ರಂಜನಿ ರಾಗವನ್ನು…


Team Udayavani, Jan 14, 2018, 5:41 PM IST

hqdefault.jpg

ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿಯಾಗಿ ಮನೆಮಂದಿಯ ಮನಗೆದ್ದಿರುವ ರಂಜನಿ ರಾಘವನ್‌ ಈಗ ಹಿರಿತೆರೆಗೂ ಕಾಲಿಟ್ಟು, ಈಗಾಗಲೇ ರಾಜ-ಹಂಸ ಹಾಗೂ ಸುಬ್ಬ-ಸುಬ್ಬಿ ಎಂಬ ಎರಡು ಸಿನೆಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಸುದ್ದಿ ಗೊತ್ತೇ ಇದೆ. ಈ ಪೈಕಿ ಸುಬ್ಬ-ಸುಬ್ಬಿ ಬಿಡುಗಡೆಯಾಗಲಿಲ್ಲ. ಬಿಡುಗಡೆಯಾದ ರಾಜ-ಹಂಸ ರಂಜನಿಗೆ ಒಳ್ಳೆಯ ಹೆಸರು ತಂದುಕೊಟ್ಟಿಲ್ಲ. ಈಗ ಆ ಚಿತ್ರದ ನಂತರ ರಂಜನಿ ಸದ್ದಿಲ್ಲದೆ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅದೇ ಸೂಫಿ. 

ಸೂಫಿ ಎಂಬ ಹೆಸರೇ ಹೇಳುವಂತೆ ಇದೊಂದು ಸಂಗೀತಕ್ಕೆ ಸಂಬಂಧಿಸಿದ ಪದ. ಇಲ್ಲಿ ರಂಜನಿ ಅವರು ಟೈಟಲ್‌ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬುದು ವಿಶೇಷ. ಇಡೀ ಚಿತ್ರದ ಕಥೆ ಕೂಡ ಅವರ ಸುತ್ತವೇ ಸಾಗಲಿದೆ. ಇನ್ನು, ಈ ಚಿತ್ರಕ್ಕೆ ಶಿವು ಜಮಖಂಡಿ ನಿರ್ದೇಶಕರು. ವಿಜಯ್‌ ರಾಘವೇಂದ್ರ ಅಭಿನಯದ ನನ್ನ ನಿನ್ನ ಪ್ರೇಮಕಥೆ ಬಳಿಕ ಶಿವು ಜಮಖಂಡಿ ನಿರ್ದೇಶಿಸುತ್ತಿರುವ ಚಿತ್ರವಿದು. ಈ ಚಿತ್ರಕ್ಕೆ  ವಿನೋದ್‌ ಪಾಟೀಲ್‌ ಹೀರೋ. ಜಸ್ಟ್‌ ಆಕಸ್ಮಿಕ ಚಿತ್ರ ಮಾಡಿದ್ದ ವಿನೋದ್‌ ಪಾಟೀಲ್‌ಗೆ ಸೂಫಿ ಎರಡನೆಯ ಚಿತ್ರ.

ಇದೊಂದು ಮ್ಯೂಸಿಕಲ್‌ ಜರ್ನಿ ಸಿನೆಮಾ ಎನ್ನುವ ರಂಜನಿ, “ಇಡೀ ಚಿತ್ರ ಸೂಫಿ ಸಂಗೀತದ ಹಿನ್ನೆಲೆಯಲ್ಲೇ ಸಾಗಲಿದೆ. ನನ್ನ ಪಾತ್ರಕ್ಕೆ ತುಂಬಾ ಪ್ರಾಮುಖ್ಯ ಕೊಡಲಾಗಿದೆ. ಅದೊಂದು ರೀತಿ ಬಜಾರಿಯಂತಹ ಪಾತ್ರವದು. ರಾಜಹಂಸ ಚಿತ್ರದ ಬಳಿಕ ಕೇಳಿದ ಕಥೆಗಳ ಸಂಖ್ಯೆ ಎಂಟು. ಆ ಪೈಕಿ ಮಿಸ್‌ ಆಗಿದ್ದು ಎರಡು. ಬಿಟ್ಟಿದ್ದು ಆರು. ಮಿಸ್‌ ಆಗೋಕೆ ಕಾರಣ, ಡೇಟ್ಸ್‌. ಕೈಬಿಡಲು ಕಾರಣ ಕಥೆ, ಪಾತ್ರ ಹೊಂದಿಕೆಯಾಗಲ್ಲ ಎಂಬುದಕ್ಕೆ. ಸುಮ್ಮನೆ ಬಂದುಹೋಗುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಹಾಗಾಗಿ, ಒಂದಷ್ಟು ಚಿತ್ರಗಳನ್ನು ಕೈ ಬಿಟ್ಟದ್ದು ನಿಜ. ರಾಜಹಂಸ ನನಗೊಂದು ಒಳ್ಳೆಯ ಇಮೇಜ್‌ ತಂದುಕೊಡು¤. ಆ ಚಿತ್ರ ನೋಡಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಅದರಿಂದ ಒಂದಷ್ಟು ಅವಕಾಶಗಳೂ ಬಂದಿದ್ದುಂಟು. ಹಾಗೆ ಬಂದ ಅವಕಾಶಗಳಲ್ಲಿ ಸೂಫಿ ಚಿತ್ರವೂ ಒಂದು’ ಎಂದು ಹೇಳಿಕೊಳ್ಳುತ್ತಾರೆ ರಂಜನಿ.

ಫೆಬ್ರವರಿಯಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಸುಮಾರು 50 ದಿನಗಳ ಚಿತ್ರೀಕರಣ ನಡೆಯಲಿದೆ. ಕಿರುತೆರೆ ನಟಿಯರು ಬೆಳ್ಳಿತೆರೆಗೆ ಬರುತ್ತಿರುವುದು ಹೊಸದೇನಲ್ಲ. ಹಾಗೆ ಬಂದವರು ಅನೇಕರು. ಆದರೆ, ಉಳಿದದ್ದು ಬೆರಳೆಣಿಕೆಯಷ್ಟು ನಟಿಯರು. ಆ ಸಾಲಿಗೆ ರಂಜನಿ ರಾಘವನ್‌ ಕೂಡ ಸೇರಿದ್ದಾರೆ. ಕಿರುತೆರೆಯಲ್ಲಿ ಸಖತ್‌ ಜನಪ್ರಿಯರಾಗಿರುವ ರಂಜನಿ, ಹಿರಿತೆರೆಯಲ್ಲೂ ಅದೇ ರೀತಿ ಮಿಂಚುತ್ತಾರಾ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.