Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ


Team Udayavani, Nov 17, 2024, 5:29 PM IST

142

ಲಡ್ಡು ಮುತ್ಯಾ ಅಂದರೆ ತಿರುಗುತ್ತಿರುವ ಫ್ಯಾನ್‌ ನಿಲ್ಲಿಸುವ ಬಾಬಾ ಎಂದೇ ಹಲವರು ನಂಬಿದ್ದಾರೆ. ಅದನ್ನೇ ನಿಜ ಎಂದುಕೊಂಡು  ಮತ್ತೂಂದಷ್ಟು ಜನ ರೀಲ್ಸ್ ಮಾಡಿ ಸಂಭ್ರಮಿಸಿದ್ದಾರೆ. ಆದರೆ ವಾಸ್ತವ ಬೇರೆಯೇ ಇದೆ. ಲಡ್ಡು ಮುತ್ಯಾ ಅಂದರೆ ತಮಾಷೆಯ ವ್ಯಕ್ತಿಯಲ್ಲ. ಆತ ಉತ್ತರ ಕರ್ನಾಟಕದ, ಅದರಲ್ಲೂ ಬಾಗಲಕೋಟೆ ಸೀಮೆಯ ಜನರ ಪಾಲಿನ ಆರಾಧ್ಯ ದೈವ. ಜನಸಾಮಾನ್ಯರ ಏಳಿಗೆಗೆ ಶ್ರಮಿಸಿದ ಅವಧೂತ, ಪವಾಡ ಪುರುಷ! ಬದುಕಿನ ವ್ಯಾಮೋಹ ತೊರೆದ ಸರ್ವಸಂಗ ಪರಿತ್ಯಾಗಿ ಸಂತ…

ಕೆಲವು ದಿನಗಳ ಹಿಂದೆ ಪ್ರಖ್ಯಾತ ಕ್ರಿಕೆಟಿಗ ಶಿಖರ್‌ ಧವನ್‌ ತಮಾಷೆಯ ರೀಲ್‌ ಒಂದನ್ನು ಮಾಡಿದ್ದರು. ಅವರ ಕೆಲವು ಗೆಳೆಯರು ಶಿಖರ್‌ ಅವರನ್ನು ಕುರ್ಚಿಯಲ್ಲಿ ಕೂರಿಸಿ ಎತ್ತಿ ಹಿಡಿದಿದ್ದರೆ, ಮೇಲ್ಛಾವಣಿಯಲ್ಲಿದ್ದ ತಿರುಗುವ ಸೀಲಿಂಗ್‌ ಫ್ಯಾನಿಗೆ ಕೈ ಹಾಕಿ ಅದನ್ನು ತಡೆದು ನಿಲ್ಲಿಸುವಂತೆ ನಟಿಸುತ್ತಿದ್ದರು ಧವನ್‌. ಬ್ಯಾಕ್‌ಗ್ರೌಂಡ್‌ನ‌ಲ್ಲಿ “ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವರ’ ಎನ್ನುವ ಹಾಡು. ವಿಕಲಚೇತನ ವ್ಯಕ್ತಿಯೊಬ್ಬ ತಿರುಗುವ ಫ್ಯಾನಿಗೆ ಕೈ ಹಾಕಿ ನಿಲ್ಲಿಸುವುದನ್ನೇ ಪವಾಡದಂತೆ ಪ್ರದರ್ಶಿಸಿರುವುದೇ ಈ ರೀಲ್‌ನ ಹಿನ್ನೆ°ಲೆ ಎಂದು ಗೊತ್ತಾದಾಗ ಬೇಸರವಾಗಿತ್ತು. ಪ್ರಪಂಚದಾದ್ಯಂತ

ಹಾಸ್ಯದ ವಸ್ತುವಾಗಿ ಬಳಕೆಯಾದ “ಲಡ್ಡು ಮುತ್ಯಾ..’ಎನ್ನುವ ವ್ಯಕ್ತಿಯ ಹಿನ್ನೆಲೆ ಗೊತ್ತಿಲ್ಲದೇ ಅನೇಕರು ಹೀಗೆ ಅಪಹಾಸ್ಯ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿಯೇ.

ದಕ್ಷಿಣ ಕರ್ನಾಟಕದ ಬಹುತೇಕರಿಗೆ “ಲಡ್ಡು ಮುತ್ಯಾ’ ಎನ್ನುವ ಅವಧೂತರ ಪರಿಚಯವಿಲ್ಲ. ಆದರೆ, ಉತ್ತರ ಕರ್ನಾಟಕದ ಎಷ್ಟೋ ಜನರಿಗೆ “ಲಡ್ಡು ಮುತ್ಯಾ’ ಆರಾಧ್ಯ ದೈವ. “ಬಾಗಲಕೋಟೆಯ ಭಗವಂತ’ ಎಂದೇ ಆ ಭಾಗದ ಜನರಿಗೆ ಆತ ಚಿರಪರಿಚಿತ. ಆದರೆ ಇವತ್ತಿಗೆ ಬಹುತೇಕರು ಅಂದುಕೊಂಡಿರುವಂತೆ “ಲಡ್ಡು ಮುತ್ಯಾ’ ಎಂದರೆ ಬೆರಳಾಡಿಸಿ ಫ್ಯಾನು ನಿಲ್ಲಿಸುವ ಬಾಬಾ ಅಲ್ಲ. ಆತ ಉತ್ತರ ಕರ್ನಾಟಕದ ಜನಮಾನಸದಲ್ಲಿ ನೆಲೆ ನಿಂತಿರುವ ಪವಾಡಪುರುಷ. ಬದುಕಿನ ವ್ಯಾಮೋಹ ತೊರೆದ ಸರ್ವಸಂಗ ಪರಿತ್ಯಾಗಿ ಸಂತ.

ಮದುವೆ, ಮೋಹ, ಆಘಾತ… 

ಮೂಲತಃ ಲಡ್ಡು ಮುತ್ಯಾನ ಹೆಸರು ಮಲ್ಲಪ್ಪ. ಆತ ಬಾಗಲಕೋಟೆಯ ಮುಗಳಖೇಡದವನು. ಆತನ ಬಾಲ್ಯದ ಬಗ್ಗೆ ಹೆಚ್ಚಿನ ವಿವರಗಳು ಯಾರಿಗೂ ಗೊತ್ತಿಲ್ಲ. ಆದರೆ ಆತನಿಗೆ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿಯಿರಲಿಲ್ಲವೆನ್ನುವುದು ಅನೇಕರ ಅಂಬೋಣ. ಪ್ರಾಣಿಗಳನ್ನು, ಬಡಬಗ್ಗರನ್ನು ಅಪಾರವಾಗಿ ಪ್ರೀತಿಸುತ್ತಿದ್ದ, ಕೂತಲ್ಲಿ ನಿಂತಲ್ಲಿ ಎಲ್ಲೋ ಕಳೆದು ಹೋಗಿಬಿಡುತ್ತಿದ್ದ ಮಲ್ಲಪ್ಪನಿಗೆ ಮದುವೆಯಾಗಿತ್ತಂತೆ. ಆತನಿಗೆ ಸಂಸಾರದ ಬಗ್ಗೆ ಮುಂಚಿನಿಂದಲೂ ಗೊಂದಲ. ಆರಂಭದಲ್ಲಿ ಮಡದಿಯನ್ನಾತ ತಿರಸ್ಕರಿಸಿಬಿಟ್ಟಿದ್ದ. ಮುಂದೆ ಒಬ್ಬ ಗುರುಗಳ ಆಶ್ರಮದಲ್ಲಿ ಕೆಲಕಾಲ ಸೇವೆ ಮಾಡಿದ ನಂತರ, ಆತನಿಗೆ ಸಂಸಾರದಲ್ಲಿ ಆಸಕ್ತಿ ಶುರುವಾಗಿತ್ತು. ಗುರುಗಳ ಅನುಮತಿ ಪಡೆದು ಪುನಃ ಮಡದಿಯತ್ತ ತೆರಳಿದವನಿಗೆ ಆಘಾತ. ಇವನೊಬ್ಬ ಹುಚ್ಚನೆನ್ನುತ್ತ ಮಡದಿ ತಿರಸ್ಕರಿಸಿಬಿಟ್ಟಿದ್ದಳು. ತೀವ್ರ ಆಘಾತದಿಂದ ಸಂಸಾರದ ಮೋಹ ತ್ಯಜಿಸಿ ಸುಮ್ಮನೇ ನಡೆದ ಮಲ್ಲಪ್ಪ. ಎಲ್ಲೋ ತಿಂದ, ಬೀದಿಯಲ್ಲೆಲ್ಲೋ ಕುಡಿದ. ಚಳಿಯೆಂದು ಕೇಳಿದವರಿಗೆ ತನ್ನ ಅಂಗಿಯನ್ನು ಕೊಟ್ಟ, ಇನ್ಯಾರೋ ಬಡವರಿಗೆ ತನ್ನ ಪಂಚೆಯನ್ನೂ ದಾನ ಮಾಡಿದ! ಹಾಗೆ ಎಲ್ಲವನ್ನೂ ದಾನ ಮಾಡಿ ತಾನು, ಬೀದಿಯ ಪಕ್ಕದಲ್ಲಿ ಸಿಕ್ಕ ಗೋಣಿಯ ಚೀಲದ ತಟ್ಟು ಸುತ್ತಿಕೊಂಡ. ಹಾಗೆ ಆತ ಸಂಸಾರವನ್ನು ತ್ಯಜಿಸಿ ಅಲೆಮಾರಿ­ಯಾಗಿದ್ದೂ ಸಹ ಲೋಕಕಲ್ಯಾಣಕ್ಕೆ ಎನ್ನುವುದು ಪ್ರತೀತಿ.

ಲಡ್ಡ ಎಸೆದು ಮಳೆ ಬರಿಸಿದ!

ಅದೊಮ್ಮೆ ಬಾಗಲಕೋಟೆಯ ಸೀಮೆಯಲ್ಲಿ ಭಯಂಕರ ಬರಗಾಲ. ವರ್ಷಗಟ್ಟಲೆ ಭೀಕರ ಕ್ಷಾಮ. ಇನ್ನು ಮಳೆಯೇ ಆಗದು ಎಂದುಕೊಂಡು ಜನ ಊರು ಬಿಟ್ಟು ಗುಳೆ ಹೊರಟಾಗ “ಅದ್ಯಾಕೆ ಮಳೆ ಆಗಾಂಗಿಲ್ಲ, ನಾನೂ ನೋಡ್ತೀನಿ’ ಎಂದವನೇ ತನ್ನ ಹೆಗಲ ಮೇಲಿದ್ದ ಗೋಣಿಚೀಲದ ತಟ್ಟನ್ನು ಬೀಸಿ ಆಗಸದತ್ತ ಎಸೆದನಂತೆ. ಆತ ಎಸೆದ ಗೋಣಿಯ ರಭಸಕ್ಕೆ ಊರಿಗೆ ಕುಂಭದ್ರೋಣ ಮಳೆಯ ಪ್ರಸಾದ. ಉತ್ತರ ಕರ್ನಾಟಕದಲ್ಲಿ ಗೋಣಿ ಚೀಲದ ತಟ್ಟಿಗೆ “ಲಡ್‌/ ಲಡ್ಡ’ ಎಂದು ಕರೆಯುತ್ತಾರೆ. ವೃದ್ಧ, ಹಿರಿಯ, ಅಜ್ಜ, ಎನ್ನುವ ಪದಕ್ಕೆ ಆ ಭಾಗದಲ್ಲಿ “ಮುತ್ಯಾ’ ಎಂದು ಕರೆಯುವುದು ವಾಡಿಕೆ. ಅವಧೂತ, ಜ್ಞಾನಿ ಎನ್ನುವ ಪದಕ್ಕೆ ಪರ್ಯಾಯವಾಗಿ ಕೂಡ ಮುತ್ಯಾ ಅಥವಾ ಅಜ್ಜ ಎನ್ನುವ ಪದವನ್ನು ಬಳಸಲಾಗುತ್ತದೆ. ಶಿಶುನಾಳ ಶರೀಫ‌ರನ್ನು “ಶರೀಫ‌ಜ್ಜಾ’ ಎಂದು ಕರೆಯುವುದನ್ನು ಗಮನಿಸಬಹುದು. ಹಾಗಾಗಿ ಮಳೆ ತರಿಸಲು ಹೆಗಲ ಮೇಲಿನ “ಲಡ್ಡ’ ಎಸೆದ “ಮುತ್ಯಾ’ ಜನಮಾನಸದಲ್ಲಿ “ಲಡ್ಡು ಮುತ್ಯಾ’ನಾಗಿ ನೆಲೆಸಿದ.

ಅರಿವು ನೀಡಿದ ಅವಧೂತ…

1970 ರಿಂದ 1990ರ ದಶಕದಲ್ಲಿ ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಈತನನ್ನು ಪವಾಡ ಪುರುಷನೆಂದೇ ಪೂಜಿಸಲಾಗುತ್ತಿತ್ತು. ಮುತ್ಯಾ “ದೈವಾಂಶ ಸಂಭೂತ’ ಎಂದು ಜನ ನಂಬುತ್ತಿದ್ದರು. ಆತ ನುಡಿದದ್ದು ಸತ್ಯವಾಗುತ್ತಿತ್ತಂತೆ. “ಇಡೀ ಬಾಗಲಕೋಟೆಯ ಜನರು ಮುತ್ಯಾರವರು ಬೆತ್ತಲೆ ಕಂಡರೂ ಪೂಜ್ಯ ಭಾವನೆಯಿಂದ ಅವರೆದುರು ಬಗ್ಗಿ ನಮಸ್ಕರಿಸುತ್ತಿದ್ದರು. ಅವರು ಅಕಸ್ಮಾತ್‌ ಯಾವುದೇ ಅಂಗಡಿಗೆ ಕಾಲಿಟ್ಟರೆ ಸಾಕು; ಧನ್ಯರಾದೆವು ಎಂಬ ಭಾವನೆ ಅಂಗಡಿಯವರಿಗೆ ಇತ್ತು. ಅವರಿಗೆ ನಮಸ್ಕರಿಸಿ ಹಣ್ಣು ಅಥವಾ ಹಣವನ್ನು ಕೊಟ್ಟರೆ, ಮುಂದೆ ಹೋಗುತ್ತ ಯಾರಾದರೂ ಮಕ್ಕಳು ಅಥವಾ ಮಹಿಳೆಯರು ಕಂಡರೆ ಅವರಿಗೆ ಅದಷ್ಟನ್ನೂ ಕೊಟ್ಟುಬಿಡುತ್ತಿದ್ದರು. ಅಪರಿಚಿತರು, ಆತನ ಹರಿದ ಬಟ್ಟೆಗಳು, ಕೊಳಕು ಸ್ಥಿತಿಯನ್ನು ಕಂಡು ಈತನೊಬ್ಬ ಹುಚ್ಚ ಅಂದುಕೊಳ್ಳುತ್ತಿದ್ದರು. ಆದರೆ ಆತನ ಪವಾಡಗಳನ್ನು ಕಂಡ ನಂತರ ಅಂಥವರೂ ಬದಲಾಗುತ್ತಿದ್ದರು…’ ಎಂದು ಮುತ್ಯಾರನ್ನು ಪ್ರತ್ಯಕ್ಷ ಕಂಡಿದ್ದವರು ಹೇಳುತ್ತಾರೆ.

ಜನರ ಮನದಲ್ಲಿ ಅಜರಾಮರ:

ಇಷ್ಟೆಲ್ಲ ಖ್ಯಾತಿಯ ನಂತರವೂ ಮುತ್ಯಾ ಯಾವ ಮೋಹಕ್ಕೂ ಬೀಳದೇ ಸರ್ವಸಂಗ ಪರಿತ್ಯಾಗಿಯಾಗಿ ಅಲೆಮಾರಿಯಾಗಿಯೇ ಉಳಿದ. ಯಾರೋ ಕೊಟ್ಟಿದ್ದನ್ನು ತಿನ್ನುತ್ತ, ಇನ್ನೆಲ್ಲಿಯೋ ಮಲಗುತ್ತ ಬದುಕು ಸವೆಸಿದವನು 1993ರ ಆಗÓr… 2 ರಂದು ಲಿಂಗೈಕ್ಯನಾದ. ಆತ ದೇಹ ತ್ಯಜಿಸಿ ಮೂವತ್ತು ಚಿಲ್ಲರೆ ವರ್ಷಗಳಾಗಿದ್ದರೂ ಇಂದಿಗೂ ಆತ ಬಾಗಲಕೋಟೆಯ ಭಕ್ತರ ಮನದಂಗಳದಲ್ಲಿ ಅಜರಾಮರ. ಯುಟ್ಯೂಬ್‌ನಲ್ಲಿ “ಮಹಾಮಹಿಮ ಲಡ್ಡು ಮುತ್ಯಾ’ ಎನ್ನುವ ಸಿನಿಮಾ ಕೂಡ ಇದೆ. ಆತನ ಮಹಿಮೆ ಸಾರುವ ಪುಸ್ತಕವೂ ಪ್ರಕಟವಾಗಿದೆ.

ಜನರ ಪ್ರೀತಿ ದಕ್ಕಿದ ಮೇಲೂ, ತನಗಾಗಿ ಜನ ಏನು ಬೇಕಾದರೂ ಮಾಡಬಲ್ಲರು ಎಂದು ಗೊತ್ತಾದಮೇಲೂ ಭಿಕ್ಷುಕನಂತೆ ಅಲೆದಾಡಿದ ಮಹಾನ್‌ ಚೇತನವೊಂದು ಇಂದು ತಮಾಷೆಯ ವಸ್ತುವಾಗಿ ಬದಲಾಗಿರುವುದು ನಿಜಕ್ಕೂ ದುರದೃಷ್ಟಕರ. ಮತ್ತೂಮ್ಮೆ ರೀಲ್ಸ್‌ನಲ್ಲಿ “ಲಡ್ಡು ಮುತ್ಯಾ’ನ ಹಾಡು ಕೇಳಿಬಂದಾಗ ಲೇವಡಿಯ ಭಾವ ಬರದೇ ಗೌರವವೊಂದು ಹುಟ್ಟಿಕೊಂಡರೆ ಈ ಬರಹ ಸಾರ್ಥಕವಾದೀತು.

ಪವಾಡದ ಕಥೆಗಳು ಹಲವು…

ಅದೊಮ್ಮೆ ಒಬ್ಬ ಚಾಲಕ ಮುತ್ಯಾನನ್ನು ಕಾರಿಗೆ ಹತ್ತಿಸಿಕೊಳ್ಳಲು ನಿರಾಕರಿಸಿದ್ದನಂತೆ. ಆದರೆ ಮುಂದೆ ಮೂವತ್ತು ಕಿಮಿಗಳಷ್ಟು ದೂರದಲ್ಲಿ ಕಾರಿಗಿಂತಲೂ ಮೊದಲು ಬಂದು ತಲುಪಿಕೊಂಡಿದ್ದನಂತೆ ಮುತ್ಯಾ. ಈ ಪವಾಡವನ್ನು ನೋಡಿದ ಕಾರ್‌ ಚಾಲಕ ಕಕ್ಕಾವಿಕ್ಕಿಯಾಗಿ ಮಾತೇ ಹೊರಡದೆ ನಿಂತುಬಿಟ್ಟನಂತೆ.

ಲಡ್ಡು ಮುತ್ಯಾ ತಮ್ಮ ಅಂಗಡಿಯೊಳಕ್ಕೆ ಕಾಲಿಟ್ಟರೆ ಸಾಕೆಂದು ಅವತ್ತಿನ ವರ್ತಕರು ಕಾಯುತ್ತಿದ್ದರಂತೆ. ಆತ ಕಾಲಿಟ್ಟ ಅಂಗಡಿಗಳ ಅದೃಷ್ಟ ಬದಲಾಗಿಬಿಡುತ್ತಿತ್ತು. ಸಣ್ಣ ಗಾಡಿಯಲ್ಲಿ ಭಜ್ಜಿ ಬೋಂಡ ಮಾರುತ್ತಿದ್ದವನಿಂದ ತಿಂಡಿಯನ್ನೆತ್ತಿಕೊಂಡ ಮುತ್ಯಾನ ಕೃಪೆಯಿಂದಾಗಿ ಆತ ದೊಡ್ಡ ಹೋಟೆಲ್ಲಿನ ಮಾಲೀಕನಾದನಂತೆ.  ಮಕ್ಕಳಿಲ್ಲದ ಸಿರಿವಂತನ ಮಡದಿಯೊಬ್ಬಳ ಮಡಿಲಿಗೆ ಬಂದು ಬಿದ್ದ ಮುತ್ಯಾನ ಕೈಯ ಹಣ್ಣು ತಿಂದು ಆಕೆಗೆ ಮಕ್ಕಳಾಗಿದ್ದವು… ಇಂಥ ಅನೇಕ ಪವಾಡದ ಕತೆಗಳು ಮುತ್ಯಾನ ಹೆಸರಿಗಿದ್ದವು.

ಶಾಖೆಗಳಿಲ್ಲದ ಮಠ…

ಲಡ್ಡು ಮುತ್ಯಾನಿಗೆ ಒಂದು ಮಠವಿದೆ. ಬಾಗಲಕೋಟೆಯ ಗದ್ದನಕೇರಿ ಕ್ರಾಸಿನ ಸಮೀಪದ ಸೀಮಿಕೇರಿಯಲ್ಲಿರುವ ಮಠ ಮಾತ್ರವೇ ಆತನ ಹೆಸರಿಗಿರುವ ಮಠ. ಅದಕ್ಕೆ ಯಾವ ಶಾಖೆಗಳೂ ಇಲ್ಲ. ಪ್ರತಿ ಹುಣ್ಣಿಮೆ ಅಮವಾಸ್ಯೆಯಂದು ಅಲ್ಲಿ ಪೂಜೆ ಮಾಡಿ ಪ್ರಸಾದವನ್ನು ಹಂಚಲಾಗುತ್ತದೆ.

-ಗುರುರಾಜ ಕೊಡ್ಕಣಿ, ಯಲ್ಲಾಪುರ.

ಟಾಪ್ ನ್ಯೂಸ್

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

crimebb

Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

hejjenu 1

Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.