Kundapura Kannada: ಅಬ್ಬಿ ಭಾಷಿ ಜೇನು ತುಪ್ಪದಷ್ಟ್ ಸಿಹಿ…
Team Udayavani, Aug 18, 2024, 12:24 PM IST
ಕುಂದಾಪುರ ಭಾಷೆ ಯಾವ್ದಕ್ಕೂ ಕಮ್ಮಿ ಇಲ್ಲದ “ಅಬ್ಬಿ ಭಾಷಿ’. ಒಂದು ಕಾಲದಲ್ಲಿ ಕುಂದಾಪುರ ನಮ್ಮೂರು ಅಂತ ಹೇಳುಕ್ ಹಿಂದ್ ಮುಂದ್ ಕಾಂಬು ಜನ, ಇಗಾ ಎದಿ ಮುಟ್ಟಿ ನಾನ್ ನಾನ್ ಕುಂದಾಪ್ರದವರು ಎನ್ನುವಷ್ಟರ ಮಟ್ಟಿಗೆ “ಕುಂದಾಪ್ರ ಕನ್ನಡ ಭಾಷಿ’ ಬೆಳೆದು ನಿಂತ್ ಕಂಡಿದೆ. ಎಷ್ಟೇ ದೊರ ಹೊಯ್ಲಿ, ಅಬ್ಬಿ ಹಾಗೂ ಅಬ್ಬಿ ಭಾಷಿ ಮೇಲಿನ ಪ್ರೀತಿ ಕಮ್ಮಿ ಆಪುದಿಲ್ಲ. ಅಂತ ಅಬ್ಬಿ ಭಾಷಿಯನ್ನು ಜಗತ್ತಿನಾದ್ಯಂತ ನಗೆ ಮೋಡಿ ಮೂಲಕ ಜಗತ್ತಿಗೆ ಕುಂದಾಪ್ರ ಭಾಷೆ ಪರಿಚಯಿಸುತ್ತಿರುವ ಮನು ಹಂದಾಡಿ ಅವರನ್ನು ಮಾತನಾಡಿಸಿದಾಗ ಪ್ರತಿಕ್ರಿಯಿಸಿದ್ದು ಹಿಂಗ್…
ಕುಂದಾಪ್ರ ಭಾಷಿ ಚೆಂದ, ಕುಂದಾಪ್ರ ಬದ್ಕ್ ಚೆಂದ, ಕುಂದಾಪ್ರದ್ ಜನ ಇನ್ನೂ ಚೆಂದ… ಹೌದ್… ಹೆತ್ ಅಬ್ಬಿ, ಹುಟ್ಟಿದ್ ಊರ್ ಬಿಟ್ ಪರ ಊರಿಗೆ ಬಂದ್ ಹೊಟ್ಟಿ ಹೊರಕಂಬು ಮಕ್ಕಳಿಗೆ ಕುಂದಾಪ್ರ ಭಾಷಿ ಕೆಮಿ ತುದಿಗೆ ಬಿದ್ರೆ ಸಾಕ್, ಕೆಮಿ ಚುಳ್ ಅಂಬುದ್ ಸುಳ್ಳಲ್ಲ. ಹಾಗಂತ ನಮಗೆ ಕುಂದಕನ್ನಡ ಮೇಲಿಪ್ದ್ ವ್ಯಾಮೋಹ ಅಲ್ಲ, ಆರೆ, ಅದು ಪ್ರೀತಿ, ಅಭಿಮಾನ. ನಮ್ ಭಾಷಿ, ನಮ್ಮವರಿಗೆ ಮಾತ್ರ ಎಂಬುವುದು ವ್ಯಾಮೋಹ. ಆದರೆ ಅಬ್ಬಿ ಭಾಷಿಯಲ್ಲಿ ಹಾಗಲ್ಲ.
ಎಲ್ಲರೊಟ್ಟಿಗಿದ್ದು, ಎಲ್ಲರೊಂದಿಗೆ ಸೇರುತ್ತೆ. ಜೇನು ತಟ್ಟಿಯಂಗ್ ತುಪ್ಪ ಇಲ್ಲದಿದ್ರೆ ಯಾರಾದ್ರೂ ತಟ್ಟಿಗೆ ಕೈ ಹಾಕ್ತಾರ ಹೇಳಿ ಕಾಂಬ? ಹಾಗೇ ಕುಂದಾಪ್ರ ಭಾಷಿಯ ಸಿಹಿ ಕಂಡವರು ಕುಂದ ಕನ್ನಡ ಮಾತಾಡಕ್ಕೆ ಇಷ್ಟ ಪಡುತ್ತಾರೆ.
ಊರ್ ಬದಲಾದ್ರೂ, ಭಾಷಿ ಬದಲಾಗಿಲ್ಲ…
ಆಸಾಡಿ ತಿಂಗಳ್ ಗದ್ದೆ ಕೆಲಸ ಮುಗಿದು, ದೈದ್ ಮನಿ(ಮನೆ ದೇವರು) ಬಾಗಿಲು ಹಾಕಿ ದೇವರಿಗೂ ಪುರುಸೊತ್ತು ನೀಡುವ ತಿಂಗಳು. ಆಷಾಢ ಮಾಸದ ಅಮಾವಾಸ್ಯೆಯನ್ನು ಕುಂದಾಪ್ರ ಕನ್ನಡ ದಿನ ಮಾಡತ್ತಾ ಇತ್ತ್. ಊರ್ ಬದಲಾದ್ರೂ, ಭಾಷಿ ಬದಲಾಗಿಲ್ಲ. ಅದಕ್ಕಾಗಿಯೇ 2019ರಲ್ಲಿ ಶುರುವಾದ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಬೆಂಗಳೂರು ಸೇರಿದಂತೆ ವಿವಿಧ ಊರುಗಳಲ್ಲಿ ಸಡಗರದಿಂದ ಆಚರಿಸಲಾಗುತ್ತದೆ. ಇನ್ನೂ ಯಾವುದೇ ಭಾಷಿ ಆ ಜಾಗದ ಆಸ್ಮಿತೆಯ ಭಾಗ. ಭಾಷಿಯನ್ನು ಬಿಟ್ಟು ನಮ್ಮನ್ನ ನಾವು ಗುರುತಿಸಿಕೊಂಬುಕ್ಕೆ ಆತ್ತಿಲ್ಲ. ಭಾಷೆ ಕೇವಲ ವ್ಯಾವಹಾರಿಕ ಮಾಧ್ಯಮ ಅಲ್ಲ. ಅದು ನಮ್ಮ ಕಸುಬು, ಕೌಶಲ, ನಂಬಿಕೆಗಳಿಂದ ಹದಗೊಳ್ಳುವ ಬದುಕಿನ ನಡುವಿನಿಂದ ಸಾಧ್ಯವಾದ ಅನುಭವ, ತಿಳುವಳಿಕೆಯನ್ನು ಜೀವಂತವಾಗಿಸುವ, ಸಾಗಿಸುವ ಜೀವಂತರೂಪ. ಭಾಷೆ ಎಂಬುದು ನಮ್ಮಿಂದ ನಾವು ಜೀವಂತಗೊಳ್ಳುವ ಬಗೆಯೂ ಹೌದು.
ವೈವಿಧ್ಯತೆ, ಭಿನ್ನತೆ ಇದೆ… ಕುಂದಾಪುರ ತಾಲೂಕಿನ ಭೌಗೋಳಿಕ ವ್ಯಾಪ್ತಿಗಿಂತ ವಿಸ್ತಾರವಾಗಿ ಕುಂದಾಪುರ ಕನ್ನಡ ಮಾತನಾಡುವ ಜನರ ವ್ಯಾಪ್ತಿ ಹರಡಿದೆ. ಬ್ರಹ್ಮಾವರದಿಂದ ಶಿರೂರಿನ ತನಕ ಕುಂದಾಪ್ರ ಕನ್ನಡ ಮಾತನಾಡುವ ಜನರಿದ್ದಾರೆ. ಭೌಗೋಳಿಕವಾಗಿ ಕುಂದಾಪುರ ತಾಲೂಕಿನಲ್ಲಿ ಇಲ್ಲದಿದ್ದರೂ ಕೂಡ ಬೈಂದೂರು, ಬಾರ್ಕೂರು, ಕೋಟ, ಹೆಬ್ರಿ, ಬ್ರಹ್ಮಾವರ ಕಡೆಗಳಲ್ಲಿ ಜನರ ಮನೆ ಭಾಷೆ ಕುಂದಾಪ್ರ ಕನ್ನಡ. ಕುಂದಾಪುರ ಕನ್ನಡ ಭಾಷೆಯಲ್ಲೂ ವೈವಿಧ್ಯತೆ, ಭಿನ್ನತೆ ಇದೆ. ಕೋಟ ಕನ್ನಡ,ಬಾಕೂìರು ಕನ್ನಡ, ಸಿದ್ದಾಪುರ ಕನ್ನಡ…ಹೀಗೆ ಕೆಲವು ಕಡೆ ಮಾತನಾಡುವ ಭಾಷೆಗಳಲ್ಲಿ ಕೊಂಚ ಭೌಗೋಳಿಕ ಭಿನ್ನತೆ ಇದೆ.
ಭಾಷೆ ಬಳಕೆಯಲ್ಲಿದೆ ಸ್ವಾರಸ್ಯ…
ಕುಂದಾಪ್ರ ಕನ್ನಡದಲ್ಲಿ ಮಹಾಪ್ರಾಣಗಳ ಬಳಕೆ ಇಲ್ಲವೇ ಇಲ್ಲ ಅನ್ನುವಷ್ಟು ವಿರಳ. ಶಬ್ದಗಳನ್ನು ಸಂಕ್ಷಿಪ್ತಗೊಳಿಸುವುದು ಕುಂದಾಪುರ ಕನ್ನಡದ ಒಂದು ವಿಶೇಷ. ಸಂಕ್ಷಿಪ್ತ ಪದವನ್ನು ದೀರ್ಘಗೊಳಿಸುವ ವಿರುದ್ಧ ಲಕ್ಷಣವೂ ಈ ಭಾಷೆಗೆ ಇದೆ. ಉದಾ: ಹೋಗುತ್ತೇನೆ-ಹೋತೆ, ಉಣ್ಣುತ್ತೇನೆ-ಉಂತೆ, ಮಾಡುತ್ತೇನೆ- ಮಾಡ್ತೆ. ಕೊನೆಯ ಅಕ್ಷರ ಲೋಪವಾಗಿ ಪದಗಳು ಸಂಕ್ಷಿಪ್ತಗೊಳ್ಳುವುದು ಇನ್ನೊಂದು ವಿಶೇಷ. ಉದಾ: “ಗೆಲುವು’- “ಗೆಲು’ ಆಗುತ್ತದೆ. “ಕಳುವು’-“ಕಳು’ ಆದರೆ, ಹಾಳಾಗುವುದು -ಲಾಗಾಡಿ ಎಂದಾಗುತ್ತದೆ. ಜನಸಾಮಾನ್ಯರ ಆಡು ಭಾಷೆಯಾಗಿರುವ ಕಾರಣ ಕುಂದಾಪ್ರ ಕನ್ನಡದಲ್ಲಿ ಮಹಾಪ್ರಾಣದ ಬಳಕೆ ಇಲ್ಲವೇ ಇಲ್ಲ ಅನ್ನುವಷ್ಟು ವಿರಳ. ಹಳಗನ್ನಡದ ಬಿಂದು ಸಹಿತ ಶಬ್ದಗಳು ಇಂದಿಗೂ ಇದರಲ್ಲಿರುವುದು ಸ್ವಾರಸ್ಯಕರ ಅಂಶ. ಉದಾ: ದಾಟು-ದಾಂಟ…, ಬೇಟೆ-ಬೇಂಟೆ, ಹುತ್ತ-ಹುಂತ, ಹೀಗೆ-ಹೀಂಗೆ. ಇಷ್ಟೇ ಸ್ವಾರಸ್ಯಕರವಾದುದೆಂದರೆ ವಿಶಿಷ್ಟ ಕನ್ನಡದ ಬಿಂದು ಸಹಿತ ಪದಗಳು ಇಲ್ಲಿ ಬಿಂದು ರಹಿತವಾಗಿ ಹೊಸ ರೂಪ ಪಡೆದಿರುವುದು. ಉದಾ: ಮೆಂತೆ-ಮೆತ್ತಿ.
ಹಬ್ಬದ ನೆಪದಲ್ಲಿ ಒಗ್ಗಟ್ಟು… ಕುಂದಾಪ್ರ ಕನ್ನಡ ಹಬ್ಬವನ್ನು ಆಯೋಜಿಸಿ ರುವ ಸಂಘಟಕರಲ್ಲಿ ಒಬ್ಬರಾದ ಭಾಸ್ಕರ ಬಂಗೇರ ಅವರ ಮಾತುಗಳಿವು: “ಅನ್ನ ಕೊಟ್ಟ ಬೆಂಗಳೂರಿನಲ್ಲಿ ಕುಂದಾಪುರದವರು ಎಲ್ಲರಿಗಾಗಿ ಆಯೋಜಿಸುತ್ತಿರುವ ಕಾರ್ಯಕ್ರಮವಿದು. ನಮ್ಮದು ಬಯಲಷ್ಟೇ ಇರುವ ಊರೇನಲ್ಲ. ಗೋಡೆಗಳು, ಪರದೆಗಳು, ಕಂದಕಗಳು ಎಲ್ಲವೂ ಇದೆ. ಇದೆಲ್ಲವನ್ನು ಒಡೆದುಕೊಂಡು, ಸರಿಸಿಕೊಂಡು, ದಾಟಿಕೊಂಡು ನಮ್ಮೆಲ್ಲರದು ಒಂದೇ ಕಡಲು ಎನ್ನುವ ಒಕ್ಕೊರಲಿನ ಲಾಲಿ ಹಾಡು ಕೇಳುವ ಸದಾಶಯದಿಂದ ಕಳೆದ ಕೆಲವು ವರ್ಷಗಳಿಂದ ಕುಂದಾಪ್ರ ಕನ್ನಡ ಹಬ್ಬವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಈ ಹಬ್ಬವನ್ನು ಮುಂದೆ ಮಾಡಿಕೊಂಡು ನಾವೆಲ್ಲರೂ ಜೊತೆಯಾಗುತ್ತಿದ್ದೇವೆ. ಎಲ್ಲರ ಶುಭ ಹಾರೈಕೆ ಕನ್ನಡ ತಾಯಿಯ ಕುಂದಾಪ್ರದ ಮಗಳ ಮೇಲೆ ಇರಲಿ
-ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು
ಹೊಸ ಸೇರ್ಪಡೆ
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.