ಸ್ವಇರಾ ವಿಹಾರ
Team Udayavani, Jan 21, 2018, 6:55 AM IST
ಇವತ್ತು ಮಳೆ ಇಲ್ಲ, ಒಂದು ಜಾಲಿರೈಡ್ ಹೋಗೋಣ ಬಾ” ಅಂತ ನಮ್ಮವರು ಕರೆದಾಗ, ಕಡ್ಲೆಕಾಯಿ ತಿಂತಾ ಇದ್ದ ನಾನು ಬಿಟ್ಟ ಕಣ್ಣು ಬಿಟ್ಟ ಹಾಗೆ, ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡುತ್ತ ಕುಳಿತುಬಿಟ್ಟೆ.
“”ಇಇ… ಇನ್ನೊಮ್ಮೆ ಹೇಳಿ”
“”ಅದೇ ಬೈಕಲ್ಲಿ ಒಂದು ರೈಡ್ ಹೋಗೋಣ ಅಂತ”
“”ನೀವು ಆಡ್ತಿರೋ ಮಾತಾ ಸಾರ್ ಇದು” ಅಂತ ನನ್ನ ಕೈಯನ್ನು ನಾನೇ ಚಿವುಟಿಕೊಂಡೆ.
“”ತಡ ಮಾಡ್ಬೇಡ ಸುಮ್ನೆ ಬಾ” ಅಂದ ಅವರ ಮಾತಿಗೆ “ಹೂಂ’ ಅನ್ನುತ್ತ ಅರ್ಧ ಸಂತೋಷ ಅರ್ಧ ಆಶ್ಚರ್ಯದಿಂದ ಹೊರಟೆ.
“”ಎಲ್ಲಿಗೆ ಹೋಗ್ತಾ ಇದ್ದೀವಿ?”
“”ಗೊತ್ತಿಲ್ಲ”
“”ಸುಮ್ನೆ ಹೋಗ್ತಾ ಇರೋಣ, ಸಾಕು ಅನ್ನಿಸಿದಾಗ ವಾಪಾಸು ಬರೋಣ”
ನಾನು ದೆವ್ವ ಬಡಿದಂತೆ ಅವರು ಹೇಳಿದಕ್ಕೆಲ್ಲ “ಆಂ’, “ಹೂಂ’ ಅನ್ನುತ್ತ, ಅವರ ಮುಖವನ್ನೇ ನೋಡುತ್ತ, ಏನು ಹೆಚ್ಚುಕಮ್ಮಿಯಾಗಿಲ್ಲ ತಾನೇ ಎಂಬುದನ್ನು ಖಾತ್ರಿಪಡಿಸಿಕೊಳುತ್ತ, ನಿಧಾನಕ್ಕೆ ಬೈಕ್ ಏರಿ ಕುಳಿತುಕೊಂಡೆ. ನಮ್ಮ ಜಾಲಿರೈಡ್ ಹೊರಟಿತು.
ಗಾಳಿಯಲ್ಲಿ ತೇಲಿದಂತೆ… ರಥ ಚಲಿಸುತ್ತಿತ್ತು.
ಹಾರುತ ದೂರಾ… ದೂರಾ… ಮೇಲೇರುವ ಬಾರಾ… ಬಾರಾ… ನಾವಾಗುವ ಚಂದಿರ ತಾರಾ… ಕೈಗೂಡಲಿ ಸ್ಪೈರ ವಿಹಾರಾ… ಸುಂದರ ಸ್ವೆ çರ ವಿಹಾರ… ಗೀತೆ ನೆನಪಾಗಿ ಗಂಡನನ್ನು ಬಳಸಿ ಕುಳಿತುಕೊಂಡು ಕಣ್ಣುಮುಚ್ಚಿದೆ. ಆಕಾಶದಲ್ಲಿ ಹಾರುತ್ತಿದ್ದ ನಮ್ಮ ರಥ ಹೊಂಡಗಳಿರುವಲ್ಲಿ ಮಾತ್ರ ನೆಲಕ್ಕೆ ಇಳಿಯುತ್ತಿತ್ತು.
.
.
ಮದುವೆಗೆ ಮೊದಲು ನನ್ನ ಜಾತಕವನ್ನು ನೋಡಿದ ಜೋಯಿಸರು, “”ಈಕೆಗೆ ನಾಲ್ಕು ಚಕ್ರದ ಗಂಡೇ ಬರುತ್ತದೆ. ಏನೂ ಚಿಂತೆ ಮಾಡ್ಬೇಡಿ” ಎಂದು ಅಪ್ಪನಿಗೆ ಭರವಸೆ ಕೊಟಿದ್ದರು. ನನ್ನಪ್ಪ ಬರುವ ಗಂಡು ಭಾರೀ ಶ್ರೀಮಂತನೇ ಆಗಿರಬಹುದು. (ಎಲ್ಲ ಕಾರುಗಳಿಗೂ ನಾಲ್ಕೇ ಚಕ್ರ ಇರುವುದಾದರೂ) ಈಗಿನ ಫಾರ್ಚೂನರ್‌ನಂತಹ ಭಾರಿ ಕಾರಿನÇÉೇ ಬರುವವನಾಗಿರಬಹುದು- ಹೀಗೆ ಏನೇನೋ ಅರ್ಥೈಸಿಕೊಂಡಿದ್ದರು. ಆದರೆ, ನಾನು ಮಾತ್ರ ಬರುವ ಗಂಡು ತುಂಬಾ ಅವಸರದವನೇ ಇರಬಹುದು ಅಂದುಕೊಂಡಿ¨ªೆ. ಕೊನೆಗೆ ನನ್ನ ಊಹೆಯೇ ನಿಜವಾಯಿತು. ಆರು ತಿಂಗಳಿಗೆ ಹುಟ್ಟಿದ ಹಾಗೆ ಎರಡು ಕಾಲುಗಳಿಗೂ ಎರಡೆರಡು ಚಕ್ರ ಕಟ್ಟಿಕೊಂಡು ಸ್ಕೇಟಿಂಗ್ ಬೂಟಿನಲ್ಲಿ ಓಡುವವರಂತೆ ಓಡುವ ಸದಾ ಅವಸರದ ಅರಸನೇ ನನ್ನನ್ನು ನೋಡಲು ಬಂದಿದ್ದ. ಹೇಳಿದ ದಿನ ಬಾರದೆ ಒಂದು ದಿನ ಮುಂಚಿತವಾಗಿಯೇ ಬಂದದ್ದರಿಂದ ಮನೆಯವರೆಲ್ಲ ಕಕ್ಕಾಬಿಕ್ಕಿಯಾಗಿದ್ದರು. ಸರಕಾರಿ ಕಚೇರಿಗಳಿಗೆ ಲೋಕಾಯುಕ್ತದವರು ಮಾಡುವ ಅನಿರೀಕ್ಷಿತ ರೈಡ್‌ನ ಹಾಗೆ. ಅಷ್ಟೇ ಅಲ್ಲದೆ, ನನ್ನನ್ನು ನೋಡಿ ಅವಸರವಸರದÇÉೇ ಕಾರು ಹತ್ತಲು ಹೊರಟದ್ದರಿಂದಲೋ ಏನೋ ಅವರು ಮೆಟ್ಟಿಕೊಂಡು ಬಂದಿದ್ದ ಚಪ್ಪಲಿ ನಮ್ಮÇÉೇ ಉಳಿದುಹೋಗಿತ್ತು. ಮದುವೆ¿å ನಂತರ ಅಪ್ಪ ಅದನ್ನು ಚೆಂದದ ಕಾಗದದಲ್ಲಿ ಸುತ್ತಿ ಕೊಂಚ ಮುಜುಗರದಿಂದಲೇ ಅಳೀಮಯ್ಯನ ಕೈಗಿತ್ತಿದ್ದರು. ಇನ್ನು ಮದುವೆಗೆ ಒಂದು ದಿನ ಮುಂಚಿತವಾಗಿ ಬಂದುಬಿಡುತ್ತಾರೇನೋ ಎಂದು ಎಲ್ಲರೂ ಹೆದರಿದ್ದರು. ಆದರೆ ಹಾಗೇನೂ ಆಗಲಿಲ್ಲ. ಆದರೂ ವರನ ದಿಬ್ಬಣ ಅವರು ಹೇಳಿದುದಕ್ಕಿಂತ ಎರಡು ಗಂಟೆ ಮೊದಲೇ ಮಂಟಪ ತಲುಪಿತ್ತು!
ಮದುವೆಯ ಕಾರ್ಯಕ್ರಮಗಳಲ್ಲೂ ಅಷ್ಟೆ, ಸಣ್ಣ ಸಣ್ಣ ವಿಷಯಗಳಿಗೆಲ್ಲ ಅವಸರ ಮಾಡುತ್ತಿದ್ದ ಇವರನ್ನು ನೋಡಿ, “”ಒಳ್ಳೆ ಗಡಿಬಿಡಿ ಗಂಡ ಸಿನೆಮಾದ ಹೀರೋನ ಹಾಗೆ ಮಾಡ್ತಾನÇÉೇ, ಹೇಗೆ ಒಪ್ಕೊಂಡೆÂà?” ಎಂದು ಎಲ್ಲರೂ ಕೇಳಿದ್ದೇ ಕೇಳಿದ್ದು, ತಮಾಷೆ ಮಾಡಿ ನಕ್ಕಿದ್ದೇ ನಕ್ಕಿದ್ದು. “”ಅವಸರ ಮಾಡ್ಬೇಡಿ ಭಾವ, ಅಕ್ಕ ಇನ್ನು ನಿಮ್ಮ ಜೊತೆಯÇÉೇ ಇರ್ತಾಳೆ” ಅಂತ ನನ್ನ ತಂಗಿ ಇವರ ಕಿವಿಯಲ್ಲಿ ಉಸುರಿ, ಅವಳ ಗೆಳತಿಯರೊಡನೆ ಸೇರಿ “ಕುಸುಕ್ ಕುಸುಕ್’ ಎಂದು ಅಂದದ್ದೂ ಆಯಿತು. ಮದುವೆ ಶಾಸ್ತ್ರಗಳೆಲ್ಲ ಮುಗಿದು ಮದುಮಕ್ಕಳನ್ನು ಊಟಕ್ಕೆ ಕೂರಿಸುವ ಸಮಯವೂ ಬಂತು. ಊಟಕ್ಕೆ ಕೂರಿಸಿ ಬಗೆ ಬಗೆಯ ಖಾದ್ಯಗಳನ್ನೆಲ್ಲ ಬಡಿಸಿದ ನಂತರ ಮೊದಲಿಗೆ ನನ್ನಪ್ಪ ಬಂದು ಬೀಸಣಿಗೆಯಲ್ಲಿ ಗಾಳಿ ಬೀಸಿ, “”ಸಾವಕಾಶ ಅಳಿಯಂದಿರೆ” ಎಂದು ಉಪಚಾರದ ಮಾತು ಹೇಳಿ ಹೋದರು. ಆನಂತರ ಗಂಡಿನ ಕಡೆಯ ಒಬ್ಬೊಬ್ಬರೇ ನೀರಿನ ಜಗ್ಗನ್ನು ಹಿಡಿದುಕೊಂಡು ಬಂದು, ಇವರ ಲೋಟದಲ್ಲಿ ನೀರಿದೆಯೇ ಎಂದು ಬಗ್ಗಿ ನೋಡಿ ನೋಡಿ ಹೋಗುತ್ತಿದ್ದರು.
ಒಂದು ಹಂತದಲ್ಲಿ ಅವರ ಕಡೆಯ ಹಿರಿಯರೊಬ್ಬರು ಬಂದು, “”ನಿಧಾನಕ್ಕೆ ಊಟ ಮಾಡೋ ಮಗನೇ” ಎಂದು ಪ್ರೀತಿಯಿಂದ ಹೇಳಿ, ಲೋಟದಲ್ಲಿ ನೀರಿದೆಯೇ ಎಂದು ಬಗ್ಗಿ ನೋಡಿ, “”ಗಡಿಬಿಡಿಯಲ್ಲಿ ತಿಂದು ನೆತ್ತಿ ಹತ್ತುಸ್ಕೊಳ್ತಾನೆ” ಎಂದು ನನ್ನತ್ತ ನೋಡಿ ಇವನ ಬಗ್ಗೆ ತಿಳಿಯಬೇಕಾದ ಇನ್ನಷ್ಟು ವಿಷಯಗಳಿವೆ ಎಂದು ಸೂಚಿಸುವಂತೆ ನಕ್ಕು ಹೋದರು. ಮದುವೆಯ ದಿನ ಏಳು ಹೆಜ್ಜೆ ಇವರ ಜೊತೆಜೊತೆಯಾಗಿ ನಡೆದದ್ದು ಬಿಟ್ಟರೆ ಮತ್ತೆ ಇಡೀ ಜೀವಮಾನ ಅವರು ನಡೆದದ್ದು , ನಾನು ಅವರ ಹಿಂದೆ ಓಡಿದ್ದು !
ಇವೆಲ್ಲ ಆಗಿ ಇವರ ವೇಗಕ್ಕೆ ಹೊಂದಿಕೊಳ್ಳಲು ನಾನು ಕಷ್ಟಪಡುತ್ತಿದ್ದ ಹಾಗೆಯೇ ನಮ್ಮ ಪ್ರಥಮ ವರ್ಷದ ಮದುವೆ ವಾರ್ಷಿಕೋತ್ಸವವೂ ಬಂದುಬಿಟ್ಟಿತು. ಏನಾದರಾಗಲಿ ಆ ದಿನವನ್ನು ವಿಶಿಷ್ಟವಾಗಿ ಆಚರಿಸಬೇಕೆಂದು ಮನಸ್ಸಿನÇÉೇ ಅಂದುಕೊಂಡೆ.
“”ರೀ ನಮ್ಮ ಮದುವೆ ಆ್ಯನಿವರ್ಸರಿ ದಿನ ಕ್ಯಾಂಡಲ್ ಲೈಟ್ ಡಿನ್ನರ್ ಮಾಡೋಣಾÌ?” ಅಂದೆ.
“”ಓ ಯಾವ ಡಿನ್ನರ್ ಆದ್ರೂ ಮಾಡೋಣ, ಲೈಟ್ ಇದ್ರೆ ಆಯ್ತು” ಎಂದರು.
ನಾನು ಇನ್ನಷ್ಟು ಖುಷಿಯಿಂದ ಅವರಿಗಿಷ್ಟವಾದ ಸೇಮಿಗೆ ಪಾಯಸ, ನನಗಿಷ್ಟವಾದ ಜಾಮೂನು ಇನ್ನೂ ನಾಲ್ಕೆçದು ಖಾದ್ಯಗಳನೆಲ್ಲ ತಯಾರಿಸಿ, ಎಲ್ಲವನ್ನೂ ಮೇಜಿನ ಮೇಲೆ ಅಂದವಾಗಿ ಜೋಡಿಸಿದೆ. ಮಧ್ಯದಲ್ಲಿ ಕ್ಯಾಂಡಲ್ ಇಡಲು ಕ್ಯಾಂಡಲ್ ಸ್ಟ್ಯಾಂಡ್ ತಂದಿರಿಸಿ ಯಜಮಾನರನ್ನು ಕೂಗಿದೆ.
“”ರೀ ಬನ್ನಿ ಎಲ್ಲ ರೆಡಿಯಾಗಿದೆ”
ಗಡಿಬಿಡಿಯಲ್ಲಿ ಯಾವುದೋ ಪುಸ್ತಕವನ್ನು ಎಲ್ಲಿಯೋ ಇಟ್ಟು ಬೆಳಗಿನಿಂದ ಅದನ್ನೇ ಹುಡುಕುತ್ತಿದ್ದವರು, “”ಬಂದೆ ಕಣೇ” ಎಂದದ್ದು ಕೇಳಿತು.
ನಾನು ಒಳ ಹೋಗಿ ಬೆಂಕಿ ಪೆಟ್ಟಿಗೆ ಹುಡುಕಿ ತೆಗೆದು, ಕ್ಯಾಂಡಲ್ ಉರಿಸಿ, ಇನ್ನೇನು ಅದನ್ನು ಸ್ಟ್ಯಾಂಡಿಗೆ ಸಿಕ್ಕಿಸಿ ಲೈಟ್ ಆರಿಸಬೇಕು ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ನಿಧಾನಕ್ಕೆ ನಡೆಯುತ್ತ ಕಣ್ಣ ತುಂಬ ಪ್ರೀತಿ ತುಂಬಿಕೊಂಡು ಊಟದ ಮೇಜಿನತ್ತ ಬರುತ್ತಿದ್ದಂತೆ “”ಹಾಳಾದ ಪುಸ್ತಕ ಇನ್ನೂ ಸಿಕ್ಕಿಲ್ಲ. ಇವತ್ತಿನ ದಿನವೆಲ್ಲ ಹೀಗೇ ವೇಸ್ಟ್ ಆಯಿತು” ಎಂದು ಹೇಳುತ್ತ, ನನ್ನವರು ಟವೆಲಿನಲ್ಲಿ ಕೈ ಒರೆಸಿಕೊಳ್ಳುತ್ತಿರುವುದು ಕಂಡಿತು.
“”ಏನು ವಿಶೇಷ ಇವತ್ತು? ಪಾಯಸ-ಜಾಮೂನು ಎಲ್ಲ ಮಾಡಿದೀಯ, ಎಲ್ಲ ತುಂಬ ರುಚಿಯಾಗಿತ್ತು ಕಣೇ, ಪುಸ್ತಕ ಹುಡುಕಲು ನನ್ನಲ್ಲಿ ಈಗ ಹೊಸ ಹುರುಪು ಬಂದಿದೆ” ಎಂದು ಖುಷಿಯಿಂದ ಯಾವುದೋ ಹಾಡನ್ನು ಗುನುಗುತ್ತ ನನ್ನತ್ತ ನೋಡದೆಯೇ ಓದುವ ಕೋಣೆಯತ್ತ ಹೊರಟು ಹೋದರು. ನಾನು ರವಿವರ್ಮನ ಚಿತ್ರದ ದೀಪದಮಲ್ಲಿಯಂತೆ ಬಲದ ಕೈಯಲ್ಲಿ ಮೇಣದ ಬತ್ತಿ ಹಿಡಿದು, ಅದು ಗಾಳಿಗೆ ನಂದದಂತೆ ಅದಕ್ಕೆ ಎಡದ ಕೈಯನ್ನು ಅಡ್ಡ ಹಿಡಿದು ನಿಂತವಳು ಅವರು ಹೋದ ದಿಕ್ಕನ್ನೇ ನೋಡುತ್ತ ನಿಂತÇÉೇ ನಿಂತುಹೋದೆ.
ಕ್ಯಾಂಡಲ್‌ನ ಮಂದ ಬೆಳಕಿನಲ್ಲಿ, ನಾನು ಅವರ ಕಣ್ಣಲ್ಲಿ ಕಣ್ಣಿಟ್ಟು ಚಮಚದಲ್ಲಿ ಸ್ವಲ್ಪ ಸ್ವಲ್ಪವೇ ಜಾಮೂನನ್ನು ತೆಗೆದು ಅವರ ಬಾಯಿಗಿರಿಸುತ್ತ, ಅವರು ನನ್ನ ಕಣ್ಣಲ್ಲಿ ಕಣ್ಣಿಟ್ಟು ಸ್ವಲ್ಪ ಸ್ವಲ್ಪವೇ ಜಾಮೂನು ನನಗೆ ತಿನ್ನಿಸುತ್ತ, ಹನಿಮೂನಿನ ನೆನಪುಗಳನ್ನು ಮೆಲುಕು ಹಾಕುತ್ತ, ಕೊನೆಗೆ ಒಂದು ಹಂತದಲ್ಲಿ ಅವರು ನನ್ನ ಕೈಯನ್ನು ಮೆತ್ತಗೆ ಹಿಡಿದುಕೊಳ್ಳುತ್ತಾ, “”ನೀನು ನನಗೆ ಸಿಕ್ಕಿದ್ದು ನನ್ನ ಜೀವನದ…” ಅಂತೆÇÉಾ ನನ್ನ ಕಿವಿಯಲ್ಲಿ ಪಿಸುಗುಟ್ಟುತ್ತಾ…
ಥೇಟ್ ಸಿನಿಮಾ ಶೈಲಿಯಲ್ಲಿ ಕಲ್ಪಿಸಿಕೊಂಡಿದ್ದ ನನ್ನ ಸುಂದರ ಚಿತ್ರಣವೆಲ್ಲ ಕೈಯ್ಯಲಿದ್ದ ಕ್ಯಾಂಡಲ್‌ನಂತೆ ಕರಗಿಹೋಗಿತ್ತು. “ಉಫ್’ ಎಂದು ಉಳಿದಿದ್ದ ಕ್ಯಾಂಡಲ್ಲನ್ನು ನಂದಿಸಿ ಕಸದಬುಟ್ಟಿಗೆ ಎಸೆದು ಒಬ್ಬಳೇ ಕುಳಿತು ಊಟ ಮುಗಿಸಿದೆ.
“”ಆಂ… ಪುಸ್ತಕ ಸಿಕು¤ ಕಣೇ, ಹುಡುಕಿದ್ದು ಸಾರ್ಥಕ ಆಯ್ತು, ಪುಸ್ತಕದ ಹೆಸರೇನು ಗೊತ್ತಾ? ದ ಫರ್‌ಗಾಟನ್ ಬುಕ್ ಅಂತ. ತುಂಬಾ ಒಳ್ಳೆ ಕಾದಂಬರಿ. ನೀನೂ ಓದೆºàಕು ಇದನ್ನು. ಏನಾದರಾಗಲಿ ಇವತ್ತಿನ ದಿನ ವೇಸ್ಟ್ ಆಗಲಿಲ್ಲ” ಎಂದು ಒಳಗಿನಿಂದ ಹೇಳಿದ್ದು ಕೇಳಿಸಿತು.
ಹೀಗೆ ನಮ್ಮ ಸಂಸಾರದ ಬಂಡಿ ಸಾಗುತ್ತಿ¨ªಾಗ ಒಂದು ದಿನ ನಾನು ಬೇಜಾರಾಗಿ ಕಳ್ಳೇಕಾಯಿ ತಿಂತಾ ಕೂತಿ¨ªಾಗ, ಹೀಗೆ, ಇದ್ದಕ್ಕಿದ್ದ ಹಾಗೆ ಬಂದು ಜಾಲಿರೈಡ್ ಹೋಗೋಣ ಬಾರೆ ಎಂದರೆ ನನಗೆ ಹೇಗಾಗಿರಬೇಡ? ನನ್ನವರು ಹೇಳಿದ್ದು ಕೇಳಿ ಬಾಯಿಗೆಸೆಯಬೇಕಾಗಿದ್ದ ಕಡಲೆಕಾಯಿ ಕೈಯÇÉೇ ಉಳಿದುಹೋಗಿತ್ತು ಬಾಯಿ ಆ ಎಂದು ತೆರೆದೇ ಇತ್ತು.
.
.
ಮಾತಿಲ್ಲದೆ ನಿಧಾನಕ್ಕೆ ಹೆ¨ªಾರಿಗುಂಟ ಸಾಗುತ್ತಿದ್ದ ನಮ್ಮ ಸ್ವೆ„ರ ವಿಹಾರ ಒಂದು ಕ್ಷಣ ಮೊಬೈಲ್ ರಿಂಗಣಿಸಿದ ಸಂಗೀತಕ್ಕೆ ನಿಧಾನವಾಗಿ ಎಚ್ಚೆತ್ತುಕೊಂಡಿತು. ಬೈಕು ನಿಲ್ಲಿಸದೆ ಇವರು ತಮ್ಮ ಎಡಕಿವಿ ಹಾಗೂ ಎಡಭುಜದ ನಡುವೆ ಮೊಬೈಲ್ ಸೆಟ್ಟನ್ನು ಒತ್ತಿ ಹಿಡಿದು ಮಾತಾಡಲಾರಂಭಿಸಿದರು. (ಹೆಲ್ಮೆಟ್ ಇರಲಿಲ್ವಾ ಅಂತ ನೀವು ಕೇಳಿದರೆ, ಅದು ಕಿವಿ ಮುಚ್ಚುವಂತೆ ಇರಲಿಲ್ಲ ಅಂತ ನಾನು ಹೇಳಬೇಕಾಗುತ್ತದೆ).
“”ನಾನಿಲ್ಲ ಅಂತ ಇವತ್ತು ಮೂರು ಗಂಟೆಗೇ ಮನೆಗೆ ಹೋಗಿದ್ದೀರೇನ್ರೀ? ಆ ಜರ್ಮನಿಯ ಪ್ರಾಜೆಕ್ಟಿನ ಪ್ರಾಗ್ರೆಸ್ ರಿಪೋರ್r ಇವತ್ತೇ ಮೈಲ್ ಮಾಡ್ಲಿಕ್ಕೆ ಹೇಳಿದಾರೆ. ನೀವೇನ್ಮಾಡ್ತೀರೋ ನನೊYತ್ತಿಲ್ಲ” ಎಂದು ಆ ಕಡೆಯಿಂದ ನುಡಿಯುತ್ತಿರುವುದು ಕೇಳಿಸಿತು.
“”ಈಗ್ಲೆ ಈಗ್ಲೆ ಬಂದೆ ಸರ್… ಇನ್ನರ್ಧ ಘ…” ಫೋನ್ ಕಟ್ ಆಯಿತು.
“”ಇರ್ಲಿ ಬಿಡ್ರೀ, ನಾನು ಬಸ್ನಲ್ಲಿ ಮನೆಗೆ ಹೋಗ್ತಿàನಿ, ನೀವು ಆಫೀಸಿಗೆ ಹೋಗಿ ಕೆಲಸ ಮುಗ್ಸಿ ಬನ್ನಿ” ಎಂದು ಬೈಕಿನಿಂದ ಕೆಳಗಿಳಿದೆ.
“”ಇಲ್ಲ ನಿನ್ನನ್ನ ಮನೆಗೆ ಬಿಟ್ಟು ಹೋಗ್ತಿàನಿ ಕೂತ್ಕೊà” ಅಂದರು ಬೈಕನ್ನು ತಿರುಗಿಸುತ್ತ. ನಾನು ಮತ್ತೆ ಹತ್ತಿ ಕೂರಬೇಕು ಅನ್ನುವಷ್ಟರಲ್ಲಿ ಬೈಕು ವಾಯುವೇಗದಲ್ಲಿ ಚಲಿಸಿ ಮುಂದೆ ಹೊರಟುಹೋಯಿತು. ನಾನು ನಿಂತಿದ್ದವಳು ನಿಂತÇÉೇ ಬಾಕಿ! ಸುಮಾರು ಹದಿನೈದು-ಇಪ್ಪತ್ತು ನಿಮಿಷ ಇದೇ ಸ್ಥಿತಿಯಲ್ಲಿ ನಿಂತಿ¨ªೆ. ಅಷ್ಟರಲ್ಲಿ ನನ್ನ ಗಂಡನ ರಥ ವಾಪಾಸು ಬಂದು ನನ್ನೆದುರಿಗೆ ನಿಂತಿತು.
“”ಹೇಗೆ ಗೊತ್ತಾಯ್ತು ಬೈಕಲ್ಲಿ ನಾನಿಲ್ಲ ಅಂತ?”
“”ಮನೆಯೆದುರು ಬೈಕ್ ನಿಲ್ಲಿಸಿದಾಗ ಗೊತ್ತಾಯ್ತು. ದಾರಿಯಲ್ಲಿ ತಲೆಗಿಲೆ ತಿರುಗಿ ಬಿದ್ದುಬಿಟ್ಟಿಯೇನೋ ಅಂದುಕೊಂಡು ಹೆದರಿ ದಾರಿಯನ್ನೇ ನೋಡುತ್ತ ವಾಪಾಸು ಬಂದೆ” ಎಂದರು.
ಜಾಲಿರೈಡಿಗೆ ಹೊರಡುವಾಗ ಉತ್ಸಾಹದಿಂದ ಉಬ್ಬಿದ ಪೂರಿಯಂತಿದ್ದ ನನ್ನ ಗಂಡನ ಮುಖ ಈಗ ತಣಿದ ಪೂರಿಯಂತಾಗಿ ಹೋಗಿತ್ತು. ಮತ್ತೆ ನನ್ನನ್ನು ಹತ್ತಿಸಿಕೊಂಡು ಬಂದು ಮನೆಯ ಹತ್ತಿರ ಇಳಿಸಿ, ಅಪಾರ ವೇಗದಿಂದ ಗಾಳಿಯನ್ನು ಸೀಳುತ್ತ¤, ಎರಡು ಚಕ್ರದ ಮೇಲೆ ಕುಳಿತು ಓಡುತ್ತಿದ್ದ ಗಂಡನನ್ನು ನೋಡುತ್ತ ನೋಡುತ್ತ¤ ಜೋಯಿಸರ ಲೆಕ್ಕಾಚಾರ ಎಲ್ಲಿ ತಪ್ಪಿರಬಹುದು ಎಂದು ಆಲೋಚಿಸುತ್ತ ನಿಂತೆ.
– ರೇಷ್ಮಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.