ಶಾರದಾ ಪೂಜೆ : ಆಚರಣೆಯೊಳಗಿನ ಸಾಂಸ್ಕೃತಿಕ ಅರ್ಥವಂತಿಕೆ

Team Udayavani, Oct 6, 2019, 5:23 AM IST

sharada-pooja

ದಕ್ಷಿಣಭಾರತದಲ್ಲಿ ನವರಾತ್ರೆಯ ದಿನಗಳಲ್ಲಿ ಬಹುತೇಕ ಸಪ್ತಮಿಯಂದು ಅಥವಾ ಮೂಲಾ ನಕ್ಷತ್ರದ ದಿನದಂದು ಶಾರದಾಪೂಜೆಯನ್ನು ಮಾಡಲಾಗುತ್ತದೆ. ಯೋಗನಿದ್ರೆಯಲ್ಲಿದ್ದ ದೇವಿಯನ್ನು ದೇವತೆಗಳು ಶರತ್ಕಾಲದ ಪುಣ್ಯ ಸಮಯದಲ್ಲಿ ಎಚ್ಚರಿಸಿದ್ದರಿಂದ ಶಾರದಾ ಎಂಬ ಹೆಸರಿನಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ.

ಶಾರದಾಂಬೆಯೆಂದರೆ ಜ್ಞಾನ, ಸಂಗೀತ, ಕಾವ್ಯ, ಮಾತು ಮೊದಲಾದ ಬೌದ್ಧಿಕ ವಿಚಾರಗಳನ್ನು ಪೋಷಿಸುವ ದೇವತೆ. ಆದ್ದರಿಂದ ತೊಡೆಯ ಮೇಲೆ ವೀಣೆಯನ್ನಿಟ್ಟುಕೊಂಡಿರುವ ಶಾರದಾಂಬೆಯ ಮೂರ್ತಿಯನ್ನೋ, ಚಿತ್ರವನ್ನೋ ಶಾರದಾಪೂಜೆಯ ದಿನದಂದು ಪೂಜಿಸಲಾಗುತ್ತದೆ.

ಶುಭ್ರವಸನವನ್ನುಟ್ಟ, ನಾಲ್ಕು ಕೈಗಳಲ್ಲಿ ಪಾಶ, ಅಂಕುಶ, ಸ್ಫಟಿಕಮಾಲೆ ಹಾಗೂ ಗಿಳಿಗಳನ್ನು ಧರಿಸಿರುವ ಸರಸ್ವತಿಯ ರೂಪವೂ, ಕೈಯಲ್ಲಿ ವೀಣೆಯನ್ನೂ ಪುಸ್ತಕವನ್ನೂ ಹಿಡಿದಿರುವ ಸರಸ್ವತಿಯ ಚಿತ್ರವೂ ಪ್ರಸಿದ್ಧವಾಗಿದೆ. ಶಾರದಾಂಬೆಯು ಬುದ್ಧಿಶಕ್ತಿಗೆ ಪೂರಕವಾದ ದೇವತೆ ಎಂಬುವುದನ್ನು ಈ ಚಿತ್ರಗಳು ಸ್ಪಷ್ಟಪಡಿಸುತ್ತವೆ. ಬ್ರಹ್ಮಾಣೀ, ವಾಗೆªàವೀ, ಸರಸ್ವತೀ, ಭರಡೀ (ಇತಿಹಾಸದ ದೇವತೆ), ವಾಣೀ (ಸಂಗೀತದ ದೇವತೆ), ವರ್ಣೇಶ್ವರೀ (ಅಕ್ಷರಗಳ ದೇವತೆ) ಕವಿಜಿಹ್ವಾಗ್ರವಾಸಿನೀ (ಕವಿತ್ವಶಕ್ತಿಯ ದೇವತೆ), ವಿದ್ಯಾಧಾತ್ರೀ, ವೀಣಾವಾದಿನೀ, ಪುಸ್ತಕಹಸ್ತಾ, ವೀಣಾಪಾಣಿ, ಹಂಸವಾಹಿನೀ ಮೊದಲಾದ ಶಾರದಾಂಬೆಯ ಹೆಸರುಗಳೂ ವಿದ್ಯಾಧಿದೇವತೆಯಾಗಿ ಶಾರದೆಯನ್ನು ಪೂಜಿಸುವುದರ ಔಚಿತ್ಯವನ್ನು ಸಾರುತ್ತವೆ.

ಶಾರದಾಂಬೆಯ ವಾಹನ ಹಂಸ. ನೀರನ್ನೂ ಹಾಲನ್ನೂ ಮಿಶ್ರ ಗೊಳಿಸಿಟ್ಟರೆ ಹಂಸ ಹಾಲನ್ನು ಮಾತ್ರ ಕುಡಿದು ನೀರನ್ನು ಪಾತ್ರೆಯಲ್ಲಿಯೇ ಉಳಿಸುತ್ತದೆ ಎಂಬ ಪ್ರತೀತಿಯಿದೆ. ಹಾಗೆಯೇ ಹಂಸವಾಹಿನಿಯಾದ ಶಾರದೆಯ ಪೂಜೆಯಿಂದ ನಮಗೆ ಅಪೇಕ್ಷಿತವಾದ ಅಂಶಗಳನ್ನು ಸ್ವೀಕರಿಸಿ ಅನಪೇಕ್ಷಿತವಾದ ಅಂಶಗಳನ್ನು ತ್ಯಜಿಸುವಂಥ ಗುಣವೂ ವೃದ್ಧಿಯಾಗುತ್ತದೆ ಎಂಬ ಸೂಚನೆಯಿದೆ.

ನಮಸ್ತೇ ಶಾರದಾದೇವಿ ಕಾಶ್ಮೀರಪುರವಾಸಿನೀ ಎಂಬ ಶ್ಲೋಕದಲ್ಲಿ ವಿವರಿಸಿದಂತೆ ಕಾಶ್ಮೀರ ಶಾರದಾಂಬೆಯ ಮುಖ್ಯ ನೆಲೆ. ಕಾಶ್ಮೀರದೇಶದÇÉೇ ಲಗಧ, ಚರಕ, ವಿಷ್ಣುಶರ್ಮಾ, ವಾಗ½ಟ, ಭಾಮಹ, ಆನಂದವರ್ಧನ, ರುದ್ರಟ, ಅಭಿನವಗುಪ್ತ, ಕ್ಷೇಮೇಂದ್ರ, ಕ್ಷೇಮರಾಜ, ಬಿಲ್ಹಣ, ಕಲ್ಹಣ, ಜಲ್ಹಣ, ಗುಣಾಡ್ಯ, ಕೇಶವಭಟ್ಟಾಚಾರ್ಯ, ಮಮ್ಮಟ, ರುಯ್ಯಕ, ಕುಂತಕ, ಉದ್ಭಟ, ಸೋಮದೇವ, ಪಿಂಗಲ, ಜಯದತ್ತ, ಕ್ಷೀರಸ್ವಾಮಿ, ಪುಷ್ಪದಂತ ಮುಂತಾದ ಅನೇಕ ವಿದ್ವಾಂಸರು ಶಾರದಾಂಬೆಯ ಅನುಗ್ರಹಕ್ಕೆ ಪಾತ್ರರಾಗಿದ್ದರು.

ಪ್ರಕೃತಿಯಲ್ಲಿನ ಎÇÉಾ ವಸ್ತುಗಳನ್ನೂ ದೇವರಂತೆ ಕಾಣುವುದು ಭಾರತೀಯಸಂಸ್ಕೃತಿ. ನವರಾತ್ರಿಯ ಸಂದರ್ಭದಲ್ಲಿ ಆಯುಧಪೂಜೆಯನ್ನು ನಡೆಸಿ, ಯಂತ್ರಾದಿಗಳನ್ನು ಪೂಜಿಸುವಂತೆ ಶಾರದಾಪೂಜೆಯ ಸಮಯದಲ್ಲಿ ಪುಸ್ತಕಗಳನ್ನು ಇಟ್ಟು ಪೂಜಿಸಲಾಗುತ್ತದೆ. ಸಂಗೀತಶಾಲೆಗಳಲ್ಲಿ ಸಂಗೀತ ವಾದ್ಯಗಳ ಪೂಜೆಯನ್ನೂ ನಡೆಸಲಾಗುತ್ತದೆ. ಮೂಲಾ ನಕ್ಷತ್ರದಿಂದ ಆರಂಭಿಸಿ ಶ್ರವಣಾ ನಕ್ಷತ್ರದ ತನಕ ಮೂರು ಅಥವಾ ನಾಲ್ಕು ದಿನಗಳವರೆಗೆ ಪುಸ್ತಕಗಳನ್ನು ಪೂಜಿಸುವ ಸಂಪ್ರದಾಯವಿದೆ. ಭಗವದ್ಗೀತೆ, ವೇದ ಮುಂತಾದ ಪವಿತ್ರ ಗ್ರಂಥಗಳೊಂದಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮೊದಲಾದ ಆಧುನಿಕ ವಿಷಯಗಳ ಪುಸ್ತಕಗಳನ್ನೂ ಪೂಜೆಗಿಟ್ಟು ಮೂರು ದಿನಗಳ ಕಾಲ ಷೋಡಶೋಪಚಾರ ಪೂಜೆಯನ್ನು ನಡೆಸುವ ಪರಂಪರೆಯೂ ಬೆಳೆದು ಬಂದಿದೆ. ಪುಸ್ತಕಗಳಿಗೆ ಪೂಜೆಯನ್ನು ನಡೆಸುವಾಗ ಗಂಧ-ಅರಸಿನ-ಕುಂಕುಮ ಮೊದಲಾದುವುಗಳನ್ನು ಅರ್ಪಿಸುವುದರಿಂದ ಪುಸ್ತಕಕ್ಕೆ ಹಾನಿಯಾಗದಂತೆ ಪುಸ್ತಕ ಪೂಜೆಯ ನಿಮಿತ್ತವಾಗಿಯೇ ವಿಶೇಷವಾಗಿ ನಿರ್ಮಿಸಿದಂತಹ ಮರದ ಪೆಟ್ಟಿಗೆಗಳನ್ನು ಅನೇಕ ಮನೆಗಳಲ್ಲಿ ನೋಡಬಹುದು.

ಚಿಕ್ಕಮಕ್ಕಳಿಗೆ ಅಕ್ಷರಾಭ್ಯಾಸವನ್ನೂ ನವರಾತ್ರಿಯ ಸುಸಂದರ್ಭದÇÉೇ ಮಾಡಿಸಲಾಗುತ್ತದೆ. ವಿಜಯದಶಮಿಯ ದಿನದಂದು ಶಾರದಾಂಬೆಯ ಸನ್ನಿಧಿಯಲ್ಲಿ ಓಂ ಶ್ರೀ ಗಣೇಶಾಯ ನಮಃ ಮೊದಲಾದ ಮಂಗಳಕರ ಪದಗಳನ್ನು ಬರೆಸಿ ಬರವಣಿಗೆಯನ್ನು ಆರಂಭಿಸುವುದು ಹಳೆಯ ಕಾಲ ದಿಂದಲೂ ನಡೆದುಕೊಂಡು ಬಂದಿದೆ.

ದಕ್ಷಿಣ ಭಾರತದಲ್ಲಿ ನವರಾತ್ರಿಯ ಕಾಲದಲ್ಲಿ ಶಾರದಾ ಪೂಜೆಯು ಪ್ರಚಲಿತದಲ್ಲಿದ್ದರೆ ಉತ್ತರಭಾರತ, ಹಾಗೂ ನೇಪಾಲದಲ್ಲಿ ವಸಂತ ಪಂಚಮಿ ಎಂಬ ಹೆಸರಿನಲ್ಲಿ ಚೈತ್ರ ಶುಕ್ಲ ಪಂಚಮಿಯಂದು ಸರಸ್ವತೀ ಪೂಜೆಯನ್ನು ನಡೆಸುತ್ತಾರೆ. ಸರಸ್ವತೀಯ ಜನ್ಮದಿನವೇ ವಸಂತಪಂಚಮಿ ಎಂಬ ನಂಬಿಕೆಯಿದೆ. ಶ್ರೀಪಂಚಮೀ ಎಂದೂ ಈ ದಿನವನ್ನು ಕರೆಯುತ್ತಾರೆ. ಶಾರದೆಯ ಪ್ರಿಯ ವಾದ ಬಣ್ಣ ಹಳದಿ. ಆದ್ದರಿಂದ, ಹಳದಿ ಉಡುಗೆಗಳನ್ನು ತೊಟ್ಟು, ಹಳದಿ ಬಣ್ಣದ ಖಾದ್ಯಗಳನ್ನು ನೈವೇದ್ಯ ಮಾಡುವ ಕ್ರಮವೂ ಇದೆ. ಬೌದ್ಧ, ಜೈನ ಹಾಗೂ ಸಿಕ್ಖರಲ್ಲೂ ಶಾರದಾಪೂಜೆಯ ಸಂಪ್ರ ದಾ ಯ ವಿದೆ.

– ಸೂರ್ಯ ಹೆಬ್ಟಾರ್‌

ಟಾಪ್ ನ್ಯೂಸ್

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.