ನಾಯಕಿಯೂ ನಿರ್ದೇಶಕಿಯೂ ಸಾಯಿ ಅಕ್ಷತಾ

Team Udayavani, Mar 25, 2018, 7:30 AM IST

1.jpg

ಈ ಹುಡುಗಿಯ ಹೆಸರು ಸಾಯಿ ಅಕ್ಷತಾ. ಅಪ್ಪಟ ಕನ್ನಡತಿ. ಮೂಲತಃ ಕುಂದಾಪುರದ ಬೆಡಗಿ. ಓದಿದ್ದು, ಬೆಳೆದಿದ್ದೆಲ್ಲವೂ ಮಂಗಳೂರು. ಎಲ್ಲಾ ಸರಿ, ಸಾಯಿ ಅಕ್ಷತಾ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಎಂಬ ಪ್ರಶ್ನೆ ಎದುರಾಗಬಹುದು. ಈ ಹುಡುಗಿಗೆ ಸಿನೆಮಾ ಅಂದರೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿ ಈಕೆಯನ್ನು ಕರೆದುಕೊಂಡು ಹೋಗಿದ್ದು, ತೆಲುಗು ಚಿತ್ರರಂಗಕ್ಕೆ. ಹೌದು, ಸಾಯಿ ಅಕ್ಷತಾ ಮೊದಲು ಶೇಖರಂ ಗಾರಿ ಅಬ್ಟಾಯಿ ಎಂಬ ಚಿತ್ರ ನಿರ್ದೇಶಿಸಿದರು! ಅಷ್ಟೇ ಅಲ್ಲ, ಆ ಚಿತ್ರದ ನಾಯಕಿಯಾಗಿಯೂ ನಟಿಸಿದರು. ಕನ್ನಡದ ಹುಡುಗಿಯೊಬ್ಬಳು ಬೇರೆ ಚಿತ್ರರಂಗಕ್ಕೆ ಹೋಗಿ ನಾಯಕಿಯಾಗುವುದೇ ಸಾಹಸದ ವಿಷಯ. ಅದರಲ್ಲೂ ಸಾಯಿ ಅಕ್ಷತಾ, ನಿರ್ದೇಶಕಿಯಾಗಿಯೂ ಎಂಟ್ರಿಯಾಗಿದ್ದು ವಿಶೇಷ. ಅಲ್ಲಿಂದ ತಮಿಳು ಚಿತ್ರರಂಗಕ್ಕೂ ಕಾಲಿಟ್ಟ ಅಕ್ಷತಾ, ನನ್‌ಬರಳ್‌ ನರ್ಪಣಿ ಮಂಡ್ರಮ್‌ ಚಿತ್ರದ ನಾಯಕಿಯೂ ಹೌದು. ಇನ್ನು, ತೆಲುಗಿನಲ್ಲಿ ಈಗ ತೆರೆಗೆ ಸಿದ್ಧವಾಗಿರುವ ಜೆಡಿ ಚಕ್ರವರ್ತಿ ಅಭಿನಯದ ಉಗ್ರಂ ಚಿತ್ರದಲ್ಲೂ ನಟಿಸಿದ್ದಾರೆ. ಈಗ ಇದೇ ಅಕ್ಷತಾ, ಮೊದಲ ಬಾರಿಗೆ ಕನ್ನಡಕ್ಕೆ ಬಂದಿದ್ದಾರೆ. ಪರಸಂಗ ಚಿತ್ರಕ್ಕೆ ಅವರು ನಾಯಕಿ. ಇದು ಅವರ ಮೊದಲ ಕನ್ನಡ ಚಿತ್ರ. ಹಾಗಂತ, ಅವರಿಗೆ ಈ ಹಿಂದೆ ಅವಕಾಶಗಳು ಬಂದಿಲ್ಲವಂತೇನಿಲ್ಲ. ಸಾಕಷ್ಟು ಅವಕಾಶ ಬಂದಿದ್ದರೂ, ಅವರಿಗೆ ಕಥೆ, ಪಾತ್ರಗಳು ಅಷ್ಟಾಗಿ ಹಿಡಿಸಲಿಲ್ಲವಂತೆ. ಪರಸಂಗ ಚಿತ್ರದ ಕಥೆ ಮತ್ತು ಪಾತ್ರದಲ್ಲಿ ನಟನೆಗೆ ಹೆಚ್ಚು ಆದ್ಯತೆ ಇದೆ ಅಂತೆನಿಸಿ, ಆ ಚಿತ್ರ ಒಪ್ಪಿಕೊಂಡಿದ್ದಾರೆ. ಈಗ ಪರಸಂಗ ತೆರೆಗೆ ಬರಲು ಸಜ್ಜಾಗಿದೆ ಮತ್ತು ಆ ಚಿತ್ರವನ್ನು ಎದುರು ನೋಡುತ್ತಿದ್ದಾರೆ ಅಕ್ಷತಾ.

ಎಲ್ಲಾ ಸರಿ, ನಿರ್ದೇಶನವನ್ನೇ ಯಾಕೆ ಆಯ್ಕೆ ಮಾಡಿಕೊಂಡರು? ಈ ಪ್ರಶ್ನೆಗೆ ಉತ್ತರಿಸುವ ಅವರು, ಭವಿಷ್ಯದಲ್ಲಿ ಒಳ್ಳೆಯ ಹೆಸರು ಗಳಿಸಬೇಕು ಎಂಬುದು ಅವರ ಆಸೆಯಂತೆ. ನಾಯಕಿಯಾದರೆ, “ಐದಾರು ವರ್ಷಗಳ ಕಾಲ ಮಾತ್ರ ಉಳಿಯಬಹುದು. ಅದೇ ನಿರ್ದೇಶಕಿಯಾದರೆ, ಅವಕಾಶ ಸಿಕ್ಕಾಗೆಲ್ಲಾ ನಿರ್ದೇಶನ ಮಾಡಿಕೊಂಡಿರಬಹುದು’ ಎಂಬುದು ಅವರ ಮಾತು. ಅಕ್ಷತಾ ಈ ಹಿಂದೆಯೇ, ಕನ್ನಡದಲ್ಲಿ ನಟಿಸುವ ಮನಸ್ಸು ಮಾಡಿದ್ದರು. ಆಗಷ್ಟೇ, ತೆಲುಗು, ತಮಿಳಿನಲ್ಲಿ ಅವಕಾಶಗಳು ಒಂದಾದ ಮೇಲೊಂದು ಬಂದಿದ್ದರಿಂದ ಕನ್ನಡಕ್ಕೆ ಬರುವಾಗ ಸ್ವಲ್ಪ ತಡವಾಯಿತಂತೆ.

ಪರಸಂಗ ಒಳ್ಳೆಯ ಕಥೆ ಮತ್ತು ಪಾತ್ರ ಇರುವ ಚಿತ್ರ. ಜೊತೆಗೊಂದು ಸಂದೇಶವೂ ಇದೆ. ನಾನೊಬ್ಬ ನಿರ್ದೇಶಕಿಯಾಗಿದ್ದರಿಂದ ಕಥೆ ಹೇಗೆ ತೆರೆಯ ಮೇಲೆ ಬರುತ್ತೆ ಎಂಬುದು ಗೊತ್ತಿತ್ತು. ಅಭಿನಯಿಸಲು ಹೆಚ್ಚು ಆದ್ಯತೆ ನೀಡಲಾಗಿದೆ. ನಾನು ಕನ್ನಡದ ಮೊದಲ ಚಿತ್ರ ಮಾಡಲು ಪರಸಂಗ ಸೂಕ್ತ ಆಯ್ಕೆ ಅಂದುಕೊಂಡು ನಟಿಸಿದ್ದೇನೆ. ಸದ್ಯಕ್ಕೆ ಕನ್ನಡದಲ್ಲಿ ಒಂದಷ್ಟು ಕಥೆಗಳು ಬರುತ್ತಿವೆ. ಈಗ ತಮಿಳಿನಲ್ಲಿ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಅತ್ತ, ತೆಲುಗಿನಲ್ಲೂ ಮಾತುಕತೆ ನಡೆಯುತ್ತಿದೆ. ನೋಡಬೇಕು ಕನ್ನಡದಲ್ಲಿ ಇನ್ನೊಂದು ಒಳ್ಳೆಯ ಅವಕಾಶ ಬಂದರೆ ಖಂಡಿತ ಮಿಸ್‌ ಮಾಡಿಕೊಳ್ಳುವುದಿಲ್ಲ. ನಟನೆ ಮತ್ತು ನಿರ್ದೇಶನ ಈ ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುತ್ತೇನೆ.’ ಎನ್ನುತ್ತಾರೆ ಅಕ್ಷತಾ.

ಎಲ್ಲಾ ಸರಿ, “ಪರಸಂಗ’ ಚಿತ್ರಕ್ಕೆ ಈ ಮೊದಲು ಸುಮಾರು 15 ನಾಯಕಿಯರನ್ನು ಸಂಪರ್ಕಿಸಲಾಗಿದ್ದು, ಅವರು ಮಾಡಲು ಒಪ್ಪದ ಪಾತ್ರವನ್ನು ಅಕ್ಷತಾ ಒಪ್ಪಿದ್ದಾರೆ. ಸದ್ಯ, ಹೈದರಾಬಾದ್‌ನಲ್ಲೇ ವಾಸವಾಗಿರುವ ಅಕ್ಷತಾ, ಕನ್ನಡದಲ್ಲೂ ಒಂದೊಳ್ಳೆಯ ನಿರ್ದೇಶನ ಮಾಡುವ ಯೋಚನೆಯ ಲ್ಲಿದ್ದಾರೆ.

ಟಾಪ್ ನ್ಯೂಸ್

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

1(1

Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.