ಶ್ರುತಿ ಪ್ರಕಾಶಮಾನ
Team Udayavani, Nov 4, 2018, 6:00 AM IST
ಕನ್ನಡ ಚಿತ್ರರಂಗಕ್ಕೂ ಶ್ರುತಿ ಎಂಬ ಹೆಸರಿಗೂ ಮೊದಲಿನಿಂದಲೂ ಒಂದು ನಂಟಿದೆ. ಅದರಲ್ಲೂ ಇತ್ತೀಚೆಗೆ ಈ ಹೆಸರು ಚಿತ್ರರಂಗದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿರೋದು ನಿಮಗೆ ಗೊತ್ತಿರಬಹುದು. ಈಗ ಇಲ್ಲಿ ಹೇಳುತ್ತಿರುವುದು ಶ್ರುತಿ ಪ್ರಕಾಶ್ ಎಂಬ ಚೆಲುವೆಯ ಬಗ್ಗೆ. ಕಳೆದ ಬಾರಿ ಬಿಗ್‌ಬಾಸ್ ಕನ್ನಡ ಆವೃತ್ತಿಯನ್ನು ನೋಡಿದವರಿಗೆ ಈ ಶ್ರುತಿ ಪ್ರಕಾಶ್ ಎಂಬ ಸುಂದರಿಯ ಬಗ್ಗೆ ಖಂಡಿತ ಗೊತ್ತಿರುತ್ತದೆ. ಕಳೆದ ಬಿಗ್‌ಬಾಸ್ ಆವೃತ್ತಿಯ ಸ್ಪರ್ಧಿಗಳಲ್ಲಿ ಒಬ್ಬರಾಗಿ ಬಿಗ್‌ಬಾಸ್ ಮನೆಯನ್ನು ಪ್ರವೇಶಿಸಿದ್ದ ಶ್ರುತಿ ಸುಮಾರು 90ಕ್ಕೂ ಹೆಚ್ಚು ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿದ್ದು ನೋಡುಗರನ್ನು ರಂಜಿಸಿದ್ದರು. ತನ್ನ ಅರೆಬರೆ ಕನ್ನಡ, ಸೊಗಸಾದ ಧ್ವನಿ, ಅದಕ್ಕೊಪ್ಪುವ ಸೌಂದರ್ಯ, ಜೊತೆಗೆ ಬುದ್ಧಿವಂತಿಕೆಯಿಂದ ಕಿರುತೆರೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಶ್ರುತಿ ಪ್ರಕಾಶ್, ನಿರೀಕ್ಷೆಯಂತೆ ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ನಿಧಾನವಾಗಿ ಚಿತ್ರರಂಗದತ್ತ ಮುಖ ಮಾಡಿದ್ದಾರೆ.
ಸದ್ಯ ಲಂಡನ್‌ನಲ್ಲಿ ಲಂಬೋದರ ಎಂಬ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಶ್ರುತಿ ಪ್ರಕಾಶ್, ಈ ಚಿತ್ರದಲ್ಲಿ ಇಂದಿನ ಜಮಾನಾದ ಪ್ರಾಕ್ಟಿಕಲ್ ಹುಡುಗಿಯ ಗೆಟಪ್‌ನಲ್ಲಿ ಬಿಗ್‌ಸ್ಕ್ರೀನ್ ಮೇಲೆ ಬರಲು ತಯಾರಿ ನಡೆಸುತ್ತಿದ್ದಾರೆ. ಅದರ ಹಿಂದೆಯೇ ದಯಾಳ್ ಪದ್ಮನಾಭನ್ ನಿರ್ದೇಶನದ ಚಿತ್ರವೊಂದರಲ್ಲೂ ಶ್ರುತಿ ಅಭಿನಯಿಸುತ್ತಿದ್ದಾರೆ. ಇನ್ನು ಎರಡು-ಮೂರು ಕನ್ನಡದ ಚಿತ್ರಗಳಲ್ಲಿ ಶ್ರುತಿ ಪ್ರಕಾಶ್ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೂ, ಅದ್ಯಾವುದೂ ಇನ್ನೂ ಖಚಿತವಾಗಿಲ್ಲ. ಚಿತ್ರರಂಗದಲ್ಲಿ ಅವಕಾಶಗಳು ಬರುತ್ತಿರುವುದರ ಬಗ್ಗೆ ಮಾತನಾಡುವ ಶ್ರುತಿ ಪ್ರಕಾಶ್, “”ಸಿನಿಮಾ ದಲ್ಲಿ ನಟಿಸಬೇಕು, ನಟಿಯಾಗಬೇಕು ಎಂಬ ಆಸೆ ನನಗೆ ಇರಲಿಲ್ಲ. ಆದ್ರೆ ಬಿಗ್‌ಬಾಸ್ ಮುಗಿಸಿ ಹೊರಬರುತ್ತಿದ್ದಂತೆ, ಒಂದಷ್ಟು ಸಿನಿಮಾಗಳ ಆಫರ್ ಬರೋದಕ್ಕೆ ಶುರುವಾದವು. ಒಳ್ಳೆಯ ಕಥೆ, ಒಳ್ಳೆಯ ಪಾತ್ರಗಳು ಇದ್ದಿದ್ದರಿಂದ ಮನೆಯಲ್ಲೂ ಕೂಡ ಎಲ್ಲರೂ ನನಗೆ ಬೆಂಬಲವಾಗಿ ನಿಂತರು. ಹಾಗಾಗಿ ಸದ್ಯಕ್ಕೆ ಎರಡು-ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೇನೆ. ಮುಂದೆ ಅಭಿನಯವನ್ನೇ ಕೆರಿಯರ್ ಆಗಿ ತೆಗೆದುಕೊಳ್ಳಬೇಕೋ…, ಅಥವಾ ನನ್ನ ನೆಚ್ಚಿನ ಸಂಗೀತ ಕ್ಷೇತ್ರದಲ್ಲೇ ಮುಂದುವರೆಯಬೇಕೋ…, ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ” ಎನ್ನುವ ಶ್ರುತಿ ಪ್ರಕಾಶ್, “”ನನಗೆ ಒಪ್ಪುವ ಪಾತ್ರಗಳು, ಚಿತ್ರಗಳು ಸಿಗುವವರೆಗೂ ಮಾಡುತ್ತೇನೆ. ಆದರೆ, ನಾನಾಗಿಯೇ ಚಿತ್ರಗಳನ್ನು ಹುಡುಕಿಕೊಂಡು ಹೋಗುವುದಿಲ್ಲ” ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.