ರಹದಾರಿಯಲ್ಲಿ ಶ್ವೇತಾ ನಡಿಗೆ
Team Udayavani, Dec 8, 2019, 4:40 AM IST
ಸಾಮಾನ್ಯವಾಗಿ ನಾಯಕ ನಟಿಯರು ಮದುವೆಯಾಗಿದ್ದಾರೆ ಅಂದ್ರೆ, ಚಿತ್ರರಂಗದಲ್ಲಿ ಅವರಿಗೆ ಬರುತ್ತಿರುವ ಅವಕಾಶಗಳು ನಿಧಾನವಾಗಿ ಕಡಿಮೆಯಾಗುತ್ತದೆ. ಅದರಲ್ಲೂ ಅವರಿಗೊಂದು ಮಗುವಾಗಿದೆ ಅಂದ್ರೆ, ಚಿತ್ರರಂಗದಿಂದ ಅಂಥ ನಾಯಕ ನಟಿಯರು ಚಿತ್ರರಂಗದಿಂದ ಬಹುತೇಕ ವಿಮುಖವಾದಂತೆ. ಆ ನಂತರ ಚಿತ್ರರಂಗದಿಂದ ಅವಕಾಶಗಳು ಬಂದರೂ, ಅವು ಅಕ್ಕ, ಅತ್ತಿಗೆ, ಅಮ್ಮ ಮತ್ತಿತರ ಪೋಷಕ ಪಾತ್ರಗಳಿಗೆ ಸೀಮಿತವಾಗಿರುತ್ತದೆ. ಇನ್ನು ಮಹಿಳಾ ಪ್ರಧಾನ ಚಿತ್ರಗಳು, ಮುಖ್ಯ ಭೂಮಿಕೆಯಲ್ಲಿ ಅವಕಾಶಗಳು ಸಿಗೋದಂತೂ ಕನಸಿನ ಮಾತು ಅನ್ನೋದು ಚಿತ್ರರಂಗವನ್ನು ಹತ್ತಿರದಿಂದ ಬಲ್ಲವರ ಮಾತು.
ಆದರೆ, ಕೆಲವೇ ಕೆಲವು ನಾಯಕ ನಟಿಯರು ಮಾತ್ರ ಇವೆಲ್ಲದರಿಂದ ವಿನಾಯಿತಿ ಪಡೆದು ಕೊಂಡು ಚಿತ್ರರಂಗದಲ್ಲಿ ಸಕ್ರಿಯರಾಗುತ್ತಾರೆ. ಮನೆ, ಗಂಡ-ಮಕ್ಕಳು ಎಲ್ಲವನ್ನೂ ನಿಭಾಯಿ ಸುತ್ತಲೇ ಚಿತ್ರರಂಗದಲ್ಲಿ ತಮ್ಮದೇ ಆದ ನೆಲೆ ಕಂಡುಕೊಳ್ಳುತ್ತಾರೆ. ಅಂತಹ ನಾಯಕ ನಟಿ ಯರ ಸಾಲಿಗೆ ಈಗ ಶ್ವೇತಾ ಶ್ರೀವಾತ್ಸವ್ ಕೂಡ ಸೇರ್ಪಡೆ ಯಾಗುತ್ತಿದ್ದಾರೆ. ಹೌದು, ಮದುವೆಯ ಬಳಿಕವೇ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಗುರುತಿಸಿಕೊಂಡು, ಜನಪ್ರಿಯತೆ ಮತ್ತು ಬೇಡಿಕೆ ಎರಡನ್ನೂ ಪಡೆದುಕೊಂಡ ಶ್ವೇತಾ ಶ್ರೀವಾತ್ಸವ್, ಕಿರಗೂರಿನ ಗಯ್ನಾಳಿಗಳು ಚಿತ್ರದ ನಂತರ ತಮ್ಮ ಮೊದಲ ಮಗುವಿನ ಆರೈಕೆ, ಲಾಲನೆ-ಪಾಲನೆಗಾಗಿ ಚಿತ್ರರಂಗದಿಂದ ಕೆಲಕಾಲ ದೂರವುಳಿದಿದ್ದರು. ಇನ್ನೇನು ಶ್ವೇತಾ ಶ್ರೀವಾತ್ಸವ್ ಬಣ್ಣದ ಬದುಕಿನಿಂದ ನಿಧಾನವಾಗಿ ದೂರ ಸರಿಯುತ್ತಾರೆ ಎನ್ನುವಾಗಲೇ, ಶ್ವೇತಾ ಸದ್ದಿಲ್ಲದೆ ಮತ್ತೂಂದು ರೀ-ಎಂಟ್ರಿಗೆ ಸಿದ್ಧತೆ ನಡೆಸುತ್ತಿದ್ದಾರೆ.
ಸದ್ಯ ಶ್ವೇತಾ ಶ್ರೀವಾತ್ಸವ್ ರಹದಾರಿ ಎನ್ನುವ ಹೊಸಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರ ಹೊಂದಿರುವ ರಹದಾರಿ ಚಿತ್ರದಲ್ಲಿ ಶ್ವೇತಾ ಪೊಲೀಸ್ ಅಧಿಕಾರಿಯ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ಅದ್ದೂರಿಯಾಗಿ ನೆರವೇರಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಚಿತ್ರ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.
ಚಿತ್ರದ ಕಥೆ ಮತ್ತು ಪಾತ್ರ ಎರಡೂ ಇಷ್ಟವಾಗಿದ್ದರಿಂದ ಈ ಚಿತ್ರವನ್ನು ಒಪ್ಪಿಕೊಂಡಿರುವುದಾಗಿ ಹೇಳುವ ಶ್ವೇತಾ, ರಹದಾರಿಯ ಬಗ್ಗೆ ಸಾಕಷ್ಟು ಭರವಸೆಯ ಮಾತುಗಳ ನ್ನಾಡುತ್ತಾರೆ. “ಕಳೆದ ಎರಡು ವರ್ಷಗಳಿಂದ, ನನ್ನ ಮಗುವಿನ ಆರೈಕೆ ಮಾಡಬೇಕಾಗಿದ್ದರಿಂದ, ಈ ವೇಳೆ ಹೊಸಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಇಲ್ಲಿಯವರೆಗೆ ಅನೇಕ ಕಥೆಗಳನ್ನು ಕೇಳಿದ್ದರೂ, ಯಾವುದರಲ್ಲೂ ಅಭಿನಯಿಸ ಬೇಕು ಅನಿಸಿರಲಿಲ್ಲ. ನನಗೆ ಸಂಖ್ಯೆಗಿಂತ ಸಿಗುವ ಚಿತ್ರಗಳು ಮತ್ತು ಒಳ್ಳೆಯ ಪಾತ್ರಗಳು ಮುಖ್ಯ. ನಾನು ಎಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ ಅನ್ನೋದಕ್ಕಿಂತ, ಎಷ್ಟು ಒಳ್ಳೆಯ ಪಾತ್ರಗಳಲ್ಲಿ, ಎಷ್ಟು ಒಳ್ಳೆಯ ಕಥೆಯಲ್ಲಿ ಕಾಣಿಸಿಕೊಂಡಿದ್ದೇನೆ ಅನ್ನೋದು ಮುಖ್ಯ. ರಹದಾರಿ ಕಥೆ ಮತ್ತು ಪಾತ್ರ ಇಷ್ಟವಾದ ನಂತರ ಈ ಚಿತ್ರವನ್ನು ಮಾಡಲು ಒಪ್ಪಿಕೊಂಡೆ. ಚಿತ್ರದ ಕಥೆ ಮತ್ತು ನನ್ನ ಪಾತ್ರ ಎರಡೂ ವಿಭಿನ್ನವಾಗಿರುವುದರಿಂದ ಆಡಿಯನ್ಸ್‌ಗೆ ಇಷ್ಟವಾಗುವುದೆಂಬ ನಂಬಿಕೆ ಇದೆ’ ಎನ್ನುತ್ತಾರೆ ಶ್ವೇತಾ.
ಒಟ್ಟಾರೆ ಇಲ್ಲಿಯವರೆಗೆ ಶ್ವೇತಾ ಶ್ರೀವಾತ್ಸವ್ ಅಭಿನ ಯಿಸಿದ್ದು, ಬೆರಳೆಣಿಯಷ್ಟು ಚಿತ್ರಗಳಾದರೂ, ಆ ಚಿತ್ರಗಳು ಶ್ವೇತಾಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿರುವುದಂತೂ ಸುಳ್ಳಲ್ಲ. ಸದ್ಯ ರಹದಾರಿ ಚಿತ್ರದ ಮೂಲಕ ಮತ್ತೂಂದು ಎಂಟ್ರಿಗೆ ರೆಡಿಯಾಗಿರುವ ಶ್ವೇತಾ ಅವರನ್ನು ಕನ್ನಡದ ಸಿನಿಪ್ರಿಯರು ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.