ಸ್ವಾತಿ ಮುತ್ತಿನ ಮಳೆಹನಿಯು

Team Udayavani, Feb 25, 2018, 8:20 AM IST

s-1.jpg

ಚಿತ್ರರಂಗಕ್ಕೆ ಬರಬೇಕು, ಕಲಾವಿದರಾಗಬೇಕು ಎಂದು ಬಯಸದ ಅದೆಷ್ಟೋ ಜನರಿಗೆ ಚಿತ್ರರಂಗ ಕೈಹಿಡಿದು ಪೋಷಿಸಿದೆ. ಅಷ್ಟೇ ಅಲ್ಲ, ದೊಡ್ಡ ಜನಪ್ರಿಯತೆಯನ್ನೂ ತಂದುಕೊಟ್ಟಿದೆ. ಆ ಸಾಲಿಗೆ ಸ್ವಾತಿ ಕೊಂಡೆ ಎಂಬ ಹೊಸ ನಟಿಯನ್ನು ಸಹ ಸೇರಿಸಬಹುದು.

ಬ್ಯೂಟಿಫ‌ುಲ್‌ ಮನಸುಗಳು ಚಿತ್ರದಲ್ಲಿ ಅಚ್ಯುತ್‌ ಕುಮಾರ್‌ ಅವರ ಮಗಳ ಪಾತ್ರ ಮಾಡಿದ್ದು ಇದೇ ಸ್ವಾತಿ. ಒಂದು ಸಣ್ಣ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸ್ವಾತಿ ಈಗ ವೆನಿಲ್ಲಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದಲ್ಲದೇ ಇನ್ನೂ ಎರಡು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸ್ವಾತಿ ತುಮಕೂರಿನ ಹುಡುಗಿ, ಡಿಪ್ಲೊಮಾ ಓದಿರುವ ಸ್ವಾತಿಗೆ ಸಿನೆಮಾದ ಕನಸೇನು ಇರಲಿಲ್ಲ. ಆದರೆ, ಅಚಾನಕ್‌ ಆಗಿ ನೋಡಿದ ಆಡಿಷನ್‌ ಜಾಹೀರಾತಿಗೆ ಮರುಳಾಗಿ ಆಡಿಷನ್‌ ಕೊಟ್ಟು ಬಂದವರು ಸ್ವಾತಿ. 270ಕ್ಕೂ ಹೆಚ್ಚು ಮಂದಿಯನ್ನು ಹಿಂದಿಕ್ಕಿ ನಾಯಕಿ ಸ್ಥಾನವನ್ನು ಗಿಟ್ಟಿಸಿಕೊಂಡ ಸ್ವಾತಿಗೆ ಯಾಕೋ ಆ ಸಿನೆಮಾದ ಮೇಲೆ ನಂಬಿಕೆಯೇ ಬರಲಿಲ್ಲ. ಹಾಗಾಗಿ ಆಡಿಷನ್‌ನಲ್ಲಿ ಆಯ್ಕೆಯಾದ ಸಿನೆಮಾವನ್ನು ಸಾರಸಗಟಾಗಿ “ನೋ’ ಎಂದ ಸ್ವಾತಿಗೆ ಆ ನಂತರ ಸಿಕ್ಕಿದ್ದು ಬ್ಯೂಟಿಫ‌ುಲ್‌ ಮನಸುಗಳು ಸಿನೆಮಾ. 

ಇದರ ನಂತರ ಸ್ವಾತಿಗೆ ಸಿಕ್ಕ ಅವಕಾಶ ಎಂದರೆ ಕಮರೊಟ್ಟು ಚೆಕ್‌ಪೋಸ್ಟ್‌ ಎಂಬ ಹಾರರ್‌ ಸಿನಿಮಾದಲ್ಲಿ. ಈ ಸಿನೆಮಾದಲ್ಲಿ ಮದುವೆಯಾಗಿರುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಚಿತ್ರರಂಗಕ್ಕೆ ನಾಯಕಿಯಾಗಬೇಕೆಂಬ ಆಸೆಯಿಂದ ಬರುವವರು ಮದುವೆಯಾಗಿರುವ ಪಾತ್ರಗಳನ್ನು ಒಪ್ಪೋದಿಲ್ಲ. ಆದರೆ, ಸ್ವಾತಿ ಒಪ್ಪಿದ್ದಾರೆ. ಅದಕ್ಕೆ ಕಾರಣ, ಆ ಪಾತ್ರದ ಶೇಡ್‌. ಮೊದಲೇ ಹೇಳಿದಂತೆ ಇದು ಹಾರರ್‌ ಸಿನೆಮಾವಾದ್ದರಿಂದ ಇವರ ಪಾತ್ರದಲ್ಲಿ “ಆಪ್ತಮಿತ್ರ’ ಚಿತ್ರದ ಸೌಂದರ್ಯಾ ಶೇಡ್‌ ಇದೆಯಂತೆ. ಮುಖ್ಯವಾಗಿ ಈ ಚಿತ್ರದಲ್ಲಿ ನಟನೆಗೆ ಹೆಚ್ಚು ಅವಕಾಶವಿದ್ದ ಕಾರಣ ಒಪ್ಪಿಕೊಂಡರಂತೆ. ಕಮರೊಟ್ಟು ನಂತರ ಸ್ವಾತಿಗೆ ಸಿಕ್ಕಿದ್ದು ವೆನಿಲ್ಲಾ. ಈ ಚಿತ್ರ ಸಿಗಲು ಕಾರಣ ಛಾಯಾಗ್ರಾಹಕ ಕಿರಣ್‌ ಹಂಪಾಪುರ. ಕಮರೊಟ್ಟು ಚಿತ್ರಕ್ಕೂ ಕಿರಣ್‌ ಛಾಯಾಗ್ರಾಹಕರು. ಆ ಚಿತ್ರದಲ್ಲಿ ಸ್ವಾತಿಯ ನಟನೆ ನೋಡಿ ಖುಷಿಯಾದ ಕಿರಣ್‌, ವೆನಿಲ್ಲಾ ತಂಡಕ್ಕೆ ಸ್ವಾತಿ ಬಗ್ಗೆ ಹೇಳಿದರಂತೆ. ಇತ್ತ ಕಡೆ ಬ್ಯೂಟಿಫ‌ುಲ್‌ ಮನಸುಗಳು ಸಮಯದಲ್ಲಿ ಸ್ವಾತಿಯ ಪರ್‌ಫಾರ್ಮೆನ್ಸ್‌ ನೋಡಿ ಗೊತ್ತಿದ್ದ ಜಯತೀರ್ಥ ಕೂಡಾ ವೆನಿಲ್ಲಾದಲ್ಲಿ ಸ್ವಾತಿಗೆ ಅವಕಾಶ ಕೊಟ್ಟಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದು ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. 

ಸ್ವಾತಿ ಯಾವುದೇ ಸಿನೆಮಾ ಒಪ್ಪಿಕೊಳ್ಳುವಾಗ ಕಥೆಯ ಜೊತೆಗೆ ತಂಡವನ್ನೂ ನೋಡುತ್ತಾರಂತೆ. ಯಾರು ಹೇಗೆ, ಅವರ ವರ್ತನೆ ಹೇಗಿದೆ ಎಂಬುದನ್ನೂ ನೋಡುತ್ತಾರಂತೆ. ಅದರ ಮೇಲೆ ಇವರ ನಡವಳಿಕೆ ಇರುತ್ತದೆಯಂತೆ. “”ನನಗೆ ಇಲ್ಲಿಯವರೆಗೆ ಚಿತ್ರರಂಗದಿಂದ ಯಾವುದೇ ರೀತಿಯ ಕೆಟ್ಟ ಅನುಭವ ಆಗಿಲ್ಲ. ಎಲ್ಲರೂ ಚೆನ್ನಾಗಿ ನಡೆಸಿಕೊಂಡಿದ್ದಾರೆ. ತುಂಬಾ ಪಾಸಿಟಿವ್‌ ಆಗಿದೆ” ಎನುತ್ತಾರೆ ಸ್ವಾತಿ.

ಟಾಪ್ ನ್ಯೂಸ್

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

1-pro

Pro Kabaddi: ಜೈಪುರ್‌ ಮೇಲೆ ಪಾಟ್ನಾ ಸವಾರಿ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

1-pro

Pro Kabaddi: ಜೈಪುರ್‌ ಮೇಲೆ ಪಾಟ್ನಾ ಸವಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.