ಸಿಂಗಾಪುರದಲ್ಲಿ ಕಾಗೆಗಳಿಗೆ ಕಂಡಲ್ಲಿ ಗುಂಡು!

Team Udayavani, Aug 5, 2018, 6:00 AM IST

hakkigalu-aa.jpg

ಹಳ್ಳಿಯಲ್ಲಿ ಯಾರೂ ಅಲಾರ್ಮ್ ಸೆಟ್‌ ಮಾಡಿ ಮಲಗುವುದಿಲ್ಲ. ಕೋಳಿ ಕೂಗು, ಕಾಗೆ ಕೂಗು, ಹಕ್ಕಿಗಳ ಚಿಲಿಪಿಲಿಗಳೇ ಸಾಕು, ನಿದ್ದೆಯಿಂದ ಎಬ್ಬಿಸಲು. ರಾತ್ರಿ ಬೇಗ ಮಲಗಿ, ಮುಂಜಾನೆ ಬೇಗ ಏಳ್ಳೋದು ಹಳ್ಳಿಯ ಜೀವನ. ದಿನದ ಹೊತ್ತಿನಲ್ಲಿ ಗಡಿಯಾರಗಳ ಅಗತ್ಯವೂ ಇರುವುದಿಲ್ಲ. ಅದೇನಿದ್ದರೂ ಪೇಟೆ ಜನರಿಗೆ. ಕೋಳಿಗಳನ್ನು ಬಿಡಿ, ಹಕ್ಕಿಗಳಿಗೆ ಆಶ್ರಯವಾಗಿರುವ ಮರಗಳನ್ನು ಉಳಿಸುವ ಪ್ರಯತ್ನನೂ ಮಾಡುತ್ತಿಲ್ಲ ನಮ್ಮ ಜನ. 

ಆದರೆ ನಾನು ಈ ಹಳ್ಳಿಯ ವಾತಾವರಣದಲ್ಲೇ ಬೆಳೆದವಳು. ಚಾಪೆ ಹಾಸಿ ಮಲಗುತ್ತಿದ್ದ ನಮಗೆ, ಕಿಟಕಿಯ ಸಂದಿನಲ್ಲಿ ನುಸುಳಿಸುತ್ತಿದ್ದ ಬೆಳಕೇ ಗಡಿಯಾರ! ಅಡುಗೆ ಮನೆಯಿಂದ ಅಮ್ಮನ ಗಡಿಬಿಡಿಯಲ್ಲಿ ಕೇಳ್ಳೋ ಪಾತ್ರಗಳ ಸದ್ದು, ಅಪ್ಪ ಗುನುಗುತ್ತಿದ್ದ ಯಕ್ಷಗಾನ ಹಾಡುಗಳು… ಎಲ್ಲದರ ಮಧ್ಯೆ, ಅನ್ನ – ಕಾಳುಗಳನ್ನು ತಿನ್ನಲು ಬರುವ ಕಾಗೆಗಳು, ಅವುಗಳು ತಮ್ಮ ಬಳಗವನ್ನು ಕರೆಯುವ ವೈಖರಿ. ಇಷ್ಟೇ ಸಾಕಾಗ್ತಿದ್ದವು ಮುಂಜಾನೆಯ ಸಮಯವನ್ನು ನಿರ್ಧರಿಸಲು. 

ವಿಚಿತ್ರ ಅನಿಸೋದು ಈ ಕಾಗೆಗಳು. ಸ್ವರ  ಕರ್ಕಶ. ಬಣ್ಣ ಕಪ್ಪು. ಈ ಕಾಗೆಗಳು ಹೊರಡಿಸೋ ಒಂದೊಂದು ಧ್ವನಿಗೂ ನಮ್ಮಲ್ಲಿ ಅರ್ಥಗಳಿವೆ. ಈ ನಂಬಿಕೆಯಲ್ಲಿ ಎಷ್ಟು ನಿಜ, ಎಷ್ಟು ಸುಳ್ಳು ಆ ದೇವರಿಗೆ ಗೊತ್ತು. ಆದರೂ ನಂಬಿಕೆ ಜೋರಾಗಿಯೇ ಇದೆ. ನೆಂಟರು ಬರಲಿದ್ದಾರೆ ಅನ್ನುವ ಪೂರ್ವಸಂದೇಶವನ್ನು ಕೂಡ ಇವುಗಳು ನೀಡಬಲ್ಲವಂತೆ. ಅದಕ್ಕಾಗಿಯೇ ಒಂದು ಸ್ವರವನ್ನು ಹೊರಡಿಸುತ್ತವೆ ! ಅದನ್ನ ಕೇಳ್ಳೋದೇ ಒಂದು ಮಜಾ. ಅದು ನಮ್ಮ ಮನೆಯ ಬಳಿ ಯಾವಾಗ ಕೂಗುತ್ತವೆ ಅಂತ ಕಾದು ಕುಳಿತ ಪ್ರಸಂಗಗಳು ಇವೆ. ಈ ಕಾಗೆಗಳ ಬಗ್ಗೆ ಇರುವ ಪುರಾಣ ಕಥೆಗಳು, ಅಜ್ಜೀಕತೆಗಳು, ಮಕ್ಕಳ ಕಥೆಗಳು ಅಚ್ಚರಿ ತರಿಸುತ್ತವೆ. ಇವು ನಮ್ಮ ಊರಿನ ಕಾಗೆ ಕತೆಯಾದರೆ, ನಾವು ನೆಲೆಸಿರುವ ಸಿಂಗಾಪುರದಲ್ಲಿರುವ ಕಾಕ ಪುರಾಣವೇ ಬೇರೆ !

ರಿಪಬ್ಲಿಕ್‌ ಆಫ್ ಸಿಂಗಾಪುರ್‌ಗೆ ಕಾಗೆಗಳ ಪ್ರವೇಶಕ್ಕೆ ಎಂಟ್ರೀ ಬಿಡಿ, ವೀಸಾ ನೇ ಕೊಡ್ತಾ ಇಲ್ಲ ! ಎಮರ್ಜೆನ್ಸಿà ಲ್ಯಾಂಡಿಂಗ್‌ಗೆ ಅಂತೂ ರೆಡ್‌ ಸಿಗ್ನಲ್‌ ಅಕ್ರಮ ಪ್ರವೇಶ – ನೋ ಛಾನ್ಸ್‌. ಹೇಗೋ ಕಷ್ಟಪಟ್ಟು ನುಸುಳಿತೋ, ಮುಗೀತು ಕಥೆ. ಕಾಗೆಗಳ ಪಾಲಿಗೆ ಇಲ್ಲಿ- ಕಂಡಲ್ಲಿ ಗುಂಡು  ಒಂದೇ ಮಂತ್ರ. ಕಾಗೆಗಳು ಎಷ್ಟೇ ಹಾರಾಡಲಿ, ಸಿಂಗಾಪುರದಲ್ಲಿ ಮಾತ್ರ ಅವುಗಳಿಗೆ ಆಕಾಶವಿಲ್ಲ. 

ನಾವು ಇಲ್ಲಿಗೆ ಬಂದ ಹೊಸತರಲ್ಲಿ ಕಾಗೆಗಳನ್ನು ಹುಡುಕದ ಜಾಗಗಳಿಲ್ಲ.  ಮನೆಗಳ ಸುತ್ತಮುತ್ತ, ತಿನಿಸುಗಳು ಅಂಗಡಿ ಮುಂಗಟ್ಟುಗಳ ಬಳಿ, ಮರಗಳು ಹೆಚ್ಚಾಗಿ ಇರುವ ಕಡೆ-  ಎಲ್ಲೂ ಇಲ್ಲ.  ಇಡೀ ದೇಶಕ್ಕೆ ದೇಶವೇ ಕಾಗೆಗಳಿಂದ ಮುಕ್ತ.
ಬಹುಶಃ ಚೀನಿಯರ ಜೋತಿಷ್ಯಶಾಸ್ತ್ರಕ್ಕೂ ಕಾಗೆಗಳಿಗೂ ಆಗಿ ಬರೋದಿಲ್ಲವೋ ಏನೋ ಎಂದು ತಿಳಿದಿ¨ªೆವು. ನಾವು ಯೋಚನೆ ಮಾಡಿದ್ದೇ ಬೇರೆ, ಸತ್ಯಾಂಶವೇ ಬೇರೆ. ಇಲ್ಲಿನ ಜನತೆಯ ಪ್ರಕಾರ, ಕಾಗೆಗಳದ್ದು ಒರಟು ಸ್ವರ, ಅಶಿಸ್ತು, ಗಲೀಜು ಮಾಡುವ ಬುದ್ಧಿ. ಅದಲ್ಲದೆ, ಇಲ್ಲಿನ ಕಾಗೆಗಳು ಮನುಷ್ಯರ ಮೇಲೂ ದಾಳಿ ಮಾಡುವ ಸಾಧ್ಯತೆ ಇದೆಯಂತೆೆ. ಈ ಹಿನ್ನಲೆಯಲ್ಲಿ ಕಾಗೆಗಳ ನಿರ್ನಾಮಕ್ಕೆ ತಂಡಗಳೇ ರಚನೆಯಾಗಿವೆ ಎಂದರೆ ನಂಬುತ್ತೀರಾ?

ಇದಕ್ಕೆಂದೇ ಸಮವಸ್ತ್ರ ಧರಿಸಿ ಕಾಲಲ್ಲಿ ಬೂಟ್‌, ಹೆಗಲಲ್ಲಿ ಗನ್‌ ಏರಿಸಿಕೊಂಡು ಸಿದ್ಧರಾದವರಿದ್ದಾರೆ. ಕಾಗೆಗಳನ್ನು ನಿರಂತರವಾಗಿ ಕೊಲ್ಲುವುದನ್ನು ಕಂಡರೆ ನೀವಾದರೂ ಕೇಳಿಯೇ ಕೇಳುತ್ತೀರಿ-ಹೀಗೂ ಉಂಟೇ ! ನಮ್ಮ ಊರಿನಲ್ಲಿ ಮಂಗಗಳ ಹಾವಳಿ ತಪ್ಪಿಸಲು ಮಾಡುವ ಕಾರ್ಯಾಚರಣೆಯ ಹಾಗೆ.  ಕ್ರೋ ಶೂಟಿಂಗ್‌ ಇನ್‌ ಪ್ರೋಗ್ರೆಸ್‌, ಪ್ಲೀಸ್‌ ಕೀಪ್‌ ಅವೇ ಅನ್ನೋ ಬೋರ್ಡ್‌ಗಳು ಕೆಲವೊಮ್ಮೆ ಕಾಣಸಿಗುತ್ತವೆ. ವಿಶೇಷವೆಂದರೆ, ಈ ಕಾಗೆಗಳಿಗೆ ಗುಂಡಿನ ಶಬ್ದಗಳು ಚಿರಪರಿಚಿತ. ಹಾಗಾಗಿ, ತಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ತಪ್ಪಿಸಿಕೊಳ್ಳುವ ಎಲ್ಲ ಪ್ರಯತ್ನವನ್ನು ಮುಂದುವರಿಸುತ್ತವೆ.
 
ನಮ್ಮಲ್ಲಿ ಕಾಗೆಗಳನ್ನು ನಾವು ಪೂಜಿಸುವುದಿಲ್ಲವಾದರೂ ಬದುಕುವುದಕ್ಕೆ ಬಿಡುತ್ತೇವೆ. ಆದರೆ, ಸಿಂಗಾಪುರದವರ ಲೆಕ್ಕಾಚಾರವೇ ಬೇರೆ. ಪ್ರವಾಸಿ ಸ್ಥಳಗಳಲ್ಲಿ ಭಯೋತ್ಪಾದಕ ದಾಳಿ ನಡೆದ ಹಾಗೇ ಝಡ್‌+ ಭದ್ರತೆಯಲ್ಲಿ ಕಾಗೆಗಳ ಮರ್ಡರ್‌ ನಡೆಸಲಾಗುತ್ತದೆ.

ಬಡಪಾಯಿ ಕಾಗೆ ಅಂತ ನನ್ನಲ್ಲಿ ನಾನೇ ಉದ್ಗರಿಸುತ್ತೇನೆ !

– ಶ್ರೀವಿದ್ಯಾ, ಸಿಂಗಾಪುರ

ಟಾಪ್ ನ್ಯೂಸ್

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!   

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!  

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!   

BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!  

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.