Shravana Month: ಅನುಭವದಿಂದ ಅನುಭಾವದ ಕಡೆಗೆ…
Team Udayavani, Aug 4, 2024, 3:41 PM IST
“ಶ್ರಾವಣ ಮಾಸ’ ಅಂದಾಗ ತಕ್ಷಣ ನೆನಪಾಗುವ ವರಕವಿ ಬೇಂದ್ರೆಯವರ “ಶ್ರಾವಣ’ ಪದ್ಯದ ಕೆಲವು ಅಪೂರ್ವ ಸಾಲುಗಳು ಇಲ್ಲಿವೆ. ಇಡೀ ಪದ್ಯದಲ್ಲಿ “ಶ್ರಾವಣ ಬಂತು ಬಂತು’ ಎನ್ನುವ ಪುನರುಕ್ತಿ ಇದೆ. ಇದು ಕಾಯುವ ಕಾತುರತೆಯನ್ನು, ಸಂಭ್ರಮವನ್ನೂ ಹೇಳುತ್ತದೆ. ಮಾತ್ರವಲ್ಲ, ನಿಸರ್ಗದಲ್ಲಿನ ಪ್ರಕ್ರಿಯೆಯನ್ನೇ ಬೇಂದ್ರೆ ಕಾವ್ಯದಲ್ಲಿ ತರುತ್ತಾರೆ. ಮಳೆ ಬಿಟ್ಟು ಬಿಟ್ಟು ಬರುವುದು, ಗಾಳಿ ಕೂಡ ಆವರ್ತನಶೀಲವಾಗಿ ಚಲಿಸುವುದು, ದುಂಬಿಗಳ ಸುತ್ತಾಟ, ಮರಳಿ ಹೂವು ಚಿಗುರು, ಹಣ್ಣು ಕಾಯಿ, ಬೀಜ ಹೀಗೆ ನಿಸರ್ಗ ವ್ಯಾಪಾರವನ್ನು ಮನುಷ್ಯ ಜೀವಿತದ ಎಲ್ಲ ಅವಸ್ಥಾಂತರಗಳಿಗೆ ಹೋಲಿಸುವುದನ್ನು ನೋಡುತ್ತೇವೆ. ಜತೆಗೆ ಶ್ರಾವಣ ಎಲ್ಲಿಗೆ ಬಂತು? ಹೇಗೆ ಬಂತು? ಯಾಕೆ ಬಂತು? ಎನ್ನುವ ಕುತೂಹಲ, ಅಚ್ಚರಿ, ಬೆರಗನ್ನು ಒಳಗೊಂಡಿದೆ. ಇಡೀ ಪದ್ಯದ ತುಂಬ ಶಬ್ದಚಿತ್ರಗಳೇ. ಬೇಂದ್ರೆಯವರಿಗೆ ಮಳೆ ಮೊದಲಿಗೇ ರೌದ್ರವಾಗಿ ಕಂಡಿದೆ. ಕಡಲಿಗೆ ಬಂದ ಶ್ರಾವಣವನ್ನು “ಕುಣಿದಾಗ ರಾವಣ’ ಎಂದಿರುವುದು ಮಳೆ ಗಾಳಿಯ ಜೊತೆ ಸೇರಿ ಇಡೀ ಪ್ರಕೃತಿಯೇ ಕೆರಳಿ ರೌದ್ರವಾಗುವ ಅನುಭವವನ್ನು ಕೊಡುತ್ತದೆ. ಅಂದರೆ ಮಳೆ ಬರಿಯ ಸೌಂದರ್ಯಾನುಭೂತಿ ಮಾತ್ರವಲ್ಲ; ಅದರೊಂದಿಗೆ ರೌದ್ರತೆಯೂ ಸೇರಿಕೊಂಡಿದೆ. ಮುಂದೆ ಮೃದುವಾಗುತ್ತಾ ಅವರು ಹೇಳುತ್ತಾರೆ.
ಮನೆಮನೆಯಲ್ಲೂ ಹಾಡಿದೆ, ಶುಭಗಳಿಗೆಯ ಸಂಭ್ರಮವಿದೆ, ಅದು ಪ್ರಕೃತಿ ಮೈದುಂಬಿಕೊಳ್ಳುವ ಕಾಲ, ಝರಿ, ಹೊಳೆ, ನದಿ ಎಲ್ಲವೂ ತುಂಬಿಕೊಳ್ಳುತ್ತವೆ. ಬೆಟ್ಟ ಹಸುರಂಗಿಯನ್ನು ಧರಿಸಿದರೆ, ಕಾಡು ಮದುಮಗನ ಹಾಗೆ ಶೃಂಗಾರಗೊಳ್ಳುತ್ತದೆ. ಗುಡ್ಡಗಳೂ ಸ್ಥಾವರಲಿಂಗವಾಗಿ ಮೋಡಗಳು ಅವಕ್ಕೆ ಅಭ್ಯಂಜನ ಮಾಡಿಸಲಿಕ್ಕೆ ನೆರೆದಂತೆಯೂ ಕಾಣುತ್ತಿದೆ ಎನ್ನುತ್ತಾ ಮಾನವ, ನಿಸರ್ಗ ಮತ್ತು ದೈವವನ್ನು ಒಂದುಗೂಡಿಸಿ ಪೂರ್ಣವಾಗುವ ವಿಶ್ವಚೈತನ್ಯವನ್ನು ವಿಷದೀಕರಿಸುತ್ತಾರೆ. ಅಷ್ಟಕ್ಕೆ ನಿಲ್ಲದೆ ಈ ಮಳೆಯ ನೀರು ಜೀವಕುಲಕ್ಕೆ ಅಮೃತ ಎನ್ನುವುದನ್ನು “ಹಾಲಿನ ತೊರಿ’ ಎಂದು ಪಾಲನೆಯ ಬಹುದೊಡ್ಡ ಸಂಕೇತವಾಗಿಸುತ್ತಾರೆ. ಹೀಗೆ “ಅನುಭವ’ದಿಂದ “ಅನುಭಾವ’ದ ಕಡೆಗೆ ಕವಿತೆ ಹೊರಳುತ್ತದೆ.
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ |
ಬಂತು ಬೀಡಿಗೆ | ಶ್ರಾವಣಾ ಬಂತು ||
ಕಡಲಿಗೆ ಬಂತು ಶ್ರಾವಣಾ | ಕುಣಿದಾØಂಗ ರಾವಣಾ
ಕುಣಿದಾಗ ಗಾಳಿ | ಭೈರವನ ರೂಪತಾಳಿ ||
ಶ್ರಾವಣ ಬಂತು ಘಟ್ಟಕ್ಕ | ರಾಜ್ಯಪಟ್ಟಕ್ಕ| ಬಾನಮಟ್ಟಕ್ಕ |
ಏರ್ಯಾವ ಮುಗಿಲು | ರವಿ ಕಾಣೆ ಹಾಡೆಹಗಲು ||
ಬನ ಬನ ನೋಡು ಈಗ ಹ್ಯಾಂಗ | ಮದುವಿ ಮಗನ್ಹಾಂಗ |
ತಲಿಗೆ ಬಾಸಿಂಗ | ಕಟ್ಟಿಕೊಂಡೂ | ನಿಂತಾವ ಹರ್ಷಗೊಂಡು ||
ಹಸಿರುಟ್ಟ ಬಸುರಿಯ ಹಾಂಗ | ನೆಲಾ ಹೊಲಾ ಹಾಂಗ |
ಅರಿಸಿಣ ಒಡೆಧಾಂಗ | ಹೊಮ್ಮತಾವ | ಬಂಗಾರ ಚಿಮ್ಮತಾವ ||
ಗುಡ್ಡ ಗುಡ್ಡ ಸ್ಥಾವರಲಿಂಗ | ಅವಕ ಅಭ್ಯಂಗ | ಎರಿತಾವನ್ನೋ ಹಾಂಗ |
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ ||
ನಾಡೆಲ್ಲ ಏರಿಯ ವಾರಿ | ಹರಿತಾವ ಝರಿ |
ಹಾಲಿನ ತೊರಿ | ಈಗ ಯಾಕ | ನೆಲಕೆಲ್ಲ ಕುಡಿಸಲಾಕ |
-ಪಿ. ಚಂದ್ರಿಕಾ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.