ಕತೆ: ಬಳೆ


Team Udayavani, Nov 17, 2019, 4:13 AM IST

nn-7

ನಿಶ್ಮಿತಾ, ನಿನ್ನನ್ನು ತುಂಬಾ ಎಣಿಸ್ತಾ ಇದ್ದೇನೆ. ಯಾವಾಗ ಬರ್ತೀಯಾ?”
“”ಯಾವ ಪುರುಷಾರ್ಥಕ್ಕೆ ಬರ್ಬೇಕು ನಾನು?”
“”ಹಾಗಂದ್ರೆ ಹೇಗೆ ಮಗಾ? ನಂಗೆ ನಿನ್ನನ್ನು ಮತ್ತು ನಿಖೀತಾಳನ್ನು ಬಿಟ್ಟು ಬೇರೆ ಯಾರು ಇದ್ದಾರೆ ಹೇಳು?”
“”ಅಮ್ಮ, ಬೋಗಾರ್‌ ದುಃಖದ (ಅಂತರಂಗಪೂರ್ವಕ ಅಲ್ಲದ ದುಃಖ) ಮಾತು ಬೇಡ. ನಿನ್ನ ಬಳೆ ನಂಗಾ ಅಥವಾ ಅಕ್ಕನಿಗಾ ಅಂತ ಮೊದಲು ಡಿಸೈಡ್‌ ಆಗ್ಬೇಕು, ಇವತ್ತು ಕೊಡ್ತೇನೆ ನಾಳೆ ಕೊಡ್ತೇನೆ ಅಂತ ಮಂಗವೇ ಮಾಡಿದ್ದು ನೀನು. ಅಲ್ಲ, ಅದನ್ನು ಪುದುಂಗಿಸಿ (ಅವಿತು) ಇಟ್ಟು ಎಂತ ಮಾಡ್ತೀ? ಮೊದಲು ಅದ್ರದ್ದು ಡಿಸೈಡ್‌ ಮಾಡು. ಆ ನಂತರ ಉಳಿದ ವಿಷಯ ಎಲ್ಲ ಮಾತಾಡು”

“”ಅಲ್ಲ ಮಾರಾಯ್ತಿ, ಇದ್ದದ್ದು ಒಂದು ಸಣ್ಣ ಮನೆ, ಒಂಚೂರು ತೋಟ ಎಲ್ಲ ಮಾರಿ ನಿಂಗೆ ಮತ್ತು ನಿಖೀತಾನಿಗೆ ಸಮಾ ಪಾಲು ಮಾಡಿ ಕೊಟ್ಟಿದ್ದೇನೆ. ಇನ್ನು ಕೆಜಿಐಡಿದ್ದು ಹಣ ನಿಮ್ಮ ಮಕ್ಕಳ ಹೆಸರಿಗೆ ಮಾಡಿದ್ದೇನೆ. ಬರುವ ಪೆನ್ಸ್ ನ್‌ ಹಣ ನಂಗೆ ಅಲ್ಲಿಂದ ಅಲ್ಲಿಗೆ ಆಗ್ತದೆ. ಇಷ್ಟೆಲ್ಲ ಸಮಾ ಮಾಡಿ ಹಂಚಿದ್ದೇನೆ. ಆದ್ರೂ ನಂಗೆ ನೆಮ್ಮದಿ ಕೊಡೂದಿಲ್ವಾ ನೀನು?”
“”ನೋಡು, ಅದೆಲ್ಲ ನಂಗೆ ಗೊತ್ತಿಲ್ಲ. ನಿನ್ನ ಹತ್ತಿರ ಇರುವ ಬಳೆ ನಂಗೇ ಕೊಡ್ತಿ ಅಂತ ಖಾತ್ರಿ ಆಗ್ಬೇಕು. ಆಗ ಮಾತ್ರ ನಾನು ಬರುವವಳು”.

“”ಆಯ್ತು ಮಾರಾಯ್ತಿ, ಹಾಗೇ ಮಾಡುವ. ಒಂದು ನಿಂಗೆ. ಇನ್ನೊಂದು ಅಕ್ಕನಿಗೆ ಅಂತ ಹಂಚಿ ಕೊಡ್ತೇನೆ”.
“”ನೋಡು ಇದೇ ಬೇಡ ಅಂತ ನಾನು ಹೇಳ್ತಾ ಇರೂದು. ಆ ಒಂದು ಜೊತೆ ನಂಗೇ ಬೇಕು”.
“”ಆಯ್ತು ಮಾರಾಯ್ತಿ, ನಿಂಗೇ ಕೊಡ್ತೇನೆ. ಒಂದು ಸರ್ತಿ ಬಂದು ಹೋಗು”
“”ಸದ್ಯ ನಂಗೆ ಬರ್ಲಿಕ್ಕೆ ಟೈಮ್‌ ಇಲ್ಲ. ನೆಕ್ಸ್‌ಟ್‌ ಮಂತ್‌ ಮದರ್ ಡೇಗೆ ಒಂದು ಪ್ರೋಗ್ರಾಮ್‌ ಮಾಡ್ತಾ ಇದ್ದೇವೆ, ನಮ್‌ ಅಸೋಸಿಯೇಷನ್‌ನಿಂದ. ಅಮ್ಮಂದಿರನ್ನು ಹೇಗೆ ನೋಡಿಕೊಳ್ಬೇಕು ಅನ್ನುವ ಬಗ್ಗೆ. ಅದ್ರ ತಯಾರಿ ಎಲ್ಲ ಒಂದು ಹಂತಕ್ಕೆ ಬಂದ ನಂತ್ರ ಬರ್ತೇನೆ. ಈಗ ಫೋನ್‌ ಇಡು. ಪದೇ ಪದೇ ನಂಗೆ ಫೋನ್‌ ಮಾಡಿ ಯಾವಾಗ ಬರ್ತೀ ಯಾವಾಗ ಬರ್ತೀ ಅಂತ ಚೊರೆ (ಕಿರಿಕಿರಿ) ಮಾಡ್ಬೇಡ”

ಫೋನ್‌ ಕಟ್ಟಾದ ನಂತ್ರ ಎಂತಕ್ಕೇಂತ ಗೊತ್ತಿಲ್ಲ, ಸರಸ್ವತಿ ಟೀಚರ್‌ ನ ಕಣ್ಣುಗಳಿಂದ ದಳದಳಾಂತ ನೀರು ಬಂತು. ಮಗಳಿಂದ ಕೇಳಿದ ಮಾತೇನೂ ಆವತ್ತಿನದು ಹೊಸತಲ್ಲ, ಆದ್ರೆ ಆವತ್ತು ಯಾಕೋ ಕೂಗ್ಲಿಕ್ಕೆ (ಅಳುವುದಕ್ಕೆ) ಬಂತು.
.
ಸರಸ್ವತೀ ಟೀಚರ್‌ ಊರಿನ ವಾಗ್ದೇವಿ ಹೈಸ್ಕೂಲಿನ ಹೆಡ್‌ ಟೀಚರ್‌ ಆಗಿ ಹನ್ನೆರಡು ವರ್ಷಗಳ ಹಿಂದೆ ರಿಟೈರ್‌ ಆಗಿದ್ದವರು. ವಾಗ್ದೇವಿ ಹೈಸ್ಕೂಲ್‌ ಅಂದ್ರೆ ಸರಸ್ವತೀ ಟೀಚರ್‌ ಅಂತ ಫೇಮಸ್‌ ಆಗಿತ್ತು ಊರಲ್ಲೆಲ್ಲ. ಮಕ್ಕಳ ಮೇಲೆ ಅಷ್ಟು ಮೋಕೆ (ಪ್ರೀ ತಿ) ಅವ್ರಿಗೆ. ಯಾರಿಗೇ ಆಗ್ಲಿ ದುಡ್ಡಿಲ್ಲ ಅಂತ ಗೊತ್ತಾದ್ರೆ ತಾವೇ ಆ ವಿದ್ಯಾರ್ಥಿಯ ಫೀಸು ತುಂಬಿ ಯೂನಿಫಾರ್ಮ್-ಚಪ್ಪಲಿ ಎಲ್ಲ ಕೊಡಿಸಿ ಓದಿಸ್ತಾ ಇದ್ರು. ಶಾಲೆಯಲ್ಲಿ ಒಳ್ಳೆಯ ಒಂದು ತೋಟ ಮಾಡಿಸಿ ಅದರಲ್ಲಿ ಬೆಳೆದ ತರಕಾರಿಯನ್ನೇ ಉಪಯೋಗಿಸಿ ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆ ಮಾಡಿಸಿದ್ದರು. ಅದರಿಂದಾಗಿ ವಾಗ್ದೇವಿ ಶಾಲೆ ಕಂಡಾಬಟ್ಟೆ ಫೇಮಸ್‌ ಆಗಿತ್ತು. ಕನ್ನಡ ಮೀಡಿಯಂ ಆಗಿದ್ರೂ ಕೂಡ ಆ ಕಾಲದಲ್ಲಿ ಸೀಟು ಸಿಗ್ಬೇಕೂಂತಾದ್ರೆ ಯಾರು ಯಾರಧ್ದೋ ಕೈಕಾಲು ಹಿಡೀಬೇಕಾಗ್ತಿತ್ತು. ಸರಸ್ವತೀ ಟೀಚರ್‌ ಪಾಠ ಮಾಡ್ತಾ ಇದ್ದದ್ದು ಗಣಿತ, ವಿಜ್ಞಾನ. ಯಾರಾದ್ರೂ ಟೀಚರ್‌ಗಳು ರಜೆ ಮಾಡಿದ್ರೆ ಇವರು ಅವರ ಪೀರಿಯೆಡ್‌ನ‌ೂ° ತೆಕ್ಕೊಳ್ತಿದ್ರು. ಕನ್ನಡ-ಸಮಾಜ-ಇಂಗ್ಲಿಷ್‌ ಯಾವುದಾದ್ರೂ ಸೈಯೆ. ಒಟ್ರಾಶಿ (ಒಟ್ಟಾರೆಯಾಗಿ) ಮಕ್ಕಳು ಸುಮ್ಮನೆ ಕೂತುಕೊಳ್ಳಿಕ್ಕೆ ಇಲ್ಲ. ತಾವು ರಿಟೈರಾಗುವ ಮೊದಲು ಶಾಲೆಗೆ ಒಂದು ರಂಗಮಂದಿರ ಕಟ್ಟಿಸ್ಬೇಕು ಅಂತ ಭಾಳ ದಿನದಿಂದ ಎಣಿಸ್ತಾ ಇದ್ರು. ಅವರಿಗೆ ನಾಟಕ ಆಟ ಅಂದ್ರೆಲ್ಲ ಭಾರಿ ಇಷ್ಟ, ಪ್ರತೀವರ್ಷ ಶಾಲಾ ವಾರ್ಷಿಕೋತ್ಸವಕ್ಕೆ ನಾಟಕ ಮಾಡಿಸ್ತಿದ್ರು. ಸರಿಯಾದ ರಂಗಮಂದಿರ ಇಲ್ಲದೇ ಅದರ ಪ್ರದರ್ಶನಕ್ಕೆ ಕಂಡಾಬಟ್ಟೆ ತೊಂದರೆ ಆಗ್ತಿತ್ತು. ಹಾಗಾಗಿ, ರಂಗಮಂದಿರ ಕಟ್ಟಿಸ್ಬೇಕು ಅಂತ ಎಣಿಸ್ತಾ ಇದ್ರು. ಆದ್ರೆ ಎಂತೆಂಥದೋ ತೊಂದರೆಯಿಂದ ಅದು ಆಗಲೇ ಇಲ್ಲ. ಮಾತ್ರವಲ್ಲ ಟೀಚರ್‌ನ ರಿಟೈರ್‌ವೆುಂಟಿಗೆ ಮೂರು-ನಾಕು ವರ್ಷ ಉಂಟು ಅನ್ನುವಾಗ ಶಾಲೆಯ ಪ್ರಸಿದ್ಧಿ ಕಮ್ಮಿಯಾಗ್ತಾ ಬಂತು. ಮುನ್ನೂರೈವತ್ತರಿಂದ ನಾನ್ನೂರರ ತನಕ ಇದ್ದ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ನೂರಕ್ಕಿಂತ ಕೆಳಗೆ ಇಳಿದಿತ್ತು. ಅದೇ ಬೇಸರದಿಂದ ಅವರು ಶಾಲೆ ಯಿಂದ ನಿವೃತ್ತಿಯಾದ್ರು.

ಕೇಶವ ಭಟ್ರಾ ಸರಸ್ವತೀ ಟೀಚರಿಗೆ ಒಳ್ಳೆಯ ಗಂಡ ಅನಿಸಿದ್ದರು. ಊರಲ್ಲಿ ಪುರೊತ (ಪೌರೋಹಿತ್ಯದ ಉದ್ಯೋಗ) ಮಾಡಿಕೊಂಡು ಕೊಟ್ಟಷ್ಟು ದಕ್ಷಿಣೆ ತಕ್ಕೊಂಡು ಬದುಕ್ತಾ ಇದ್ದ ಬಜೀ ಪಾಪದ (ಬರೀ ಮುಗ್ಧ ) ಜನ. ಆದ್ರೆ ದೇವರ ದೃಷ್ಟಿ ತಾಗಿತಾ ಏನೋ! ಟೀಚರ್‌ ಎರಡನೆಯದ್ದು ಹಡೆದಾಗ ಕೇಶವ ಭಟ್ರಿಗೆ ಹೆಳೆಗೆ (ನೆಪಕ್ಕೆ) ಎರಡು ದಿನಗಳ ಜ್ವರ ಬಂದದ್ದು. ಅಷ್ಟಕ್ಕೇ ಅವರು ಕಾಯ ಬಿಟ್ಟು ಕೈಲಾಸ ಸೇರಿದ್ರು.

ನಂತರದ್ದು ಟೀಚರರದ್ದು ಸಾಹಸದ ಬದುಕು. ಇದ್ದದ್ದು ಎರಡು ಹೆಣ್ಣುಮಕ್ಕಳು. ದೊಡ್ಡವಳು ನಿಖೀತಾ. ಸಣ್ಣವಳು ನಿಶ್ಮಿತಾ. ಇಬ್ಬರನ್ನು ಕೂಡ ದೊಡ್ಡ ಮಾಡಿಕ್ಕೆ (ಬೆಳೆಸುವುದಕ್ಕೆ) ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಶಾಲೆಯ ಸಂಪಾದನೆ ಮಾತ್ರವಲ್ಲ , ಹಪ್ಪಳ-ಸೆಂಡಿಗೆ-ಉಪ್ಪಿನಕಾಯಿ ಮಾರಾಟ ಮಾಡಿ ಸಂಪಾದನೆ ಮಾಡಿದ್ರು. ಊರಲ್ಲಿ ಯಾರೋ ಪುಣ್ಯಾತ್ಮರು ಕಡಿಮೆ ರೇಟಿಗೆ ಜಾಗ ಕೊಟ್ಟಾಗ ಒಂದು ಸಣ್ಣ ಮನೆ ಕಟ್ಟಿಸಿದ್ರು. ಹಾಗೆಯೇ ದುಡ್ಡು ಒಟ್ಟಾದಾಗ ಒಂದು ಸಣ್ಣ ತೋಟ ಸಹ ಮಾಡಿದ್ರು. ಹೀಗೆ ಅವುಡು ಕಚ್ಚಿ ಬದುಕಿದ್ದರು. ಅವರ ಪುಣ್ಯಕ್ಕೆ ಮಕ್ಕಳಿಬ್ಬರು ಚೆಂದ ಓದಿ ಡಿಗ್ರಿ ಮುಗಿಸಿಕೊಂಡ್ರು. ಇಬ್ಬರಿಗೂ ಒಳ್ಳೆಯ ಜಾಗಕ್ಕೆ (ಮನೆತನಕ್ಕೆ) ಮದುವೆ ಆಯ್ತು. ದೊಡ್ಡವಳ ಗಂಡ ಬೊಂಬಾಯಿಯಲ್ಲಿ ಇಂಜಿನಿಯರ್‌. ಸಣ್ಣವಳ ಗಂಡ ಮಿಲಿಟರಿಯಲ್ಲಿ ಆಫೀಸರ್‌ ಆಗಿದ್ದ. ಹಾಗಾಗಿ ಊರೂರು ತಿರುಗಾಡ್ಬೇಕಾಗಿತ್ತು ಅವಳಿಗೆ. ಮಕ್ಕಳಿಬ್ಬರೂ ಒಳ್ಳೆಯ ದಿಕ್ಕಿಗೆ ಮದುವೆ ಆದದ್ದು ಒಂದು ಕನಸಿನ ಹಾಗೆ ಆಗಿತ್ತು ಟೀಚರಿಗೆ.

ರಿಟೈರ್‌ ಆದಮೇಲೆ ಮಕ್ಕಳು, “ತಮ್ಮ ಒಟ್ಟಿಗೆ ಬಂದು ಇರು ಅಮ್ಮಾ’ ಅಂತ ಹೇಳ್ತಿದ್ದವು. ಟೀಚರಿಗೆ ಕೂಡ ಒಮ್ಮೆ ಬೊಂಬಾಯಿ, ಮತ್ತೂಮ್ಮೆ ಕಲ್ಕತ್ತಾ ಅಂತೆಲ್ಲ ಮಕ್ಕಳ ಮನೆಗೆ ಹೋಗಿ ನಾಕಾರು ದಿನ ಇದ್ದಾಗ ಅಲ್ಲಿನ ವೈಭವ ನೋಡಿದಾಗ ಹಳ್ಳಿಯಲ್ಲಿ ಇರೂದಕ್ಕಿಂತ ಪೇಟೆಯೇ ವಾಸಿ ಅಂತ ಅನಿಸ್ತಾ ಇತ್ತು. ಊರಲ್ಲಿ ಮಾತ್ರ, “ಟೀಚರ್‌, ನೀವು ಎಂತದಾದ್ರು ಸಾ ಈ ಊರು ಬಿಟ್ಟು ಹೋಗ್ಬಾರ್ಧು. ಇಲ್ಲಿನ ಶಾಲೆ ಬೆಳೆಸಿದ್ದು, ನೂರಾರು ಜನಕ್ಕೆ ಸಾಯ (ಸಹಾಯ) ಮಾಡಿದ್ದು ಎಲ್ಲ ನೀವೆ. ನಿಮಿಗೆ ಯಾರು ಕೂಡ ಇಲ್ಲಾಂತ ಎಣಿಸ್ಬೇಡಿ. ನಾವೆಲ್ಲ ಇದ್ದೇವೆ ’ ಅಂತ ಎಲ್ರೂ ಹೇಳ್ತಿದ್ದರು. ಹಾಗಾಗಿ ತಾನು ಊರು ಬಿಡೂದು ಸರಿ ಅಲ್ಲ ಅಂತ ಅವರಿಗೆ ಅನಿಸ್ತಾ ಇತ್ತು. ಆದ್ರೆ ಹಣೆಬರಹ ಬೇರೆಯೇ ಆಗಿತ್ತು. ಅವರು ಊರು ಬಿಡುವ ಸಂದರ್ಭ ಬಂತು. ಅದು ಹೀಗೆ.
.
ಅವರು ಒಮ್ಮೆ ತೋಟದಲ್ಲಿ ಕೊಟ್ರೆ (ಹಾರೆ) ಹಿಡ್ಕೊಂಡು ಕೆಲಸ ಮಾಡ್ತಾ ಇದ್ರು. ಅದು ಎಂತ ಆಯ್ತಾ ಏನಾ ಆಯ ತಪ್ಪಿ ಅವರು ಹಿಡ್ಕೊಂಡ ಕೊಟ್ರೆ ಕಾಲಿಗೆ ತಾಗಿ ರಾಮ ರಾಮಾ ರಕ್ತ ಬಂತು. ಆಚೆ-ಈಚೆಯವರೆಲ್ಲ ಒಟ್ಟಾಗಿ ಆಸ್ಪತ್ರೆಗೆ ಕರಕೊಂಡು ಹೋದ್ರು. ಅಲ್ಲಿ ರಕ್ತ ಹೆಚ್ಚು ಹರೀಲಿಕ್ಕೆ ಸುರುವಾಯೆ ಶಿವಾಯಿ (ಹೊರತು) ಕಡಿಮೆ ಆಗ್ಲಿಲ್ಲ. ಕಡೆಗೆ ಡಾಕ್ಟರು, “ಇಲ್ಲಿ ಆಗೂದಿಲ್ಲ ಸಿಟಿಯ ದೊಡ್ಡ ಆಸ್ಪತ್ರೆಗೆ ಕರಕೊಂಡು ಹೋಗಿ’ ಅಂದ್ರು. ಅಲ್ಲಿ ಹೋಗಿ ಸೇರಿಸಿದಾಗ, “ಹೈ ಷುಗರ್‌ ಉಂಟು. ಇವರ ಪಾದ ಕಟ್‌ ಮಾಡ್ಬೇಕಾಗ್ತದೆ. ಇಲ್ಲದೇ ಇದ್ರೆ ಕಾಲೇ ಹೋಗ್ತದೆ. ಗ್ಯಾಂಗ್ರೀನ್‌ ಆಗಿ ಡೇಂಜರ್‌ ಸಿಟಿವೇಷನ್‌’ ಅಂತ ಹೇಳಿದ್ರು. ಸಿಡಿಲು ಹೊಡ್ದ ಹಾಗೆ ಆಯ್ತು ಟೀಚರಿಗೆ. “ಯೆಂತ ಮಾಡುದು? ಜೀವ ಉಳೀಬೇಕಾದ್ರೆ ಪಾದ ಕತ್ತರಿಸ್ಲೇಬೇಕು’ ಎನ್ನುವ ನಿರ್ಧಾರಕ್ಕೆ ಹತಾಶೆಯಿಂದಲೇ ಬಂದ್ರು. ಮಗಳು ಅಳಿಯಂದಿರೆಲ್ಲ ಧೈರ್ಯ ಹೇಳಿದ್ರು. “ಎಂಥದಾದ್ರೂ ನಾವು ಇದ್ದೇವೆ’ ಅಂದ್ರು. “ಆದ್ರೂ ಕುಂಟಿಕೊಂಡು ನಡೀಬೇಕು. ಪ್ರತಿಯೊಂದು ಕೆಲಸಕ್ಕೆ ಕೂಡ ಪರಾಧೀನ ಆಗ್ತೀನೆ’ ಅಂತ ಎಣಿಸಿ ಕಂಡಾಬಟ್ಟೆ (ತುಂಬ) ಟೆನ್ಸ್ನ್‌ ಮಾಡಿಕೊಂಡಿದ್ರು. ಅದರಿಂದಾಗಿ ಅವರ ಬಿಪಿ ವ್ಯತ್ಯಾಸ ಆಗಿ ತುಂಬ ಗಾಲುಮೇಲು (ಗಲಿಬಿಲಿ) ಆದರು.

ಅಂತೂ ಆಸ್ಪತ್ರೆಯವರು ಟೀಚರ ಪಾದ ಕತ್ತರಿಸಿ ಸ್ವಲ್ಪ ದಿನಗಳ ನಂತರ ಬ್ಯಾಂಡೇಜ್‌ ಹಾಕಿ ಕಳಿಸಿದ್ರು. ಸ್ವಲ್ಪ ದಿವಸ ಊರಿನ ಮನೆಯಲ್ಲೇ ಇದ್ರು. ಕೆಲವು ದಿನಗಳಾದ ನಂತರ, “”ಅಮ್ಮಾ… ನಮಿಗೆ ಎಷ್ಟು ದಿನ ಅಂತ ಮನೆಬಿಟ್ಟು ಇರ್ಲಿಕ್ಕೆ ಆಗ್ತದೆ? ಹಾಗಂತ ನೀನು ಈ ಕಂಡೀಷನ್‌ನಲ್ಲಿ ಒಬ್ಬಳೇ ಇರೂದು ಸರಿಯಲ್ಲ. ನಮಿಗೆ ಸಾ ಆಗಾಗ ಬಂದು ಹೋಗ್ಲಿಕ್ಕೆ ಕಷ್ಟ. ಬದಲಿಗೆ ನೀನೆ ನಮ್ಮ ಮನೆಗಳಲ್ಲಿ ಮೂರು ಮೂರು ತಿಂಗಳು ಇದ್ದು ಬಿಡು. ಆಗ ನಮಗೆ ಆರಾಮ” ಅಂತ ಹೇಳಿದ್ದಿದ್ರು. ಅಳಿಯಂದಿರು ಕೂಡ ಅದಕ್ಕೆ ಸೈಂಗುಟ್ಟಿದ್ದರು. ಮನಸ್ಸಿಲ್ಲದ ಮನಸ್ಸಿನಿಂದ ಟೀಚರ್‌ ಊರು ಬಿಟ್ರಾ.

ಹೊಸದರಲ್ಲಿ ಸ್ವಲ್ಪ ಸಮಯ ಎಲ್ಲ ಕೂಡ ಸರಿಯಾಗಿಯೇ ಇತ್ತು. ಮೂರು ತಿಂಗಳು ಒಬ್ಬಳ ಮನೆಯಲ್ಲಿ ಮೂರು ತಿಂಗಳು ಮತ್ತೂಬ್ಬಳ ಮನೆಯಲ್ಲಿ. ಆದ್ರೆ ಇದು ಭಾಳ ದಿನ ಸಾಗ್ಲಿಲ್ಲ. ಒಂದು ದಿನ ದೊಡ್ಡ ಅಳಿಯ, “”ಅತ್ತೆ… ನಿಮಿಗೆ ಹೇಗೂ ಊರಿಗೆ ಇನ್ನು ಹೋಗಿ ಇರ್ಲಿಕ್ಕೆ ಆಗೂದಿಲ್ಲ. ಯೆಂತಕ್ಕೆ ಆ ಮನೆ ತೋಟ ಎಲ್ಲ ಇಟ್ಟುಕೊಳ್ಳುದು? ಮಾರಿಬಿಡಿ” ಅಂತ ಪೀಠಿಕೆ ಹಾಕಿದ. ಮಗಳಂದಿರೂ ಕೂಡ ಅದನ್ನೇ ಬೆಂಬಲಿಸಿದ್ದರು. ತಾನೇ ಪರಾಧೀನ ಆಗಿರುವಾಗ ಮನೆ-ತೋಟ ಯಾರಿಗೆ ಬೇಕು? ಮಾರಾಟ ಮಾಡುದೇ ಸರಿ ಅಂತ ಎಣಿಸಿದ್ರು.

ಮಾರಾಟ ಆಗಿ ಕೈತುಂಬ ಹಣವೇನೋ ಬಂತು. ಆದ್ರೆ ನಂತರ ಆದದ್ದೇ ಬೇರೆ. ಒಂದೊಂದು ರೂಪಾಯಿಗೂ ಮಗಳು- ಅಳಿಯಂದಿರು ಕಾದಾಟಕ್ಕೆ ನಿಂತರು. ಸರಸ್ವತೀ ಟೀಚರ್‌ನ ಮದುವೆಯ ಸಂದರ್ಭದಲ್ಲಿ ಅವರ ತಾಯಿಮನೆಯವರು ಒಂದಷ್ಟು ಬಂಗಾರ ಮಾಡಿಸಿ ಹಾಕಿಸಿದ್ದರು. ಅದನ್ನೆಲ್ಲ ಸರಿ ಸಮಪಾಲು ಮಾಡಬೇಕು ಅಂತ ಮಗಳಂದಿರಿಬ್ಬರು ಸಮಾ ಜಗಳ ಆಡಿಕೊಂಡರು. ಗಂಡ ತೀರಿಕೊಂಡ ನಂತರ ಏನ ಕ್ಕೋ ಟೀಚರಿಗೆ ಅವುಗಳ ಮೇಲೆಲ್ಲ ಆಸೆ ಹೊರಟೇ ಹೋಗಿತ್ತು. ಹಾಗಾಗಿ, ಗಲಾಟೆ ಬೇಡ ಅಂತ ಪಾಲು ಮಾಡಿಕೊಟ್ಟಿದ್ರು. ಒಂದು ಜೊತೆ ಬಳೆ ಇತ್ತು. ಕೆಂಪು ಕಲ್ಲು ಮತ್ತೆ ಮುತ್ತು ಕೂರಿಸಿದ ಬಳೆ. ಅದು ಮದುವೆಯಾದ ಎರಡನೆಯ ವರ್ಷ ಗಂಡ ಪ್ರೀತಿಯಿಂದ ಮಾಡಿಸಿದ್ದು. “”ಸರಸ್ವತಿ… ಕೊನೇ ತನಕ ಈ ಬಳೆ ನಿನ್ನ ಕೈಯಲ್ಲಿ ಇರ್ಬೇಕು” ಅಂತ ಹೇಳಿದ್ದರು. ಹಾಗಾಗಿ, ಟೀಚರಿಗೆ ತನ್ನ ಕೊನೆಯ ತನಕ‌ ಆ ಬಳೆ ತನ್ನ ಕೈಯಲ್ಲೇ ಇರ್ಬೇಕು ಅಂತ ಅನಿಸಿತ್ತು. ಆದರೆ ಮಗಳಂದಿರು ಅದ್ರ ಮೇಲೆ ಸಾ ಕಣ್ಣಿಟ್ಟಿದ್ದರು. “”ಅಮ್ಮ, ನೀನು ಎಲ್ಲಿಗೆ ಸಾ ಹೊರಗೆ ಹೋಗೂದಿಲ್ಲ. ನಿಂಗೆ ಯೆಂತಕ್ಕೆ ಆ ಬಳೆ? ನಮಿಗೇ ಕೊಡು” ಅಂತ ಕೇಳ್ಳಿಕ್ಕೆ ಸುರು ಮಾಡಿದ್ರು. ಆದರೆ ಟೀಚರ್‌ ಮಾತ್ರ ಅದನ್ನು ತನ್ನ ಕೈಯಲ್ಲೇ ಇಟ್ಟುಕೊಂಡಿದ್ದರು.

ಆದರೆ, ಮಗಳಂದಿರಿಬ್ಬರ ಆಂಕ್‌ೃ (ಕೀಳು ಆಸೆ) ಎಲ್ಲಿಯವರೆಗೆ ಹೋಯ್ತು ಅಂದ್ರೆ, ದೊಡ್ಡವಳ ಮನೆಗೆ ಹೋದ್ರೆ, “”ನಿಂಗೆ ನನ್ನನ್ನು ಕಂಡ್ರೆ ಅಷ್ಟಕ್ಕಷ್ಟೆ. ಬಳೆಯನ್ನು ನಿಶ್ಮಿತಾ ಗೆ ಕೊಡ್ಬೇಕೂಂತ ಇಟ್ಟಿದ್ದಿಯಾ ಏನ ಅಲ್ವಾ?” ಅಂತ ಕುಚ್ಚಣಿಸಿ (ವ್ಯಂಗ್ಯವಾಗಿ) ಮಾತಾಡಿದ್ರೆ, “”ನೀನು ಭಾರಿ ಮುದುಕಿಯಪ್ಪಾ ! ಏನಿದ್ದರೂ ಮುಚ್ಚಿ ಮುಚ್ಚಿ ಅಕ್ಕನಿಗೇ ಕೊಡ್ತಿ. ಅವಳಿಗೆ ಗಂಡುಮಕ್ಕಳು ಅಂತ ನಿಂಗೆ ಭಾರೀ ಮೋಕೆ. ನಂಗೆ ಎರಡು ಹೆಣ್ಣುಮಕ್ಕಳಿದ್ದಾರೆ ಅವರಿಗೆ ಎಂತಾದ್ರೂ ಮಾಡ್ಬೇಕು ಅಂತ ನಿಂಗೆ ಅನಿಸೂದೇ ಇಲ್ಲ ಅಲ್ವಾ?” ಅಂತ ಸಣ್ಣವಳು ಕುಚ್ಚಣಿಸ್ತಾ (ದೂಷಿಸುತ್ತ) ಇದ್ದಳು. ಟೀಚರಿಗೆ ಆ ಕುಚ್ಚಣ (ದೂಷಣೆ ) ಕೇಳಿ ಕೇಳಿ ಸಾಕಾಯ್ತು. “”ನಂಗೆ ಯೆಂತಕ್ಕೆ ಆ ಬಳೆ? ಇಬ್ಬರಿಗೆ ಕೂಡ ಒಂದೊಂದು ಕೊಟ್ಟು ಬಿಡ್ತೇನೆ” ಅಂತ ಹೇಳಿದ್ರು. “”ಅದೆಲ್ಲ ಆಗೂದಿಲ್ಲ, ಒಂದು ಜೊತೆಯನ್ನೇ ಕೊಡ್ಬೇಕು” ಅಂತ ಹಟ ಹಿಡಿದರು ಇಬ್ಬರು. ತಲೆಚಿಟ್ಟು ಹಿಡಿದ ಹಾಗಾಗಿ ಒಂದು ದಿನ ಟೀಚರ್‌, “”ಹೀಗೆ ನಿಮ್ಮ ಇಬ್ಬರ ನಡುವೆ ಸಾಯೂದಕ್ಕಿಂತ ಹೋಗಿ ಯಾವುದಾದ್ರೂ ವೃದ್ಧಾಶ್ರಮ ಸೇರಿಕೊಳೆನೆೆ” ಅಂತ ಹೇಳಿದ್ರು.

ಯಾವಾಗ ಅವರ ಬಾಯಲ್ಲಿ ಆ ಮಾತು ಬಂತಾ, ತತ್‌ಕ್ಷಣ “”ಅದೇ ಒಳ್ಳೇದು ಅಂತ ಅನಿಸ್ತದೆ ಅಮ್ಮಾ… ನಮಿಗೆ ಕೂಡ ಪೂರ್ತಿ ನೀನು ಹಾಸಿಗೆ ಹಿಡಿದರೆ ನೋಡಿಕೊಳ್ಳಿಕ್ಕೆ ಕಷ್ಟ ಆಗ್ತದೆ” ಅಂತ ಇಬ್ಬರೂ ಹೇಳಿದ್ರು. ಅಳಿಯಂದಿರಂತೂ ಇದ್ದದ್ದು ದೋಚಿ ತಿನ್ಲಿಕ್ಕೆ ತಯಾರಾಗಿದ್ದರೇ ಹೊರತು ಅತ್ತೆಯನ್ನು ಸರೀ ನೋಡಿಕೊಳ್ಳಿಕ್ಕೆ ತಯಾರಿರಲಿಲ್ಲ. ಮಾತ್ರವಲ್ಲ ಬೀಗರ ಎದುರಿನಲ್ಲಿ ಟೀಚರಿಗೆ ಸುಮಾರಾಗ್ತಿತ್ತು (ಅವಮಾನ ಆಗುತ್ತಿತ್ತು). ಒಂದೆರಡು ಸರ್ತಿ ಅವರು ಬಂದಾಗ “”ಅಕ್ಕಾ, ಎಷ್ಟಾದ್ರೂ ನಾವು ಮಕ್ಕಳಿಗೆ ಭಾರ ಆಗಿ ಇರ್ಬಾರ್ದು ಅಲ್ವಾ? ಆಗಾಗ ಬಂದು ಹೋಗ್ತಾ ಇದ್ರೆ ಅಡ್ಡಿಯಿಲ್ಲ. ಬರೇ ಅವರ ಮನೆಯಲ್ಲೇ ಇದ್ರೆ ಅದು ಒಂದು ನಮೂನಿ ಅಲ್ವಾ?” ಅಂತ ಬೇಕೂಂತಲೇ ಕೇಳ್ತಾಯಿದ್ರು. ಆವಾಗೆಲ್ಲ ಟೀಚರಿಗೆ ಭೂಮಿ ಬಾಯಿ ಬಿಡಬಾರದಾ ಅಂತ ಅನಿಸ್ತಾ ಇತ್ತು.

ಇವರ ನಡುವೆ ಸ್ವಾಭಿಮಾನ ಸತ್ತು ಬದುಕೂದಕ್ಕಿಂತ ವೃದ್ಧಾಶ್ರಮ ಸೇರೂದೇ ವಾಸಿ ಅಂತ ನಿರ್ಧಾರ ಮಾಡಿದ್ರು. ಯಾವಾಗ ಅಲ್ಲಿಗೆ ಸೇರ್ತಾರೆ ಅಂತ ಗೊತ್ತಾಯಿತೋ ಮಗಳು-ಅಳಿಯಂದಿರು ಎಲ್ಲ ಸೇರಿ ಎಲ್ಲಿ ವೃದ್ಧಾಶ್ರಮ ಖಾಲಿ ಉಂಟು ಅಂತ ಹುಡುಕಲು ಸುರುಮಾಡಿದ್ರು. ಕಡೆಗೆ ಬೆಂಗಳೂರಿನಲ್ಲಿ ಒಂದು ವೃದ್ಧಾಶ್ರಮದಲ್ಲಿ ಖಾಲಿ ಉಂಟು ಅಂತ ಗೊತ್ತಾಗಿ ಅಲ್ಲಿಗೆ ಸೇರಿಸಿದ್ರು.

ವೃದ್ಧಾಶ್ರಮಕ್ಕೆ ಸೇರಿದ ಹೊಸದ್ರಲ್ಲಿ ಟೀಚರಿಗೆ ತುಂಬ ಕಷ್ಟ ಆಯಿತು. ಊರು-ಹವಾಮಾನ ಎಲ್ಲ ಹೊಸತು. ಕ್ರಮೇಣ ಅಲ್ಲಿನ ದಿನಚರಿಗೆ ಹೊಂದಿಕೊಳ್ಳಲು ಸುರುಮಾಡಿದ್ರು. ಅಲ್ಲಿ ಇದ್ದ ಸುಮಾರು ಅರುವತ್ತು ಮಂದಿಯಲ್ಲಿ ಒಬ್ಬೊಬ್ಬರ ಬದುಕಿನ ಕತೆಗಳು ತೆರೆದುಕೊಳ್ಳತೊಡಗಿತು. ಊರಿನ ಬದಿಯವರು ಯಾರೂ ಸಿಗದೇ ಇದ್ದರೂ ಇದ್ದವರನ್ನೇ ತನ್ನವರನ್ನಾಗಿಸಿಕೊಂಡು ಮಾತುಕತೆ ಆಡಲು ಸುರುಮಾಡಿದ್ರು. ಆದ್ರೂ ಮಕ್ಕಳ, ಮೊಮ್ಮಕ್ಕಳ ನೆನಪು ಆಗಾಗ ಆಗ್ತಾ ಇತ್ತು. ಆಗೆಲ್ಲ ಫೋನ್‌ ಮಾಡ್ತಿದ್ರು. ಅವರ ಕೈಯಿಂದ ಬೈಸಿಕೊಳ್ತಿದ್ರು. ಈ ಕತೆಯ ಸುರೂವಿಗೆ ಹೇಳಿದ ಘಟನೆ ಅಂಥದ್ದೇ ಒಂದು ದಿನದ್ದು ಆಗಿತ್ತು. ಸಣ್ಣವಳು ಆಗ ಬೆಂಗಳೂರಲ್ಲಿ ಇದ್ದಾಳೆ. ಹೇಗೂ ಮಗಳು ಹತ್ತಿರ ಬಂದಿದ್ದಾಳಲ್ವಾ ಅಂತ ಮಾತಾಡಿಸಿದ್ರೆ ಅವಳದ್ದು ಈ ಕತೆ.

ಮಗಳು ಬೈದು ಫೋನ್‌ ಕಟ್‌ ಮಾಡಿದ ನಂತರ ಸೇಂಕಿ ಸೇಂಕಿ ಕೂಗ್ತಾ (ಬಿಕ್ಕಿ ಬಿಕ್ಕಿ ಅಳು ತ್ತ) ಇದ್ದ ಟೀಚರ್‌ ಬೆನ್ನಿನ ಮೇಲೆ ಯಾರೋ ಕೈ ಇಟ್ಟ ಹಾಗಾಯಿತು. ತಿರುಗಿ ನೋಡಿದರೆ ಅವರ ರೂಮ್‌ಮೇಟ್‌ ಗೋದಾವರಿ. “”ಅಳಬೇಡಿ ಅಮ್ಮ, ಎಲ್ಲರ ಕತೆಯೂ ಒಂದೇ. ಬನ್ನಿ ಯಾರೋ ಪುಣ್ಯಾತ್ಮರು ಮಗಳ ಬರ್ತಡೇಯನ್ನು ಇಲ್ಲಿ ಆಚರಣೆ ಮಾಡ್ತಾ ಇದ್ದಾರಂತೆ. ಎಲ್ರಿಗೂ ಹಣ್ಣು ಹಂಚುತ್ತ ಇದ್ದಾರಂತೆ. ಹೋಗಿ ಈಸ್ಕೋಬೇಕಂತೆ ನಾವೂನು. ಬನ್ನಿ” ಅಂತ ಒತ್ತಾಯ ಮಾಡಿ ಕರ್ಕೊಂಡು ಹೋದ್ರು. ಟೀಚರಿಗೆ ಆಶ್ರಮ ಸೇರಿದ ನಂತ್ರ ಇದು ಹೊಸದಲ್ಲ. ತಿಂಗಳಲ್ಲಿ ಯಾರಾದ್ರೂ ಒಬ್ಬರಲ್ಲ ಒಬ್ಬರು ಬಂದು ಏನಾದ್ರೂ ಕೊಡುತ್ತಿರುತ್ತಾರೆ. ಟೀಚರಿಗೆ ಅದು ಇಷ್ಟ ಆಗುತ್ತಿರಲಿಲ್ಲ. ಒಂದು ಕಾಲದಲ್ಲಿ ಫೀಸಿಗೆ ಗತಿಯಿಲ್ಲದೇ ಇದ್ದ ಮಕ್ಕಳಿಗೆ ತಾನೇ ಕೊಟ್ಟು ಓದಿಸಿದವಳು. ಶಾಲೆಯ ಮಕ್ಕಳಿಗೆ ಊಟದ ಒಟ್ಟಿಗೆ ಹಣ್ಣು ಕೂಡ ಸಿಗಲಿ ಅಂತ ಕೈಯಿಂದ ದುಡ್ಡುಹಾಕಿ ಹಣ್ಣು ತರಿಸುವ ವ್ಯವಸ್ಥೆ ಮಾಡಿದ್ದ ತನ ಗೇ ಇಂಥ ಗತಿ ಬಂತಲ್ಲ ಅಂತ ಎಣಿಸಿ ಬೇಸರ ಆಯ್ತು. ಎಂತ ಮಾಡುದು? ಬದುಕೇ ಹೀಗೆ ಅಂತ ಎಣಿಸುತ್ತ ಸಾಲಲ್ಲಿ ನಿಂತಿದ್ದರು. ಯಾರೋ ಅನುಕೂಲಸ್ಥರ ಹಾಗಿದ್ದವರೊಬ್ಬರು ಹಣ್ಣು ವಿತರಿಸ್ತಾ ಇದ್ದರು. ಟೀಚರ್‌ ಮುಖ ನೋಡಿಲ್ಲ. ತನ್ನ ಸರದಿ ಬಂದಾಗ ಹಣ್ಣು ತೆಕೊಳ್ಬೇಕು ಅನ್ನುವಾಗ “ನಮಸ್ತೆ ಟೀಚರ್‌’ ಅಂತ ಉದ್ಗಾರ ಬಂತು. ತಲೆಯೆತ್ತಿ ನೋಡಿದವರೆ ಗುರ್ತ ಸಿಕ್ಕಿ ಕೂಡಲೇ ತಲೆ ಅಡಿಗೆ ಹಾಕಿದ್ರು (ತಲೆ ತಗ್ಗಿಸಿದರು). ಹಣ್ಣು ತೆಕ್ಕೊಳದೇ ಗುಡುಗುಡು ಅಂತ ತನ್ನ ರೂಮಿಗೆ ಬಂದ್ರು. “”ಟೀಚರ್‌… ಟೀಚರ್‌… ನನ್ನ ಗುರ್ತ ಸಿಗ್ಲಿಲ್ವಾ? ನಾನು ನಿಮ್ಮ ಸ್ಟೂಡೆಂಟ್‌ ಹರೀಶ” ಅಂತ ಅಡ್ಡಗಟ್ಟಿ ಮಾತಾಡಿಸಿದ.

ಟೀಚರಿಗೆ ಅವನ ಗುರ್ತ ಸಿಕ್ಕಿತ್ತು. ಆದ್ರೆ ಅವನ ಎದುರು ಕೈಚಾಚಿ ನಿಲ್ಲುವ ಪರಿಸ್ಥಿತಿ ಬಂತಲ್ವಾ ಅಂತ ಎಣಿಸಿ ಬೇಸರದಿಂದ ಮುಖ ತಿರುಗಿಸಿ ಬಂದಿದ್ರು. “”ಟೀಚರ್‌, ನೀವೇನು ಇಲ್ಲಿ? ಎಷ್ಟು ಸಮಯ ಆಯ್ತು ಇಲ್ಲಿಗೆ ಬಂದು?” ಅಂತ ಕೇಳಿದ. ಮಾತ್ರವಲ್ಲ , ತನ್ನ ಹೆಂಡತಿಯನ್ನು ಕರೆದು, “”ನಾನು ಯಾವಾಗ್ಲೂ ಹೇಳ್ತಿದ್ದೆ ಅಲ್ವಾ ಸರಸ್ವತೀ ಟೀಚರ್‌ ಅಂತ. ಅವರೇ ಇವರು. ನಂಗೆ ಸಮಾ ಕುಟ್ಟಿ ಕೊಟ್ಟು ತಲೆಗೆ ಮೊಟಕಿ ಮ್ಯಾತ್ಸ್- ಸೈನ್ಸ್‌ ಕಲಿಸದೇ ಇರಿ¤ದ್ರೆ ನಾನು ಇವತ್ತು ಈ ಸ್ಥಿತಿಗೆ ಬರ್ತಾನೇ ಇರ್ಲಿಲ್ಲ” ಅಂತ ಪರಿಚಯಿಸಿದ. ತಾನು ಈಗ ಬೆಂಗಳೂರಿನಲ್ಲಿ ಒಂದು ಸಾಫ್ಟ್ವೇ ರ್‌ ಕಂಪೆನಿಯ ಮಾಲಿಕ ಅಂತ ಹೆಮ್ಮೆಯಿಂದ ಹೇಳಿಕೊಂಡ. ಮಗಳನ್ನು ಕರೆದು, “”ಇವರು ನನ್ನ ಹೈಸ್ಕೂಲ್‌ ಮಿಸ್‌. ನಮಸ್ತೇ ಹೇಳು” ಅಂದ. ಐದಾರು ವರ್ಷದ ಪುಟ್ಟ ಮಗು ಮುದ್ದಾಗಿ “ನಮಸ್ತೇ’ ಅಂದಿತು. ಟೀಚರ್‌ ಅದನ್ನು ಎತ್ತಿಕೊಂಡು ಲೊಚಕ್‌ ಅಂತ ಮುತ್ತು ಕೊಟ್ರಾ. ಆ ಕ್ಷಣಕ್ಕೆ ಅವರಿಗೆ ತನ್ನ ಮೊಮ್ಮಕ್ಕಳ ನೆನಪಾಯಿತು. ನಂತರ ತನ್ನ ಎಲ್ಲ ಕತೆ ಹೇಳಿದರು. ಎಲ್ಲ ಕೇಳಿದ ನಂತರ, “”ಟೀಚರ್‌, ನೀವು ನಮ್ಮ ಮನೆಗೇ ಬಂದು ಇದ್ದು ಬಿಡಿ. ಹೇಗೂ ನಂಗೆ ಅಮ್ಮನನ್ನು ನೋಡಿದ ನೆನಪೇ ಇಲ್ಲ. ಯಾರ್ಯಾರಧ್ದೋ ಮನೆಯಲ್ಲಿ ಬೆಳೆದ ವನು ನಾನು. ನೀವು ಆವತ್ತು ಓದಿಸದೇ ಇದ್ದಿದ್ರೆ…” ಅಂತ ಹೇಳಿ ಮಾತು ನಿಲ್ಲಿಸಿದ. ಅವನ ಕಣ್ಣುಗಳಲ್ಲಿ ನೀರು. ಅವನ ಹೆಂಡತಿ ಕೂಡ ಗಂಡನ ಮಾತಿಗೆ ಸೈಂಗುಟ್ಟಿದು. ಟೀಚರ್‌ ನಯವಾಗಿ ನಿರಾಕರಿಸಿದ್ರು. ಅವನು ಎಷ್ಟೇ ಒತ್ತಾಯ ಮಾಡಿದ್ರು ಕೂಡ ಒಪ್ಲಿಲ್ಲ. ಕೊನೆಗೆ ಅವನು, “”ಟೀಚರ್‌, ಇನ್ನು ಮೇಲೆ ನಾನು ಆಗಾಗ ಬರುತ್ತಿರುತ್ತೇನೆ. ನಿಮ್ಮನ್ನು ನೋಡುವ ಉದ್ದೇಶದಿಂದಲೇ. ನನ್ನ ಕ್ಲಾಸ್‌ಮೇಟ್‌ಗಳು ಸುಮಾರು ಮಂದಿ ಇಲ್ಲೇ ಬೆಂಗಳೂರಿನಲ್ಲಿಯೇ ಇದ್ದಾರೆ. ಅವರಿಗೆಲ್ಲ ನೀವು ಇಲ್ಲಿದ್ದೀರಿ ಅಂತ ಮೆಸೇಜ್‌ ಮಾಡ್ತೇನೆ. ಅವ್ರನ್ನೆಲ್ಲ ಒಂದು ಸರ್ತಿ ಬರ್ಲಿಕ್ಕೆ ಹೇಳ್ತೇನೆ. ನಿಮಿಗೆ ಕೂಡ ಅವ್ರನ್ನೆಲ್ಲ ನೋಡಿದ ಹಾಗೆ ಆಗ್ತದೆ” ಅಂತ ಹೇಳಿ ಸರ ಸ್ವತಿ ಟೀಚ ರ್‌ರ ನಂಬರ್‌ ತೆಕ್ಕೊಂಡ.

ಹರೀಶ ಹಾಗೆ ಹೋದವನು ಹೈಸ್ಕೂಲಿನ ಕ್ಲಾಸ್‌ಮೇಟ್‌ಗಳಿಗೆಲ್ಲ ಟೀಚರ ವಿಷಯ ಹೀಗೆ ಹೀಗೆ ಅಂತ ತಿಳಿಸಿದ. ಸುಮಾರು ಜನ ಅವರನ್ನು ಮಾತಾಡಿಸ್ಬೇಕು ಅಂತ ಅಭಿಮಾನದ ಮಾತುಗಳನ್ನು ಆಡಿದರು. “”ಮದರ್ ಡೇ ದಿವಸ ಒಟ್ಟಾಗುವ. ಟೀಚರಿಗೆ ಆವತ್ತು ಎಪ್ಪತ್ತು ತುಂಬುತ್ತದೆ. ಸ್ಪೆಷಲ್‌ ಆಗಿ ಸೆಲಬರೇಟ್‌ ಮಾಡುವ. ಎಲ್ಲ ಒಟ್ಟಾಗಿ ಅವ್ರನ್ನು ಮಾತಾಡಿಸ್ಲಿಕ್ಕೆ ಹೋದ್ರೆ ಖುಷಿಯಾಗ್ತದೆ” ಅಂತ ಅಂದ. ಎಲ್ಲರೂ ಒಪ್ಪಿದರು.

ಆವತ್ತು ವೃದ್ಧಾಶ್ರಮದಲ್ಲಿ ಸಂಜೆ ಹಬ್ಬದ ವಾತಾವರಣ. ನಾಕು ನಾಕೂವರೆಯ ಹೊತ್ತಿಗೆ ಒಬ್ಬೊಬ್ಬರಾಗಿ ಬಂದು ಟೀಚರನ್ನು ಮಾತಾಡಿಸಲು ಸುರುಮಾಡಿದ್ರು. ಅದೊಂದು ಪುಟ್ಟ ಸಮಾರಂಭ. ಆಶ್ರಮದವರೆಲ್ಲ ಒಟ್ಟಾಗಿದ್ದರು. ಹರೀಶ ಮನೆಮಂದಿ ಸಮೇತ ಬಂದಿದ್ದ. ಒಂದು ಕೇಕ್‌ ತಂದಿದ್ದ. ಆರು ಗಂಟೆಯ ಹೊತ್ತಿಗೆ ವೇದಿಕೆ ಏರಿದವನೇ ಟೀಚರನ್ನು ಕರೆದ. ಕೇಕ್‌ ಕತ್ತರಿಸಿದ. ಅದೇ ಹೊತ್ತಿಗೆ ಮಗಳು ನಿಶ್ಮಿತಾ ಅಮ್ಮನನ್ನು ನೋಡ್ಬೇಕು ಅಂತ ಬಂದಳು. ಇಲ್ಲಿ ನೋಡಿದ್ರೆ ಆಶ್ರಮದಲ್ಲಿ ಎಂಥದೋ ಫ‌ಂಕ್ಷನ್‌ ನಡೀತಾ ಉಂಟು. ಸೆಕ್ಯುರಿಟಿಯವನ ಬಳಿ, “”ಏನು ವಿಶೇಷ?” ಅಂತ ಕೇಳಿದ್ಲು. “”ಯಾರೋ ಟೀಚರಮ್ಮೊàರ್‌ಗೆ ಸನ್ಮಾನ ಮಾಡ್ತಾ ಅವೆÅ. ನೈಟ್‌ ಊಟಾನೂ ಇಟ್ಕೊಂಡವ್ರೆ” ಅಂತ ಅಂದ. “ಎಂತ ಆಗ್ತದೆ ನೋಡುವಾ!’ ಅಂತ ಮರೆಯಲ್ಲಿ ನಿಂತು ನೋಡುತ್ತ ನಿಂತ ಳು. ತನ್ನ ಸ್ಟೂಡೆಂಟ್ಸ್‌ ಮಾಡಿದ ಸನ್ಮಾನ ಸ್ವೀಕರಿಸಿದ ಟೀಚರ್‌, “”ಹರೀಶ… ನೀನು ಮತ್ತು ನಿನ್ನ ಕ್ಲಾಸಿನವರು ಎಲ್ಲ ಒಟ್ಟಾಗಿ ಇವತ್ತು ನನ್ನನ್ನು ನೋಡಲು ಬಂದದ್ದು ನನಗೆ ತುಂಬ ಖುಷಿಯಾಯ್ತು. ನೀವೆಲ್ಲ ನನ್ನ ಒಂದು ಮಾತು ನಡೆಸಿ ಕೊಡ್ತೀರಾ?” ಅಂತ ಕೇಳಿದ್ರು.

“”ಹೇಳಿ ಟೀಚರ್‌ ಎಂತ ಆಗ್ಬೇಕು?”
“”ಮತ್ತೆ ಎಂಥದೂ ಇಲ್ಲ. ಮೂವತ್ತೈದು ವರ್ಷ ನಂಗೆ ಅನ್ನ ಕೊಟ್ಟ ಹೈಸ್ಕೂಲಿಗೆ ನನಗೆ ಎಂಥದೂ ವಾಪಸ್‌ ಕೊಡಲಿಕ್ಕೆ ಆಗ್ಲಿಲ್ಲ. ನಾನು ರಿಟೈರ್‌ ಆಗುವ ಮೊದ್ಲು ಒಂದು ರಂಗಮಂದಿರ ಕಟ್ಟಿಸಬೇಕಂತ ಆಸೆ ಪಟ್ಟಿದ್ದೆ. ಅದು ಈವತ್ತಿಗೆ ಕೂಡ ಆಗ್ಲಿಲ್ಲ. ನೀವೆಲ್ಲ ಒಟ್ಟಾಗಿ ಒಂದು ರಂಗಮಂದಿರ ಕಟ್ಟಿಸಿ ಕೊಡಿ. ಅಲ್ಲಿ ಮಕ್ಕಳು ಸ್ಕ‌ೂಲ್‌ಡೇಗೆ ಚೆಂದ ಆಟ (ಯಕ್ಷಗಾನ) ಕುಣೀಬೇಕು. ಅದೇ ನನ್ನ ಆಸೆ. ಅದಕ್ಕೆ ಮೊದಲ ದೇಣಿಗೆಯಾಗಿ ತಗೊಳ್ಳಿ , ಈ ಒಂದು ಜೊತೆ ಬಳೆಯನ್ನು ಕೊಡ್ತಾ ಇದ್ದೇನೆ. ಇದನ್ನು ಶಾಲೆಗೆ ತಲುಪಿಸಿ” ಅಂದ್ರು.
ಎಲ್ಲರೂ ಚಪ್ಪಾಳೆ ತಟ್ಟಿ ಆನಂದಿಸುತ್ತಿರುವಾಗ ನಿಶ್ಮಿತಾ ಕುಸಿದು ಕುಳಿತುಕೊಳ್ಳುತ್ತಿರುವುದು ಯಾರ ಗಮ ನಕ್ಕೂ ಬಂದಂತಿರಲಿಲ್ಲ.

ಪಿ. ಬಿ. ಪ್ರಸನ್ನ

ಟಾಪ್ ನ್ಯೂಸ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.