ಚಂದನವನಕ್ಕೆ ರಂಗು ತಂದ ರವೀನಾ…
Team Udayavani, Feb 16, 2020, 4:35 AM IST
ಬಾಲಿವುಡ್ ನಟಿ ರವೀನಾ ಟಂಡನ್ ಮತ್ತೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಈಗ ನಿಜವಾಗಿದೆ. ಕಳೆದ ಕೆಲ ತಿಂಗಳಿನಿಂದ ರವೀನಾ ಟಂಡನ್ ಕನ್ನಡದ ಕೆಜಿಎಫ್ 2 ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದರೂ ಆ ಸುದ್ದಿ ದೃಢಪಟ್ಟಿರಲಿಲ್ಲ. ಈಗ ಸ್ವತಃ ಕೆಜಿಎಫ್ 2 ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಇನ್ನು ಚಿತ್ರರಂಗದ ಮೂಲಗಳ ಪ್ರಕಾರ, ಕೆಜಿಎಫ್ 2 ಚಿತ್ರದ ಕಥೆಯಲ್ಲಿ ಬರಲಿರುವ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಬಣ್ಣ ಹಚ್ಚಲಿದ್ದು, 1970-80 ಕಾಲಘಟ್ಟದ ಪ್ರಧಾನಮಂತ್ರಿ ಪಾತ್ರದಲ್ಲಿ ರವೀನಾ ನಟಿಸಲಿದ್ದಾರೆ. “ಕೆಜಿಎಫ್-1′ ರಲ್ಲಿ ಇದರ ಸಣ್ಣ ಝಲಕ್ ಮಾತ್ರ ತೋರಿಸಲಾಗಿದ್ದು, “ಕೆಜಿಎಫ್-2′ ರಲ್ಲಿ ಈ ಪಾತ್ರ ಬರಲಿದೆ. ರವೀನಾ ಅದರಲ್ಲಿ ರಮಿಕಾ ಸೇನ್ ಎನ್ನುವ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಅಂದಹಾಗೆ, 1999ರಲ್ಲಿ ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ಉಪೇಂದ್ರ ಚಿತ್ರದಲ್ಲಿ ರವೀನಾ ಟಂಡನ್ ಅಭಿನಯಿಸಿದ್ದರು. ಇದೇ ರವೀನಾ ಅವರ ಮೊದಲ ಹಾಗೂ ಕೊನೆಯ ಕನ್ನಡ ಸಿನಿಮಾವಾಗಿದೆ. ಅದಾದ ಬಳಿಕ ಸುಮಾರು 20 ವರ್ಷಗಳ ನಂತರ ರವೀನಾ ಟಂಡನ್ ಮತ್ತೆ ಕನ್ನಡಕ್ಕೆ ಬರಲು ಕಾರಣವಾಗಿದ್ದು, “ಕೆಜಿಎಫ್’ ಚಿತ್ರದ ಹಿಂದಿನ ವ್ಯವಹಾರದ ಲೆಕ್ಕಾಚಾರ ಎನ್ನಲಾಗುತ್ತಿದೆ. “ಕೆಜಿಎಫ್-1′ ಚಿತ್ರವನ್ನು ಬಾಲಿವುಡ್‌ನಲ್ಲಿ ರವೀನಾ ಟಂಡನ್ ಪತಿ ಅನಿಲ್ ತಡಾನಿ ವಿತರಣೆ ಮಾಡಿದ್ದರು. ಇನ್ನು ಸ್ವತಃ ರವೀನಾ ಕೂಡ ಆ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಎರಡನೇ ಭಾಗವನ್ನ ಕೂಡ ರವೀನಾ ಟಂಡನ್ ಪತಿ ಅನಿಲ್ ತಡಾನಿ ತಮ್ಮದೇ ಪ್ರೊಡಕ್ಷನ್ ವಿತರಣೆ ಮಾಡುತ್ತಿದ್ದು, ಹೀಗಾಗಿ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಸದ್ಯ ಚಿತ್ರತಂಡವನ್ನು ಸೇರಿಕೊಂಡಿರುವ ರವೀನಾ ಟಂಡನ್ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ರವೀನಾ ಟಂಡನ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಡೀ ಚಿತ್ರತಂಡದ ಪರವಾಗಿ ರವೀನಾ ಅವರನ್ನು ಸ್ವಾಗತಿಸಿದ್ದಾರೆ.
ರವೀನಾ ಟಂಡನ್ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಎರಡು ದಶಕಗಳ ನಂತರ ಸ್ಯಾಂಡಲ್‌ವುಡ್‌ಗೆ ರೀ-ಎಂಟ್ರಿ ಕೊಡುತ್ತಿರುವ ರವೀನಾ ಟಂಡನ್ ಅವರನ್ನು ಇಂದಿನ ಕನ್ನಡ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಅನ್ನೋದು “ಕೆಜಿಎಫ್-2′ ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.