“ರಾಮಕಥಾ’ದ ಕನ್ನಡ ಪಥ
Team Udayavani, Oct 1, 2017, 6:15 AM IST
ರಾಮಾಯಣ ಮಹಾಕಾವ್ಯವು ದಕ್ಷಿಣಭಾರತ ಮತ್ತು ದಕ್ಷಿಣ ಪೂರ್ವ ಏಷ್ಯಾಗಳ ಜನರ ಅಂತರಂಗದ ಭಾಗವಾಗಿದೆ. ವಾಲ್ಮೀಕಿ ರಾಮಾಯಣವನ್ನು ಆದಿಕಾವ್ಯವಾಗಿ ಬಹುಜನರು ಒಪ್ಪಿರುವರಾದರೂ ಈ ಭಾಗದ ಜನರು ಮರು ನಿರೂಪಿಸಿದ ಹಲವು ಸಂಪದ್ಭರಿತ, ವೈವಿಧ್ಯಪೂರ್ಣ, ದೇಸೀ ಸೊಗಡಿನ ಮರುರೂಪಗಳು ಕಾಲದೇಶಗಳ, ಧರ್ಮ ಸಮಾಜಗಳ ಕಟ್ಟುಪಾಡುಗಳ ಹಂಗಿಲ್ಲದೆ ನಿರಂತರವಾಗಿ ಹರಿದು ಬಂದಿವೆ.
ದಕ್ಷಿಣಭಾರತದಲ್ಲಿ ಮೊತ್ತಮೊದಲ ರಾಮಾಯಣದ ಉÇÉೇಖವಿರುವುದು ಚಾಲುಕ್ಯರ ವಾಸ್ತುಶಿಲ್ಪದಲ್ಲಿ. ಉತ್ತರ ಕರ್ನಾಟಕದ ಪಟ್ಟದಕಲ್ಲಿನ ದೇವಾಲಯಗಳಲ್ಲಿ. ರಾಮ ಸೀತೆ ಮತ್ತು ಲಕ್ಷ್ಮಣನ ಜತೆಗೆ ಬಂಗಾರದ ಜಿಂಕೆ (ಮಾರೀಚ)ಯನ್ನೂ ಇಲ್ಲಿ ಕಡೆದು ಹೆಸರಿಸಲಾಗಿದೆ (ಸುಮಾರು 692-94). ಇದೇ ಪರಂಪರೆ ರಾಮಾಯಣವನ್ನು ದೇವಾಲಯಗಳ ಗೋಡೆಯ ಮೇಲೆ ಚಿತ್ರಿಸುವ ಸಂಪ್ರದಾಯವಾಗಿ ರೂಪುಗೊಂಡು ಪಲ್ಲವ, ಪಾಂಡ್ಯ, ಚೋಳ ಹೊಯ್ಸಳ ಮತ್ತು ವಿಜಯನಗರ ಮತ್ತು ವಿಜಯನಗರೋತ್ತರ ಕಾಲದಲ್ಲಿ ಮುಂದುವರೆಯಿತು. ವಿಜಯನಗರದ ಅರಸರ ಕಾಲದಲ್ಲಿ ಕೋದಂಡರಾಮನ ಪರಿವಾರದ ರಾಮ, ಲಕ್ಷ್ಮಣ, ಹನುಮಂತರ ವಿಗ್ರಹಗಳು ಹೆಚ್ಚಿದವು. ಆನಂತರ ಹಂಪಿಯ ವಿಜಯವಿಠuಲ ದೇವಾಲಯ ಮತ್ತು ಹಜಾರ ರಾಮನ ದೇವಾಲಯಗಳಲ್ಲಿ ರಾಮಾಯಣದ ಭವ್ಯ ಚಿತ್ರಗಳನ್ನು ನೋಡಬಹುದಾಗಿದೆ. ಬೇಲೂರು ಮತ್ತು ಹಳೇಬೀಡಿನ ದೇವಾಲಯಗಳಲ್ಲಿ ಮಹಾಭಾರತದ ಘಟನೆಗಳಿಗೆ ಹೆಚ್ಚಿನ ಒತ್ತನ್ನು ನೀಡಿದ್ದರೂ ಮುಂದೆ ಇಷ್ಟೇ ಒತ್ತನ್ನು ನೀಡಿದ ದೇವಾಲಯಗಳನ್ನು ಕಾಣುವೆವು. ಶಿವಮೊಗ್ಗ ಜಿÇÉೆಯ ಅಮೃತಾಪುರದ ದೇವಾಲಯದ ರಾಮಾಯಣ ಕುರಿತ ಶಿಲ್ಪಗಳು ಮನೋಹರವಾಗಿವೆ. ಇದರ ಜೊತೆ ಜೊತೆಗೆ ಸಮಾಜೋ ಸಾಂಸ್ಕೃತಿಕ ಸಂದರ್ಭಾನುಸಾರ ಜನಪದೀಯ ಸಾಹಿತ್ಯ, ಮೌಖೀಕ ಮತ್ತು ದೇಸಿಯ ಕಲಾಪರಂಪರೆಗಳಲ್ಲಿಯೂ ರಾಮಾಯಣವು ಅಭಿವ್ಯಕ್ತಿಯನ್ನು ಪಡೆದುಕೊಂಡಿರುವುದು ಗಮನೀಯ. ಶಿಲ್ಪಿಗಳು ಈ ಘಟನೆಗಳನ್ನು ನಿರೂಪಿಸುವಲ್ಲಿ ವಹಿಸಿರುವ ಸ್ವಾತಂತ್ರ್ಯ ವಹಿಸಿರುವುದು ಉÇÉೇಖನೀಯ.
ಮಹಾಕಾವ್ಯದ ಘಟನೆಗಳನ್ನು ಕಡೆದಿರುವ ವಿನ್ಯಾಸಕ್ರಮಗಳನ್ನು ಮೂರು ವಿಧದಲ್ಲಿ ನೋಡಬಹುದು :
1. ಚೌಕಟ್ಟಿನಲ್ಲಿ (ಒಂದು ಫ್ರೆàಮಿನಲ್ಲಿ ಒಂದು ಘಟನೆಗೆ ಸಂಬಂಧಿಸಿದ ವ್ಯಕ್ತಿ/ವಸ್ತುಗಳನ್ನು ಚಿತ್ರಿಸಿರುವುದು)
2. ಪಟ್ಟಿಕೆಗಳಲ್ಲಿ ನಿರೂಪಿಸಿರುವ ಶಿಲ್ಪಗಳು
(ಸಾಲು ಸಾಲಾಗಿ ಘಟನೆಗಳನ್ನು ನಿರೂಪಿಸಿರುವುದು)
3. ಬಿಡಿ ಬಿಡಿಯಾಗಿ ಮಹಾಕಾವ್ಯದ ವ್ಯಕ್ತಿ/ವಿವರಗಳ ಶಿಲ್ಪಗಳು.
ದಕ್ಷಿಣಭಾರತದಲ್ಲಿ ಅತಿ ಪುರಾತನ ಕಾಲದ ರಾಮಾಯಣ ಕಥಾನಕಗಳನ್ನು ಕಾಣುವುದು ಪಟ್ಟದಕಲ್ಲಿನಲ್ಲಿ ಎಂದೆನಲ್ಲವೆ? ಇಲ್ಲಿನ ಉಬ್ಬುಶಿಲ್ಪಗಳನ್ನು ಮಾತ್ರ ಬಿಡಿಸಿರುವುದಲ್ಲದೆ ಮಹಾಕಾವ್ಯದ ವ್ಯಕ್ತಿಗಳನ್ನು ಅಕ್ಷರದಲ್ಲಿ ಗುರುತಿಸಲಾಗಿದೆ. ಅಲ್ಲದೆ ರಾಮಾಯಣದ ಕೆಲವು ಘಟನೆಗಳನ್ನು ಸಂಕ್ಷಿಪ್ತವಾಗಿ ನಿರೂಪಿಸಿರುವುದೂ ಇಲ್ಲಿಯೇ ಮೊದಲು. ಉದಾಹರಣೆಗೆ ರಾಮ-ಲಕ್ಷ್ಮಣರನ್ನು ಉದ್ದೇಶಿಸಿ ಸುವರ್ಣ ಜಿಂಕೆಯನ್ನು ಹಿಡಿದು ತರಲು ಸೀತೆಯು ಕೇಳಿಕೊಳ್ಳುವ ದೃಶ್ಯ. ಒಂದೇ ಚೌಕಟ್ಟಿನಲ್ಲಿ ಸೆರೆಹಿಡಿದ ಇಂಥ ದೃಶ್ಯಗಳು ಪಲ್ಲವರ ದೇವಾಲಯಗಳಲ್ಲಿ ಕಂಡುಬಂದಿಲ್ಲ. ಅಲ್ಲದೆ, ಆ ಮುಂಚಿನ ಕಾಲದ ದಕ್ಷಿಣಭಾರತದ ಯಾವುದೇ ದೇವಾಲಯಗಳಲ್ಲೂ ಕಾಣಸಿಗುವುದಿಲ್ಲ.
ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ರಾಮಾಯಣದ ಘಟನೆಗಳನ್ನು ಶಿಲ್ಪದಲ್ಲಿ ನಿರೂಪಿಸಿರುವುದು ಮುಂದುವರೆದರೂ ಇದು ಅವಿಚ್ಛಿನ್ನ ಕಥಾನಕ ನಿರೂಪಣೆಗಳಾಗಿ ಮಾರ್ಪಡುವುದು ಹೊಯ್ಸಳರ ದೇವಾಲಯಗಳ ಹೊರಗೋಡೆಗಳ ಮೇಲೆ. ಹಳೇಬೀಡಿನ ಹುಚ್ಚೇಶ್ವರ ಮತ್ತು ಕೇದಾರೇಶ್ವರ ದೇವಾಲಯದ ಗೋಡೆಗಳ ಮೇಲೆ ಇಂಥ ನಿದರ್ಶನಗಳನ್ನು ಕಾಣುವೆವು. ಬರಬರುತ್ತ ಹೊಯ್ಸಳ ದೇವಾಲಯದ ದಕ್ಷಿಣಭಾಗದಲ್ಲಿ ಮಹಾಭಾರತ ಮತ್ತು ಭಾಗವತದ ದೃಶ್ಯಗಳನ್ನು ಕೊರೆಯುವುದು ಸಂಪ್ರದಾಯವಾಯಿತು.
ವಿಜಯನಗರದ ಕಾಲ ಮತ್ತು ಆನಂತರ ಇದು ಮುಂದುವರೆ ದರೂ ಹೊಯ್ಸಳರ ಸಮಗ್ರತೆಯನ್ನು ಪಡೆದುಕೊಳ್ಳಲಿಲ್ಲ. ಆದರೆ, ಆವರೆಗೂ ಮಹಾಕಾವ್ಯದ ಮಹಾಪುರುಷನಾಗಿದ್ದ ರಾಮನು ವಿಜಯನಗರದ ಕಾಲದಲ್ಲಿ ದೈವತ್ವವನ್ನು ಪಡೆದುಕೊಂಡು ಆರಾಧನೆಗೆ ಒಳಗಾದ ವಿದ್ಯಮಾನವನ್ನು ಗಮನಿಸಬೇಕಾಗಿದೆ. ಇದೇ ಕಾಲದಲ್ಲಿ ಹನುಮನ ಆರಾಧನೆಯು ಲೋಕಪ್ರಿಯವಾಗತೊಡಗಿತು.
ರಾಮನು ಮಹಾಕಾವ್ಯದ ವಸ್ತುವಾಗಿ ಕಾವ್ಯದಲ್ಲಿ ಕಾಣಿಸಿಕೊಳ್ಳುವುದು ಒಂಬತ್ತನೆಯ ಶತಮಾನದ ಕವಿರಾಜಮಾರ್ಗದಲ್ಲಿ (ಸು 850 ಕಿ.ಪೂ). ಈ ಗ್ರಂಥದ ಒಂಬತ್ತು ಪದ್ಯಗಳಲ್ಲಿ ರಾಮಾಯಣದ ಏಳು ಘಟನೆಗಳನ್ನು ಉದ್ಧರಿಸಲಾಗಿದೆ. ಇಲ್ಲಿ ರಾಮ ಸೀತೆ ಮತ್ತು ಅಣುವ (ಹನುಮ)ನನ್ನು ಹೆಸರಿಸಲಾಗಿದೆ. ಇಲ್ಲಿಯ ಪದ್ಯಗಳಲ್ಲಿ ರಾಘವ ಮತ್ತು ಜನಕಮಾತೆಯ ವ್ಯಕ್ತಿತ್ವಗಳನ್ನು ಪರಿಚಯಿಸಿರುವುದನ್ನು ಗಮನಿಸಬಹುದಾಗಿದೆೆ.
ಪರಿದೆಯ್ದಿ ತಾಗಿದಂ ಭಾ
ಸುರತರರಘುಕುಲಲಲಾಮನೊಳ್ ಲಕ್ಷ್ಮಣನೊಳ್
ಪರಿಕೋಪವಶಭ್ರಮಣೋ
ದ್ಧುರರಕ್ತಕಠೊರಲೋಚನಂ ದಶವದನಂ
(ಎರಡನೆಯ ಪರಿಚ್ಛೇದ ಪದ್ಯ 96)
ಮೊದಲ ಬಾರಿ ಅಣುವ ರಾಘವನನ್ನು ಭೇಟಿಯಾದದ್ದು ಈ ಪದ್ಯದಲ್ಲಿ ವ್ಯಕ್ತವಾಗಿದೆ.
ಸಕಲಜನವಿನುತನಂ ಶತ
ಮಖಸದೃಶವಿಶಾಲ ವಿವಿಧವಿಭವೋದಯನಂ
ಪ್ರಗತಗುಣಗಣನನರಿಬಲ
ವಿಘಟನಂ ಕಂಡನಣುವನಾ
(ಎರಡನೆಯ ಪರಿಚ್ಛೇದ, ಪದ್ಯ 38- ಇಲ್ಲಿನ ವರ್ಗ ಪ್ರಾಸವನ್ನೂ ಗಮನಿಸಿ ಕ ಖ ಗ ಘ!)
ಬಾದಾಮಿ ಚಾಲುಕ್ಯರ ಕಾಲಘಟ್ಟದಲ್ಲಿ (ಸುಮಾರು 692 -94) “ಸಂಧಿವಿಗ್ರಹಿ ರಾಮ’ ಎನ್ನುವವನ ಉÇÉೇಖ ಬಂದಿದೆ. ಮುಂದೆ ರಾಮನನ್ನು ಕುರಿತ ಮಹಾಕಾವ್ಯಗಳು ರಚಿತವಾದದ್ದನ್ನು ನೋಡುವೆವು. ಇವೆಲ್ಲವೂ ಜಾನಪದದಿಂದ ಸ್ಥಳೀಯ ವಿವರಗಳನ್ನೂ ಅಳವಡಿಸಿಕೊಂಡಿವೆ. ತಮಿಳುನಾಡಿನ ಕಂಬ ರಾಮಾಯಣ ಮತ್ತು ಕರ್ನಾಟಕದಲ್ಲಿ ರಚಿತವಾದ ಪಂಪ ರಾಮಾಯಣಗಳು ಒಂದೇ ಕಾಲಘಟ್ಟದವು (ಸುಮಾರು 12ನೆಯ ಶತಮಾನ) ತೊರವೆ ರಾಮಾಯಣದಿಂದ ಪ್ರೇರಿತನಾಗಿ ಅನೇಕ ಯಕ್ಷಗಾನ ಪ್ರಸಂಗಗಳು, ದಾಸರ ಕೀರ್ತನೆಗಳು ರಚಿತವಾದವು. ಇಪ್ಪತ್ತನೆಯ ಶತಮಾನದಲ್ಲಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಸೇರಿ ಸುಮಾರು ಹನ್ನೆರಡಕ್ಕಿಂತಲೂ ಅಧಿಕ ಕಾವ್ಯ ಅಥವಾ ಗದ್ಯಕೃತಿಗಳು ರಚಿತವಾಗಿವೆ.
– ಷ. ಶೆಟ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.