ಬಹಳ ದೊಡ್ಡ ಜನ ಸಂಜನ
Team Udayavani, Jun 9, 2019, 6:00 AM IST
ಕನ್ನಡ ಚಿತ್ರರಂಗದಲ್ಲಿ ಸಂಜನಾ ಗಲ್ರಾನಿ, ಸಂಜನಾ ಗಾಂಧಿ, ಸಂಜನಾ ಬುರ್ಲಿ ಹೀಗೆ ಸಂಜನಾ ಎಂಬ ಹೆಸರಿನಿಂದ ಶುರುವಾಗುವ ಹಲವು ನಾಯಕ ನಟಿಯರನ್ನು ನೋಡಿದ್ದೀರಿ. ಈಗ ಇದೇ ಸಂಜನಾ ಎನ್ನುವ ಹೆಸರಿನಲ್ಲಿರುವ ನಾಯಕಿಯರ ಸಾಲಿಗೆ ಮತ್ತೂಂದು ಹೆಸರು ಸೇರ್ಪಡೆಯಾಗುತ್ತಿದೆ. ಅವರೇ ಸಂಜನಾ ಆನಂದ್.
ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾದ ಕೆಮಿಸ್ಟ್ರಿ ಆಫ್ ಕರಿಯಪ್ಪ ಕಾಮಿಡಿ ಚಿತ್ರ ನಿಮಗೆ ನೆನಪಿರಬಹುದು. ಈ ಚಿತ್ರದಲ್ಲಿ ನಾಯಕ ನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದ ಹುಡುಗಿಯೇ ಸಂಜನಾ ಆನಂದ್. ಅಭಿನಯಿಸಿದ್ದು ಒಂದೇ ಚಿತ್ರವಾದರೂ ಆ ಚಿತ್ರ ಸಂಜನಾ ಆನಂದ್‌ಗೆ ಸಾಕಷ್ಟು ಹೆಸರು ಮತ್ತು ಜನಪ್ರಿಯತೆಯನ್ನು ತಂದುಕೊಟ್ಟಿತು. ಇನ್ನು ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತವ ಮುನ್ನುಗ್ಗುತ್ತಿದೆ. ಇತ್ತೀಚೆಗೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಯಶಸ್ವಿಯಾಗಿ 75 ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿದೆ. ಇದರ ನಡುವೆಯೇ ಚಿತ್ರದಲ್ಲಿ ಭಾಗಿಯಾದ ಕಲಾವಿದರು, ತಂತ್ರಜ್ಞರಿಗೂ ಚಿತ್ರರಂಗದಲ್ಲಿ ನಿಧಾನವಾಗಿ ಒಳ್ಳೆಯ ಆಫರ್ ಬರುತ್ತಿವೆ. ಅದರಲ್ಲೂ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ನಾಯಕ ನಟಿ ಸಂಜನಾ ಆನಂದ್ ಚಿತ್ರರಂಗದಲ್ಲಿ ಭರ್ಜರಿಯಾಗಿಯೇ ಡಿಮ್ಯಾಂಡ್ ಪಡೆದುಕೊಳ್ಳುತ್ತಿದ್ದಾರೆ. ಸಂಜನಾ ನಾಯಕಿಯಾಗಿ ಅಭಿನಯಿಸುತ್ತಿರುವ ಮುಂಬರುವ ಸಾಲು ಸಾಲು ಚಿತ್ರಗಳು ಒಂದರ ಹಿಂದೊಂದರಂತೆ ಅನೌನ್ಸ್ ಆಗುತ್ತಿದೆ.
ಸದ್ಯ ಕೆ. ಪಿ. ಶ್ರೀಕಾಂತ್ ನಿರ್ಮಾಣದಲ್ಲಿ ನಟ ದುನಿಯಾ ವಿಜಯ್ ನಿರ್ದೇಶಿಸಿ, ನಟಿಸುತ್ತಿರುವ ಸಲಗ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಅದ್ದೂರಿಯಾಗಿ ನೆರವೇರಿದ್ದು, ಜೂನ್ ಎರಡನೇ ವಾರದಿಂದ ಸಲಗ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಇದರೊಂದಿಗೆ ಕಿರುತೆರೆಯ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಖ್ಯಾತಿಯ ನಟ ಚಂದು ಅಭಿನಯದ ಕುಷ್ಕಾ ಚಿತ್ರದಲ್ಲೂ ಸಂಜನಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರೀಕರಣ ಕೂಡ ಆರಂಭವಾಗಿದೆ. ಇದರೊಂದಿಗೆ ಚಿರಂಜೀವಿ ಸರ್ಜಾ ಅಭಿನಯದ ಹೊಸಚಿತ್ರ ಕ್ಷತ್ರಿಯಕ್ಕೂ ಸಂಜನಾ ಆನಂದ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರೊಂದಿಗೆ ಇನ್ನೂ ಹೆಸರಿಡದ ಮೂರ್‍ನಾಲ್ಕು ಚಿತ್ರಗಳಿಗೆ ಕೂಡ ನಾಯಕಿಯಾಗಿ ಸಂಜನಾ ಆನಂದ್ ಹೆಸರು ಕೇಳಿ ಬರುತ್ತಿದ್ದು, ಆ ಚಿತ್ರಗಳ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.
ಒಟ್ಟಾರೆ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿ ಪ್ರೇಕ್ಷಕರ ಮತ್ತು ಚಿತ್ರರಂಗದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಅಪ್ಪಟ ಕನ್ನಡದ ಹುಡುಗಿ ಸಂಜನಾ ಆನಂದ್, ಕನ್ನಡ ಚಿತ್ರ ರಂಗದಲ್ಲಿ ಇನ್ನಷ್ಟು ಬೆಳೆಯಲಿ ಅನ್ನೋದು ಕನ್ನಡ ಸಿನಿ ಪ್ರಿಯರ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.