರಾಜೀವ್‌ಜಿಯವರು ಎರಡೂವರೆ-ಮೂರು ವರ್ಷದ ಬಾಲಕನಿ¨ªಾಗಿನಿಂದಲೇ ಸಂಗೀತವನ್ನು ಕೇಳುತ್ತ, ಗ್ರಹಿಸುತ್ತ ಬೆಳೆದವರು. ಬಾಲ್ಯದಲ್ಲಿ ತಂದೆ ಪಂಡಿತ್ ತಾರಾನಾಥ್ ಅವರಿಂದ ತಬಲಾ ಕಲಿತವರು. ಸರೋದ್ ಕಲಿಯುವ ಮೊದಲು ಹಿಂದೂಸ್ತಾನಿ ಗಾಯಕರಾಗಿದ್ದವರು. ಇಷ್ಟು ವರ್ಷಗಳ ಸಂಗೀತ ಸಾಧನೆಯ ನಂತರ ಈಗ ಹೊಸ ರಾಗಗಳ ಹುಡುಕುವಿಕೆಗೆ ಮನಸ್ಸು ತುಡಿಯುತ್ತದೆಯೆ?
“”ನೀವು ಪ್ರತೀದಿನ ಸಾರು ಮಾಡ್ತಲೇ ಇರಿ¤àರಿ, ಒಂದು ದಿನದ ಹಂಗೆ ಇನ್ನೊಂದು ದಿನ ಇರಲ್ಲ ಏನೋ ಚೂರು ಹೆಚ್ಚುಕಡಿಮೆ ಆಗಿರುತ್ತೆ, ನಿಮಗೆ ಸಾರು ಪರಿಪೂರ್ಣವಾಯಿತು, ಇನ್ನು ಮಾಡೋದು ಬೇಡ, ಉಣ್ಣೋದು ಬೇಡ ಅನ್ನಿಸೋದೆ ಇಲ್ಲ, ಹಂಗೇ ರಾಗ ಕೂಡ. ನುಡಿಸಿದಷ್ಟೂ ಏನೋ ಅತೃಪ್ತಿ ಕಾಡ್ತಲೇ ಇರುತ್ತೆ, ಅದೇ ಕಲ್ಯಾಣಿ, ಅದೇ ಲಲಿತ್… ಆದರೆ ಇನ್ನೂ ಅದ್ರÇÉೇ ಏನೋ ಇದೆ, ಕೈಗೆ ಸಿಕ್ಕಿಯೂ ತಪ್ಪಿಸಿಕೊಂಡಂತೆ ಅನ್ನಿಸುವ ಸಂಗತಿಗಳನ್ನು ಹುಡುಕೋದು ಮುಂದುವರೆಯುತ್ತೆ”
ತೀರಾ ಹುಶಾರಿಲ್ಲದೇ ಮಲಗಿದ ಅಥವಾ ಎÇÉಾದರೂ ಪ್ರಯಾಣಿಸುವ ದಿನಗಳನ್ನು ಹೊರತುಪಡಿಸಿದರೆ ಹೆಚ್ಚುಕಡಿಮೆ ಪ್ರತಿದಿನ ಎಂಬಂತೆ ಸರೋದ್ ಜೊತೆಗೆ ಅವರ ರಿಯಾಜ್ ಶುರುವಾಗಿ ಅರವತ್ತು ವರ್ಷಗಳ ಮೇಲಾಯಿತು. “”ರಿಯಾಜ್ ಎಂದರೆ ದಿನಾ ಮಾಡೋ ಊಟವಿದ್ದ ಹಾಗೆ. ಮಸಾಲೆದೋಸೆ ರುಚಿಯಾಗಿರುತ್ತೆ ನಿಜ, ಆದರೆ ಅದನ್ನೇ ದಿನಾ ತಿನ್ನಕ್ಕೆ ಆಗಲ್ಲ. ಏನು ಹೋಳಿಗೆ ಊಟ ಮಾಡಿದ್ರೂ ಅನ್ನ, ಸಾರು ಊಟ ಮಾಡಿದಂತೆ ಆಗಲ್ಲ, ರಿಯಾಜ್ ಅಂದ್ರೆ ಹಿಂಗೆ. ಒಂದರ್ಥದಲ್ಲಿ ರಿಯಾಜ್ ನಮ್ಮ ಥರ್ಮೋಮೀಟರ್ ಇದ್ದಂಗೆ. ನಾನು ಎಷ್ಟು ಹುಷಾರಿದ್ದೀನಿ ಅಂತ ಅದೇ ಹೇಳುತ್ತೆ”
ರಿಯಾಜ್‌ನಂತೆಯೇ ಅವರ ಇನ್ನೊಂದು ಸಂಗಾತಿ ಓದು. “”ಇತ್ತೀಚಿನ ಓದಿನ ಕುರಿತು ಹೇಳುತ್ತ ಎರಡನೇ ಮಹಾಯುದ್ಧದ ಕುರಿತು ತುಂಬ ಓದಿದ್ದೀನಿ, ಈಗ ಮತ್ತೆ ಓದ್ತಾ ಇದ್ದೀನಿ. ಮೊನ್ನೆ ವಿಜಯಾ ಅವರ ಕುದಿ ಎಸರು ಪುಸ್ತಕವನ್ನು ಬಹಳ ಆಸ್ಥೆಯಿಂದ ಓದಿದೆ, ಬಹಳ ಪವರ್‌ಫುಲ್ ಆದ ಸುಳ್ಳುಗಳು ಇಲ್ಲದ ಆತ್ಮಕಥೆ, ಜೊತೆಗೆ ಮುಖ್ಯವಾದ ಮಾತು ಎಂದರೆ ಯಾವುದೇ ಭಿಢೆಯಿಲ್ಲದೆ ಅವರು ಬರೆದ ಸತ್ಯದ ಸಂಗತಿಗಳು. ಇದು ತುಂಬ ತಟ್ಟುವ ಪುಸ್ತಕ”
ಸುದೀರ್ಘ 85 ವರ್ಷಗಳು ಎಲ್ಲರೊಂದಿಗೆ ಇದ್ದೂ ಒಂದರ್ಥದಲ್ಲಿ ಏಕಾಂಗಿ ಪಯಣ. ಈಗ ಯಾವಾಗಲಾದರೂ ಹಾಗೆ ಸುಮ್ಮನೆ ಕುಳಿತು ಕಣ್ಮುಚ್ಚಿದರೆ ಮತ್ತೆ ಮತ್ತೆ ಮನಸ್ಸು ಜೀಕುವುದು ಬಾಲ್ಯದ ನೆನಪುಗಳನ್ನು. ಅಪ್ಪನ ಜೊತೆ, ಅಮ್ಮನ ಜೊತೆ ಕಳೆದ ದಿನಗಳು, ಆ ಸಮೃದ್ಧ ಬಾಲ್ಯ, ಮಕ್ಕಳಿ¨ªಾಗಿನ ನೆನಪುಗಳು ಹಸಿಗೋಡೆಗೆ ಅಂಟಿಕೊಂಡ ಮರಳಿನ ಕಣಗಳ ಹಂಗೆ ಕೂತುಬಿಡುತ್ತವೆ. ನಂತರದ ದಿನಗಳು ಸವೆಯುತ್ತ ಹೋಗುತ್ತವೆ.
ತಾವು ಬದುಕಿದ್ದ ಕಾಲಕ್ಕಿಂತ ಬಹಳ ಮುಂದೆ ಆಲೋಚಿಸಿದ ಪ್ರಗತಿಪರ ತಂದೆ, ಅಮ್ಮನ ಆಸರೆಯ ಬಾಲ್ಯ, ಗೌರೀಶಂಕರ ಪರ್ವತದ ಹಾಗಿದ್ದ ಆ ಗುರುವಿನ ಅಭಯ, ತಾಯಿಯ ನಗು ನೆನಪಿಸುವ ಅನ್ನಪೂರ್ಣಾ ದೀದಿಯ ನಗು, ಆ ಕಾಲಘಟ್ಟ ಎಲ್ಲವೂ ಕಳೆದುಹೋದ ದಿನಗಳು, ಎಂಟೂವರೆ ದಶಕಗಳ ಕಾಲಪರದೆಯ ಹಿಂದೆ ಸರಿದ ಗಳಿಗೆಗಳು. ಹೌದೇ? ಖಂಡಿತ ಇಲ್ಲ. ಸರೋದ್ ಹಿಡಿದು ನುಡಿಸಲು ಕುಳಿತರೆ ಆ ಎಲ್ಲ ಕ್ಷಣಗಳು ಇದೋ ಇಲ್ಲಿ ಮತ್ತೆ ಬೆರಳುಗಳಿಗೆ ಇಳಿದು, ಸ್ವರಮನೆಯ ಮೆಟ್ಟಿಲುಗಳೇ ಇಲ್ಲದ ಸರೋದ್‌ನ ಎಲ್ಲ ಸ್ವರಗಳಲ್ಲಿ ಆಕಾರ ಪಡೆಯುತ್ತ, ಗಾನಸೌಧವಾಗುತ್ತ, ಇದೀಗ ಆ ಸೌಧದೊಳಗೆ ಏನಿದೆ ಮತ್ತು ಏನಿಲ್ಲ. ಸ್ವರದ ಅನುರಣನದಲ್ಲಿ 85 ವರ್ಷಗಳ ಸಾರ್ಥಕ ನಿಜ ಬದುಕು ಪಿಸುನುಡಿಯುತ್ತಿರುತ್ತದೆ.
– ಸುಮಂಗಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.