ಶ್ರುತಿ ಹರಿಹರನ್ ಮಧ್ಯಮ ಶ್ರುತಿ
Team Udayavani, Nov 17, 2019, 4:41 AM IST
ಕಳೆದ ವರ್ಷ ಮಿಟೂ ಪ್ರಕರಣದ ಮೂಲಕ ಸುದ್ದಿಯಾಗಿದ್ದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ನಟಿ ಶ್ರುತಿ ಹರಿಹರನ್. ಮಿಟೂ ಆರೋಪದ ಬಳಿಕ ಸ್ಯಾಂಡಲ್‌ವುಡ್‌ನಿಂದ ಕೆಲಕಾಲ ಬ್ರೇಕ್ ತೆಗೆದುಕೊಂಡಿದ್ದ ಶ್ರುತಿ ಹರಿಹರನ್, ನಂತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಾಗಲಿ ಸಿನಿಮಾಗಳಲ್ಲಾಗಲಿ ಎಲ್ಲೂ ಅಷ್ಟಾಗಿ ಕಾಣಿಸಿ ಕೊಂಡಿರಲಿಲ್ಲ. ಇದರ ನಡುವೆಯೇ ಶ್ರುತಿ ವಿವಾಹದ ಬಗ್ಗೆ, ಮಗುವಾದ ಬಗ್ಗೆ ಒಂದಷ್ಟು ಸುದ್ದಿಗಳು ಹರಿದಾಡಿ ಬಳಿಕ ತಣ್ಣಗಾಗಿತ್ತು. ಈಗ ಮತ್ತೆ ಶ್ರುತಿ ಸಿನಿಮಾ ವಿಚಾರಕ್ಕೆ ಸುದ್ದಿ ಯಾಗುತ್ತಿದ್ದಾರೆ.
ಹೌದು, ಈಗ ಮತ್ತೆ ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಶ್ರುತಿ ಹರಿಹರನ್ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆಯೇ ಶ್ರುತಿ ಹರಿಹರನ್ ಒಪ್ಪಿಕೊಂಡಿದ್ದ ಮನೆ ಮಾರಾಟಕ್ಕಿದೆ ಚಿತ್ರ ಈ ವಾರ ತೆರೆಗೆ ಬಂದಿದೆ.
ಮಂಜು ಸ್ವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮನೆ ಮಾರಾಟಕ್ಕಿದೆ ಔಟ್ ಆಂಡ್ ಔಟ್ ಹಾರರ್ ಕಂ ಕಾಮಿಡಿ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಶ್ರುತಿ ಹರಿಹರನ್ ವಿಭಿನ್ನ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಇನ್ನು ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಶ್ರುತಿ ಹರಿಹರನ್ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ ಕೆಲ ವರ್ಷಗಳ ಹಿಂದೆ ಕನ್ನಡದಲ್ಲಿ ಭರವಸೆಯ ನಟಿಯಾಗಿ ನೆಲೆ ಕಂಡುಕೊಂಡಿದ್ದವರು ಶ್ರುತಿ ಹರಿಹರನ್. ಮಿಟೂ ವಿವಾದದ ಬಳಿಕ ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರು. ಮತ್ತೆ ಶ್ರುತಿ ಹರಿಹರನ್ ಚಿತ್ರರಂಗಕ್ಕೆ ಮರಳ್ಳೋದು ಕಷ್ಟ ಎಂಬಂಥಾ ವಾತಾವರಣ ದಲ್ಲೇ, ಸದ್ದಿಲ್ಲದೆ ಮನೆ ಮಾರಾಟಕ್ಕಿದೆ ಚಿತ್ರವನ್ನು ಪೂರ್ಣಗೊಳಿಸಿದ್ದ, ಶ್ರುತಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದೆಲ್ಲದರ ನಡುವೆ ಕಳೆದ ಒಂದು ವರ್ಷದಿಂದ ಸಿನಿಪ್ರಿಯರು ಮತ್ತು ಚಿತ್ರರಂಗದ ಅನೇಕರಿಗೆ ಮತ್ತೆ ಶ್ರುತಿ ಚಿತ್ರರಂಗಕ್ಕೆ ಬರುತ್ತಾರಾ? ಅಥವಾ ಚಿತ್ರರಂಗದ ಸಹವಾಸವೇ ಸಾಕು, ಅಂಥ ದೂರ ಉಳಿಯುತ್ತಾರಾ ಎಂಬ ಪ್ರಶ್ನೆಗಳಿಗೆ ಸದ್ಯ ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಒಂದು ಉತ್ತರ ಸಿಕ್ಕಿದಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.