ಪ್ರೇಮಗಿರಿ
Team Udayavani, May 21, 2017, 9:33 PM IST
ಅಲ್ಲಲ್ಲಿ ದೂರದಲ್ಲಿ ಕಾಣುವ ಮೊಬೈಲ್ ಟವರ್ಸ್, “ಹಾಗೊØàಗಿ ಹೀಗ್ಬಂದೆ’ ಎನ್ನುವ ಮೆಟ್ರೋರೈಲ್, ಫ್ಲೈಓವರ್ ಕೆಳಗೆ ನಿಂತ ಸಾವಿರಾರು ವಾಹನಗಳು, ಗಂಟೆ ಆರು. ಇನ್ನೇನು ಸೂರ್ಯ ಹೊರಡುತ್ತಿ¨ªಾನೆ. ಈ ಗಿಜಿ ಗಿಜಿ ಬೆಂಗಳೂರಿನಲ್ಲೂ ನಾನು ಏರಬಹುದಾದ ಪ್ರಶಾಂತವಾದ ಒಂದು ಗುಡ್ಡ ಇದೆ, ಗಿರಿನಗರದಲ್ಲಿ. ಬೀದಿಯ ಕ್ರಿಕೆಟ್ ಫ್ರೆಂಡ್ಸ್ ನನಗೆ ಈ ಜಾಗದ ಪರಿಚಯ ಮಾಡಿಸಿ¨ªಾರೆ. ನಾನು ಕುಳಿತ ಜಾಗದಿಂದ ಸುಮಾರು ಅರ್ಧ ಬೆಂಗಳೂರನ್ನು ವೀಕ್ಷಿಸಬಹುದು. ಆದರೆ, ಮನಸ್ಸು ಗೊಂದಲದ ಗೂಡಾಗಿದೆ. ಆತಂಕ, ಸಾವಿರಾರು ಪ್ರಶ್ನೆಗಳು? ಈ ಪ್ರಕೃತಿಗೆ ಮಾತ್ರ ಗೊಂದಲಗಳನ್ನು ತಿಳಿಯಾಗಿಸುವ ಶಕ್ತಿ ಇರುವುದು! ಗುಡ್ಡದ ತುದಿಯಲ್ಲಿರುವಾಗ, ಸಮುದ್ರದ ದಂಡೆಯಲ್ಲಿರುವಾಗ ಕ್ಷಣಮಾತ್ರದಲ್ಲಿ ನಮ್ಮ ಸಂಕಷ್ಟಗಳೆಲ್ಲ ಮಾಯವಾದ ಹಾಗೆ ಭಾಸವಾಗುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆಯಂತೆ. ವಾರದ ದಿನಗಳಲ್ಲಿ ಈ ಗುಡ್ಡ ಹತ್ತಿ ಬರುವುದು ಅಸಾಧ್ಯ. ಆದ್ದರಿಂದ ರಾತ್ರಿ ಊಟದ ನಂತರ ಆಕಾಶ ವೀಕ್ಷಣೆಯೊಂದೇ ದಿವೌÂಷಧ ಮನಸ್ಸಿಗೆ. ಆಗಾಗ ಅನಿಸುವುದುಂಟು, ಈ ಮೊಬೈಲ್‌ಗೆ ಫ್ಯಾಕ್ಟರಿ ರೀಸೆಟ್ ಕೊಟ್ಟು ಎಲ್ಲ ಕ್ಲಿಯರ್ ಮಾಡುವ ಹಾಗೆ ನಮ್ಮ ಮನಸ್ಸಿಗೂ ನಾವೇ ಒತ್ತುವ ಒಂದು ಬಟನ್ ಇದ್ದಿದ್ದರೆ ಅಂತ !
.
.
ಇಂದಿಗೆ ಆರು ತಿಂಗಳಾಯಿತು ಅವಳ ಭೇಟಿ ಮಾಡಿ. ಒಂದು ವರ್ಷದ ಹಿಂದೆ ಅಮ್ಮನಲ್ಲಿ ಹೇಳಿದಾಗ ತಕ್ಷಣ, “”ಬ್ರಾಹ್ಮಣರು ತಾನೇ?” ಎಂದಳು.
“”ಹೌದು” ಎಂದೆ.
“”ನೀನು ಇಷ್ಟಪಟ್ಟಮೇಲೆ ನಮ್ಮ ಮನೆಗೆ ಹೊಂದುವವಳೇ ಎನ್ನುವ ನಂಬಿಕೆಯಿದೆ” ಎಂದರು.
ಅಪ್ಪ-ಅಮ್ಮ ನಮ್ಮ ಮೂವರನ್ನು ಬೆಳೆಸಿದ್ದೇ ಹಾಗೆ. ಇಬ್ಬರು ಅಕ್ಕಂದಿರನ್ನು ಸಹ. ಅಪ್ಪ ಆಗಾಗ ತಮಾಷೆ ಮಾಡುತ್ತಿದ್ದರು ಅಕ್ಕಂದಿರಲ್ಲಿ. “”ಏಯ್, ನೀವು ಯಾರನ್ನಾದರೂ ಲವ್ ಮಾಡಿದ್ರೆ ನನ್ನತ್ರ ಹೇಳಿºಡ್ರಮ್ಮ, ಬೇರೆ ಯಾರೋ ಮೂರನೆಯವರು ಹೇಳ್ಳೋದ್ಕಿಂತ ಮೊದೆÉà ನಾನೇ ನಿಂತು ಮದ್ವೆ ಮಾಡುಸ್ತೀನಿ, ಸುಮ್ನೆ ಓಡ್ಹೊàಗ್ಬೇಡಿ” ಎಂದು ಹೇಳುತ್ತಿದ್ದರು. ಅಮ್ಮನೂ ಅಷ್ಟೆ , ಓದಿದ್ದು ಏಳನೇ ಕ್ಲಾಸಾದ್ರು ವೈಚಾರಿಕತೆಯಲ್ಲಿ ಹಿಂದಿರಲಿಲ್ಲ , ತುಂಬ ಪ್ರಾಕ್ಟಿಕಲ್ ಥಿಂಕಿಂಗ್. ಅಕ್ಕಂದಿರಿಗೆ ಮಡಿ-ಮೈಲಿಗೆ ಕಲಿಸದಿದ್ದರೂ ಬದುಕಿಗೆ ಬೇಕಾದ ಪಾಠಗಳನ್ನು ಚೆನ್ನಾಗಿ ಅರ್ಥ ಮಾಡಿಸಿದ್ದಳು.
ಎಲ್ಲ ಅಮ್ಮಂದಿರು ಮಗಳ ಬಾಣಂತನ ಮುಗ್ಸಿ ಬೀಳ್ಕೊಡುವಾಗ ಲೇಹ್ಯ, ಉಂಡೆ ಮಾತ್ರ ಕಟ್ಟಿ ಕಳಿಸಿದರೆ, ಇವಳು ಮಕ್ಕಳಿಗೆ ಹೇಳುವ ಇಪ್ಪತ್ತು ಹಾಡುಗಳ ಪಲ್ಲವಿ ಬರೆದು, “”ಇಟ್ಕೊà ಬೇಕಾಗತ್ತೆ ಈ ಹಾಡುಗಳು. ಎದ್ರಿಗೆ ಇಟ್ಕೊà ಈ ಹಾಳೆನ, ಶಿಶುಗಳ ಪ್ರಪಂಚಾನು ಸಮೃದ್ಧವಾಗಿರಬೇಕು” ಎಂದಿದ್ದಳು. ನನ್ನ ಅಕ್ಕನೋ ಇಂತಹದ್ದಕ್ಕೆಲ್ಲ ಸೋಮಾರಿ. ಅದ್ಯಾವುದೋ “ಮುದ್ದುಕೋಳಿ’ ಹಾಡು, ಆಮೇಲೆ “ಭಾರತ ರತ್ನವು ನೀನಾಗು’ ಎರಡೇ ಹಾಡಲ್ಲಿ ಎರಡು ಮಕ್ಕಳನ್ನ ದೊಡ್ಡ ಮಾಡಿ¨ªಾಳೆ.
ಎಲ್ಲ ಸರಾಗವಾಗಿ ನಡೆದುಕೊಂಡು ಹೋಗುತ್ತಿದ್ದ ಜೀವನದಲ್ಲಿ ಒಂದು ದಿನ ನನ್ನ ಹುಡುಗಿಯ ಪರಿಚಯವಾದದ್ದು- ಇÇÉೇ ಬೆಂಗಳೂರಿನÇÉೇ ಯೋಗ ಕ್ಲಾಸಲ್ಲಿ. ಆಕೆ ಇಂಜಿನಿಯರಿಂಗ್ ಆರನೇ ಸೆಮಿಸ್ಟರ್ ಓದುತ್ತಿದ್ದಳು. ತೀರ್ಥಹಳ್ಳಿ ಮೂಲ, ಅಪ್ಪ ಅÇÉೇ ಬಿಸಿನೆಸ್ ಮಾಡಿಕೊಂಡಿದ್ದರು. ತಮ್ಮ ಪಿಯುಸಿ ಓದುತ್ತಿ¨ªಾನೆ. ನಮ್ಮ ಹಾಗೆ ಮಧ್ಯಮ ವರ್ಗದ ಕುಟುಂಬ. ಇವಳದು ಒಂದು ರೀತಿಯ ಆಕರ್ಷಕ ವ್ಯಕ್ತಿತ್ವ . ಅಪ್ಪ ತಾನೆÇÉೋ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸಾಲ ಮಾಡ್ತೀನಿ ಅಂದ್ರೆ ಇವಳೇ ಹಠ ಹಿಡಿದು ಬ್ಯಾಂಕ್‌ನಲ್ಲಿ ಎಜುಕೇಶನ್ ಲೋನ್ ಮಾಡಿ ಇಂಜಿನಿಯರಿಂಗ್ ಸೇರಿದ್ಲಂತೆ. ಈ ಹರೆಯದ ಹುಡುಗಿಯರು ಯೋಗ ಕ್ಲಾಸ್‌ಗೆ ಬಂದರೆ ಏನೋ ಒಂದು ರೀತಿಯ ಕುತೂಹಲ ಹುಡುಗರಿಗೆ. ಅವರಿಗೂ ಹಾಗೇನೋ? ಈ ಹುಡುಗ ಜಿಮ್ ಏರೋಬಿಕ್ಸ್ ಎಲ್ಲ ಬಿಟ್ಟು ಯೋಗ ಕ್ಲಾಸ್‌ಗೆ ಬಂದಿ¨ªಾನಲ್ವಾ ಅಂತ. ಮೊದಲಾದರೆ ಯಾವುದೋ ದೀರ್ಘ ಕಾಲದ ಕಾಯಿಲೆ ಇರಬೇಕು ಅಂದುಕೊಳ್ಳುತ್ತಿದ್ದರು. ಆದರೆ ಈಗ ಪ್ರಧಾನ ಮಂತ್ರಿಗಳು ಅಂತಾರಾಷ್ಟ್ರೀಯ ಯೋಗ ದಿನ ಘೋಷಿಸಿರುವುದರಿಂದ ಎಲ್ಲ ವಯಸ್ಸಿನವರು ಧೈರ್ಯವಾಗಿ ಕ್ಲಾಸ್‌ಗೆ ಹೋಗಬಹುದು.
ಯೋಗ ಕ್ಲಾಸಿನÇÉಾದ ಪರಿಚಯ ವೀಕೆಂಡ್ ಈ ಗುಡ್ಡದ ಮೇಲೆ ಭೇಟಿಯಾಗುವಷ್ಟು ಮೆಚೂರ್ಡ್ ಲವ್ ರೂಪ ತಾಳಿತು. ಗಿರಿನಗರದ ಹಾಸ್ಟೆಲ್‌ನಿಂದ ನಡೆದೇ ಬರುತ್ತಿದ್ದ ಆಕೆ ಗುಡ್ಡದ ಹತ್ತಿರ ನನಗಾಗಿ ಕಾಯುತ್ತಿದ್ದಳು- ಐದು ನಿಮಿಷ ಮೊದಲೇ ಬಂದು. ಮೊದಲಾದರೆ ಇಲ್ಲಿ ಹತ್ತಲು ಮೆಟ್ಟಿಲುಗಳಿರಲಿಲ್ಲ. ಆ ಕಡಿದಾದ ಹಾದಿಯಲ್ಲಿ ಆಕೆಯ ಕೈಹಿಡಿದು ಸಾಗುವುದೇ ಒಂದು ಮಜವಾಗಿತ್ತು. ಈಗ ಅದ್ಯಾವುದೋ ದೇವಸ್ಥಾನದವರು ಮೆಟ್ಟಿಲು ನಿರ್ಮಿಸಿ¨ªಾರೆ. ಹಾಗಾಗಿ, ಕೆಲವು ಭಕ್ತರಿಂದ ನಮ್ಮಂಥವರ ಪ್ರೈವೇಸಿಗೆ ಅಡ್ಡಿ-ಆತಂಕಗಳು!
.
.
ಈಗಲೂ ಪ್ರತಿಯೊಂದು ಸಂಭಾಷಣೆಗಳೂ ಹೋದ ವಾರ¨ªೆಂಬಂತೆ ಹಚØಹಸಿರಾಗಿದೆ.
“”ನನ್ನ ಇಂಜಿನಿಯರಿಂಗ್ ಮುಗಿದು ನನಗೆ ಜಾಬ್ ಸಿಕ್ಕಿದ ಮೇಲಷ್ಟೇ ನಮ್ಮ ಮದುವೆ, ಈಗ್ಲೆ ಕನಸು ಕಾಣಬೇಡ”
“”ಓಹೋ ನಾನಾ ಮದ್ವೆ ಕನಸು ಕಾಣೋದು, ಮದ್ವೆ ಬೇಗ ಆಗಿºಟ್ರೆ ತುಂಬಾ ಕಮಿಟ್‌ಮೆಂಟ್ಸ್ , ಹೀಗೆ ಒಂದೆರಡು ವರ್ಷ ಆರಾಮಾಗಿ ಇರೋಣ ಕಣೆ. ಪ್ರಪಂಚದಲ್ಲಿ ಅತ್ಯಂತ ಸುಖೀಗಳು ಪ್ರೇಮಿಗಳಂತೆ”
“”ಅದು ನಮ್ಮಂಥ ಫ್ಯಾಮಿಲಿ ಸಪೋರ್ಟ್ ಇರೋ ಪ್ರೇಮಿಗಳಿಗೆ ಮಾತ್ರ ತಿಳ್ಕೊà, ನನ್ನ ಹಾಸ್ಟೆಲ್ ಫ್ರೆಂಡ್ಸ್ ಎಷ್ಟೊಂದು ಜನ ಕದ್ದುಮುಚ್ಚಿ ಓಡಾಡ್ತಾರೆ ಗೊತ್ತ! ಬಾಯ್‌ಫ್ರೆಂಡ್ಸ್ ಜೊತೆ ಬೈಕ್‌ನಲ್ಲಿ ? ಈಗಂತೂ ಹೆಲ್ಮೆಟ್ ಕಡ್ಡಾಯ ಮಾಡಿರೋದು ಇವ್ರಿಗೆ ತುಂಬಾ ಖುಷಿಯಾಗಿದೆ, ತಲೆಗೆ ಹೆಲ್ಮೆಟ್ ಮುಖಕ್ಕೆ ಎರಡೆಳೆ ವೇಲ್ ಸುತ್ಕೊàತಾರೆ, ಗಾಳಿಗೋ ಗಾಳಿ ಮಾತಿಗೋ ಗೊತ್ತಿಲ್ಲ. ನಮ್ಮಿಬ್ಬರದೇ ಎಕಾನಮಿ ರೋಮಾನ್ಸ್ ನೋಡು, ಮಾಲ್, ಸಿನೆಮಾ ಸುತ್ತಾಟ ಇಲ್ಲ, ಅದು ಕೊಡುÕ, ಇದು ಕೊಡುÕ ಅನ್ನಲ್ಲ ನಾನು, ಇದೊಂದೇ ಗುಡ್ಡ ಸಾಕು ಪ್ರತಿವಾರ ಮಾತಾಡೋಕೆ”
“”ಈ ಪ್ರಕೃತಿನೇ ಹಾಗೆ ಕಣೆ, ಅದು ಆಕರ್ಷಿಸೋದು ಕೆಲವರನ್ನ ಮಾತ್ರ”
ನನ್ನತ್ರ ಮದುವೆ ಕನಸು ಕಾಣಬೇಡ ಎಂದವಳು ಮಗುವಿನ ಹೆಸರಿನ ಬಗ್ಗೆ ಮಾತಾಡುತ್ತಿದ್ದಳು. “”ನಮ್ಮ ಮಗುವಿನ ಹೆಸರು ನಮ್ಮಿಬ್ಬರ ಹೆಸರಿನ ಅಕ್ಷರಗಳಿಂದಲೇ ಉದ್ಭವವಾಗಬೇಕು, ಬೇರೆ ಯಾವ ಹೆಸರನ್ನು ನಾನು ಒಪ್ಪಲ್ಲ , ಪ್ರ ತೀ ಕ ಕ ವಿ ತ. ಈ ಅಕ್ಷರಗಳನ್ನು ಕೊಟ್ಟು ಬರುವ ಕಾಂಬಿನೇಶನ್‌ಗಳನ್ನೆಲ್ಲ ನೋಡು”
“”ಹೋಯ…, ಅರ್ಥವೂ ಇರಬೇಕು, ಸುಮ್ನೆ ಮಾಂಸದ ಮು¨ªೆಗೆ ಹೆಸರಿಟ್ಟ ಹಾಗೆ ಆಗ್ಬಾರ್ದು ಒಟ್ಟಾರೆ ಅಕ್ಷರ ಕೂಡಿÕ . ಮೊನ್ನೆ ನಮ್ ಅಕ್ಕನ ನಾಲ್ಕು ವರ್ಷದ ಮಗನಿಗೆ ಒಂದು ಹೋಮ್‌ವರ್ಕ್ ಕೊಟ್ಟಿದ್ರಂತೆ, Write the meaning of your name ಅಂತ. ನಮ್ಮಕ್ಕ ಫೋನ್‌ನಲ್ಲಿ ಹೇಳ್ತಿದುÉ”
.
.
ಅಯ್ಯೋ ಅಕ್ಕನ ಫೋನ್! ಆ ಕಡೆಯಿಂದ ಕ್ಷೇಮ ಸಮಾಚಾರ ಎಲ್ಲ ವಿಚಾರಿಸಿ ಮತ್ತದೇ ರಾಗ- “ಪ್ರತೀಕ, ಇನ್ನೆಷ್ಟು ದಿನ ಕಾಯುವುದೋ ಅವಳಿಗೆ? ಸ್ವಲ್ಪ ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡು, ಅವಳಿಗೆ ಟ್ರೈನಿಂಗ್ ಮುಗುª ಪೋಸ್ಟಿಂಗ್ ಆಗಿ ಟ್ರಾನ್ಸ್‌ಫಾರ್ ಸಿಗೋವರೆಗೂ ಕಡಿಮೆ ಅಂದ್ರೂ ಐದಾರು ವರ್ಷ ಆಗಬಹುದು. ನೀನು ವೀಕೆಂಡ್ ಫ್ರೀ ಇರ್ತೀಯ ಮಾತಾಡೋಣ ಅಂತ ಮಾಡಿದೆ’ ಎಂದಳು. ಮುಗುಳ್ನಗೆ, ಮೌನ ಎರಡೇ ನನ್ನ ಉತ್ತರ.
ಕಲಿತು ಮುಗಿದ ಬಳಿಕ ಕವಿತಾಳ ಕೆಲಸದ ಬಗ್ಗೆ ಮಾತಾಡಿದರೆ ನನಗೇ ಧೈರ್ಯ ತುಂಬೋಳು ನನ್ನಕ್ಕ. “ನೀನು ವಿಜಯದಶಮಿ ದಿನ ಹುಟ್ಟಿದ್ದಿ ಗೊತ್ತಾ? ನಿನಗೆ ಯಾವತ್ತೂ ಜಯವೇ’
ಅವಳ ಮಾತಿನ ಆತ್ಮವಿಶ್ವಾಸ ನನ್ನನ್ನು ಎತ್ತರಕ್ಕೇರಿಸಿತ್ತು. ಒಂದೇ ಗುಂಡಿಗೆ ನೂರಾರು ಪಾಕ್ ಸೈನಿಕರನ್ನ ಬಗ್ಗುಬಡಿದ ಅನುಭವವಾಗಿತ್ತು.
ಲಾಸ್ಟ್ ಸೆಮಿಸ್ಟರ್‌ನಲ್ಲಿದ್ದಳು. ಇನ್ನೇನು ಇಂಜಿನಿಯರಿಂಗ್ ಮುಗಿಯತ್ತೆ. ಕ್ಯಾಂಪಸ್ ಸೆಲೆಕ್ಷನ್ ಆಗಿ ಒಂದು ವರ್ಷ ಜಾಬ್ ಮಾಡಿ ನೆಕ್ಸ್ಟ್ ಮದ್ವೆ ಅಂತೆಲ್ಲ ಪ್ಲಾನ್ ಮಾಡ್ತಿರೋವಾಗ್ಲೆ ಒಂದು ದಿನ ಶಾಕ್ ! ಅವಳು Indian Air Force ಸೆಲೆಕ್ಷನ್‌ಗೆ ಎಕ್ಸಾಮ್ ಬರೆದಿದಾಳಂತೆ, ಸೆಲೆಕ್ಷನ್ ಆಗಿದೆಯಂತೆ, ಸೆಕೆಂಡ್ ರೌಂಡ್‌ನಲ್ಲೂ ಟಾಪ್ ಇದಾಳಂತೆ. ಹೈದರಾಬಾದ್‌ನಲ್ಲಿ ಟ್ರೈನಿಂಗ್ ಅಂತೆ ಆರು ತಿಂಗಳು, ಆಮೇಲೆ ಒಂದು ವರ್ಷ ಮೈಸೂರ್‌ನಲ್ಲಂತೆ ಟ್ರೈನಿಂಗ್. ಟ್ರೈನಿಂಗ್ ಪೀರಿಯಡ್‌ನಲ್ಲಿ ಮೊಬೈಲ್ ಬಳಸೋ ಹಾಗಿಲ್ವಂತೆ, ಈ ಎÇÉಾ ಅಂತೆಗಳನ್ನು ಕೇಳಿ ಕುಳಿತಿರುವ ಗುಡ್ಡ ಎಲ್ಲ ಸಂಪರ್ಕ ಕಡಿದುಕೊಂಡು ದ್ವೀಪವಾದಂತೆ ಭಾಸವಾಯಿತು ನನಗೆ. ಅವಳು ಎಲ್ಲ ವರದಿ ಒಪ್ಪಿಸುತ್ತಿದ್ದಂತೆ ತಲೆ ಎಲ್ಲ “ಗಿರ್ರ’ ಎಂದಿತು. ಯಾರು ಪ್ರೇರಣೆ ಈ ಹುಡುಗಿಗೆ ಸೈನ್ಯ ಸೇರೋಕೆ, ಇವಳೇನು ಕೊಡಗು ಮೂಲದವಳೇನಲ್ಲ , ಇವರ ಫ್ಯಾಮಿಲಿಯಲ್ಲೂ ಯಾರು ಮಿಲಿಟರಿಯಲ್ಲಿಲ್ಲ, ಈ ಬ್ರಾಹ್ಮಣ ಹುಡುಗಿ ಏರ್‌ಫೋರ್ಸ್ ಸೇರೋದು ಅಂದ್ರೆ! ತಲೆಯೆಲ್ಲ ಕಲಸುಮೇಲೋಗರ. ಬಹುಶಃ ಕಾಲೇಜು ದಿನಗಳ ಎನ್‌ಸಿಸಿ ಬ್ಯಾಕ್‌ಗ್ರೌಂಡ್ ಇರಬೇಕು. ಇವಳ ಎನ್‌ಸಿಸಿ ಆಫೀಸರ್ ಮೈಕಟ್ಟು, ಕಮಾಂಡ್ ಕೊಡುವ ರೀತಿ ನೋಡಿ, “ನೀನು ಸೈನ್ಯ ಸೇರಬೇಕಮ್ಮ’ ಅಂತಿದ್ರಂತೆ.
.
.
“”ನೀನು ಯಾಕೆ ನನ್ಹತ್ರ ಹೇಳಲೇ ಇಲ್ಲ? ಏರ್‌ಫೋìರ್ಸ್ ಸೆಲೆಕ್ಷನ್‌ಗೆ ಎಕ್ಸಾಮ್ ಬರಿªದೀನಿ” ಅಂತ ನಾನು ಕೇಳಿದೆ.
“”ನಾನೇನಾದ್ರು ಸಿಲೆಕ್ಟ್ ಆಗಿಲ್ಲ ಅಂದ್ರೆ ನನಗೇ ನನ್ನಲ್ಲಿ ಆತ್ಮವಿಶ್ವಾಸ ಹೋಗಿºಡ್ತಿತ್ತು. ಅದಕ್ಕೆ ಸೆಲೆಕ್ಟ್ ಆದ್ಮೇಲೆ ಹೇಳ್ತಿರೋದು. ನಿನಗೆ ಅನ್ನಿಸಬಹುದು, ಇÇÉೇ ಯಾವಾªದ್ರೂ ಕಂಪೆನಿಯಲ್ಲಿ ಕ್ಯಾಂಪಸ್ ಸೆಲೆಕ್ಷನ್ ಆಗ್ತಿತ್ತು, ಯಾಕೆ ಈ ಏರ್‌ಫೋರ್ಸ್ ಅಂತ. ನಾನು ಸೈನ್ಸ್ ಸ್ಟೂಡೆಂಟ್ ಆಗಿದ್ರೂ ಪಿಯುಸಿಯಲ್ಲಿ ಎನ್‌ಸಿಸಿ ಸೇರಿ¨ªೆ. ಆ ಎನ್‌ಸಿಸಿ ಸೇರೋಕ್ಕೆ ಪ್ರೇರಣೆ ಅಂದ್ರೆ ಸ್ಕೂಲ್‌ಡೇಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಆಕ್ಟಿವಿಟೀಸ್. ಇದರ ಜೊತೆ ನನಗೆ ಮೊದಲಿನಿಂದಲೂ ಸಾಹಿತ್ಯ ಓದೋ ಅಭ್ಯಾಸ ತುಂಬಾ ಇತ್ತು. ಬಹುಶಃ ಇದಕ್ಕೆ ನಮ್ಮಮ್ಮ ಕಾರಣ ಇರಬಹುದು. ತಾನು ಕನ್ನಡ ಎಂಎ ಮಾಡಿ ಲೆಕ್ಚರರ್ ಆಗ್ಬೇಕು ಅಂತ ತುಂಬಾ ಆಸೆ ಇಟ್ಕೊಂಡಿದÛಂತೆ. ಆದ್ರೆ ತಾತ ಬೇಗ ಮದ್ವೆ ಮಾಡಿºಟ್ರಾ. ಅವ್ಳು ಎಷ್ಟೊಂದು ಕಾದಂಬರಿಯ ಪಾತ್ರಗಳ ಚಿಕ್ಕ ಚೊಕ್ಕ ವಿಮರ್ಶೆಗಳನ್ನು ಒಟ್ಟು ಹಾಕಿ¨ªಾಳೆ ಪುಟ್ಟ ಪುಸ್ತಕದಲ್ಲಿ. ನಾನು ಆ ಕೆಲವು ಪಾತ್ರಗಳಿಂದಲೇ ಪ್ರಭಾವಿತಳಾಗಿ¨ªೆ. ನಾನು ಪೈಲಟ್ ಅಥವಾ ಫ್ಲೈಯಿಂಗ್ ಆಫೀಸರ್ ಆಗದಿದ್ದರೂ ಉನ್ನತ ಪ್ರತಿಷ್ಠಿತ ಹು¨ªೆ ಏರದಿದ್ದರೂ ನನ್ನ ವಿದ್ಯಾರ್ಹತೆಗೆ ತಕ್ಕಂಥ ಚಾನ್ಸ್ ಸಿಕ್ಕರೆ ಬಿಡ್ಲೆàಬಾರದು ಅಂತಿ¨ªೆ. ಇದಕ್ಕೆ ಅಪ್ಪ-ಅಮ್ಮ ಬೇಡ ಅಂದ್ರು ಅನೇಕ ನಿದರ್ಶನಗಳನ್ನು ಕೊಟ್ಟು ಒಪ್ಸಿದೀನಿ. ಎಂಥ ಜಟಿಲ ಸನ್ನಿವೇಶವನ್ನು ಅಪಾರ ಎದೆಗಾರಿಕೆಯಿಂದ ಎದ್ರುಸ್ತಾರಲ್ವ , ಕೆಲವು ಮಹಿಳೆಯರು, ಅದರಲ್ಲಿ ಕೆಲವರ ಆತ್ಮಚರಿತ್ರೆ ಕಥೆಗಳನ್ನೆÇÉಾ ಓದಿದೀನಿ. ಬಹುಶಃ ಇದೇ ನನ್ ಲೈಫ್ನ ಟರ್ನಿಂಗ್ ಪಾಯಿಂಟ್”
“”ಹುಂ… ಆಯ್ತಾ ಮೇಡಂ ಮುಗೀತಾ?” ಅಂತ ತಮಾಷೆ ಮಾಡೆª ಆವೊತ್ತು. ಆದ್ರೆ ವೀರ ಶಿರೋಮಣಿ, ಧೀಮಂತ ನಾಯಕಿ, ದೇಶಪ್ರೇಮಿ ಧೀರೋದ್ಧಾತ್ತ ಮಹಿಳೆ, ಅಮರತ್ಯಾಗ- ಹೀಗೆ ಏನೇನೊ ದೊಡ್ಡ ಶಬ್ದಗಳೆಲ್ಲ ಅವಳ ಹೆಸರಿನೊಂದಿಗೆ ತಳುಕಿ ಹಾಕಿಕೊಂಡವು.
ಎಲ್ಲರಿಗೂ ಬೇರೆಯವರ ಮನೆ ಮಕ್ಳು ಸೈನ್ಯ ಸೇರಬೇಕು ಅಂತ ಆಸೆ, ನಮ್ಮ ಹತ್ತಿರದವರು ಈ ತೀರ್ಮಾನ ತೆಗೆದುಕೊಂಡರೆ ಜೀರ್ಣ ಮಾಡಿಕೊಳ್ಳೋದು ಕಷ್ಟ. ದೇಶ ಕಾಯೋ ಸೈನಿಕರು ವೀರ ಮರಣವನ್ನಪ್ಪಿ ಟಿವಿಯಲ್ಲಿ ಅವರಿಗೆ ಸಲ್ಲಬೇಕಾದ ಅಂತಿಮ ನಮನದ ನೇರಪ್ರಸಾರ ಬರುತ್ತಿದ್ದರೆ, ಅವರ ಹೆಂಡತಿಯರ ಮನೋಸ್ಥೈರ್ಯದ ಬಗ್ಗೆ ಯೋಚನೆ ಮಾಡೋದೇ ಇಲ್ಲ. ಧಾರಾವಾಹಿಯ ಹೀರೋ ಅವನ ಹೆಂಡತಿಯನ್ನು ಯಾಕೆ ಬಿಟ್ಟ ಅಂತ ಆಕೆಯ ಮನಃಸ್ಥಿತಿಯನ್ನು ನೆನೆದು ಸೆರಗಲ್ಲಿ ಕಣ್ಣು ಒರೆಸುತ್ತಾರೆ.
ಹೈದರಾಬಾದ್‌ನಲ್ಲಿ ಆರು ತಿಂಗಳು ಟ್ರೈನಿಂಗ್ ಮುಗಿಸಿ ಬಂದಿದ್ದಳು, “”ನೆಕ್ಸ್ಟ್ ಮೈಸೂರಿನಲ್ಲಿ ಟ್ರೈನಿಂಗ್ ಮುಗಿದ ಮೇಲೆ ನಾನು ಇÇÉೇ ಬೆಳಗಾಂ ಅಥವಾ ಬೆಂಗಳೂರು ಪೋಸ್ಟಿಂಗ್ ಕೇಳ್ತೀನಿ ಬಿಡು. ಆಲ್ ಓವರ್ ಇಂಡಿಯಾ ಎಷ್ಟೊಂದು ಕಡೆ ಇದೆ ಗೊತ್ತ ಏರ್‌ಫೋರ್ಸ್ ಆಫೀಸಸ್, ಎಲ್ಲ ಮಿಲಿಟರಿ ಅಂದ್ರೆ ಜಮ್ಮು ಗಡಿ ಮಾತ್ರ ಅನ್ಕೊಂಡು ಭಯ ಬೀಳ್ತಾರೆ. ಆದ್ರೆ ನಾನೂ ಅದಕ್ಕೂ ರೆಡಿ ಇದೀನಿ. ನಿನ್ನದೊಂದೇ ಯೋಚನೆ ನನಗೀಗ, ನನ್ ಬಿಟ್ಟು ಹೇಗಿರ್ತೀಯ ಅಂತ. ನೀನು ಏನು ಯೋಚನೆ ಮಾಡಬೇಡ ನಿನ್ನ ಜಾಬ್ ಬಗ್ಗೆ ಕಾನ್ಸಟ್ರೇಟ್ ಮಾಡು” ಅಂದಿದುÉ.
“”ಅಲ್ಲಿ ದೂರದಲ್ಲಿ ಒಂದು ತುಂಬಾ ಎತ್ತರದ ಮೊಬೈಲ್ ಟವರ್ ಕಾಣಾ¤ ಇದೆಯಲ್ವಾ, ಬಹುಶಃ ಕೆಂಗೇರಿ ಇರಬಹುದು ಅದು, ಅದ್ರಲ್ಲಿ ಎಷ್ಟು ಪ್ರೇಮಿಗಳ ಸಂಭಾಷಣೆ ವಿನಿಮಯ ಆಗ್ತಿರಬಹುದು ಹೇಳು” ಅಂದುÉ. “”ನೂರೋ ಸಾವಿರಾನೋ” ಅಂದೆ. ಯಾವುದರಲ್ಲಿಯೂ ಮನಸ್ಸು ಇರಲಿಲ್ಲ. ಹಾಗೇ ಕತ್ತಲಾಗಿ ಹೋಯಿತು. ಇವತ್ತು ಕತ್ತಲಾಗುತ್ತಿದೆ, ಈಗ ನಾನು ಒಂಟಿ, ನಿಸಾರ್ ಅಹಮದ್‌ರ ಸಾಲುಗಳು ನೆನಪಾಗುತ್ತಿವೆ, ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ…
ಮತ್ತದೇ ಗೊಂದಲ, “ನನುØಡುಗಿ ನನಗಾ? ದೇಶಕ್ಕಾ?’
ಮನಸ್ಸಿಗೆ ಫ್ಯಾಕ್ಟರಿ ರೀಸೆಟ್ ಕೊಟ್ಟುಬಿಡಲಾ? ಅದು ಸಾಧ್ಯವಾ ನನ್ನಿಂದ?
ದೇಶಸೇವೆಗೆ ಹೊರಟವರನ್ನು ಅಡ್ಡಿಪಡಿಸಿದರೆ ಭಾರತಾಂಬೆಯ ಶಾಪ ತಟ್ಟಬಹುದು! ಕಾಯುತ್ತೇನೆ ನನ್ನವಳನ್ನು ; ಅವಳು ದೇಶ ಕಾಯಲಿ.
– ವಿದ್ಯಾ ಹೊಸಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.