ಸಂಯುಕ್ತ ಕಾಳಗದ ನೂತನ ಪ್ರಸಂಗಗಳು


Team Udayavani, Dec 3, 2017, 6:00 AM IST

samyuktha.jpg

ಕೇವಲ ಒಂದೇ ಒಂದು ವರ್ಷದ ಕೆಳಗೆ ಸಂಯುಕ್ತ ಹೆಗ್ಡೆಗೆ ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆ ಇತ್ತು. ಆದರೆ, ಈ ಒಂದು ವರ್ಷದಲ್ಲಿ ಸಂಯುಕ್ತ ಮಾಡಿಕೊಂಡ ಹಲವು ಅವಾಂತರಗಳಿಂದಾಗಿ ಸಂಯುಕ್ತ ಇವತ್ತು ಕನ್ನಡ ಚಿತ್ರರಂಗದಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದರೆ ತಪ್ಪಿಲ್ಲ.

ಕಳೆದ ವರ್ಷ ಕಿರಿಕ್‌ ಪಾರ್ಟಿ ಬಿಡುಗಡೆಯಾಗಿ ಹಿಟ್‌ ಆದ ಸಂದರ್ಭದಲ್ಲಿ, ಸಂಯುಕ್ತಗೆ ಹಲವು ಅವಕಾಶಗಳು ಒಂದರ ಹಿಂದೊಂದು ಹುಡುಕಿಕೊಂಡು ಬಂದಿದ್ದು ಸುಳ್ಳಲ É. ಆದರೆ, ಸಂಯುಕ್ತ ಗೊಂದಲ ಮತ್ತು ವಿವಾದಗಳಿಂದ ಆ ಅವಕಾಶಗಳನ್ನು ಕಳೆದುಕೊಂಡು ಇವತ್ತು ಕನ್ನಡ ಚಿತ್ರರಂಗದ ಬ್ಯಾಡ್‌ ಗರ್ಲ್ ಎನಿಸಿಕೊಂಡಿದ್ದಾರೆ. ಕಿರಿಕ್‌ ಪಾರ್ಟಿ ನಂತರ ಸಂಯುಕ್ತ ಅವರ ಹೆಸರು ತತ್‌ಕ್ಷಣ ಕೇಳಿ ಬಂದಿದ್ದು, ಅನೀಶ್‌ ತೇಜೇಶ್ವರ್‌ ಅಭಿನಯದ ವಾಸು – ಪಕ್ಕಾ ಕಮರ್ಷಿಯಲ್‌ ಹಾಗೂ ವಿಕ್ಕಿ ಅಭಿನಯದ ಕಾಲೇಜ್‌ ಕುಮಾರ್‌ ಚಿತ್ರಗಳಲ್ಲಿ. ಈ ಎರಡೂ ಚಿತ್ರಗಳಲ್ಲಿ ಸಂಯುಕ್ತ ನಟಿಸುವುದಕ್ಕೆ ಒಪ್ಪಿಕೊಂಡಿದ್ದಷ್ಟೇ ಅಲ್ಲ, ಎರಡೂ ಚಿತ್ರಗಳ ಮುಹೂರ್ತಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಅಷ್ಟರಲ್ಲಿ ಆಕೆಗೆ ತಮಿಳಿನಿಂದ ಒಂದು ಆಫ‌ರ್‌ ಬಂತು. ಪ್ರಭುದೇವ ಅಭಿನಯದ ಚಿತ್ರವೊಂದರಲ್ಲಿ ಸಂಯುಕ್ತಗೆ ಅವಕಾಶ ಸಿಕ್ಕಿದೆ ಎಂದು ಸುದ್ದಿಯಾಗುತ್ತಿದ್ದಂತೆಯೇ, ಕನ್ನಡದಲ್ಲಿ ಒಪ್ಪಿದ್ದ ಎರಡೂ ಚಿತ್ರಗಳನ್ನು ಪಕ್ಕಕ್ಕೆಸೆದು ತಮಿಳಿಗೆ ಹೋಗುವುದಕ್ಕೆ ತಯಾರಾದರು ಸಂಯುಕ್ತ. ಈ ಕುರಿತು ದೊಡ್ಡ ವಿವಾದವೂ ಎದ್ದಿತು. 

ಯಾವಾಗ ಸಂಯುಕ್ತಗೆ ತಮ್ಮ ಚಿತ್ರದಲ್ಲಿ ನಟಿಸುವ ಆಸಕ್ತಿ ಇಲ್ಲ ಎಂದು ಅನೀಶ್‌ಗೆ ಗೊತ್ತಾ ಯಿತೋ, ಅವರನ್ನು ಕೈಬಿಟ್ಟು ನಿಶ್ವಿ‌ಕಾ ನಾಯ್ಡು ಎಂಬ ಹೊಸ ಹುಡುಗಿಯನ್ನು ಆಯ್ಕೆ ಮಾಡಿದರು ಅನೀಶ್‌. ಆದರೆ, ಕಾಲೇಜ್‌ ಕುಮಾರ್‌ ಚಿತ್ರತಂಡದವರು ಮಾತ್ರ ಬಿಡಲಿಲ್ಲ. ಮೊದಲು ಈ ಚಿತ್ರ ಒಪ್ಪಿದ್ದರಿಂದ, ಅದನ್ನು ಮುಗಿಸಿಕೊಡಬೇಕಾಗಿದ್ದು ಸಂಯುಕ್ತ ಕರ್ತವ್ಯ ಎಂದು ಪಟ್ಟು ಹಿಡಿದರು. ಇದರಿಂದಾಗಿ ಸಂಯುಕ್ತ ತಮಿಳು ಚಿತ್ರವನ್ನು ಕೈಬಿಟ್ಟು, ಕಾಲೇಜ್‌ ಕುಮಾರನನ್ನು ಒಪ್ಪಿಕೊಳ್ಳ ಬೇಕಾಯಿತು. ಬಹುಶಃ ಅನೀಶ್‌ ತರಹವೇ ಸಂಯುಕ್ತ ಅವರನ್ನು ತಮಿಳಿಗೆ ಬಿಟ್ಟು ಕಳಿಸಿದ್ದರೆ, ಕಾಲೇಜ್‌ ಕುಮಾರ್‌ ಚಿತ್ರದ ನಿರ್ಮಾಪಕ ಪದ್ಮನಾಭ್‌ ಇನ್ನೊಂದು ಪತ್ರಿಕಾಗೋಷ್ಠಿ ಮಾಡಿ, ಸಂಯುಕ್ತ ಬಗ್ಗೆ ಬೇಸರಿಸಿಕೊಳ್ಳುವ ಪ್ರಸಂಗ ಬರುತಿತ್ತೋ ಇಲ್ಲವೋ ಗೊತ್ತಿಲ್ಲ. ಸಂಯುಕ್ತ ಕಾಲೇಜ್‌ ಕುಮಾರ್‌ ಚಿತ್ರದಲ್ಲೇನೋ ನಟಿಸಿದರು. ಆದರೆ, ಅವರು ಆರಂಭದಿಂದ ಕೊನೆಯವರೆಗೂ ಸಾಕಷ್ಟು ಕಾಟ ಕೊಟ್ಟಿದ್ದಾರಂತೆ. ಚಿತ್ರದ ಪ್ರಚಾರಕ್ಕೆ ಬರದೇ ಸಿಕ್ಕಾಪಟ್ಟೆ ಆಟ ಆಡಿಸಿದ್ದಾರಂತೆ. 

ಹಾಗೆ ನೋಡಿದರೆ, ಸಂಯುಕ್ತ ಕುರಿತು ಯಾವುದೇ ದೂರು ಕೇಳದಿರುವುದು “ಕಿರಿಕ್‌ ಪಾರ್ಟಿ’ ಚಿತ್ರವೊಂದರಲ್ಲೇ. ಮೊದಲ ಚಿತ್ರ ಎಂಬ ಕಾರಣಕ್ಕೆ ಸಂಯುಕ್ತ ಸುಮ್ಮನಿದ್ದರೋ ಅಥವಾ ಸಮಸ್ಯೆ ಬೇಡ ಎಂದು ರಕ್ಷಿತ್‌ ಹಾಗೂ ರಿಷಭ್‌ ಶೆಟ್ಟಿ ಸುಮ್ಮನಾದರೋ ಗೊತ್ತಿಲ್ಲ. ಮಿಕ್ಕಂತೆ ಸಂಯುಕ್ತ ಒಪ್ಪಿಕೊಂಡ ಸಿನಿಮಾಗಳಲ್ಲಿ ಆಕೆಯ ವಿರುದ್ಧ ಒಂದಲ್ಲ ಒಂದು ದೂರು ಇದ್ದೇ ಇದೆ. ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ ಎಂಬ ಚಿತ್ರದ ಮುಹೂರ್ತದಲ್ಲೇ ಸಂಯುಕ್ತ ಚಿತ್ರತಂಡದವರೊಂದಿಗೆ ಮತ್ತು ಮಾಧ್ಯಮದವರೊಂದಿಗೆ ರಂಪಾಟ ಮಾಡಿಕೊಂಡಿದ್ದರು. ಇನ್ನಾದರೂ ಸಂಯುಕ್ತ, ಸ್ವಲ್ಪ ತಾಳ್ಮೆಯಿಂದ ಮತ್ತು ಯಾವ ವಿವಾದಗಳೂ ಇಲ್ಲದೆ ತಮ್ಮ ವೃತ್ತಿ ಜೀವನವನ್ನು ಮುನ್ನಡೆಸಿಕೊಂಡು ಹೋಗುತ್ತಾರಾ ಕಾದು ನೋಡಬೇಕು.

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.