ಇನ್ನು ಶುರು ಕಾಲ್ಚೆಂಡಿನ ಕಾಳಗ


Team Udayavani, Jun 10, 2018, 6:00 AM IST

ee-2.jpg

ವಿಶ್ವಕಪ್‌ ಫ‌ುಟ್ಬಾಲ್‌ ಎಂಬ ಕ್ರೀಡಾಮಹಾಕಾವ್ಯದ ಮೊದಲ ಸಾಲನ್ನು ಬರೆಯಲು ಕೇವಲ ನಾಲ್ಕು ದಿನಗಳು ಬಾಕಿ ಉಳಿದಿವೆ. ಜೂ. 14 ರಂದು ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಕಾಲ್ಚೆಂಡಿನ ಕಾಳಗ ಶುರು ! ಒಂದು ತಿಂಗಳ ಕಾಲ ಫ‌ುಟ್ಬಾಲ್‌ ಪ್ರೇಮಿಗಳು ತುದಿಗಾಲಲ್ಲಿ ನಿಲ್ಲಲಿದ್ದಾರೆ !

ಕಳೆದೆರಡು ವರ್ಷಗಳಿಂದ ವಿಶ್ವದಾದ್ಯಂತ ನಡೆದ ವಿಶ್ವಕಪ್‌ ಫ‌ುಟ್ಬಾಲ್‌ನ ಅರ್ಹತಾ ಸುತ್ತಿನ ನೂರಾರು ಪಂದ್ಯಗಳು ನಡೆದ ಬಳಿಕ ಈ ಬಾರಿಯ ವಿಶ್ವಕಪ್‌ ಸಮರಾಂಗಣದಲ್ಲಿ ವಿಶ್ವದ 32 ತಂಡಗಳು ಆಡುತ್ತಿವೆ. ರಷ್ಯಾದ 11 ನಗರಗಳ 12 ಕ್ರೀಡಾಂಗಣಗಳಲ್ಲಿ 32 ದಿನಗಳ ಕಾಲ ನಡೆಯಲಿದೆ ಈ ಫ‌ುಟ್ಬಾಲ್‌ ಸಮರ. ಫ‌ುಟ್ಬಾಲ್‌ ಎಂಬ ಈ ಪದಕ್ಕೆ ವಿಶ್ವವನ್ನೇ ತನ್ನ ಮೋಡಿಯಲ್ಲಿ ಹಿಡಿದಿಡುವ ಶಕ್ತಿ ಇದೆ. ಈ ಮಾಂತ್ರಿಕ ಆಟ ನಡೆಯುವಲ್ಲಿ ಜನಸಾಗರ ಸೇರುತ್ತದೆ. ಫ‌ುಟ್ಬಾಲ್‌ ಪ್ರಿಯರು ಆಟವನ್ನು ನೋಡಿ ಕುಣಿಯುತ್ತಾರೆ, ಹಾಡುತ್ತಾರೆ, ಅಪ್ಪಿ ಅಭಿನಂದಿಸುತ್ತಾರೆ. 

    ವಿಶ್ವಕಪ್‌ ಫ‌ುಟ್ಬಾಲ್‌ ಯಾಕೆ ಇಷ್ಟು ಜನಪ್ರಿಯ ಈ ಪ್ರಶ್ನೆಯನ್ನು ಯಾರಾದರೂ ಕೇಳಿದರೆ ಅದು ಅವರ ಅಜ್ಞಾನವನ್ನು ತೋರಿಸುತ್ತದೆ ! ಜಗತ್ತು ಇಂದು ವರ್ಣಭೇದ, ಮತೀಯವಾದ, ಜಾತೀಯತೆ, ಜನಾಂಗೀಯ ಯೋಚನೆಯ ಆಘಾತಗಳಿಗೆ ಸಿಲುಕಿ ತತ್ತರಿಸುತ್ತಿದ್ದರೂ, ಇಂಥ ಸಂದಿಗ್ಧತೆಯಲ್ಲಿ ಇಡೀ ಜನಸಮೂಹದ ಮನಸ್ಸುಗಳನ್ನು ಒಂದುಗೂಡಿಸುವ ನಿಟ್ಟಿನಲ್ಲಿ ವಿಶ್ವಕಪ್‌ ಫ‌ುಟ್ಬಾಲ್‌ ಹೊಸ ಹೆಜ್ಜೆಗಳನ್ನಿಡುತ್ತಿದೆ. 

 ಈ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಪ್ರತಿಷ್ಠಿತ ಕೂಟವನ್ನು ಸರದಿಯ ಮೇರೆಗೆ ಪ್ರತಿಯೊಂದು ರಾಷ್ಟ್ರಗಳಲ್ಲಿಯೂ ನಡೆಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಫ‌ುಟ್ಬಾಲ್‌ ಫೆಡರೇಶನ್‌ ಇಟ್ಟಿರುವ ಹೆಜ್ಜೆಯೂ ಮಹಣ್ತೀದ್ದಾಗಿದೆ. ರಷ್ಯಾ ಮೊದಲ ಬಾರಿ ವಿಶ್ವಕಪ್‌ ಟೂರ್ನಿಯ ಆತಿಥ್ಯ ವಹಿಸಿಕೊಂಡಿದೆ.  

ಫ‌ುಟ್ಬಾಲ್‌ ಹೆಜ್ಜೆ ಗುರುತುಗಳು
ಫ‌ುಟ್ಬಾಲ್‌ ಇಂದು-ನಿನ್ನೆಯ ಕ್ರೀಡೆಯಲ್ಲ. ಇದರ ಹೆಜ್ಜೆಗುರುತುಗಳಿಗೆ ಸಹಸ್ರಮಾನದ ಇತಿಹಾಸವಿದೆ. ಕ್ರಿಸ್ತಪೂರ್ವ ಎರಡನೆಯ ಶತಮಾನದಲ್ಲಿಯೇ ಚೀನಾದಲ್ಲಿ ತ್ಸುಚ್ಯು ಎಂಬ ಹೆಸರಿನಲ್ಲಿ ಫ‌ುಟ್ಬಾಲ್‌ನಂಥದ್ದೇ ಆಟದ ಐತಿಹ್ಯಗಳಿವೆ. ಆರು ನೂರು ವರ್ಷಗಳ ಹಿಂದೆಯೇ ಜಪಾನಿನಲ್ಲಿ ಆಡಲಾಗುತ್ತಿದ್ದ ಕೆಮಾರಿ ಎಂಬ ಹೆಸರಿನ ಆಟಕ್ಕೂ ಫ‌ುಟ್ಬಾಲ್‌ಗ‌ೂ ಬಹಳಷ್ಟು ಸ್ವಾಮ್ಯಗಳಿವೆ. ಪ್ರಾಚೀನ ಗ್ರೀಕರ ಎಪಿಸ್ಕಿರೋಸ್‌, ರೋಮನ್ನರ ಹರ್ಷಾಸ್ತುಮ್‌ ಆಟಗಳ ರೂಪಾಂತರವೇ ಫ‌ುಟ್ಬಾಲ್‌.

ಫ‌ುಟ್ಬಾಲ್‌ನೊಂದಿಗೆ ದೇಶಗಳ ಕಥೆಯೂ ಬೆಸೆದುಕೊಂಡಿದೆ ಎಂದು ಹೇಳಬಹುದು. ಫ‌ುಟ್ಬಾಲ್‌ ಜನಮನದೊಳಗೆ ಕುಣಿದು ಕುಪ್ಪಳಿಸುತ್ತಿದ್ದ ಆ ದಿನಗಳಲ್ಲಿ ಈ ಆಟದ ಮೇಲೆಯೇ ಕೆಲವು ದೇಶಗಳ ಆಳರಸರು ನಿಷೇಧ ಹೇರಿದ ದಾಖಲೆಗಳೂ ಇವೆ. ಇಷ್ಟಾದರೂ ಜನರ ಈ ಭಾವ ಪ್ರವಾಹವನ್ನು ಅಡ್ಡಗಟ್ಟಲು ಈ ಆಳರಸರಿಂದ ಸಾಧ್ಯವಾಗಲಿಲ್ಲ. ಕೊನೆಗೆ, ಎಲ್ಲರೂ ಈ ಪ್ರವಾಹದಲ್ಲಿ ಸೇರಿ ಹೋದರು. ಫ‌ುಟ್ಬಾಲ್‌ ಮನದಿಂದ ಮನಕ್ಕೆ, ಊರಿನಿಂದ ಊರಿಗೆ, ದೇಶದಿಂದ ದೇಶಕ್ಕೆ ಹರಡಿ ಜಗದಗಲ ಹಬ್ಬಿತು.

    ಇಂಗ್ಲೆಂಡ್‌ನ‌ಲ್ಲಿ 1863 ರಷ್ಟು ಹಿಂದೆಯೇ ಫ‌ುಟ್ಬಾಲ್‌ ಸಂಸ್ಥೆ ಅಸ್ತಿತ್ವದಲ್ಲಿತ್ತು. ಆಗ ಇಂಗ್ಲೆಂಡ್‌ನ‌ ಹಲವೆಡೆ ಫ‌ುಟ್ಬಾಲ್‌ ಕ್ಲಬ್‌ಗಳಿದ್ದು ಇಲ್ಲಿ ನಿರಂತರ ಫ‌ುಟ್ಬಾಲ್‌ ಟೂರ್ನಿಗಳು ನಡೆಯುತ್ತಿದ್ದವು.  ಅದಕ್ಕೂ ಮೊದಲು ಯೂರೋಪ್‌ನಾದ್ಯಂತ ಹಲವು ದೇಶಗಳ ಕಾರ್ಮಿಕ ವರ್ಗದವರು ಫ‌ುಟ್ಬಾಲ್‌ ಆಡುತ್ತಿದ್ದುದಕ್ಕೆ ಪುರಾವೆಗಳಿವೆ.

ಫ‌ುಟ್ಬಾಲ್‌ ಆಟ ಹಲವು ಕ್ರೀಡಾಪಟುಗಳ ಜೀವನದಲ್ಲಿ ಹಲವು  ಸಂತಸದ ಕ್ಷಣಗಳನ್ನು ಮೂಡಿಸಿದೆ. ನಿರ್ಗತಿಕರನ್ನು ಪ್ರಪಂಚದ ಅತ್ಯಂತ ಶ್ರೀಮಂತರನ್ನಾಗಿಸುತ್ತದೆ. ಬ್ಯೂನಸ್‌  ಐರಿಸ್‌ ಕೊಳೆಗೇರಿಯಲ್ಲಿ ಹುಟ್ಟಿ ವಿಶ್ವವನ್ನು ದಂಗು ಬಡಿಸಿದ ಮೆರಡೋನಾ ಇರಬಹುದು, ಬ್ರೆಜಿಲ್‌ನ ಗಲ್ಲಿಗಳಲ್ಲಿ ಹತ್ತರಲ್ಲಿ ಹನ್ನೊಂದು ಎಂಬಂತಿದ್ದ ಪೀಲೆ- ವಿಶ್ವ ಫ‌ುಟ್ಬಾಲ್‌ ರಂಗ ಕಂಡ ಅಸಾಮಾನ್ಯ ಆಟಗಾರರು.  ಇಂತಹ ಅನೇಕರನ್ನು ಫ‌ುಟ್ಬಾಲ್‌ ಉತ್ತುಂಗಕ್ಕೇರಿಸಿದೆ.

ವಿಶ್ವಕಪ್‌ ಫ‌ುಟ್ಬಾಲ್‌ ಸಾಗಿ ಬಂದ ಹಾದಿ : ಉರುಗ್ವೆಯಲ್ಲಿ 1930 ರಲ್ಲಿ ಮೊದಲ ವಿಶ್ವಕಪ್‌ ನಡೆದಾಗ ಕೇವಲ 13 ರಾಷ್ಟ್ರಗಳು ಪಾಲ್ಗೊಂಡು 18 ಪಂದ್ಯಗಳು ಮಾತ್ರ ನಡೆದಿದ್ದವು. 70 ಗೋಲುಗಳು ಬಂದಿದ್ದವು. ಪ್ರಾಥಮಿಕ ಸುತ್ತಿನ ಪಂದ್ಯಗಳೇ ನಡೆದಿರಲಿಲ್ಲ.  1934ರಲ್ಲಿ ಇಟಲಿಯಲ್ಲಿ ನಡೆದ ಎರಡನೆಯ ವಿಶ್ವಕಪ್‌ನ ಪ್ರಾಥಮಿಕ ಸುತ್ತಿನಲ್ಲಿ 32 ತಂಡಗಳು ಪಾಲ್ಗೊಂಡಿದ್ದವು.  27 ಪಂದ್ಯಗಳು ನಡೆದಿದ್ದವು.  ವಿಶ್ವಕಪ್‌ ಆಡುವ ಅರ್ಹತೆಯನ್ನು 16 ತಂಡಗಳು ಪಡೆದಿದ್ದವು.  ಆದರೆ, ಇಂದು ಸುಮಾರು 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ಜನಪ್ರಿಯ ಕ್ರೀಡೆಯನ್ನು ಆಡಲಾಗುತ್ತಿರುವುದು ಮಾತ್ರವಲ್ಲ, ದಿನೇ ದಿನೇ ಈ ಆಟದಲ್ಲಿ ಹೊಸ ರಂಗು ಮೂಡುತ್ತ ಬಂದಿದೆ.  ಇದೀಗ ಫ‌ುಟ್ಬಾಲ್‌ ಲೋಕದಲ್ಲಿ ಸೂರ್ಯ ಮುಳುಗುವುದೇ ಇಲ್ಲ ! ಭೂಮಿ ತಿರುಗುತ್ತ ಸೂರ್ಯನಿಗಭಿಮುಖವಾಗುವಲ್ಲೆಲ್ಲ ಫ‌ುಟ್ಬಾಲ್‌ ಆಟ ನಡೆದೇ ಇರುತ್ತದೆ.

ಕಳೆಗುಂದಿರುವ ಏಷ್ಯಾ ಖಂಡ : ವಿಶ್ವಕಪ್‌ ಆರಂಭದ ವರ್ಷಗಳಲ್ಲಿ ಯೂರೋಪ್‌ ಮತ್ತು ಲ್ಯಾಟೀನ್‌ ಅಮೆರಿಕ ದೇಶಗಳದ್ದೇ ಅಬ್ಬರ. ಆಗ ಆಫ್ರಿಕಾದಿಂದ ಈಜಿಪ್ತ್ ಮತ್ತು  ಏಷ್ಯಾದಿಂದ ಇಂಡೋನೇಷ್ಯಾ ಮಾತ್ರ ಪಾಲ್ಗೊಂಡಿದ್ದವು. ಆ ಎರಡೂ ದೇಶಗಳು ಫ‌ುಟ್ಬಾಲ್‌ನಲ್ಲಿ ಗಮನ ಸೆಳೆಯುವಲ್ಲಿ ಪೂರ್ಣ ವಿಫ‌ಲವಾಗಿದ್ದವು.  ನಂತರದ ವರ್ಷಗಳಲ್ಲಿ ವಿಶ್ವಕಪ್‌ ಕೂಟಗಳಲ್ಲಿ ಆಫ್ರಿಕಾ ಮತ್ತು ಏಶ್ಯಾದ ದೇಶಗಳ ಪಾಲ್ಗೊಳ್ಳುವಿಕೆಯಲ್ಲಿ ಏರಿಕೆ ಉಂಟಾಯಿತು.  1982 ರ ವಿಶ್ವಕಪ್‌ನಲ್ಲಿ ಆಲೇcರಿಯಾ, 1986 ರಲ್ಲಿ ಮೊರೊಕ್ಕೊ, 1990 ರಲ್ಲಿ ಕ್ಯಾಮರೂನ್‌ ದೇಶಗಳು ಅದ್ಭುತ ಸಾಮರ್ಥಯ ತೋರಿ ಆಫ್ರಿಕಾ ಖಂಡದ ಹೆಜ್ಜೆ ಗುರುತು ಮೂಡಿಸುವಲ್ಲಿ ಯಶಸ್ಸು ಪಡೆದವು.

    ಏಶ್ಯಾನ್‌ ರಾಷ್ಟ್ರಗಳ ಬಗ್ಗೆ ಹೇಳುವುದಾದರೆ, ವಿಶ್ವಕಪ್‌ ಚರಿತ್ರೆಯಲ್ಲಿಯೇ ಈವರೆಗೆ ಏಷ್ಯನ್‌ ರಾಷ್ಟ್ರಗಳು ಅಂತಿಮ ಘಟ್ಟ ತಲುಪಲು ಸಾಧ್ಯವೇ ಆಗಿಲ್ಲ. ವಿಶ್ವಕಪ್‌ ಫ‌ುಟ್ಬಾಲ್‌ ರಂಗದಲ್ಲಿ ಏಷ್ಯನ್‌ ರಾಷ್ಟ್ರಗಳು ಕ್ರಮಬದ್ಧವಾಗಿ ಭಾಗವಹಿಸುತ್ತಿದ್ದರೂ ಅವುಗಳ ಸಾಧನೆ ಅಷ್ಟಕಷ್ಟೇ. ಇದರಿಂದಾಗಿ ಏಷ್ಯಾ ಖಂಡದಲ್ಲಿ ಫ‌ುಟ್ಬಾಲ್‌ ಜನಪ್ರಿಯ ಕ್ರೀಡೆಯಲ್ಲ ಎಂದರ್ಥವಲ್ಲ.  ದಕ್ಷಿಣ ಅಮೆರಿಕ ಮತ್ತು ಯುರೋಪ್‌ ರಾಷ್ಟ್ರಗಳು ವಿಶ್ವ ಫ‌ುಟ್ಬಾಲ್‌ನಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದು, ಅವುಗಳಿಗೆ ಸರಿಸಾಟಿಯಾಗುವ ಸಾಮರ್ಥಯವನ್ನು ಏಷ್ಯನ್‌ ರಾಷ್ಟ್ರಗಳು ತೋರುತ್ತಿಲ್ಲ. ವಿಶ್ವಕಪ್‌ ಫ‌ುಟ್ಬಾಲ್‌ ಆರಂಭವಾಗಿ ಸುಮಾರು 88 ವರ್ಷಗಳೇ ಕಳೆದರೂ ಯಾವೊಂದೂ ಏಷ್ಯನ್‌ ರಾಷ್ಟ್ರ ವಿಶ್ವಕಪ್‌ ಪ್ರಶಸ್ತಿಯನ್ನು ಗೆದ್ದಿಲ್ಲ.  ಆದರೂ ಕೆಲವೊಂದು ಅನಿರೀಕ್ಷಿತ ಫ‌ಲಿತಾಂಶವನ್ನು ಏಷ್ಯನ್‌ ರಾಷ್ಟ್ರಗಳು ಎದುರಾಳಿ ತಂಡಗಳಿಗೆ ನೀಡಿದೆ.  ಈ ಬಾರಿ ಏಷ್ಯಾ ಖಂಡದಿಂದ ದಕ್ಷಿಣ ಕೊರಿಯಾ, ಜಪಾನ್‌, ಇರಾನ್‌ ಹಾಗೂ ಸೌದಿ ಅರೇಬಿಯಾ ಏಷ್ಯಾ ಖಂಡದ ಘನತೆಗೆ ಹೊಸ ಹುರುಪನ್ನು ನೀಡಲಿದೆ.

ಎಸ್‌. ಜಗದೀಶ್ಚಂದ್ರ ಅಂಚನ್‌

ಟಾಪ್ ನ್ಯೂಸ್

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

1-ssss

J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.