ಕತೆ: ಗೌಡರ ಲೆಕ್ಕ
Team Udayavani, Mar 18, 2018, 6:00 AM IST
ರಸ್ತೆಯ ಮೇಲೆ ನಡೆದುಕೊಂಡು ಬರುತ್ತಿದ್ದ ನಿವೃತ್ತ ಮಾಸ್ತರರನ್ನು ಕಂಡು ಬೈಕ್ ಮೇಲೆ ಬರುತ್ತಿದ್ದ ಶಿವರಾಜ ನಿಂತು, “”ನಮಸ್ಕಾರ ಮಾಸ್ತರರೇ, ನಮಸ್ಕಾರ. ಬಿಸಲಾಗ ಹೊಂಟೀರಿ ಎಲ್ಲಿಗೆ?” ಎಂದು ಕೇಳಿದ. ಮಾಸ್ತರರು ನಿಂತು, “”ಹೊØ ಶಿವರಾಜ! ನಮಸ್ಕಾರಪ್ಪ! ಏನು ಹೊಸ ಸೈಕಲ್ ಮೋಟಾರು ಯಾವಾಗ ತಂಗಡಿಯಪ್ಪ?” ಎಂದು ಕೇಳಿದರು.
“”ನಿಮ್ಮ ಮಗಳು ಕೊಡಿಸ್ಯಾಳ ಮಾಸ್ಟ್ರೇ. ನಿಮಗ ಗೊತ್ತಿಲ್ಲೇನು…”
“”ಏನು ವರದಕ್ಷಿಣೆ…!”
“”ಛೆ… ಛೆ!” ಎಂದು ಬೈಕ್ ಆಫ್ ಮಾಡಿ ಕೆಳಗಿಳಿದ. ಶಿವರಾಜ ಬಿಳಿ ಲುಂಗಿ, ಬಿಳಿ ಅಂಗಿ ಹಾಕಿದ್ದ.
“”ನಿಮ್ಮ ಶಿಷ್ಯ ನಾನು! ವರದಕ್ಷಿಣೆ ತಗತಿನಾ? ಒಂದು ನಯಾಪೈಸೆಯನ್ನು ಬೀಗರಿಂದ ತಗಂಡಿಲ್ಲ. ಮೇಲಾಗಿ ನಾನು ಬಿ.ಎ. ಪಾಸಾಗಿದ್ದರೂ ರೈತನಾಗಿದ್ದೇನೆ. ನಿಮ್ಮ ಮಗಳಿಗೆ ಇನ್ನೂ ವರ್ಸ ಆಗಿಲ್ಲ ಮದುವೆಯಾಗಿ. ವರ್ಷದ ಒಳಗ ಟೀಚರ್ ನೌಕರಿ ಸಿಕ್ಕಿತು. ನಿಮ್ಮ ಗೊತ್ತದಲ್ಲ. ಮದುವಿಗೆ ಬಂದಿದ್ರಿ. ಅಕ್ಕಿಕಾಳು ಹಾಕಿ, ಆಶೀರ್ವಾದ ಮಾಡಿದ್ದೀರಿ…”
“”ಒಳ್ಳೆಯದಾಯ್ತು. ಬೇಶಿದ್ದೀರಿಲ್ಲ, ಅಷ್ಟು ಸಾಕು. ಅಂದಂಗ ಮಗಳಿಗೆ ಯಾವ ಶಾಲೆಯಲ್ಲಿ ಕೆಲ್ಸ….”
“ನಮ್ಮೂರಾಗ ಸೀಟ್ ಇರಲಿಲ್ಲಂತ! ಇಲ್ಲೇ ಹೊಸಹಳ್ಳಿಯಲ್ಲಿ ಸಿಕ್ಕದ. ಆ ಶಾಲೆಗೆ ಹೊಗ್ತಾಳ”
“”ಹೊಸಹಳ್ಳಿ! ಗೊತ್ತಾಯ್ತು ಬುಡು! ಚೆನ್ನಾಗಿ ಕಲಿಸು ಅಂತ ಹೇಳಿದೆ ಎಂದು ಹೇಳು”
“”ಅದೇನು ಕಲ್ಸದು ಬುಡ್ರಿ ಮಾಸ್ಟ್ರೇ. ಆ ಊರಿಗೆ ಹೋಗಿ, ಬರಲಿಕ್ಕೆ ಬಸ್ಸಿಲ್ಲ. ಇದ್ರೂ ಕಟ್ ಜರ್ನಿ ಮಾಡಬೇಕು. ಅದ್ಕ ನಿಮ್ಮ ಮಗಳೇ ಈ ಬೈಕ್ ಕೊಡಿಸ್ಯಾಳ. ನಾನೇ ಮುಂಜಾನೆ ಬೈಕ್ ಮ್ಯಾಲೆ ಕರಕಂಡು ಹೋಗ್ತಿನಿ. ಬುಟ್ಟು ಬರಿ¤àನಿ. ಸಂಜೆ ಹೋಗಿ ಕರಕಂಡು ಬರಿ¤àನಿ”
“ನಿನೂ ಕೆಲ್ಸ ಕೊಟ್ಟಾಳು ಅನ್ನೂ! ಇರ್ಲಿ ಅದೇನೂ ಧಾವತಿ ಕೆಲ್ಸ ಅಲ್ಲ ಬುಡು. ಊರಾಗ ಖಾಲಿ ಕುಂತು ಹೊತ್ತು ಕಳೆವುದಕ್ಕಿಂತ ಈ ಕೆಲ್ಸ ಮಾಡಿದ್ರ ತಪ್ಪೇನದ?” ಮಾಸ್ತಾರ ಹೇಳಿ ಹೋಗಲು ನೋಡಿದರು.
“”ಮಾಸ್ತಾರ್ರೆ, ಅಲ್ರಿ, ಕೆಲ್ಸಕ್ಕ ಜಲ್ದಿ ಹೋಗಿ ಬಿಡಬೇಕ್ರಿ. ತಟಗ ತಡಾದ್ರ ಆ ಹೆಡ್ ಮಾಸ್ತಾರ ಅರಚತಾನ. ಒಂಬತ್ತಕ್ಕ ಹೋಗಿ ನಿಂತಬೇಕು. ಸಂಜಿಮುಂದ ಐದು ಗಂಟೆ ಆಗ್ತದ. ದಿನಾ ಹೋಗಿ ಬರಬೇಕಲ್ರಿ. ಇದ್ಯಾವನು ಮಾಡ್ಯಾನು?”
“”ಸಂಬಳ ಕೊಡ್ತಾರಲ್ಲಪ್ಪ, ಸಂಬಳ”
“”ಏನು ಸಂಬಳ ಬುಡ್ರೀ. ಬೈಕ್ ಲೋನ್ ಮಾಡ್ಸಿದ್ದೀನಿ. ಮನ್ಯಾಗಿನ ಖೋಲಿ ದುರಸ್ತಿ ಮಾಡ್ಸು ಅಂತ ಗಂಟು ಬಿದ್ದಳು. ಹೌಸ್ ಲೋನು ಮಾಡ್ಸಿ ಕಟಿಸಿದ್ದೀನಿ. ಈಗ ನೋಡಿದ್ರ ಸಂಬಳದಾಗ ಲೋನು ಮುರಕಂತಾರ. ಈಕಿ ಕೈಗೆ ಏನು ಬರ್ತಾದ ಮಣ್ಣು?”
“”ಹಂಗ ಬಾಳ್ವೆ ಅಂದ್ರ”
“”ಅದ್ರಾಗ ಸೀರೆ ಮ್ಯಾಲೆ ಸೀರೆ ತಗಂತಾಳ. ದಿನಾ ಒಂದು ಬ್ಯಾರೆದೇ ಸೀರೆ ಉಟುಗಂಡು ಹೋಗಬೇಕಂತ. ಇಪ್ಪತ್ತು ಸೀರೆ ಇದ್ದಾವು. ಆದ್ರೂ ಸಾಲವು” ಅಂತಾಳ ಶಿವರಾಜ.
“”ನಿನY ನೌಕರಿ ಇಲ್ಲ. ಅದು ಗೊತ್ತಾಗದಿಲ್ಲ”
“”ಅದ್ಕ ನಾನಂತೀನಿ. ದಿನ ಯಾಕ ಶಾಲಿಗೆ ಹೋಗಬೇಕು? ವಾರದಾಗ ಎರಡು ಸಲ ಹೋಗಿ, ವಾರದ ಸಹಿ ಮಾಡಿ ಬಂದ್ರಾಯ್ತು ಅಂತ…”
“”ಹೆ ತಮ್ಮ, ಹೊಲಕ್ಕ ದಿನ ಹೋಗದಿದ್ರ ನಡಿತದ. ಅದು ಮಕ್ಕಳ ಶಾಲೆ. ನಿತ್ಯ ಕಲಿಸಬೇಕು. ಸಂಬಳ ಯಾಕ ಕೊಡ್ತಾರೇಳು? ದಡ್ಡ! ನಾಡ ದಡ್ಡ!” ಅಂತ ಬಯ್ದರು.
“”ಮಾಸ್ಟ್ರೇ, ನಮ್ಮ ಹೊಲಗಳಲ್ಲಿ ನಾನೇ ಕೆಲ್ಸ ಮಾಡ್ತೀನೇನು? ಮಾಡಸ್ತೀನಿ. ಹಂಗ ಹೆಡ್‌ಮಾಸ್ಟ್ರೆ ಈಕೆ ಬರಲಿಲ್ಲಂದ್ರ ಮಕ್ಕಳಿಗೆ ಸಾಲಿ ಕಲಿಸಲಿ ಏನಂತಿ! ಆತನಿಗೇ ಐನೂರನೋ, ಸಾವಿರನೋ ಕೊಟ್ರಾಯ್ತು”
“”ಗೌಡ್ರು ಮಗ ನೀನು. ನಿನ್ಗೆ ಮಾತ್ರ ಇಂಥ ಆಲೋಚನ ಹೋಳಿತಾವ ನೋಡು”
“”ಹೆಡ್‌ಮಾಸ್ಟ್ರೆಗೆ ಈ ಕೆಲ್ಸ ಬ್ಯಾಡಂದ್ರೂ ಸರಿ. ನಿಮ್ಮ ಮಗಳ ಜತೆಗೆ ಶಾಲೆಲ್ಲಿ ಕಲಿಸುವ ಟೀಚರ್ ಇನ್ನೂ ಐದಾರ್ ಮಂದಿ ಇ¨ªಾರ. ಅವುರಿಗೆ ಹೇಳಿದ್ರೆಂಗ? ವಾರದಾಗ ಮೂರು ಸಲ ಈಕೆ ಬರ್ತಾಳ. ಇನ್ನೂ ಮೂರು ದಿನ ನೀವೇ ಅಡ್ಜಸ್ಟ ಮಾಡ್ರೀ” ಅಂತ.
“”ಕೇಸ್ ಆದ್ರೆಂಗೋ ಮಾರಾಯ?”
“”ಎಂ.ಎಲ್.ಎ. ನಮ್ಮ ಅಪ್ಪಗ ದೋಸ್ತಾ. ಊರ ಓಟುಗಳನ್ನೆಲ್ಲ ಹಾಕಿಸಿವಿ. ನೋಡ್ಕಂತಾನ ಬುಡ್ರಿ”
“”ನಾನು ಬರಿ¤àನಿ. ಗೌಡ್ರ ಲೆಕ್ಕ ನಮಗ್ಯಾಕ” ಎಂದು ಮುಂದ ನಡದರೂ, “ಮಕ್ಕಳ ಭವಿಷ್ಯ ಏನು?’ ಅಂದದ್ದು ಕೇಳಿಸಿಕೊಂಡು, “”ಮಾಸ್ತಾರಗ ಬದುಕಕೂ ಬರಲಿಲ್ಲ” ಎಂದು ಶಿವರಾಜ ಬೈಕ್ ಮ್ಯಾಲೆ ಕುಂತು ಊರ ಕಡೆ ನಡೆದ.
ಅಮರೇಶ ನುಗಡೋಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.