ಸಾಧನೆಯ ಮೆಟ್ಟಿಲು ಏರಬಹುದು; ಕಟ್ಟಡದ್ದಲ್ಲ !
Team Udayavani, Mar 5, 2017, 3:45 AM IST
ಸಹನೆ, ಸಹಿಷ್ಣುತೆ ನಮ್ಮ ಬದುಕಲ್ಲಿ ಅತ್ಯಗತ್ಯ ನಿಜ. ಆದರೆ ನಮ್ಮೊಂದಿಗೆ ಅನ್ಯಾಯವಾಗುತ್ತಿರುವುದನ್ನು ಕಂಡೂ, ಧೈರ್ಯ ತೋರದೇ ಸುಮ್ಮನಿದ್ದು ಸಹಿಸುವುದು ನಮಗೆ ನಾವೇ ಮಾಡಿಕೊಳ್ಳುವ ಹಿಂಸೆ ಮಾತ್ರವಲ್ಲ, ಅದೇ ಅನ್ಯಾಯ ಬೇರೊಬ್ಬರೊಂದಿಗೆ ಆಗುವುದಕ್ಕೂ ಅನುವು ಮಾಡಿಕೊಟ್ಟಂತಾಗುತ್ತದೆ. ನನ್ನಜ್ಜ ದಿ. ನಾರಾಯಣ ತಿಮ್ಮಣ್ಣ ಭಟ್ಟರು ಶತಾಯುಷಿಗಳಾಗಿದ್ದರು ಮತ್ತು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅಜ್ಜನಂತೇ ಅಪ್ಪನದೂ ಒಂದು ರೀತಿಯ ಹೋರಾಟದ ಬದುಕೇ. ಇಬ್ಬರೂ ನನಗೆ ಸದಾ ಹೇಳುತ್ತಿದ್ದರು: ನಿನ್ನೊಳಗಿನ ಛಲ, ಹಠ ಬಿಡಬೇಡ…
ಅನ್ಯಾಯ ಸಹಿಸಬೇಡ… ನಿನ್ನ ಕೈಲಾದ ರೀತಿಯಲ್ಲಿ ಪ್ರತಿರೋಧವನ್ನು ತೋರಿಸಲೇಬೇಕು… ಎಂದು. ಆದರೆ ನನಗೆಷ್ಟೋ ಸಲ ಅನಿಸಿತ್ತು : ನನ್ನೊಬ್ಬಳಿಂದ ಯಾವ ಬದಲಾವಣೆ ಸಾಧ್ಯವೆಂದು! ಆದರೆ ಕ್ರಮೇಣ ಕೆಲವು ಅಪೂರ್ವ ಉದಾಹರಣೆಗಳನ್ನು ಕಣ್ಮುಂದೆ ಕಂಡ ಮೇಲೆ ಸ್ಪಷ್ಟವಾಯಿತು. ಬದಲಾವಣೆ ಒಂದು ದಿನಕ್ಕೆಲ್ಲ ಸಾಧ್ಯವಿಲ್ಲ , ಆದರೆ, ಭವಿಷ್ಯತ್ತಿನಲ್ಲಿ ಸೂಕ್ತ ಬದಲಾವಣೆ ಬೇಕೆಂದರೆ ಮೊದಲ ಹೆಜ್ಜೆಯಿಡಲು ಒಂದು ಕ್ಷಣವನ್ನೂ ವ್ಯರ್ಥ ಮಾಡಬಾರದು ಎಂದು. ನಮ್ಮಲ್ಲಿ ಅಂಗವಿಕಲರಿಗೆ ಮೂಲಭೂತ ಸೌಲಭ್ಯಗಳು, ಸೌಕರ್ಯಗಳು ತೀರಾ ತಳಮಟ್ಟದಲ್ಲಿರಬಹುದು.
ಆದರೆ ಒಗ್ಗಟ್ಟಿನಿಂದ, ಸಮಾಜದ ಸತತ ಪ್ರಯತ್ನದಿಂದ ಇದರಲ್ಲಿ ಸುಧಾರಣೆ ಖಂಡಿತ ಸಾಧ್ಯ ಎಂಬುದು ನನ್ನ ನಂಬಿಕೆ ಮತ್ತು ಆಶಯ. ಆ ನಿಟ್ಟಿನÇÉೇ ಪ್ರಯತ್ನಿಸುತ್ತ, ಹೇಗೆ ವೈದ್ಯಕೀಯ ಕ್ಷೇತ್ರವೂ ಅಂತಃಕರಣ ಕಳೆದುಕೊಂಡು, ಸ್ಪಂದಿಸದೇ ಅನ್ಯಾಯ ಮಾಡುತ್ತದೆ ಮತ್ತು ಅಂತಹ ಸಮಯದಲ್ಲಿ ನಾವು ನಮ್ಮಿಂದಾದ ರೀತಿಯಲ್ಲಿ ಪ್ರತಿಭಟಿಸದೇ ಇದ್ದರೆ ಅದೇ ಅನ್ಯಾಯ ಮುಂದೊಂದು ದಿನ ಬೇರೊಬ್ಬರಿಗೂ ಆಗಬಹುದು ಎಂಬುದನ್ನು ಕೆಳಗಿನ ಉದಾಹರಣೆಯ ಮೂಲಕ ಹೇಳುತ್ತಿರುವೆ.
ಆಗ ನಾವು ರಾಜರಾಜೇಶ್ವರಿ ನಗರದಲ್ಲಿ¨ªೆವು. ಒಮ್ಮೆ ನನಗೆ ತುಂಬಾ ಜ್ವರ ಬಂದಿತ್ತು. ಜೊತೆಯಲ್ಲಿ ಪುಟ್ಟ ಮಗಳು ಮತ್ತು ಹೆಲ್ಪರ್ ಇದ್ದಳು. ಮನೆಯ ಹತ್ತಿರದ ನಮ್ಮ ಪರಿಚಿತ ಡಾಕ್ಟರ್ ಕ್ಲಿನಿಕ್ಕಿಗೆ ಹೋದರೆ ಅವರು ಅಂದು ರಜೆಯಲ್ಲಿದ್ದರು. ಸರಿ, ಸಮೀಪದÇÉೇ ಎÇÉಾದರೂ ಬೇರೆ ಕ್ಲಿನಿಕ್ ಇದೆಯೇ ಎಂದು ಹುಡುಕಾಡುತ್ತ ಹೊರಟಾಗ ಸಣ್ಣ ಕ್ಲಿನಿಕ್ ಒಂದು ಕಣ್ಣಿಗೆ ಬಿತ್ತು. ಕಾರನ್ನು ಅದರ ಹತ್ತಿರವೇ ಪಾರ್ಕ್ ಮಾಡಿ ನೋಡಿದರೆ, ಕ್ಲಿನಿಕ್‌ಗೆ ಹೋಗಲು ಐದಾರು ಮೆಟ್ಟಿಲುಗಳನ್ನು ಕೆಳಗಿಳಿಯಬೇಕಿತ್ತು. ಈ ಮೊದಲು ಎಷ್ಟೋ ಸಲ ಇಂಥದ್ದೇ ಸಂದರ್ಭದಲ್ಲಿ, ಹಲವು ಸಹೃದಯ, ವೃತ್ತಿಪರ ಡಾಕ್ಟರ್ಸ್ ನಾನಿದ್ದಲ್ಲಿಗೇ ಬಂದು ಚಿಕಿತ್ಸೆ ಕೊಟ್ಟಿದ್ದರು. ಹೀಗಾಗಿ, ನನ್ನವರು ಒಳಗೆ ಹೋಗಿ ಪರಿಸ್ಥಿತಿ ವಿವರಿಸಿದರು. ಆದರೆ ಆ ಡಾಕ್ಟರ್ ಚಿಕಿತ್ಸೆ ಕೊಡಲು ನಿರಾ ಕರಿಸಿ ಕಳುಹಿಸಿ ಬಿಟ್ಟರು. ಅವರು ಕೊಟ್ಟ ಕಾರಣ: ನನಗೆ ಅಲ್ಲಿಗೆ ಬಂದು ಚಿಕಿತ್ಸೆ ನೀಡಲು ಸಂಕೋಚ ವಾಗುತ್ತದೆ. ಹಾಗೆಲ್ಲ ಸಾರ್ವಜನಿಕ ವಾಗಿ ತಪಾಸಣೆ ಮಾಡಲಾರೆ ಕಾರಲ್ಲಿ ಎಂದು! ನನಗಾಗಿದ್ದು ಮಾಮೂಲಿ ಶೀತ ಜ್ವರ. ಇದೇ ರೀತಿ ಆಗಿ¨ªಾಗ ಬೇರೆ ಡಾಕ್ಟರ್ಸ್ ಸ್ಟೆತೋಸ್ಕೋಪ್ ಇಟ್ಟು ನೋಡಿ, ಪಲ್ಸ್ ಪರಿಶೀಲಿಸಿ, ತಪಾಸಣೆ ಮಾಡಿ ಔಷಧಿ ಕೊಟ್ಟಿದ್ದರು. ನನ್ನವರು ತುಸು ಬೇಸರದÇÉೇ ಎಲ್ಲವನ್ನೂ ಹೇಳಿದರು. ನನಗೋ ಜ್ವರದ ತಾಪ. ಅಂತೂ ತುಸು ದೂರದಲ್ಲಿದ್ದ ಬೇರೊಂದು ಕ್ಲಿನಿಕ್‌ಗೆ ಹೋದೆವು. ಅಲ್ಲಿಯೂ ಮೆಟ್ಟಿಲುಗಳೇ ಸ್ವಾಗತಿಸಿದ್ದು. ಆದರೆ, ಅದೃಷ್ಟವಶಾತ್ ಆ ಡಾಕ್ಟರ್ ತಮ್ಮ ವೃತ್ತಿಪರತೆಯನ್ನು ಮರೆಯದೇ, ನಾನಿದ್ದಲ್ಲಿಗೇ ಬಂದು ಪರೀಕ್ಷಿಸಿ ಮಾತ್ರೆಗಳನ್ನು ಕೊಟ್ಟರು.
ಮೂರು ದಿನಗಳ ನಂತರ, ಜ್ವರ ಬಿಟ್ಟ ಮೇಲೆ ಆ ಕ್ಲಿನಿಕ್ ಮತ್ತು ಡಾಕ್ಟರ್ ಹೆಸರು ಹಾಕದೇ, ನನ್ನೊಂದಿಗಾದ ಈ ಘಟನೆಯನ್ನು ಬರೆದು, ಎÇÉಾ ಪೇಪರುಗಳಿಗೂ ಕಳುಹಿಸಿದೆ. ಅದೃಷ್ಟವಶಾತ್ ಅದು ಪುಟ್ಟದಾಗಿ ಉದಯವಾಣಿಯ “ಜನತಾವಾಣಿ’ಯಲ್ಲಿ ಪ್ರಕಟಗೊಂಡಿತು (ಜನತಾವಾಣಿಯ ಚಿತ್ರವನ್ನೂ ಜೊತೆಗೆ ಹಾಕಲಾಗಿದೆ). ಅದನ್ನು ಕಟ್ ಮಾಡಿ, ಕೆಂಪು ಇಂಕಿನಲ್ಲಿ ರೌಂಡ್ ಹಾಕಿ ಅದೇ ಕ್ಲಿನಿಕ್ಕಿಗೆ ಪೋಸ್ಟ್ ಮಾಡಿದೆ. ಪೋಸ್ಟ್ ಅಲ್ಲಿಗೆ ಹೋಗಿರುವುದನ್ನೂ ಖಾತ್ರಿ ಪಡಿಸಿಕೊಂಡೆ. ಅದನ್ನೊಮ್ಮೆ ಡಾಕ್ಟರ್ ಕಣ್ಣಾಡಿಸಿದರೆ, ಭಯದಿಂದಲೋ ಇÇÉಾ ತಮ್ಮ ತಪ್ಪಿನ ಅರಿವಾಗಿಯೋ ತಿದ್ದಿಕೊಂಡರೆ ಮತ್ತೂಮ್ಮೆ, ತೀರಾ ಅನಿವಾರ್ಯದಲ್ಲಿರುವ ಬೇರೊಬ್ಬರಿಗೆ ಹೀಗೆ ಅನ್ಯಾಯವಾಗದು ಎಂಬುದು ನನ್ನ ಆಶಯವಾಗಿತ್ತು.
ನಮ್ಮಲ್ಲಿ ಆಥೊìಪೆಡಿಕ್ ಸರ್ಜನ್ ಕ್ಲಿನಿಕ್ ಕೂಡ ಎರಡನೆಯ ಮಹಡಿಯÇÉೇ ಇರುತ್ತದೆ ಮತ್ತು ಇದಕ್ಕೆ ಯಾವುದೇ ಲಿಫ್ಟ್ ಅಥವಾ ರ್‍ಯಾಂಪ್ ವ್ಯವಸ್ಥೆಯೂ ಇರುವುದಿಲ್ಲ! ಇದು ಕೇವಲ ದೈಹಿಕ ನ್ಯೂನ್ಯತೆ ಉಳ್ಳವರ ಸಮಸ್ಯೆ ಮಾತ್ರವಲ್ಲ. ವೃದ್ಧರ, ಅಶಕ್ತರ, ತೀವ್ರ ಅನಾರೋಗ್ಯ ಪೀಡಿತರ, ಕಾಲುನೋವು, ಮೂಳೆಮುರಿತ ಮುಂತಾದ ತಾತ್ಕಾಲಿಕ ತೊಂದರೆಗಳನ್ನು ಅನುಭವಿಸುತ್ತಿರುವವರ ಬವಣೆಯೂ ಹೌದು. ಡೆಂಟಿಸ್ಟ್, ಜನರಲ್ ಫಿಸಿಶಿಯನ್, ಆಥೊìà, ನ್ಯೂರೋ ಹೀಗೇ ಎÇÉಾ ಸಣ್ಣ/ದೊಡ್ಡ ಡಾಕ್ಟರುಗಳ ಕ್ಲಿನಿಕ್ಕುಗಳೂ ಬಹುತೇಕ ಮಹಡಿಯ ಮೇಲೆ ಅಥವಾ ಹತ್ತಾರು ಮೆಟ್ಟಿಲುಗಳನ್ನೇರಿ! ಹಲವೆಡೇ ಲಿಫ್ಟ್ ಇದ್ದರೂ ಒಂದೋ ಅದು ಕೆಟ್ಟಿರುತ್ತದೆ ಅಥವಾ ಮಹಡಿ ಹತ್ತಲು ಯಾವುದೇ ತೊಂದರೆ ಇಲ್ಲದವರಿಂದಲೇ ತುಂಬಿರುತ್ತದೆ. ಎಷ್ಟೋ ಸಲ ಅನಿಸಿದ್ದಿದೆ, ಅದೇಕೆ ವೈದ್ಯಕೀಯ ಕ್ಷೇತ್ರದಲ್ಲಿರುವವರೂ ನಮ್ಮಂಥವರ ಬಗ್ಗೆ ಇಷ್ಟು ಸಂವೇದನಾರಹಿತವಾಗಿ ಆಲೋಚಿಸುತ್ತಾರೆ? ಎಂದು. ರೋಗಿಗಳು ಸರಾಗವಾಗಿ ಕ್ಲಿನಿಕ್ಕಿನ ಒಳಹೋಗಲು ಕನಿಷ್ಟ ವ್ಯವಸ್ಥೆಯನ್ನೂ ಕಲ್ಪಿಸಲು ಇವರು ಆಲೋಚಿಸುತ್ತಿಲ್ಲ. ಇದು ದೂರಾಲೋಚನೆಯ ಕೊರತೆಯೋ ಅಥವಾ ದಿವ್ಯ ನಿರ್ಲಕ್ಷ್ಯವೋ ತಿಳಿಯೆ! ಈ ಕಾರಣದಿಂದ ಅನೇಕ ಅಸಹಾಯಕರು ದೊಡ್ಡಾಸ್ಪತ್ರೆಗಳಿಗೇ ಹೋಗಬೇಕಾಗುತ್ತದೆ ಅಥವಾ ಅನಿವಾರ್ಯವಾಗಿ ಅಪರಿಚಿತ ಡಾಕ್ಟರ್ಸ್ ಅನ್ನು ಸಂಪರ್ಕಿಸಬೇಕಾಗುತ್ತದೆ- ಕೇವಲ ಅವರ ಡಿಸ್ಪೆನ್ಸರಿ ಅಪ್ಪಿತಪ್ಪಿ ಕೆಳಗಿದೆ ಅಥವಾ ಅದಕ್ಕೆ ಅಷ್ಟು ಮೆಟ್ಟಿಲುಗಳಿಲ್ಲ ಎಂಬ ಕಾರಣಕ್ಕಾಗಿ. ಇನ್ನು ಹೊಟೇಲು ಮತ್ತಿತರ ಸ್ಥಳಗಳ ಬಗ್ಗೆ ಹೇಳಿಯೇ ಪ್ರಯೋಜನವಿಲ್ಲ. ತೀರಾ ಕೆಲವೇ ಕೆಲವು ಹೊಟೇಲುಗಳು ಮಾತ್ರ ಈಗೀಗ ರ್‍ಯಾಂಪ್ ಅಥವಾ ಬೇಸ್‌ಮೆಂಟಿನಿಂದ ಲಿಫ್ಟ್ ಇಡುತ್ತಿವೆ. ಆದರೆ ಈಗಲೂ ಬಹುಪಾಲು ಮೆಟ್ಟಿಲುಗಳದೇ ಸಾಮ್ರಾಜ್ಯ. ಪ್ರಯಾಣದ ಸಮಯದÇÉೆಲ್ಲ ನಾವು ಎಲ್ಲರೊಂದಿಗೆ ಹೊಟೇಲಿಗೆ ಹೋಗಲಾಗದೇ, ಕಾರಿಗೇ ಸಪ್ಲೆ„ ಮಾಡಿಸಿಕೊಳ್ಳಬೇಕಾಗುತ್ತದೆ.
ಮಾನಸಿಕವಾಗಿ ನಾವು ನಮ್ಮ ಆಲೋಚನೆಗಳು, ಚಿಂತನೆಗಳು, ಧೋರಣೆಗಳು, ಆಚರಣೆಗಳು ತಳದಿಂದ ಮೇಲೇರುತ್ತ ದಿನೇ ದಿನೇ ಋಣಾತ್ಮಕತೆಯಿಂದ ಧನಾತ್ಮಕತೆಯತ್ತ ಸಾಗುವಾಗ ಮಾನಸಿಕ ಉನ್ನತಿಯ ಮೆಟ್ಟಿಲುಗಳು ಎಷ್ಟೇ ಇದ್ದಿರಲಿ, ಏರುವ ಹುಮ್ಮಸ್ಸು ನಮ್ಮದಾಗಿರಲಿ. ಆದರೆ ಇವೇ ಮೆಟ್ಟಿಲುಗಳು ಅಶಕ್ತರ, ಅಸಹಾಯಕರ, ವೃದ್ಧರ, ಅಂಗವಿಕಲರ ಎದುರಿಗೆ ವಾಸ್ತವಿಕತೆಯಲ್ಲಿ ಪ್ರತ್ಯಕ್ಷಗೊಂಡರೆ ಅವರು ಪಡುವ ಹಿಂಸೆ, ಕಷ್ಟಗಳು ಅಷ್ಟಿಷ್ಟಲ್ಲ. ಇದರಿಂದ ಅವರೊಳಗಿನ ವಿಶ್ವಾಸ, ಧೈರ್ಯ, ಸ್ವಾವಲಂಬನೆಯ ಹಂಬಲಗಳು ಕ್ರಮೇಣ ಕುಂದಿ ಹೋಗುವ ಅಪಾಯವಿರುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಸರ್ವರೂ ಮುಕ್ತವಾಗಿ, ಸರಾಗವಾಗಿ ಸಂಚರಿಸಿ, ಎÇÉಾ ರೀತಿಯ ಸೌಲಭ್ಯ, ಮೂಲಭೂತ ಸೌಕರ್ಯಗಳು ಲಭಿಸುವಂಥ ದಿನಗಳು ಬಹುಬೇಗ ಬರಲಿ. ಇದಕ್ಕಾಗಿ ಧ್ವನಿಯೆತ್ತಲೇಬೇಕಾಗಿದೆ. ಇದು ಕೇವಲ ನಮ್ಮಂಥವರದೊಂದೇ ಹೊಣೆಯಲ್ಲ. ಸಮಾಜದ ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿ. ಬದಲಾವಣೆ ಒಂದು ದಿನದÇÉಾಗದು. ಒಂದು ಬರಹದÇÉಾಗದು. ಆದರೆ ಬದಲಾವಣೆಯ ಪ್ರಾರಂಭ ಒಂದು ಬರಹದಿಂದಲಾದರೂ ಆದರೆ ಅಷ್ಟೇ ಸಾಕು.
– ತೇಜಸ್ವಿನಿ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.