ಮೊಬೈಲ್ ಗಾದೆಗಳು!
Team Udayavani, Feb 9, 2020, 5:24 AM IST
– ಗಂಡ-ಹೆಂಡಿರ ಜಗಳ ನೆಟ್‌ಪ್ಯಾಕ್ ಮುಗಿಯೋ ತನಕ
– ಹುಚ್ಚು ಮರುಳೆಯ ಮದುವೆಯ ಗಜಿಬಿಜಿಯಲ್ಲಿ ಮೊಬೈಲ್ ರಿಂಗ್ ಆದದ್ದು ಕೇಳಿಸಿಕೊಂಡವನೇ ಜಾಣ.
– ಪ್ರೀತಿ ಮಾಡಬಾರದು, ಮಾಡಿದರೆ ಮೊಬೈಲ್‌ನಲ್ಲಿ ಮೆಸೇಜ್ ಹಾಕಬಾರದು.
– ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಫೇಸ್‌ಬುಕ್ ಚೆಕ್ ಮಾಡಿದನಂತೆ.
– ಮೊಬೈಲ್ ತೆಗೆದುಕೊಳ್ಳುವ ಮೊದಲೇ ಕವರ್ ಹೊಲಿಸಿದ.
– ಗಂಡಸಿಗೇಕೆ ಗೌರಿಯ ಮೊಬೈಲ್.
– ಕೋಟಿ ವಿದ್ಯೆಗಿಂತ, ಚಾಟಿಂಗ್ ವಿದ್ಯೆ ಮೇಲು.
– ಛಾರ್ಜ್ ಫುಲ್ ಆದ ಮೇಲೆ ಛಾರ್ಜರ್ ಎಸೆದನಂತೆ.
– ಸಿಗ್ನಲ್ ಸಿಕ್ಕಿದಾಗ ಕರೆನ್ಸಿ ಇಲ್ಲ, ಕರೆನ್ಸಿ ಇದ್ದಾಗ ಸಿಗ್ನಲ್ ಇಲ್ಲ.
– ಮಾತು ಆಡಿದರೆ ಹೋಯಿತು, ಮೊಬೈಲ್ ಬಿದ್ದರೆ ಹೋಯಿತು.
– ಮೊಬೈಲ್‌ಗಿಂತ ಅದರ ಕವರ್ ಭಾರ.
– ಇಂದಿನ ಮಕ್ಕಳೇ ಮುಂದಿನ ಇಂಟರ್ನೆಟ್ ಬಳಕೆದಾರರು.
– ಊರಿಗೆ ಬಂದವನು ಛಾರ್ಜರ್ ಕೇಳಿಕೊಂಡು ಬಾರದಿರುವನೆ?
– ಕಾಮಕ್ಕೆ ಕಣ್ಣಿಲ್ಲ , ವಾಟ್ಸಾಪ್ ನೋಡುವವನಿಗೆ ಮಾನಮರ್ಯಾದೆ ಇಲ್ಲ.
– ಮೊಬೈಲೇ ಮಕ್ಕಳ ಮೊದಲ ಶಾಲೆ.
– ಆಳಾಗಿ ದುಡಿದರೆ ಸ್ಮಾರ್ಟ್‌ಫೋನ್‌ಗೆ ಅರಸನಾಗಬಹುದು.
– ಚಾಟಿಂಗ್‌ನಲ್ಲಿ ಮುಳುಗಿರುವವನ ಮುಂದೆ ಕಿನ್ನರಿ ಬಾರಿಸಿದ ಹಾಗೆ.
– ಮೊಬೈಲ್‌ನ ಸ್ಕ್ರೀನ್ ಒಡೆದರೆ ದನಿ ಒಡೆಯುತ್ತದೆಯೆ?
– ಮೊಬೈಲ್‌ನ ಪಾಸ್‌ವರ್ಡ್ ಗೊತ್ತಾದರೆ ಬಣ್ಣಗೇಡು.
– ಕೈಕೆಸರಾದರೆ ತೊಳೆದು ಮೊಬೈಲ್ ಮುಟ್ಟು .
– ಕಾಲು ಇದ್ದಷ್ಟು ಹಾಸಿಗೆ, ದುಡ್ಡು ಇದ್ದಷ್ಟು ಕರೆನ್ಸಿ.
– ಜ್ಞಾನ ದೇಗುಲವಿದು, ಮೊಬೈಲ್ ಸ್ವಿಚ್ ಆಫ್ ಮಾಡಿ ಒಳಗೆ ಬನ್ನಿ. .ಮೊಬೈಲ್ ಚಿಕ್ಕದಾದರೂ ಜಂಭ ದೊಡ್ಡದು.
– ಶಿವಪೂಜೇಲಿ ಮೊಬೈಲ್ ರಿಂಗ್ ಆದ ಹಾಗೆ.
– ಎಂಜಲು ಕೈಯಲ್ಲಿ ಮೊಬೈಲ್ ಮುಟ್ಟದವನು.
– ಮೊಬೈಲ್ ಹಲವು, ಛಾರ್ಜರ್ ಒಂದು.
– ಕಣ್ಣಾರೆ ಕಂಡರೂ ಯೂಟ್ಯೂಬ್‌ನಲ್ಲಿ ಪರಾಂಬರಿಸಿ ನೋಡಬೇಕು.
– ಕುಂಬಳಕಾಯಿ ಕಳ್ಳ ಎಂದರೆ ವಾಟ್ಸಾಪ್ ಚೆಕ್ ಮಾಡಿದನಂತೆ.
– ಅಡಿಕೆಗೆ ಹೋದ ಮಾನ ಆ್ಯಪಲ್ ಫೋನ್ ಕೊಟ್ಟರೂ ಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.