Photography: ಚಳಿಗಾಲದಲ್ಲಿ ಬೆಚ್ಚಗಾಗಿಸಿದ ಒಂದು ಮುತ್ತಿನ ಕಥೆ…

ಚುಮುಚುಮು ಚಳಿ ಕೈಯಲ್ಲಿ ಕ್ಯಾಮರಾ...

Team Udayavani, Nov 26, 2023, 12:26 PM IST

Special Story: ಚಳಿಗಾಲದಲ್ಲಿ ಬೆಚ್ಚಗಾಗಿಸಿದ ಒಂದು ಮುತ್ತಿನ ಕಥೆ

ಚಳಿಗಾಲವು ಬೆಳಗಿನ ಜಾವದ ನಿದ್ದೆಯಿಂದ ಎದ್ದೇಳದೇ ರಗ್ಗುಹೊದ್ದು ಮಲಗಲು ಎಷ್ಟು ಪ್ರೇರೇಪಿಸುತ್ತದೋ, ಆರೋಗ್ಯಕ್ಕಾಗಿ ವ್ಯಾಯಾಮ, ವಾಕಿಂಗ್‌ ನಂತೆಯೇ ಮಂಜು ಮುಸುಕಿನ ಬೆಳಗನ್ನು, ಆ ಥಂಡಿ ಹವೆಗೆ ಬೆಚ್ಚಗೆ ಒಂದು ಮಂಕಿ ಕ್ಯಾಪು, ಸ್ವೆಟರೊಳಗೆ ತೂರಿ ಕೊರಳಲ್ಲಿ ಕ್ಯಾಮೆರಾ ನೇತಾಕಿಕೊಂಡು ಬೈಕ್‌ ಏರಿ ಹಾಡು ಗುನುಗುತ್ತಾ ಹೊರಟರೆ ಊರ ಹೊರಗಿನ ಹಚ್ಚ ಹಸಿರಿನ ಹಾಸು, ಬಿದ್ದ ಮಂಜು, ಮಬ್ಬಿನಲ್ಲೇ ಎದ್ದು ಇಣುಕುವ ಸೂರ್ಯನನ್ನು ಸೆರೆ ಹಿಡಿಯಲೂ ಅಷ್ಟೇ ಆಸೆಯನ್ನೂ ಹುಟ್ಟಿಸುತ್ತದೆ.

ಹಳ್ಳಿಯಿಂದ ಬುಟ್ಟಿ ಹೊತ್ತು ಸೊಪ್ಪು, ತರಕಾರಿ ಮಾರಲು ತಯಾರಾಗುತ್ತಿರುವ ರೈತಾಪಿ ಹೆಣ್ಣುಮಕ್ಕಳು, ಹಾಲಿನ ಪ್ಯಾಕೆಟ್ಟು, ದಿನಪತ್ರಿಕೆಗಳನ್ನು ಜೋಡಿಸಿಕೊಂಡು ಹೊತ್ತೂಯ್ಯಲು ಸೈಕಲ್‌ ಸ್ಟಾಂಡ್ ಒದೆಯುತ್ತಿರುವ ಚಿಕ್ಕ ವಯಸ್ಸಿನ ಗಂಡು ಮಕ್ಕಳ ದಿನಚರಿ ಶುರುವಾಗುವುದೇ ನಾಲ್ಕುವರೆ ಐದು ಗಂಟೆ ಸುಮಾರಿಗೆ. ಈ ಮಧ್ಯೆ ಊದುಬತ್ತಿ ಬೆಳಗಿ ಒಂದು ಕಪ್ಪು ಚಹಾವನ್ನು ಭೂಮಿಗೆ ಸುರುವಿ ಬಂದ ಮೊದಲ ಗಿರಾಕಿಗೆ, “ತಗಳಿ ಸಾ…’ ಎನ್ನುವ ಟೀ ಅಂಗಡಿಯವನು.

ಕೃಷಿ ಮಾರುಕಟ್ಟೆಯ ಬಯಲು ಹಾಸಿಗೆಯಿಂದ ಎದ್ದು ಸುತ್ತಲಿದ್ದ ಒಂದಿಷ್ಟು ಸೌದೆ, ಒಣ ಕಸವನ್ನು ಗುಡ್ಡೆ ಹಾಕಿ ಕಡ್ಡಿಗೀರಿ ಉರಿ ಹಚ್ಚಿ, “ಆಹಾ..!’ ಎಂದು ಅಂಗೈ ಬೆಚ್ಚಗೆ ಮಾಡಿ ಕೆನ್ನೆ ಗಲ್ಲಕ್ಕೆ ಒತ್ತಿ ಸುಖೀಸಿ ಬೀಡಿ ಹೊಗೆ ಬಿಡುವ ಕೂಲಿಕಾರ್ಮಿಕರು, ಸ್ವತ್ಛಗೊಳಿಸಲು ಬರುವ ಪೌರಕಾರ್ಮಿಕರು ಹೀಗೆ…

ಆರಂಭದ ಫೋಟೋಗ್ರಫಿಯ ಚಳಿಗಾಲದ ಒಂದು ದಿನ ನನ್ನನ್ನೂ ಹೀಗೆ ಎಚ್ಚರಿಸುವಂತೆ ತೆರೆದುಕೊಂಡಿತು. ಚೆಂದನೆ ನೌಕರಿಯಿದ್ದೂ, ಬೆಳಿಗ್ಗೆ ಕ್ಯಾಮೆರಾ ಹಿಡಿದು ಹೊರಟಾಗ ಇದ್ಯಾವಾಗ ಶುರು ಮಾಡಿಕೊಂಡರು? ಎನ್ನುವಂತೆ, ಓಣಿಯ ಮನೆ ಮುಂದೆ ಪಾರಿಜಾತ ಹೂವಿನ ಫೋಟೋ ತೆಗೆಯುವುದನ್ನು ನೋಡಿದ ಗೃಹಿಣಿಯ ಲುಕ್ಕು. ಅದಾಗಿ ನಾನು ಊರ ಹೊರಗೆ ಒಂದು ಚೆಕ್‌ ಡ್ಯಾಮ್‌ನ ಶೇಖರಣೆ, ನೀರಲ್ಲಿ ಜಮೆಯಾಗುತ್ತಿದ್ದ ಪಕ್ಷಿಗಳನ್ನು, ಸೂಯೊìದಯದ ಚಿತ್ರ ಸೆರೆಹಿಡಿಯಲು ಹೊರಟರೆ ಹೊಲ-ತೋಟಕ್ಕೆ ತೆರಳುವ ಜನ ನಿಲ್ಲಿಸಿ ಕೇಳಿದ್ದರು; “ಇಲ್ಲೇನ್ ಕೆಲ್ಸ ನಿಮ್ಗೆ?!’ ಅಂತ. ಅಂಥಾದ್ದರಲ್ಲಿ ನೆಲಹಾಸು ಹುಲ್ಲಿನ ಮೇಲೆ ಬಿದ್ದ ಮಂಜಿನ ಹನಿಗಳು ಎಳೆ ಬಿಸಿಲಿಗೆ ಮಿನುಗುವ ಜೋಡಿಸಿದ ಮುತ್ತಿನಂತಿರುವ ಚಿತ್ರವನ್ನು ಸೆರೆಹಿಡಿಯಲು ಪಟ್ಟಾಗಿ ಕುಳಿತೆ. ಅಕ್ಷರಶಃ ಅಲ್ಲೊಬ್ಬರು, “ಬೈಲ್‌ ಕಡಿಗೆ ಹೋಗಾ ಜಾಗ್ಧಾಗ ಅದೇನ್‌ ಫೋಟೋ ಹಿಡಿಯಾಕ್‌ ಬಂದ್ಯೋ ಮಾರಾಯ..?’ ಅಂದು ಬಿಟ್ಟಿದ್ದರು. ನಾನು ನಕ್ಕು ಸುಮ್ಮನಾದೆ. ಮಂಜಿನ ಹನಿ ಚಿತ್ರವೆಂದರೇನೇ ಖುಷಿ ಪಟ್ಟು ಫೋಟೋ ತೆಗೆಯುವ ನನಗೆ, ನೆಲಹಾಸಿನ ಹುಲ್ಲಿನಲ್ಲಿ ಸಾಲಿಡಿದು ಪೊಣಿಸಿದ ಮುತ್ತುಗಳಂತೆ ಗೋಚರಿಸಿದ ಚಿತ್ರ ಸಿಕ್ಕರೆ ಸುಮ್ಮನಿರುವುದಾದರೆ ಹೇಗೆ? ಎಳೆ ಬಿಸಿಲಿಗೆ ಹೊಳೆಯುವ ಹನಿಬಿಂದು ಸಾಲುಗಳ ಫೋಟೋ ಸಿಕ್ಕ ಖುಷಿಯಿದೆಯಲ್ಲಾ? ಆ ಖುಷಿ ಕ್ಷಣದ್ದಷ್ಟೇ ಅಲ್ಲ, ನನ್ನ ಸುಮಾರು ಚಳಿಗಾಲಗಳನ್ನು ಬೆಚ್ಚಗಿಟ್ಟಿತ್ತು. ಅದಾಗಿ ಸುಮಾರು ಎಂಟು ವರ್ಷದ ನಂತರ ಮಳೇಮಲ್ಲೇಶ್ವರ ಬೆಟ್ಟದಲ್ಲಿ ತೆಗೆದ ಮಂಜಿನ ಹನಿಗಳ ಫೊಟೋ ಕೂಡ ಇಷ್ಟೇ ಖುಷಿ ಕೊಟ್ಟಿದೆ.

ಫೋಟೋಗ್ರಫಿ ಎಂಬ ಹವ್ಯಾಸ ನನ್ನನ್ನು ಸೂರ್ಯೋದಯಕ್ಕೆ ಮುನ್ನ ನಿಚ್ಚಳವಾಗಿ ಪ್ರಕೃತಿ ಸೌಂದರ್ಯವನ್ನು, ಹವೆಯನ್ನು ಸವಿಯಲು ಅಣಿಗೊಳಿಸಿತೆಂದರೆ, ಆ ಹವ್ಯಾಸಕ್ಕೊಂದು ಧನ್ಯವಾದ ಹೇಳಲೇಬೇಕಲ್ಲವಾ? ಮೊದ ಮೊದಲು ಕ್ಯಾಮೆರಾ ಹಿಡಿದು ಹೊರ ನಡೆದರೆ ವಿಚಿತ್ರವಾಗಿ ನೋಡಿದ ಜನ ನನ್ನಲ್ಲಿರುವ ಸಂಕುಚಿತ ಭಾವನೆಯನ್ನು ಹೊರದಬ್ಬಿ ನಾನಷ್ಟೇ ಅಲ್ಲ, ಇನ್ನೊಬ್ಬರು ನಾನು ತೆಗೆದ ಫೋಟೋ ನೋಡಿ ಖುಷಿಪಡುವಂಥ ಭರವಸೆ ಹುಟ್ಟಿಸಿದರು. ಚಳಿಗಾಲದ ಒಂದು ಮುಂಜಾವು ಹೀಗೆ ತೆರೆದುಕೊಂಡಿತಲ್ಲ? ಅದಕ್ಕಿಂತ ಹೆಚ್ಚೇನು ಖುಷಿ..?

ಚಿತ್ರ ಲೇಖನ : ಪಿ. ಎಸ್‌. ಅಮರದೀಪ್‌, ಕೊಪ್ಪಳ.

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.