ಕೊರೊನಾ ಪಾರಾಗೋಣ


Team Udayavani, Feb 9, 2020, 5:47 AM IST

Saptha-Corona

ಪ್ರಪಂಚದ ಅತ್ಯಂತ ಮುಂದುವರಿದ ದೇಶಗಳ ಸಾಲಿನಲ್ಲಿ ನಿಲ್ಲುವ ಪ್ರಯತ್ನವನ್ನು ಚೀನಾ ಮುಂದುವರಿಸಿರುವಂತೆಯೇ ಈ ಸುದ್ದಿ ಜಗತ್ತನ್ನೇ ಕಂಗೆಡಿಸಿದೆ. ಸಾಂಪ್ರದಾಯಿಕ ಭಾಷೆಯಲ್ಲಿ ಹೇಳುವುದಾದರೆ ಎಲ್ಲವೂ ವಿಧಿಯ ಆಟ ! ಪ್ರಕೃತಿಯನ್ನು ಮೀರಿ ಬದುಕುವ ಪ್ರಯತ್ನವನ್ನು ನಡೆಸಿದರೆ ಪ್ರಕೃತಿಯೇ ಮನುಷ್ಯನನ್ನು ನಿಯಂತ್ರಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಇಂದು ಕೊರೊನಾ ವೈರಸ್‌ನ ಅಟಾಟೋಪ ನಮ್ಮೆದುರಿಗಿದೆ. ಇದರಿಂದ ಹೇಗೆ ಪಾರಾಗೋಣ?


ಕೆ. ಸಿ. ರಘು ; [email protected]

ಈ ಲೇಖನ ಬರೆಯುವಾಗ ಕಾಸರಗೋಡಿನಲ್ಲಿ ಕೊರೊನಾ ವೈರಸ್‌ ಬಾಧೆಗೆ ಸಂಬಂಧಿಸಿ ಮೂರು ಪ್ರಕರಣಗಳು ದಾಖಲಾದ ಸುದ್ದಿಯಿದೆ. ಇದೇ ಕಾಸರಗೋಡಿನಲ್ಲಿ ಎಂಡೋಸಲ್ಫಾನ್‌ ಸಂತ್ರಸ್ತರು ಎಷ್ಟು ಮಂದಿ ಇದ್ದಾರೆ ! ಎಂಡೋಸಲ್ಫಾನ್‌ ಕೂಡ ಮನುಷ್ಯನೇ ಕೃತಕವಾಗಿ ತಂದುಕೊಂಡ ಸಮಸ್ಯೆ. ಯಾರದೋ ಅವಸರದ ಕಾರ್ಯಾಚರಣೆಗೆ ಇನ್ಯಾರೋ ಬಲಿಯಾಗಬೇಕಾಯಿತು. ಆದರೆ, ಎಂಡೋಸಲ್ಫಾನ್‌ ಸಂತ್ರಸ್ತರನ್ನು ಫೋಟೋಗಳಲ್ಲಿ ಸುಮ್ಮನೆ ನೋಡಿ ನಿರ್ಲಿಪ್ತರಾಗಿ ಬಿಡುತ್ತಿದ್ದ ನಮ್ಮನ್ನು ಕೊರೊನಾ ವೈರಸ್‌ ಕೊಂಚ ಅಲುಗಾಡಿಸುತ್ತಿದೆ. “ಗಾಳಿಗೆ ಬೆಂಕಿ ಹಿಡಿದಂತೆ’ ಎಂಬ ಮಾತಿದೆ. ಹಾಗೆಯೇ ಗಾಳಿಗೆ ವೈರಸ್‌ ಹಿಡಿದಂತೆ ಎಂಬ ಮಾತು ಎಷ್ಟು ಪ್ರಸ್ತುತ!

ಹಾಗೆ ನೋಡಿದರೆ, ಎಲ್ಲವೂ ನಾವು ತಂದುಕೊಂಡ ಸಮಸ್ಯೆಗಳೇ. ತಿಳಿಯಬೇಕಾದರೆ ಕೊಂಚ ಆಳಕ್ಕಿಳಿಯಬೇಕು. ರೋಗಶಾಸ್ತ್ರದಲ್ಲಿ ಹಳೆಯ ರೂಪಕ ಕತೆಯೊಂದಿದೆ: ಇಬ್ಬಿಬ್ಬರು ಮಕ್ಕಳಿದ್ದ ದಂಪತಿಯೊಂದು ಪ್ರತ್ಯೇಕವಾಗಿ ಮರುಮದುವೆಯಾಗಿ ಮತ್ತಿಬ್ಬಿಬ್ಬರು ಮಕ್ಕಳನ್ನು ಪಡೆದರಂತೆ. ಒಂದೇ ಮನೆಯಲ್ಲಿ ಮಕ್ಕಳು ಗದ್ದಲ ಮಾಡತೊಡಗಿದರಂತೆ. ಆಗ ಹೆಂಡತಿಯೊಬ್ಬಳು ತನ್ನ ಗಂಡನನ್ನು ಕರೆದು, ‘ನೋಡ್ರಿ, ಇಲ್ಲಿ ನಿಮ್ಮಿಬ್ಬರ ಮಕ್ಕಳು, ನನ್ನಿಬ್ಬರ ಮಕ್ಕಳೊಂದಿಗೆ ಸೇರಿಕೊಂಡು, ನಮ್ಮಿಬ್ಬರ ಮಕ್ಕಳಿಗೆ ಹೊಡೆಯುತ್ತಿದ್ದಾರೆ!’

ಒಟ್ಟೂ ಗೊಂದಲ! ಇವತ್ತು ರೋಗಾಣುಗಳು ಮಿಶ್ರಣಗೊಳ್ಳುತ್ತಿವೆ. ಒಟ್ಟಾರೆಯಾಗಿ ಅಧ್ವಾನ ಸೃಷ್ಟಿಸುತ್ತಿವೆ. ಚೀನಾದಲ್ಲಿ 25 ವರ್ಷಗಳ ಹಿಂದೆ ತಲಾ 5 ಕೆ.ಜಿ. ಮಾಂಸ ಬಳಸುತ್ತಿದ್ದರೆ, ಈಗ ಮಾಂಸ ಬಳಕೆಯ ಪ್ರಮಾಣ 60 ಕೆ.ಜಿ.ಯಷ್ಟು ಅಧಿಕವಾಗಿದೆಯಂತೆ. ಜಗತ್ತಿನ ಶೇ. 40ರಷ್ಟು ಜಾನುವಾರುಗಳು ಚೀನಾದಲ್ಲಿವೆ ಮತ್ತು ಅವುಗಳ ಬಳಕೆಯೂ ಅಲ್ಲಿ ಅಧಿಕವಾಗಿದೆಯಂತೆ.

ಚೀನಾದಲ್ಲಿ ಆಹಾರದ ದಾಹ ಎಷ್ಟು ಅಧಿಕವಾಗಿದೆ ಎಂದರೆ ಕಾಡು ಪ್ರಾಣಿಗಳಾದ ಬಾವಲಿ, ಹಾವು, ಕಾಡುಬೆಕ್ಕು ಮುಂತಾದ ಅನೇಕ ರೀತಿಯ ವನ್ಯಜೀವಿಗಳನ್ನು ತಿನಿಸಿಗೆ ಬಳಸಿಕೊಳ್ಳುತ್ತಾರೆ. ಅವುಗಳನ್ನು ತಂದು ಸಾಕುಪ್ರಾಣಿಗಳ ಮಾಂಸದ ಜೊತೆಯಲ್ಲಿ ಬೇಯಿಸುತ್ತಾರೆ. ಮಾಂಸ ಬಿಸಿಬಿಸಿಯಾಗಿ ತಾಜಾ ಆಗಿ ರುಚಿಕರವಾಗುತ್ತದೆ. ಆದರೆ, ವೈರಸ್‌ಗಳು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ದಾಟಿಕೊಂಡು ಬರುತ್ತವೆ. ಹೊಸ ವೈರಸ್‌ಗಳು ರೂಪುದಾಳುತ್ತವೆ.

ಸಾಮಾನ್ಯವಾಗಿ ರೋಗಾಣುಗಳನ್ನು ಉಂಟುಮಾಡಬಲ್ಲ ವೈರಸ್‌ ಆಗಿರಲಿ, ಫ‌ಂಗಸ್‌ ಆಗಿರಲಿ, ಬ್ಯಾಕ್ಟೀರಿಯಾ ಆಗಿರಲಿ ಜೀವಜಾಲದಲ್ಲಿ ತನಗೆ ಸೂಕ್ತವಾಗಿರುವುದನ್ನು ಆಯ್ಕೆ ಮಾಡಿಕೊಂಡು ಅಲ್ಲಿಯೇ ಮೊಕ್ಕಾಂ ಹೂಡುತ್ತವೆ. ಅದು ಸಸ್ಯವಾಗಿರಬಹುದು, ಪ್ರಾಣಿಯಾಗಿರಬಹುದು – ಯಾವುದೇ ಆಗಿರಬಹುದು, ಎಲ್ಲೆಂದರಲ್ಲಿ ಅವು ಜೀವಿಸುತ್ತವೆ. ಇತ್ತೀಚೆಗಿನ ವೈಜ್ಞಾನಿಕ ವರದಿಯ ಪ್ರಕಾರ ತಾಯಿಯಾಗುವವಳ ಗರ್ಭಚೀಲ ನಿರ್ಮಿತವಾಗಿರುವುದು ಒಂದು ಬಗೆಯ ವೈರಸ್‌ನಿಂದಲೇ! ಆದರೆ, ಕೆಲವೊಮ್ಮೆ ತನ್ನ ಬಳಿ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳು ತಮಗೆ ಆಶ್ರಯ ಕೊಟ್ಟವರನ್ನೇ ಬಲಿ ತೆಗೆದುಕೊಳ್ಳುವುದುಂಟು.

ಹೆಚ್ಚಾಗಿ ಇವುಗಳ ವ್ಯವಹಾರ ತಾವಾಯಿತು ತಮ್ಮ ಮನೆಯಾಯಿತು ಎಂಬಂತಿರುತ್ತದೆ. ಆದರೆ, ಅವುಗಳ ಅಸ್ತಿತ್ವಕ್ಕೆ ತೊಂದರೆಯಾದಾಗ ಅವು ತಿರುಗಿ ಬೀಳುತ್ತವೆ. ಮನುಷ್ಯ ಇಂದು ಪ್ರಕೃತಿಯನ್ನು ಪ್ರಕೃತಿಯಾಗಿ ಇರಲು ಬಿಟ್ಟಿಲ್ಲ. ಎಲ್ಲದರ ಮೇಲೂ ಸವಾರಿ ಮಾಡುತ್ತಿದ್ದಾನೆ. ಹಾಗಾಗಿ, ಪ್ರಕೃತಿಯಲ್ಲಿ ಜೀವಿಸಲು ಹಕ್ಕು ಹೊಂದಿರುವ ಇತರ ಜೀವಿಗಳ ಮೇಲೆ ಸವಾರಿ ಮಾಡುತ್ತಾನೆ. ಅವುಗಳ ವಿರೋಧ ಕಟ್ಟಿಕೊಳ್ಳುತ್ತಾನೆ.

ರೋಗಗಳ ಜಾಗತೀಕರಣ
ಇವತ್ತು ಜಾಗತೀಕರಣದ ಯುಗ. ವ್ಯಾಪಾರ, ಸಂಸ್ಕೃತಿ, ಸಾಹಿತ್ಯ, ಕಲೆಗಳು ದೇಶಗಳ ಮೇರೆ ಮೀರಿ ಸಾಗುತ್ತಿವೆ. ದೇಶ-ದೇಶಗಳ ಗಡಿರೇಖೆಗಳು ಮಸುಕಾಗಿ ಜಗತ್ತು ಒಂದಾಗುತ್ತಿದೆ ಎಂದು ಬೀಗಿಕೊಳ್ಳುತ್ತೇವೆ. ಆದರೆ, ರೋಗಗಳನ್ನು ಕೂಡ ‘ಜಾಗತೀಕರಣ’ಗೊಳ್ಳುವಲ್ಲಿ ಇಂದು ಯಶಸ್ವಿಯಾಗಿದ್ದೇವೆ ಎಂದು ಅಚ್ಚರಿಪಡಬಾರದು!

ನೀವು ನಂಬಿದರೆ ನಂಬಿ! ಸಾರ್ಸ್‌ ಎಂಬ ಕಾಯಿಲೆ ಇದೆ. ಅದನ್ನು ಹೊಂದಿದವನು ಚೀನಾ ದೇಶದಲ್ಲಿ ಲಿಫ್ಟ್ನಲ್ಲಿ ಹೋಗುತ್ತಿರುವಾಗ, ಅದೇ ಲಿಫ್ಟ್ನಲ್ಲಿರುವ ಉಳಿದ ಮೂವರು ವಿದೇಶಿಯರಿಗೆ ಅದರ ಸೋಂಕು ತಗಲುತ್ತದೆ. ಅವರು ತಮ್ಮ ಮೂರು ದೇಶಗಳಿಗೆ ಆ ರೋಗವನ್ನು ಒಯ್ಯುತ್ತಾರೆ. ಅಲ್ಲಿ ಪ್ರತಿ ಬಾರಿ ಮೂವರಿಗೆ ಹಂಚುತ್ತಾರೆ. ಸಾರಿಗೆ, ಸಂವಹನ ಕ್ಷೇತ್ರಗಳು ವೇಗವನ್ನು ಪಡೆದುಕೊಂಡಷ್ಟು ರೋಗಗಳು ಹರಡುವ ವೇಗವೂ ಅಧಿಕವೇ. ಕೊರೊನಾ ವೈರಸ್‌ ಒಬ್ಬನಿಂದ ಕನಿಷ್ಟ 3 ಮಂದಿಗೆ ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಈ ಕಾಯಿಲೆ ಪ್ರಾಣಿಯಿಂದ ಮನುಷ್ಯರಿಗೆ, ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ.

ಏಡ್ಸ್‌ , ನಿಫಾ, ಎಬೊಲಾ, ಸಾರ್ಸ್‌, ಝೀಕಾ, ಮರ್ಸ್‌ ಮುಂತಾದ ಹೆಸರುಗಳು ಕೇಳಿದರೆ ಇಡೀ ಜಗತ್ತೇ ನಡುಗುತ್ತದೆ. ಇವು ವೈರಸ್‌ನಿಂದ ಹರಡುವ ಕಾಯಿಲೆಗಳು. ಸುನಾಮಿಯಂತೆ ಅಪ್ಪಳಿಸಿ ಇಡೀ ಜಗತ್ತಿನ ವ್ಯವಹಾರವನ್ನು ಸ್ವತ್ಛಗೊಳಿಸಬಲ್ಲವು. ವಿಮಾನಗಳು ಹಾರಾಡದಂತೆ ಮಾಡಬಲ್ಲವು. ಹಡಗುಗಳನ್ನು ಸ್ಥಗಿತಗೊಳಿಸಬಲ್ಲವು. ರೈಲುಗಳಲ್ಲಿ ಜನರಿಲ್ಲದಂತೆ ಮಾಡಬಲ್ಲವು. ಮನುಷ್ಯರು ಬೀದಿಗಿಳಿಯುವಂತೆ ಮಾಡಬಲ್ಲವು. ವ್ಯಾಪಾರ-ವಹಿವಾಟುಗಳನ್ನು ಹಿಮ್ಮೆಟ್ಟಿಸಿ ಬಿಡಬಲ್ಲವು.

ಹಾಗೆಂದು, ಈ ವೈರಸ್‌ಗಳು ದೊಡ್ಡ ಬಕಾಸುರನ ಗಾತ್ರದಷ್ಟಿವೆ ಎಂದೇನಾದರೂ ಹೇಳಬಹುದೆ? ಇಲ್ಲವೇ ಇಲ್ಲ. ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳಿವು. ಹಾಗೆಂದು ಇವು ಸ್ವತಂತ್ರ ಜೀವಿಗಳಲ್ಲ. ಇನ್ನೊಂದು ಜೀವಿಯ ದೇಹದೊಳಗೆ ಬದುಕಲು ಮಾತ್ರ ಸಾಧ್ಯವಾಗಬಲ್ಲಂಥವು. ಇನ್ನೊಂದು ಜೀವದೊಳಗೆ ಮಾತ್ರ ಇವುಗಳಿಗೆ ಪ್ರಾಣವಾಯು ಲಭ್ಯವಾಗುವುದು. ಇಂದಿಗೂ ವಿಜ್ಞಾನಕ್ಕೆ ಇವು ಜೀವಿಗಳೊ, ನಿರ್ಜೀವಿಗಳೊ ಎಂಬುದನ್ನು ನಿರ್ಧರಿಸಲು ಸಾಧ್ಯವಾಗಿಲ್ಲ. ಇವುಗಳ ಹುಟ್ಟು , ಬೆಳವಣಿಗೆಗೆ ಮತ್ತು ಬದಲಾವಣೆಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಿಲ್ಲ.

ಇನ್ನೊಂದು ಜೀವಿಯ ದೇಹದೊಳಕ್ಕೆ ಹೊಕ್ಕರೆ ಆ ದೇಹದ ವಹಿವಾಟನ್ನು ಬಳಸಿಕೊಂಡು ತಮ್ಮ ಸಂತಾನವನ್ನು ವೃದ್ಧಿಸುತ್ತವೆ. ತಮ್ಮ ರೋಗನಿರೋಧಕ ಸೈನ್ಯ ಪಡೆಯನ್ನು ಬಳಸಿ ಆಶ್ರಯ ಹೊಂದಿದ ದೇಹದ ವಿರುದ್ಧವೇ ಸಮರ ಸಾರಬಲ್ಲವು. ಕೆಲವೊಮ್ಮೆ ಸೈನಿಕರು ಶತ್ರುಗಳ ಪಾಳೆಯಕ್ಕೆ ನುಗ್ಗಿ ಅಲ್ಲಿನ ಆಯುಧಗಳನ್ನು ಕದ್ದು ಅವುಗಳನ್ನೇ ಶತ್ರುಗಳ ವಿರುದ್ಧ ಬಳಸುತ್ತಾರಲ್ಲವೆ, ಹಾಗೆಯೇ ಇದು ಕೂಡ.

ಏಡ್ಸ್‌ ಎಂದರೆ ಎಂದೆಂದಿಗೂ ಭಯವೇ. ಆದರೆ, ಶಿಸ್ತಿನ ಬದುಕನ್ನು ನಡೆಸುವವನಿಗೆ ಭೀತಿ ಇಲ್ಲ. ಹಾಗೆಂದು ಏಡ್ಸ್‌ನ್ನು ವಾಸಿ ಮಾಡುವಂಥ ಔಷಧಿಗಳನ್ನು ಇಂದಿಗೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ, ಕೊಂಚ ಮಟ್ಟಿಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವಂಥ ಔಷಧಿಗಳು ಮಾತ್ರ ಇವೆ. ಝೀಕಾ, ಸಾರ್ಸ್‌, ಮರ್ಸ್‌ ಮತ್ತು ಎಬೋಲಾ ವೈರಸ್‌ಗಳು ಹಾನಿಕಾರಕವೇ. ಆದರೆ, ಒಂದೆಡೆಯೇ ನಿಂತು ನಿರಂತರ ಕಾಟಕೊಡುವಂಥವು ಅಲ್ಲ. ಒಮ್ಮೆ ಬರುತ್ತವೆ, ಆಗಾಗ ಬರುತ್ತವೆ. ಆದರೆ, ಮಾಯವಾಗುತ್ತವೆ.

ಈಗ ಈ ಕೊರೊನಾ ವೈರಸ್‌ ಎಲ್ಲೆಲ್ಲೂ ಸುದ್ದಿಯಲ್ಲಿದೆ. ಒಂದು ರೀತಿಯಲ್ಲಿ ಮನುಷ್ಯನ ಮೇಲೆ ಪ್ರಕೃತಿಯೇ ಬಳಸಿರುವ ಆಯುಧದಂತಿದೆ ಈ ವೈರಸ್‌. ಇದರ ಹುಟ್ಟು ಬಹಳ ಹಿಂದೆ ಆದದ್ದಲ್ಲ, ಮೊನ್ನೆ ಮೊನ್ನೆ ಆದದ್ದು. ವೈರಸ್‌ಗೆ ಅದು ಹುಟ್ಟಿದ ಜಾಗದ ಅಥವಾ ಭೌಗೋಳಿಕ ಪರಿಸರದ ಹೆಸರಿಡಬಾರದೆಂಬ ನಿಯಮವಿದೆ. ಪ್ರಾಣಿ ಅಥವಾ ಮನುಷ್ಯರ ಹೆಸರನ್ನೂ ಇಡಬಾರದೆಂದಿದೆ. ಕಾಯಿಲೆಗಳನ್ನು ಹಂದಿ, ಕೋಳಿ ಕಾಯಿಲೆ ಎಂದೆಲ್ಲ ಕರೆಯಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.

ಸಾರ್ಸ್‌, ಎಬೊಲಾ- ಇವೆಲ್ಲ ಮತ್ತೂಂದು ಮಾದರಿಯ ಹೆಸರುಗಳು.
ಕೊರೊನಾ ವೈರಸ್‌ಗೆ ವೂಹಾನ್‌ ವೈರಸ್‌ ಎಂದೂ ಚೀನಾದಲ್ಲಿ ಕರೆಯುತ್ತಾರೆ. ಯಾಕೆಂದರೆ, ಇದು ವೂಹಾನ್‌ ನಗರದಲ್ಲಿ ಹುಟ್ಟಿದ ವೈರಸ್‌ ಎಂಬುದು ಕಾರಣ. ಅಂತೂ ಪುಟ್ಟ ನಗರದಲ್ಲಿ ಹುಟ್ಟಿದ ವೈರಸ್‌ ಇಡೀ ಜಗತ್ತನ್ನು ನಡುಗಿಸುವ ಹಂತಕ್ಕೆ ತಲುಪಿದೆ. ಅಂದಹಾಗೆ, ಈ ವೈರಸ್‌ನ ವಿಶೇಷತೆ ಎಂದರೆ, ರೋಗಲಕ್ಷಣ ಕಾಣಿಸುವ ಮೊದಲೇ ಹರಡಿಬಿಡುತ್ತದೆ.

ಕೊರೊನಾ ಎಂದರೆ ಒಂದು ವೈರಸ್‌ ಗುಂಪಿನ ಅಥವಾ ಕುಟುಂಬದ ಹೆಸರು. ನಾವಲ್‌ ಕೊರೊನಾ ವೈರಸ್‌ (NCOV) ಎಂಬುದು ಪೂರ್ಣ ಹೆಸರು. ನಾವಲ್‌ ಎಂದರೆ ಹೊಸದು ಎಂದಷ್ಟೇ ಅರ್ಥ. ಆದರೆ ದುರಂತವೆಂದರೆ, ಈ ಹೊತ್ತಿಗೆ 25 ದೇಶಗಳಲ್ಲಿ 25 ಸಾವಿರ ಜನಗಳಿಗೆ ಈ ವೈರಸ್‌ ತಗಲಿಕೊಂಡಿದೆ ಎಂಬ ಸುದ್ದಿಯಿದೆ. ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಸಾರ್ಸ್‌ ಬಾಧಿತರ ಸಾವಿನ ಪ್ರಮಾಣಕ್ಕಿಂತ ಇದು ಅಧಿಕವಾಗಿದೆ. ಎಲ್ಲವೂ ವೇಗವಾಗಿರಬೇಕು, ಎಲ್ಲರೂ ವೇಗವಾಗಿ ಸಾಗಬೇಕು ಎಂದು ಬಯಸುವ ನಾವು ವೈರಸ್‌ ವೇಗವಾಗಿ ಹಬ್ಬುವುದನ್ನು ಯಾಕೆ ಬೇಡವೆನ್ನುತ್ತೇವೆ? ಎಂಥ ವ್ಯಂಗ್ಯವಿದು!

ಚೀನಾ ದೇಶವನ್ನು ಇವತ್ತು ಜಗತ್ತಿನ ಉತ್ಪಾದನಾ ತವರು (Worlds workshop) ಎನ್ನುತ್ತೇವೆ. ಇದು ಜಗತ್ತಿನ ಎರಡನೆಯ ಅತಿ ದೊಡ್ಡ ಆರ್ಥಿಕ ಬಲಾಡ್ಯ ದೇಶ. ಇಲ್ಲಿ ವಾರ್ಷಿಕ ವ್ಯವಹಾರ 14 ಟ್ರಿಲಿಯನ್‌ ಡಾಲರ್‌ ಅಂದರೆ ಸಾವಿರ ಲಕ್ಷ ಕೋಟಿ ವ್ಯವಹಾರ. ಭಾರತಕ್ಕಿಂತ ಐದು ಪಟ್ಟು ಅಧಿಕ! ಸುಮಾರು 300 ಲಕ್ಷ ಕೋಟಿ ವ್ಯವಹಾರ ಹೊರದೇಶಗಳ ಜೊತೆಗಿದೆ. ಹಾಗಾಗಿ, ಚೀನಾದಿಂದ ಬೇರೆ ದೇಶಕ್ಕೆ, ಬೇರೆ ದೇಶಗಳಿಂದ ಚೀನಾಕ್ಕೆ ಕೋಟಿ ಸಂಖ್ಯೆಯಲ್ಲಿ ಜನ ಹೋಗಿ ಬರುತ್ತಾರೆ.

ಕಳೆದ ವರ್ಷ ಚೀನಾಕ್ಕೆ ಹೋಗಿಬಂದ ಪ್ರವಾಸಿಗರ ಸಂಖ್ಯೆಯೇ 144 ಕೋಟಿಯಾಗುತ್ತದಂತೆ. ಅಂದರೆ ಜಗತ್ತಿನ 750 ಕೋಟಿ ಜನರಲ್ಲಿ ಶೇ. 20ರಷ್ಟು ಮಂದಿ ದೇಶದಿಂದ ದೇಶಕ್ಕೆ ಸುತ್ತಾಡಿದ ಹಾಗಾಯಿತು. ಹಾಗಾಗಿ, ವೈರಸ್‌ ಪ್ರಸರಣದ ಪ್ರಮಾಣವೂ ಅಧಿಕವಾಗುತ್ತ ಹೋಯಿತು.

ಈ ಕೊರೊನಾ ವೈರಸ್‌ ಎಷ್ಟು ದಿನ ಉಳಿಯಬಹುದು, ಎಷ್ಟು ಅನಾಹುತ ಮಾಡಬಹುದು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಸಾರ್ಸ್‌ ವೈರಾಣು 6 ತಿಂಗಳಲ್ಲಿ ಹರಡುವಷ್ಟು ಪ್ರಮಾಣದಲ್ಲಿ 2 ವಾರದಲ್ಲಿ ಕೊರೊನಾ ಹರಡಿದೆ. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ‘ಜಾಗತಿಕ ತುರ್ತು ಪರಿಸ್ಥಿತಿ’ ಎಂದು ಘೋಷಿಸಿದೆ.
ಚೀನಾದಲ್ಲಿ ಎಂಥ ಸ್ಥಿತಿ ಇದೆ ಎಂದರೆ ಅಲ್ಲಿ ನಗರಗಳು, ಮನೆಗಳು ಮನುಷ್ಯರು ಎಲ್ಲವೂ, ಎಲ್ಲರೂ ದಿಗ್ಭಂಧನದಲ್ಲಿದ್ದಾರೆ. ಮೊನ್ನೆ ವೃದ್ಧೆಯೊಬ್ಬಳು ಮುಖಗವಸು ಇಲ್ಲದೆ ಬೀದಿಗಿಳಿದಳಂತೆ. ಆಗ ಆಕಾಶದಲ್ಲಿ ಡ್ರೋನ್‌ ಬಂದು ಮನೆಯೊಳಗೆ ಹೋಗುವಂತೆ ಅವಳಿಗೆ ಎಚ್ಚರಿಕೆ ನೀಡಿತಂತೆ.

ಚೀನಾ ರೋಗದ ವಿರುದ್ಧ ಕಾರ್ಯಾಚರಣೆಯಲ್ಲಿ ಹಿಂದುಳಿದಿಲ್ಲ. 4 ದಿನದಲ್ಲಿ ವೈರಸ್‌ನ ರೋಗಾಣುವಿನ ಪತ್ತೆ ಹಚ್ಚಿದೆ. ಒಂದೇ ವಾರದಲ್ಲಿ 2.5 ಸಾವಿರ ಹಾಸುಗೆಗಳ ಆಸ್ಪತ್ರೆಯನ್ನು ನಿರ್ಮಿಸಿದೆ. ಇವೆಲ್ಲ ಚೀನಾದಲ್ಲಿ ಮಾತ್ರ ಸಾಧ್ಯ. ಆದರೆ, ಚೀನಾದ ಮೇಲೆ ಒಂದು ಆರೋಪವೂ ಇದೆ. ಈ ಹಿಂದೆ ಸಾರ್ಸ್‌ ರೋಗ ಬಂದಾಗ ಅದನ್ನು ಆರಂಭಿಕ ಹಂತದಲ್ಲಿ ಮುಚ್ಚಿಡಲು ಪ್ರಯತ್ನಿಸಿದಂತೆ ಕೊರೊನಾ ಬರುವಾಗಲೂ ಅದನ್ನು ಆರಂಭದಲ್ಲಿ ರಹಸ್ಯವಾಗಿರಿಸಿತಂತೆ!

ಈ ಹಿಂದೆಲ್ಲ ಹೊಸ ಕಾಯಿಲೆಗೆ ಲಸಿಕೆ ಕಂಡುಹಿಡಿಯಲು ಹತ್ತಾರು ವರ್ಷಗಳು ಬೇಕಾಗುತ್ತಿದ್ದವು. ಆದರೆ, ಈಗ ಹಾಗಲ್ಲ, ಕೆಲವೇ ತಿಂಗಳುಗಳಲ್ಲಿ ವಿಜ್ಞಾನಿಗಳು ವೈರಸ್‌ ವಿರುದ್ಧ ಸಮರ ಸಾರುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ವೈರಾಣುಗಳ ವಿರುದ್ಧ ಹೋರಾಟದಲ್ಲಿ ಒಂದು ಸವಾಲಿದೆ. ಇವು ಪ್ರತೀ ಬಾರಿ ತಮ್ಮ ತಂತ್ರಗಾರಿಕೆಯನ್ನು ಬದಲಿಸಿಕೊಳ್ಳುತ್ತವೆ. ಹಾಗಾಗಿ, ಇಂದಿಗೂ ವೈರಾಣುಗಳಿಂದ ಬರುವ ನೆಗಡಿ ಜ್ವರ ಅಥವಾ ಫ್ಲ್ಯೂಗೆ ಪ್ರತೀ ಬಾರಿ ಹೊಸ ಲಸಿಕೆಯನ್ನೇ ಕಂಡುಹಿಡಿಯಬೇಕಾಗಿದೆ.

ಪ್ರತಿ ಬಾರಿ ಹೊಸ ಕಾಯಿಲೆ ಬಂದಾಗ ಕೆಲವರು ನಮ್ಮಲ್ಲಿ ಇದಕ್ಕೆ ಔಷಧ ಉಂಟು ಎಂದು ಹೇಳುವುದುಂಟು. ಈಗಂತೂ ವಾಟ್ಸಾಪ್‌ ಪ್ರಸರಣದ ದಿನಗಳಲ್ಲಿ ಈ ಸುದ್ದಿಗಳು ಬಹುಬೇಗ ಹರಡಿಕೊಳ್ಳುತ್ತವೆ. ಇವನ್ನೆಲ್ಲ ನಂಬದಿರುವುದೇ ಸೂಕ್ತ. ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಷನ್‌ ಅಥವಾ ವೈಜ್ಞಾನಿಕ ನಿಯತಕಾಲಿಕದ ಸುದ್ದಿಗಳನ್ನಷ್ಟೇ ನಂಬಬಹುದು. ಆರೋಗ್ಯ ಸಂಸ್ಥೆಗಳು ಹೇಳಿದ ನಿಯಮಗಳನ್ನು ಅನುಸರಿಸುವುದೇ ಸೂಕ್ತ. ಶೀತ-ನೆಗಡಿ ಆದಾಗ ಮಾಸ್ಕ್ ಹಾಕಿ ಹೊರಗೆ ಕಾಣಿಸಿಕೊಳ್ಳುವುದು ಸರಿಯಾದ ಕ್ರಮ. ಚೀನಾದಲ್ಲಿ ಬೇಕಾದಷ್ಟು ಮಾಸ್ಕ್ಗಳೂ ಸಿಗುವುದಿಲ್ಲವೆಂದು ಸುದ್ದಿಯಾಗಿದೆ.

ಕಳೆದ ವರ್ಷ ನಿಫಾ ವೈರಸ್‌ನ ಹಾವಳಿಯ ಸಂದರ್ಭವನ್ನು , ನೆರೆ ದುರಂತದ ದಿನಗಳನ್ನು ಕೇರಳ ಅತ್ಯಂತ ಸಂಯಮದಿಂದ ನಿರ್ವಹಿಸಿದೆ. ಈಗಲೂ ಅಂಥದೇ ಮನೋಸ್ಥಿತಿ ಈ ರೋಗವನ್ನು ನಿಯಂತ್ರಿಸಬಲ್ಲುದು.

ಪ್ಲೇಗ್‌ನ ಕತೆ
ಫ್ರೆಂಚ್‌ ಬರಹಗಾರ ಅಲ್ಬರ್ಟ್‌ ಕಮೂ 1947ರಲ್ಲಿ ಬರೆದ ಕಾದಂಬರಿ ಲ ಪೆಸ್ತೆ ಜಗತ್ಪ್ರಸಿದ್ಧವಾಗಿತ್ತು. ದ ಪ್ಲೇಗ್‌ ಎಂಬುದು ಇದರ ಇಂಗ್ಲಿಶ್‌ ರೂಪಾಂತರ. ಫ್ರಾನ್ಸ್‌ನ ಒರಾನ್‌ ನಗರಕ್ಕೆ ಪ್ಲೇಗ್‌ ರೋಗ ಬಡಿದು ಅಲ್ಲಿನ ಜನ ನಾಶವಾಗುವ ದುರಂತ ಚಿತ್ರಣವಿದು. ಆದರೆ, ಇದು ರೂಪಕ ಮಾತ್ರ. ವಾಸ್ತವದಲ್ಲಿ ಪ್ಲೇಗ್‌ ಎಂದರೆ ಆಧುನಿಕತೆ. ವಸಾಹತೀಕರಣದ ಮೂಲಕ ಅಥವಾ ವಸಾಹತು ಸ್ಥಾಪಿಸುವ ದೇಶಗಳು ತಮ್ಮ ಸಂಸ್ಕೃತಿಯನ್ನು ಹೇರುವ ಮೂಲಕ ಮೂಲ ಸಂಸ್ಕೃತಿ ಹೇಗೆ ನಾಶವಾಗುತ್ತದೆ ಎಂಬುದಕ್ಕೆ ಪ್ರತಿಮಾತ್ಮಕವಾಗಿ ಈ ಕಾದಂಬರಿಯ ವಸ್ತು ಇದೆ.

ಇವತ್ತು ಕೊರೊನಾ ವೈರಸ್‌ನ ಕತೆಯೂ ಇದೇ. ಜಗತ್ತಿನ ಯದ್ವಾತದ್ವಾ ವೇಗದೊಂದಿಗೆ ರೋಗಾಣುವೂ ಸ್ಪರ್ಧಿಸುತ್ತಿರುವಂತಿದೆ. ಜಾಗತೀಕರಣದ ಮೂಲಕ ರೋಗಗಳೂ ಕ್ಷಿಪ್ರವಾಗಿ ದೇಶದಿಂದ ದೇಶಕ್ಕೆ ದಾಟುತ್ತಿವೆ. ಪ್ಲೇಗ್‌, ಕಾಲರಾ ರೋಗಗಳನ್ನು ಕನ್ನಡದ ಕಾದಂಬರಿಗಳಲ್ಲಿಯೂ ರೂಪಕಾತ್ಮಕವಾಗಿ ಬಳಸಿದ್ದಿದೆ.

ಚೀನಾಕ್ಕೆ ಮರಳುವ ಕನಸಿನೊಂದಿಗೆ…
ಬೀಜಿಂಗ್‌ ಸಮೀಪದ ಬೋಡಿಂಗ್‌ ನಗರದಲ್ಲಿ ನಾನು ಉದ್ಯೋಗ ಮಾಡುತ್ತಿದ್ದೇನೆ. ಚೀನಾದ ವಾರ್ಷಿಕ ಹಬ್ಬದ ಪ್ರಯುಕ್ತ ನಾನು ಊರಿಗೆ ಬಂದಿದ್ದೆ. ಆ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿ ಸಾಮಾನ್ಯವಾಗಿ ಇತ್ತು. ಈಗಲೂ ಹೆಚ್ಚಿನದಾಗಿ ಸಾಮಾನ್ಯವಾಗಿಯೇ ಇದೆ. ಆದರೆ, ವೂಹಾನ್‌ ಇತ್ಯಾದಿ ಪ್ರಾಂತ್ಯಗಳಲ್ಲಾದ ಅತಿ ದುಷ್ಪ‌ರಿಣಾಮದಿಂದ, ಅಲ್ಲಿ ಅತ್ಯಂತ ಸುಸಜ್ಜಿತ ಮುಂಜಾಗ್ರತೆಯ ಕ್ರಮ ಜಾರಿಯಲ್ಲಿದೆ.
ನಾನು ಊರಿಗೆ ಬರುವ ಸಂದರ್ಭದಲ್ಲಿ ಕೊರೊನಾ ವೈರಸ್‌ ಬಗ್ಗೆ ಚರ್ಚೆ ಆಗಿರಲಿಲ್ಲ. ಆದರೆ, ವೂಹಾನ್‌ ಪ್ರಾಂತ್ಯದಲ್ಲಿ ಇದು ಆಗಲೇ ಕಾಣಿಸಿಕೊಂಡು ಸುದ್ದಿ ಮಾಡಿತ್ತು.

ಬೆಂಗಳೂರು ಅಥವಾ ವೇಗವಾಗಿ ಬೆಳೆಯುತ್ತಿರುವ ಭಾರತದ ಯಾವುದೇ ನಗರಗಳನ್ನು ತೆಗೆದುಕೊಳ್ಳಿ, ಕಳೆದ 10 ವರ್ಷಗಳಲ್ಲಿ ನಾವು ಹೊಸ ವೈರಸ್‌ ಗಳಾದ H1N1, ಕ್ಯಾಸನೂರ್‌, ನಿಫಾ ಇತ್ಯಾದಿಗಳನ್ನು ಕಾಣುತ್ತಿದ್ದೇವೆ. ಇದು ಮುಖ್ಯವಾಗಿ ಜ್ವರ, ಶ್ವಾಸಕೋಶ ಸಂಬಂಧಿತವಾದವು. ವಾಯುಮಾಲಿನ್ಯ, ರಾಸಾಯನಿಕ ಅತಿಬಳಕೆ, ಜೈವಿಕ ಶಸ್ತ್ರಾಸ್ತ್ರ ಗಳ ಕಲ್ಪನೆಯ ಈ ಯುಗದಲ್ಲಿ ಈ ರೋಗಗಳ ಮರುಕಳಿಕೆ ಎಂಥ ನಗರಗಳಲ್ಲೂ ಆಗಬಹುದು. ಇದು ಚೀನಾ ದೇಶಕ್ಕೇ ಸೀಮಿತ ಎಂದು ಹೇಳಲಾಗದು.

ಚೀನಾ ಈ ಬಗ್ಗೆ ಅತ್ಯಂತ ಸುಸಜ್ಜಿತವಾದ ಕ್ರಮ ತೆಗೆದುಕೊಂಡಿದೆ. isolation, mask, ರೋಗ ಪೀಡಿತ ಪ್ರದೇಶಗಳಿಗೆ ಪ್ರವೇಶ ನಿಷೇಧ ಇತ್ಯಾದಿ ಎಲ್ಲಾ ಮುಂಜಾಗ್ರತೆಯ ಕ್ರಮ ಅನುಷ್ಠಾನದಲ್ಲಿದೆ.
ನನ್ನ ಪ್ರಕಾರ ಜನದಟ್ಟಣೆ, ಸಾರ್ವಜನಿಕ ಸಾರಿಗೆ, ಮಾರುಕಟ್ಟೆಗಳು, ಸಭೆ -ಸಮಾರಂಭ ಬಹುತೇಕ ಪಟ್ಟಣಗಳಲ್ಲಿ ಇರುವುದರಿಂದ ರೋಗ ಹಬ್ಬುವ ಪ್ರಮಾಣ ಜಾಸ್ತಿ ಎನ್ನಬಹುದು.

ಚೀನಾದ ವ್ಯವಸ್ಥಿತ ಕ್ರಮಗಳನ್ನು ನೋಡಿದಾಗ, ಪ್ರತಿಯೊಂದನ್ನೂ ವಿರೋಧಿಸುವ ಛಾತಿಯಲ್ಲಿರುವ ನಮ್ಮಲ್ಲಿ ಇಂಥ ಸವಾಲು ಎದುರಾಗಿದ್ದರೆ ಅದನ್ನೆದುರಿಸಲು ಎಷ್ಟು ಸನ್ನದ್ಧರಿದ್ದೇವೆ ಎಂಬ ಪ್ರಶ್ನೆ ಕಾಡುತ್ತದೆ.

ಅಂದಹಾಗೆ, ಚೀನಾದ ವಾರ್ಷಿಕ ರಜೆಯ ಪ್ರಯುಕ್ತ ಅವರವರ ದೇಶಗಳಿಗೆ ತೆರಳಿರುವ ಬಹುತೇಕ ಗೆಳೆಯರು ಸುರಕ್ಷಿತವಾಗಿದ್ದಾರೆ. ಅಲ್ಲಿ ತಮ್ಮ ಮನೆಗಳಲ್ಲಿ ಉಳಿದುಕೊಂಡಿರುವ ಸ್ಥಳೀಯ ಗೆಳೆಯರು ಸುರಕ್ಷಿತವಾಗಿರಲಿ, ನಾನು- ನನ್ನ ಗೆಳೆಯರು ಬೇಗನೆ ಚೀನಾಕ್ಕೆ ಮರಳುವಂತಾಗಲಿ ಎಂದಷ್ಟೇ ಹಾರೈಸಬಹುದು.

ಬಾಲಸುಬ್ರಹ್ಮಣ್ಯ ಭಟ್‌ ; [email protected]

ಟಾಪ್ ನ್ಯೂಸ್

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

New Delhi; Argument with classmates;

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thane; Businessman, key witness in criminal case,

Thane; ಕ್ರಿಮಿನಲ್‌ ಕೇಸ್‌ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ

13-bng

Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್‌ ಡೇಂಜರ್‌ ಸ್ಪಾಟ್‌

12-chowta

Brijesh Chowta: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್‌ ಚೌಟ

11-udupi

Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

14-aranthodu

Aranthodu: ವ್ಯಕ್ತಿಯ ಮೇಲೆ ಕಾಡಾನೆ ದಾಳಿ

kuladalli keelyavudo movie

Sandalwood: ಫಸ್ಟ್‌ಲುಕ್‌ನಲ್ಲಿ”ಕುಲದಲ್ಲಿ ಕೀಳ್ಯಾವುದೋ’

New Delhi; Argument with classmates;

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.